Friday 19th, April 2024
canara news

ಮೂಲ್ಕಿಯಲ್ಲಿ ೬೮ನೇ ಗಣ ರಾಜ್ಯೋತ್ಸವ ಸ೦ಭ್ರಮ

Published On : 27 Jan 2017   |  Reported By : Canaranews Network


ನಮ್ಮ ದೇಶದಲ್ಲಿ ಯುವ ಶಕ್ತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಮಾಜಿ ರಾಷ್ತ್ರಪತಿ ಅಬ್ದುಲ್ ಕಲಾಂರವರ ವಿಷನ್ 2020 ರಂತೆ ಭಾರತವು 2020ರಲ್ಲಿ ವಿಶ್ವದ ಮುಂದಾಳತ್ವವನ್ನು ವಹಿಸಲಿದೆಯೆಂದು ಶಾಸಕ ಕೆ ಅಭಯಚಂದ್ರ ಜ್ಯೆನ್ ಹೇಳಿದರು. ಮೂಲ್ಕಿಯ ನಗರ ಪಂಚಾಯತ್ ವತಿಯಿಂದ ಮೂಲ್ಕಿಯ ಕಾರ್ನಾಡಿನ ಗಾಂ„ ಮ್ಯೆದಾನದಲ್ಲಿ ಜರಗಿದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣಗ್ಯೆದು ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ವಹಿಸಿದ್ದು ಕಾರ್ಯಕ್ರಮದಲ್ಲಿ ಮೂಲ್ಕಿ ನಗರ ಪಂಚಾಯತ್ ನ ಹಿರಿಯ ಸಿಬಂದಿಗಳಾದ ಶ್ರೀಮತಿ ಶಶಿಕಲಾ ಮತ್ತು ಸದಾಶಿವರನ್ನು ಗೌರವಿಸಲಾಯಿತು.ಸ್ವಚ್ಚ ಭಾರತ್ ಯೋಜನೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಮೂಲ್ಕಿಯ ಪತಂಜಲಿ ಯೋಗ ಸಂಸ್ತೆ ಮತ್ತು ದುರ್ಗಾ ರೆಸಿಡೆನ್ಸಿಯ ವರನ್ನು ಗೌರವಿಸಲಾಯಿತು.ಪಂಚಾಯತ್ ನ ಶೇಕಡಾ 24.1 ಅನುದಾನದಲ್ಲಿ 4 ಮಂದಿಗೆ ಮನೆ ದುರಸ್ತಿಗೆ ಸಹಾಯಧನ,7.25 ಅನುದಾನದಲ್ಲಿ 3 ಮಂದಿಗೆ ಉದ್ದಿಮೆಗಾಗಿ ಸಾಲ ಹಾಗೂ ಮೂರು ಮಂದಿಗೆ ಶೌಚಾಲಯ ನಿರ್ಮಾಣಕ್ಕೆ ಸಹಾಯ ಧನವನ್ನು ನೀಡಲಾಯಿತು.

ಮೂಲ್ಕಿ   ಪೋಲಿಸ್ ಠಾಣೆಯ ಸಿಬಂದಿಗಳ ನೇತ್ರತ್ವದಲ್ಲಿ ಜರಗಿದ ಪಥ ಸಂಚಲನದಲ್ಲಿ ಮೂಲ್ಕಿ ಪರಿಸರದ ಶಾಲಾ,ಕಾಲೇಜುಗಳ ಎನ್ ಸಿ ಸಿ,ಸ್ಕೌಟ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು,ಮೂಲ್ಕಿ ನಗರ ಪಂಚಾಯತ್ ಉಪಾಧ್ಯಕ್ಷೆ ರಾ„ಕಾ ಕೋಟ್ಯಾನ್,ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಕಾರಿ ಅಜಿತ್ ಕುಮಾರ್ ಶೆಟ್ಟಿ,ಮೂಲ್ಕಿ ಪೊಲಿಸ್ ಠಾಣಾ„ಕಾರಿ ಅನಂತ ಪದ್ಮನಾಭ,ಮೂಲ್ಕಿಯ ವಿಶೇಷ ತಹಶೀಲ್ದಾರ್ ಕಿಶೋರ್ ಕುಮಾರ್ ಮುಖ್ಯ ಆತಿಥಿಯಾಗಿ ಭಾಗವಹಿಸಿದ್ದರು.

ಮೂಲ್ಕಿಯ ಶ್ರೀ ಕ್ಷೇತ್ರ ಬಪ್ಪನಾಡಿನ ಅನುವಂಶಿಕ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ,ಮೂಲ್ಕಿ ಚರ್ಚಿನ ಧರ್ಮಗುರು ವಂದನೀಯ ಫ್ರಾನ್ಸಿಸ್ ಝೇವಿಯರ್ ಗೋಮ್ಸ್ ಮತ್ತಿತರಿದ್ದರು. ಮೂಲ್ಕಿ ನಗರ ಪಂಚಾಯತ್ ಮುಖ್ಯಾ„ಕಾರಿ ಇಂದು ಸ್ವಾಗತಿಸಿದರು,ಸ್ತಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ವಂದಿಸಿದರು,ನ್ಯಾಯವಾದಿ ಭಾಸ್ಕರ ಹೆಗ್ಡೆ ನಿರೂಪಿಸಿದರು.


ಕೆನರಾ ನ್ಯೂಸ್ ಪ್ರತಿನಿಧಿ ವರದಿ-ಮೂಲ್ಕಿ

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here