Wednesday 24th, April 2024
canara news

ಜ.29 ರಂದು ಕುಂದಕಲಾ ಉತ್ಸವ

Published On : 27 Jan 2017   |  Reported By : Bernard J Costa


ಕುಂದಾಪುರದ ಭಂಡಾರ್‍ಕಾರ್ಸ್ ಕಾಲೇಜು ಕ್ರೀಡಾ ಮೈದಾನದಲ್ಲಿ ಜನವರಿ 29 ರಂದು ಆದಿತ್ಯವಾರ ಸಂಜೆ 5.30ಕ್ಕೆ ಕುಂದಕಲಾ ಉತ್ಸವ ನಡೆಯಲಿದೆ. ಕುಂದಾಪುರದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಹೊನಲು ಬೆಳಕಿನಲ್ಲಿ ಸಮಾರಂಭ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಮಣಿಪಾಲ್ ಅಕಾಡೆಮಿಯ ಆಡಳಿತಾಧಿಕಾರಿ ಡಾ.ಹೆಚ್.ಶಾಂತಾರಾಮ ಅವರಿಗೆ ಕುಂದಪ್ರಭ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಶ್ರೀ ಜಯಪ್ರಕಾಶ್ ರಾವ್, ನಿವೃತ್ತ ಪ್ರಾದೇಶಿಕ ಸಂಪರ್ಕಾಧಿಕಾರಿ, ಭಾರತ ಸರ್ಕಾರದ ರಕ್ಷಣೆ ಮತ್ತು ಸಂಶೋಧನಾ ಸಂಸ್ಥೆ ಇವರು ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಹಲವು ಗಣ್ಯ ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

 

ನಂತರ ನಡೆಯುವ ಸಾಂಸ್ಕøತಿಕ ಉತ್ಸವದಲ್ಲಿ ಭಂಡಾರ್‍ಕಾರ್ಸ್ ಕಾಲೇಜು , ಬಿ.ಬಿ.ಹೆಗ್ಡೆ ಕಾಲೇಜು , ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ವೈವಿದ್ಯಮಯ ನೃತ್ಯ , ಭಾರತ್ ಸೇವಾದಳದ ಕುಂದಾಪುರ ಬೋರ್ಡ್ ಹೈಸ್ಕೂಲ್ (ಸ.ಪ.ಪೂ.ಕಾಲೇಜು)ವಿದ್ಯಾರ್ಥಿಗಳು , ಕೋಡಿಯ ಸ.ಉರ್ದು ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳು , ಸ.ಹಿ.ಪ್ರಾ.ಶಾಲೆ ಕೊರವಡಿಯ ವಿದ್ಯಾರ್ಥಿಗಳು, ಶಾಲಾ ಅಧ್ಯಾಪಕರು , ತರಬೇತುದಾರರಾದ ದಿನಕರ ಶೆಟ್ಟಿ , ಜಿಲ್ಲಾ ಸಂಯೋಜಕ ಮಹೇಶ್ ಪತ್ತರ್, ಜಿಲ್ಲಾ ಅಧ್ಯಕ್ಷ ಗಣೇಶ ಶೆಟ್ಟಿ ಮೊಳಹಳ್ಳಿ ಅವರ ಮಾರ್ಗದರ್ಶನದಲ್ಲಿ ಆಕರ್ಷಕ ಪ್ರದರ್ಶನ ನೀಡಲಿದ್ದಾರೆ. ಖ್ಯಾತ ಕರಾಟೆ ಪಟು ಕಿರಣ್ ಕುಂದಾಪುರ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಆಕರ್ಷಕ ಕರಾಟೆ ಪ್ರದರ್ಶನವಿದೆ. ಹಂಗಾರ ಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಅವರ ನೇತ್ರತ್ವದಲ್ಲಿ ವಿದ್ಯಾರ್ಥಿಗಳ ವಿಶೇಷ ಯಕ್ಷಗಾನ ಪ್ರಾತ್ಯಕ್ಷತೆ ನಡೆಯಲಿದೆ. ಇಂತಹ ವಿವಿಧ ಕಾರ್ಯಕ್ರಮಗಳಿಗೆ ಶೋಭೆ ನೀಡಲು ಉಪ್ಪುಂದದ ಜಿಎಸ್‍ಬಿ ಮಹಿಳಾ ಚಂಡೆ ವೃಂದದವರು ತಮ್ಮ ಅಪೂರ್ವ ಪ್ರದರ್ಶನ ನೀಡಲಿದ್ದಾರೆ. ಭಂಡಾರ್‍ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲ ಡಾ| ಪಿ ನಾರಾಯಣ ಶೆಟ್ಟಿ ಅವರ ಸಹಕಾರದೊಂದಿಗೆ ಕಾಲೇಜಿನ ಕ್ರೀಡಾ ಮೈದಾನದಲ್ಲಿ ಈಗಾಗಲೇ ಸಿದ್ಧತೆ ಆರಂಭಗೊಂಡಿದೆ. ಸತತ ಮೂರು ಗಂಟೆಗಳ ಕಾಲ ನಡೆಯಲಿರುವ ಈ ಕುಂದಕರಾವಳಿ ಉತ್ಸವದಲ್ಲಿ ಎಲ್ಲಾ ಸಾರ್ವಜನಿಕರು ಭಾಗವಹಿಸಬೇಕೆಂದು ವಿನಂತಿಸಲಾಗಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here