Tuesday 17th, May 2022
canara news

ಮೂಲ್ಕಿ ವಿಜಯ ಕಾಲೇಜು ತುಳುವ ಐಸ್ರ-2017

Published On : 03 Feb 2017   |  Reported By : Roshan Kinnigoli


ಶಾಲಾ ಕಾಲೇಜು ಮಟ್ಟದಲ್ಲಿ ತುಳು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಭಾಷೆ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡಿದಲ್ಲಿ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆ ಬೆಳೆಯಲು ಸಾಧ್ಯವೆಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರ್ಯೆ ಹೇಳಿದರು.

 

ಮೂಲ್ಕಿಯ ವಿಜಯ ಕಾಲೇಜಿನ ತುಳುವ ಐಸ್ರ ಸಂಘದ ಆಶ್ರಯದಲ್ಲಿ ಮಂಗಳೂರು ವಿ.ವಿ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ತಂಡಗಳಿಗೆ ಶುಕ್ರವಾರ ಮೂಲ್ಕಿಯ ವಿಜಯ ಕಾಲೇಜಿನ ಸಭಾಂಗಣದಲ್ಲಿ ಜರಗಿದ "ವಿಜಯ ತುಳುವ ಐಸ್ರ-2017 " ಯುವ ಪ್ರತಿಭಾ ವ್ಯೆವಿಧ್ಯಮಯ ಸ್ಪರ್ಧಾ ಕಾರ್ಯಕ್ರಮವನ್ನು ತಾಸೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಗ್ರಾಮ ಪಂಚಾಯತ್ ಪ್ರತಿನಿ„ ಒಕ್ಕೂಟದ ಅಧ್ಯಕ್ಷ ಡಾ ದೇವಿ ಪ್ರಸಾದ್ ಶೆಟ್ಟಿ ವಹಿಸಿದ್ದು ಚಲನಚಿತ್ರ ನಟ,ನಿರ್ದೇಶಕ ಡಾ ರಾಜ್ ಶೇಖರ್ ಕೋಟ್ಯಾನ್ ಮತ್ತು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು,ಮೂಲ್ಕಿಯ ವಿಜಯ ಕಾಲೇಜಿನ ಪ್ರಾಚಾರ್ಯ ಡಾ ಕೆ ನಾರಾಯಣ ಪೂಜಾರಿ,ಆಡಳಿತ ಮಂಡಳಿ ಅಧ್ಯಕ್ಷೆ ಶಮೀನಾ ಆಳ್ವ,ಕಾರ್ಯಕ್ರಮದ ನಿರ್ದೇಶಕ ಎಚ್ ಜಿ ನಾಗರಾಜ್ ನಾಯಕ್,ಡಾ ಅನುಸೂಯ ಟಿ ಕರ್ಕೇರ ಮತ್ತಿತರಿದ್ದರು.ಸುಜಿತ್ ಶೆಟ್ಟಿ ಸ್ವಾಗತಿಸಿದರು,ಸೌಜನ್ಯ ವಂದಿಸಿದರು,ಅಕ್ಷತಾ ನಿರೂಪಿಸಿದರು

ವರದಿ-ಕೆನರಾ ನ್ಯೂಸ್ ಪ್ರತಿನಿಧಿ-ಮೂಲ್ಕಿ

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here