Thursday 28th, March 2024
canara news

ಶ್ರದ್ಧೆ,ನಿಷ್ಟೆ,ಆತ್ಮವಿಶ್ವಾಸ -ಇವು ಸ್ವ ಉದ್ಯೋಗದ ಮಂತ್ರಗಳು -ಡಾ||ವೆಂಕಟರಮಣ ಗೌಡ.

Published On : 23 Oct 2014   |  Reported By : creative BVR


ಕೆನರಾ ಬ್ಯಾಂಕಿನಿಂದ ನಡೆಯುತ್ತಿರುವ ಈ ವಿಶಿಷ್ಟ ತರಬೇತಿಯ ಪ್ರಯೋಜನ ಪಡೆದ ನೀವು ಅದೃಷ್ಟವಂತರು.ಶ್ರದ್ಧೆ,ನಿಷ್ಟೆ,ಆತ್ಮವಿಶ್ವಾಸ -ಎಂಬ ಮಂತ್ರಗಳನ್ನು ಮೈಗೂಡಿಸಿಕೊಂಡು ಸ್ವ-ಉದ್ಯೋಗ ಮಾಡುತ್ತ ಯಶಸ್ವಿಗಳಾಗಿ ಎಂದು ಭುವನೇಂದ್ರ ಕಾಲೇಜು ಕಾರ್ಕಳದ ಪ್ರಾಂಶುಪಾಲರಾದ ಡಾ||ವೆಂಕಟರಮಣ ಗೌಡರವರು ವಿದ್ಯಾಥಿ೯ಗಳಿಗೆ ತಿಳಿಸಿದರು.ಶ್ರೀಯುತರು ಕಾರ್ಕಳ ತಾಲೂಕು, ಮೀಯಾರಿನಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ.ಕಾಮತ್ ಕುಶಲ ತರಬೇತಿ ಸಂಸ್ಥೆ 18 ತಿಂಗಳುಗಳ ಕಾಲ ನಡೆಸಿದ ಮರ ಮತ್ತು ಕಲ್ಲು ಶಿಲ್ಪಕಲಾ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನದಿಂದಮಾತನಾಡುತ್ತಿದ್ದರು. ಕೆನರಾ ಬ್ಯಾಂಕಿನಿಂದ ನಡೆಯುತ್ತಿರುವ ಈ ವಿಶಿಷ್ಟ ತರಬೇತಿಯ ಬಗ್ಗೆ ನಿಮ್ಮೂರಿನಲ್ಲಿ ಪ್ರಚಾರ ಮಾಡಿ ಸ್ವ-ಉದ್ಯೋಗಿಗಳ ಸೃಷ್ಟಿಗೆ ನೆರವಾಗಿ ಎಂದು ಶ್ರೀಯುತರು ವಿದ್ಯಾಥಿ೯ಗಳಿಗೆ ಹಾಗೂ ಪಾಲಕರಿಗೆ ಕರೆ ನೀಡಿದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ 17 ಜನ ವಿದ್ಯಾಥಿ೯ಗಳು ಈ ತರಬೇತಿಯ ಪ್ರಯೋಜನ ಪಡೆದರು.5 ಜನ ವಿದ್ಯಾಥಿ೯ಗಳು ತಮ್ಮ 18 ತಿಂಗಳುಗಳ ಅನುಭವ ಹಂಚಿಕೊಳ್ಳುತ್ತ ಕೆನರಾ ಬ್ಯಾಂಕ್ ತಮಗೆ ನೀಡಿದ ಈ ಉತ್ತಮ ತರಬೇತಿಗಾಗಿ ತಾವು ಚಿರಋಣಿಗಳು ಎಂದು ತಿಳಿಸಿದರು.

ನಂತರ ವಿದ್ಯಾಥಿ೯ಗಳು ತಯಾರಿಸಿದ "ಒಡಲು"ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಪ್ರಾಂಶುಪಾಲರು ವಿದ್ಯಾಥಿ೯ಗಳಿಗೆ ತರಬೇತಿ ಮುಗಿಸಿದ ಪ್ರಮಾಣಪತ್ರ ನೀಡಿ ಹರಸಿದರು. ಸಂಸ್ಥೆಯ ನಿದೇ೯ಶಕರಾದ ಶ್ರೀ ಸುರೇಂದ್ರ ಕಾಮತ್ರವರು ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಕಿರು ಪರಿಚಯ ಮಾಡಿದರು. ಸಂಸ್ಥೆಯ ಕಲ್ಲು ಮತ್ತು ಮರ ಶಿಲ್ಪ ಕಲಾ ವಿಭಾಗದ ಶಿಕ್ಷಕರಾದ ಶ್ರೀಗುಣವಂತೇಸಶ್ವರ ಭಟ್ ರವರು ವಿದ್ಯಾಥರ್ಿಗಳಿಗೆ ಕಿವಿಮಾತುಗಳನ್ನು ಹೇಳುತ್ತ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾಥಿ೯ಳಲ್ಲೊಬ್ಬರಾದ ಸವೇ೯ಶ್ ರವರು ಪ್ರಾಥಿ೯ಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here