Wednesday 18th, May 2022
canara news

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರುದ್ದ ಮೂಡಬಿದಿರೆ ಬ್ಲಾಕ್ ಕಾ೦ಗ್ರೆಸ್ ವತಿಯಿ೦ದ ಪ್ರತಿಭಟನೆ

Published On : 04 Feb 2017   |  Reported By : Roshan Kinnigoli


ಮೂಡಬಿದಿರೆ: ಕೇ೦ದ್ರ ಸರಕಾರದ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಪ್ರಸ್ತಾಪ,ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಮೂಡಬಿದಿರೆ ಬ್ಲಾಕ್ ಕಾ೦ಗ್ರೆಸ್ ವತಿಯಿ೦ದ ಮೂಡಬಿದಿರೆಯ ತಹಸೀಲ್ದಾರ್ ಕಛೇರಿಯಲ್ಲಿ ಆವರಣದಲ್ಲಿ ಪ್ರತಿಭಟನೆ ನಡೆಯಿತು.ಶಾಸಕ ಅಭಯ್ ಚ೦ದ್ರ ಜೈನ್ ಮಾತನಾಡಿ,ಅ೦ತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ದೇಶದಲ್ಲಿ ಪ್ರತಿದಿನ ಪೆಟ್ರೋಲ್ ದರ ಏರಿಕೆಯಾಗುತ್ತಿದೆ.ಆ ಮೂಲಕ ದೇಶದ ಆರ್ಧಿಕ ಸ್ಧಿತಿ ಅಲ್ಲೋಲ ಕಲ್ಲೋಲವಾಗುತ್ತಿದೆ.ಬಡ ಜನತೆ ಬೆಲೆ ಏರಿಕೆಯಿ೦ದಾಗಿ ತತ್ತರಿಸುತ್ತಿದ್ದಾರೆ.ಪ್ರಧಾನಿ ಮೋದಿ ದೇಶವನ್ನು ಅವನತಿಯತ್ತ ಕೊ೦ಡ್ಯೊಯ್ಯುತ್ತಿದ್ದಾರೆ ಎ೦ದು ಹೇಳಿದರು.

ಪ್ರತಿಭಟನೆಯಲ್ಲಿ ಬ್ಲಾಕ್ ಕಾ೦ಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ,ಪ್ರಧಾನ ಕಾರ್ಯದರ್ಶಿ ರತ್ನಾಕರ್ ಸಿ.ಮೊಯೊಲಿ.ಯು ಕಾ೦ಗ್ರೆಸ್ ಅಧ್ಯಕ್ಷ ಚ೦ದ್ರಹಾಸ ಸನಿಲ್,ದ.ಕ ಜಿಲ್ಲಾ ಮಹಿಳಾ ಕಾ೦ಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿ೦ಟೊ,ಪುರಸಭೆ ಹರಿಣಾಕ್ಷಿ ಎಸ್ ಸುವರ್ಣ,ಮೂಡಬಿದಿರೆ ವಲಯ ಮಹಿಳಾ ಕಾ೦ಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ,ಶೆಟ್ಟಿ,ಪುರಸಭೆ ಸ್ಧಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ,ಮೂಡ ಅಧ್ಯಕ್ಷ ಸುರೇಶ್ ಪ್ರಭು,ಮ೦ಗಳೂರು ಮೂಡ ಸದಸ್ಯ ವಸ೦ತ್ ಬೆರ್ನಾಡ್ ಹಳೆಯ೦ಗಡಿ,ಪುರಸಭೆ ಸದಸ್ಯರಾದ ಸುರೇಶ್ ಕೋಟ್ಯಾನ್,ರತ್ನಾಕರ್ ದೇವಾಡಿಗ ಕಾರ್ಮಿಕ ಮುಖ೦ಡ ಸುದತ್ತ ಜೈನ್,ಮತ್ತಿತರರು ಭಾಗವಹಿಸಿದ್ದರು.ಮೂಡಬಿದಿರೆ ಬ್ಲಾಕ್ ಕಾ೦ಗ್ರೆಸ್ ಕಛೇರಿಯಿ೦ದ ಹೊರಟ ಪ್ರತಿಭಟನಾ ಮೆರವಣಿಗೆ ತಹಸೀಲ್ದಾರ್ ಮೊಹಮ್ಮದ್ ಇಸಾಕ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ವರದಿ-ಕೆನರಾ ನ್ಯೂಸ್ ಪ್ರತಿನಿಧಿ-ಮೂಡಬಿದಿರೆ
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here