Tuesday 17th, May 2022
canara news

ಜೆ.ಪಿ ನಾಯಕ್ ಭವನದಲ್ಲಿ ಡಾ| ಜಿ.ವಿ ಕುಲಕರ್ಣಿ ಅವರ ಮಹಾಪ್ರಬಂಧ ಬಿಡುಗಡೆ

Published On : 05 Feb 2017   |  Reported By : Rons Bantwal


ಡಾ| ಜೀವಿ ಬಡವರ ಪಾಲಿನ ಜೀವನಶಕ್ತಿ ಆಗಿದ್ದಾರೆ : ಎಂ.ವಿ ಕಿಣಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.04: ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಹಿರಿಯ ಸಾಹಿತಿ, ಪ್ರಾಚಾರ್ಯ ಡಾ| ಜಿ.ವಿ ಕುಲಕರ್ಣಿ ಅವರ `ಪ್ರಾಚಾರ್ಯ ವಿನಾಯಕ ಕೃಷ್ಣ ಗೋಕಾಕ ಅವರ ಬರವಣಿಗೆ ಮೇಲೆ ಶ್ರೀ ಔರೊಬಿನ್ದೊ ಅವರ ಪ್ರಾಬಲ್ಯ' (Sಡಿi ಂuಡಿobiಟಿಜo's Iಟಿಜಿಟueಟಿಛಿe oಟಿ ಣhe Wಡಿiಣiಟಿgs oಜಿ Pಡಿoಜಿ.ಗಿiಟಿಚಿಥಿಚಿಞ ಏಡಿisshಟಿಚಿ ಉoಞಚಿಞ) ಮಹಾಪ್ರಬಂಧ ಇಂದಿಲ್ಲಿ ಶನಿವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿ ಅಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲ ಯದ ಜೆ.ಪಿ ನಾಯಕ್ ಭವನದಲ್ಲಿ ಬಿಡುಗಡೆ ಗೊಳಿಸಲ್ಪಟ್ಟಿತು.

ನಗರದಲ್ಲಿನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಸಾಂಸ್ಕೃತಿಕ ಸಂಪನ್ನರು ಉಪಸ್ಥಿತರಿದ್ದು ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಂಬಯಿ ಅಲ್ಲಿನ ಪ್ರಸಿದ್ಧ ನ್ಯಾಯವಾ ದಿ ಎಂ.ವಿ ಕಿಣಿ ಮಹಾಪ್ರಬಂಧ ಬಿಡುಗಡೆ ಗೊಳಿಸಿದರು. ಹೆಸರಾಂತ ಹಿರಿಯ ಸಾಹಿತಿ, ಲೇಖಕ, ಕಾರ್ಮಿಕ ಧುರೀಣ ಡಾ| ಕೆ.ಎಸ್ ಶರ್ಮಾ ಅವರು ಪ್ರಬಂಧ ವಿಶ್ಲೇಷಿಸಿದರು.

ನ್ಯಾಯವಾದಿ ಕಿಣಿ ಮಹಾಪ್ರಬಂಧ ಬಿಡುಗಡೆ ಗೊಳಿಸಿ ಮಾತನಾಡಿ ನನ್ನ ಗುರುಗಳಾದ ಡಾ| ಜೀವಿ ಬರೇ ಸಾಹಿತಿ ಅಲ್ಲ ಅಪ್ರತಿಮ ಕಲಾವಿದ. ವ್ಯಕ್ತಿಕ್ಕಿಂತ ಶಕ್ತಿಯಾಗಿ ಬೆಳೆದು ನಮ್ಮಂತವರನ್ನು ಬಹಳ ಎತ್ತರಕ್ಕೆ ಬೆಳೆದ ಮಹಾ ಮೇಧಾವಿಗಳಾಗಿದ್ದಾರೆ. ಅವರು ಕೇವಲ ಲೇಖಕರಕ್ಕ ಸಾವಿರಾರು ಬಡವರ ಬಾಳಿಕ ಸ್ಪೂರ್ತಿದಾಯಕರೂ, ಆಧಾರಸ್ತಂಭವಾಗಿದ್ದಾರೆ.

ಕೃತಿಕರ್ತ ಡಾ| ಜಿ.ವಿ ಕುಲಕರ್ಣಿ ಮಾತನಾಡಿ ಈ ನನ್ನ ಮಹಾಪ್ರಬಂಧ ನನ್ನ ಶಿಷ್ಯರಾದ ಎಂ.ವಿ ಕಿಣಿ ಅವರ ಮಾತಾ ಪಿತರಿಗೆ ಅರ್ಪಣೆಗೊಳಿಸಿದ್ದೇನೆ. ರಾಮರಾಯ ಕಿಣಿ ಮತ್ತು ರಮಾಭಾೈ ಕಿಣಿ ದಂಪತಿಗಳು ಉಡುಪಿ ಮಣಿಪುರದ ಸಾರಸ್ವತ ಸಮುದಾಯದ ಪ್ರತಿಷ್ಠಿತ ವ್ಯಕ್ತಿತ್ವವುಳ್ಳವರು. ಅವರ ಬದುಕು ಪ್ರಸಕ್ತ ವಿದ್ಯಾಥಿರ್sಗಳಿಗೆ ಆದರ್ಶರು ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಂಕಣಕಾರ ರವಿ ರಾ.ಅಂಚನ್, ಕವಿ ಸಿದ್ಧಪ್ಪ ಸಾಬಣ್ಣ ಬಿದರಿ ಹಾಗೂ ಬೆಂಗಳೂರುನ ಪ್ರಸಿದ್ಧ ಕಲಾವಿದೆ ರಮ್ಯಾ ವಸಿಷ್ಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುರೇಖಾ ಸುಂದರೇಶ್, ದಿನಕರ ಎನ್.ಚಂದನ್, ಎಸ್.ನಳಿನ್ ಪ್ರಸಾದ್, ಸುಗಂಥಾ ಸತ್ಯಮೂರ್ತಿ, ಆರ್.ಎಂ ಗಣಚಾರಿ, ಕುಮುದಾ ಕೆ.ಆಳ್ವ, ಜ್ಯೋತಿ ಎನ್.ಶೆಟ್ಟಿ, ಅನಿತಾ ಎಸ್.ಶೆಟ್ಟಿ, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಹೆಚ್.ಪರಸಪ್ಪ, ಲಲಿತಾ ಪ್ರಭಾ ಅಂಗಡಿ, ಸರೋಜಿನಿ ತೆರೆ ಮತ್ತಿತರರು ಹಾಜರಿದ್ದು ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಶಿವರಾಜ್ ಎಂ.ಜಿ ವಂದಿಸಿದರು.

 




More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here