Wednesday 24th, April 2024
canara news

ಸಿಗ್ನಲ್

Published On : 23 Oct 2014   |  Reported By : Sakshi V Mangalore   |  Pic On: Sandeep


ಮಂಗಳೂರು ನಗರ ಒಂದು ಸುಂದರ ಪ್ರವಾಸಿ ತಾಣ, ಮಾತ್ರವಲ್ಲ, ಈ ನಗರಿ ದೈವ ದೇವಸ್ಥಾನಗಳ ತೊಟ್ಟಿಲು. ಈ ನಿಟ್ಟಿನಲ್ಲಿ ಮಂಗಳೂರಿಗೆ ತನ್ನದೇ ಆದ ಹಿನ್ನೆಲೆಯಿದೆ. ದೂರದ ಪ್ರವಾಸಿಗರಿಗೆ ಮಂಗಳೂರು ಸೂಪರ್ ಸ್ಪಾಟ್. ರಜೆಯ ಮಜಾ ಕಳೆಯಲು ಹಾಗೂ ಇಲ್ಲಿನ ಪುಣ್ಯ ಕ್ಷೇತ್ರಗಳ ದರ್ಶನ ಪಡೆಯಲು ದಿನನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.ದೂರದ ಊರಿನವರಿಗೆ ಮಂಗಳೂರೆಂದರೆ ಅದೇನೂ ಪ್ರೀತಿ.

 

ಈ ಕಾರಣದಿಂದಲೇ ದಿನದ ೨೪ ಗಂಟೆಯೂ ಈ ನಗರಿಯಲ್ಲಿ ಜನಸಂಚಾರವಿರುತ್ತೆ.ಹೀಗಾಗಿ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ದಿನಕಳೆದಂತೆ ಅಂಗಡಿ ಮುಂಗಟ್ಟುಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರ್ತಾ ಇದೆ. ಬೆಳಗ್ಗೆ ಮತ್ತ ಸಂಜೆ ವೇಳೆ ಈ ನಗರದಲ್ಲಿ ಓಡಾಟ ತುಸು ಕಷ್ಟವೇ ಸರಿ. ಟ್ರಾಫಿಕ್ ಜಾಮ್ ಇಲ್ಲಿನ ಒಂದು ಸಮಸ್ಯೆಯಾದ್ರೆ, ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ಸರಿಯಾದ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದು. ಸಮರ್ಪಕ ಸಿಗ್ನಲ್ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿ ವಾಹನ ಸಂಚಾರ ಮಾಡಲಾಗುತ್ತಿದೆ.ಸಿಗ್ನಲ್ ನಲ್ಲಿ ಒಬ್ಬ ಸಂಚಾರಿ ಪೊಲೀಸ್ ಇದ್ರೂ, ಅವರಿಂದ ಟ್ರಾಫಿಕ್ ಜಾಮ್ ನಿರ್ವಹಣೆ ಸಾಧ್ಯವಾಗ್ತಾ ಇಲ್ಲ.

ಇನ್ನು, ಸಿಗ್ನಲ್ ನಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮಾರಾ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ.ಕೋಟಿಗಟ್ಟಲೆ ಖರ್ಚು ಮಾಡಿ ನಗರದಲ್ಲಿ ಸಿಸಿ ಕ್ಯಾಮಾರಾ ಹಾಗೂ ಸಿಗ್ನಲ್ ವ್ಯವಸ್ಥೆ ಕಲ್ಪಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ದ ವ್ಯವಸ್ಥೆಯನ್ನು ಸರಿಪಡಿಸುವತ್ತ ಸಂಚಾರಿ ಠಾಣಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಮೊದಲೇ ಮಂಗಳೂರಿನಲ್ಲಿ ದಿನಕ್ಕೊಂದರಂತೆ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ನಡೆಯುತ್ತಿರುತ್ತೆ.ಹೀಗಿರುವಾಗ ಇದ್ದ ವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದರ ಬಗ್ಗೆ ಇಲ್ಲಿನ ಪ್ರಜ್ನಾವಂತ ನಾಗರೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇನ್ನಾದ್ರೂ ಈ ನಗರ ಸಂಚಾರ ಮುಕ್ತವಾಗಬೇಕಿದೆ. ಇದಕ್ಕೆ ಸಂಬಂಧಪಟ್ಟವರು ಸರಿಯಾಗಿ ಸ್ಪಂದನೆ ನೀಡಬೇಕಿದೆ.

ವರದಿ: ಸಾಕ್ಷಿ ವಿ.ಮಂಗಳೂರು

ಫೋಟೋ: ಸಂದೀಪ್




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here