Friday 19th, April 2024
canara news

ದ್ವೀಪ ರಾಷ್ಟ್ರ ಬಾಹ್ರೇಯ್ನ್‍ನಲ್ಲಿ ವಿಜೃಂಭಿಸಿದ ಕರಾವಳಿ ಸಂಭ್ರಮ-2017

Published On : 08 Feb 2017   |  Reported By : Ronida Mumbai


ಡಾ| ಶಿವರಾಜ್ ಕುಮಾರ್ ಮತ್ತು ಡಾ| ರಾಜಶೇಖರ್ ಆರ್.ಕೋಟ್ಯಾನ್‍ಗೆ ಸನ್ಮಾನ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಫೆ.08: ಗುರು ಸೇವಾ ಸಮಿತಿ ಬಾಹ್ರೇಯ್ನ್ ಬಿಲ್ಲವಾಸ್ ತಾಯಿನಾಡಿನ ಸೊಬಗನ್ನು ಸವಿಯುವ ಸಾಂಸ್ಕೃತಿಕ ಹಬ್ಬ ಕರಾವಳಿ ಸಂಭ್ರಮ 2017 ಮನಾಮದಲ್ಲಿರುವ ಅಲರಾಜ ಶಾಲೆಯ ಭವ್ಯ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಸಂಜೆ ನಡೆದ ಕಾರ್ಯಕ್ರಮದಲ್ಲಿ 2000 ಅಭಿಮಾನಿಗಳು ಪಾಲ್ಗೊಂಡಿದ್ದರು

ಗಲ್ಫ್ರಾಷ್ಟ್ರದಲ್ಲಿಯೇ ಅತ್ಯಂತ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮಕ್ಕೆ ಗೌರವ ಅತಿಥಿüಯಾಗಿ ಕನ್ನಡ ಚಿತ್ರರಂಗದ ಖ್ಯಾತನಟ ಹ್ಯಾಟ್ರಿಕ್ ಹೀರೋ ಡಾ|ಶಿವರಾಜ್ ಕುಮಾರ್ ಹಾಗೂ ಮುಂಬಯಿ ಅಲ್ಲಿನ ಚಲನಚಿತ್ರನಟ, ನಿರ್ಮಾಪಕ, ನಿರ್ದೇಶಕ ಡಾ| ರಾಜಶೇಖರ್ ಆರ್.ಕೋಟ್ಯಾನ್, ಚಂದ್ರಶೇಖರ ಸುವರ್ಣ ಉಡುಪಿ, ತುಳುಕೂಟ ಪಿಂಪ್ರಿ ಚಿಂಚ್‍ವಾಡ್ ಅಧ್ಯಕ್ಷ ಶ್ಯಾಮ್ ಸುವರ್ಣ, ಕಾರ್ಯಕ್ರಮದ ನಿರೂಪಕರಾಗಿ ಜಾನಪದ ವಿದ್ವಾಂಸ ಶ್ರೀದಯಾನಂದ ಕತ್ತಲ್‍ಸಾರ್ ಪಾಲ್ಗೊಡಿದ್ದು ಸಮಾರಂಭದಲ್ಲಿ ಡಾ| ಶಿವರಾಜ್ ಕುಮಾರ್‍ಗೆ ತನ್ನ ಕಲಾಸೇವೆಯನ್ನು ಗುರುತಿಸಿ "ಬಿಲ್ಲವ ಕಲಾರತ್ನ" ಬಿರುದು ಪ್ರದಾನಿಸಿ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಶಿವರಾಜ್ ಗಲ್ಫ್ ರಾಷ್ಟ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆ ವ್ಯಕ್ತಪಡಿಸಿ ಬಾಹ್ರೇಯ್ನ್ ಬಿಲ್ಲವಾಸ್ ಸಮೂಹದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಕರಾವಳಿ ಜನತೆ ತೋರಿಸುವ ಪ್ರೀತಿವಿಶ್ವಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಹರೇನ್ನ ಬಹರೇಯ್ನ್‍ನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸುವಂತೆ ವಿನಂತಿಸಿದರು. ತುಳು ಹಾಗೂ ಕನ್ನಡದಲ್ಲಿ "ಕಂಬಳ" ಚಿತ್ರವನ್ನು ನಿರ್ಮಿಸಿ ನಟಿಸುವ ಭರವಸೆ ನೀಡಿ ತನ್ನ ಸುಮಧುರ ಕಂಠದಿಂದ ಚಿತ್ರಗೀತೆಗಳನ್ನು ಹಾಡಿ, ಹಾಡಿಗೆತಕ್ಕಂತೆ ನೃತ್ಯವನ್ನು ಪ್ರದರ್ಶಿಸಿ ನೆರೆದಿರುವ ಅಭಿಮಾನಿಗಳ ಹೃದಯ ಗೆದ್ದರು. ಈ ಸಂದರ್ಭದಲ್ಲಿ ರಾಜಶೇಖರ್ ಕೋಟ್ಯಾನ್ ಅವರನ್ನೂ ಸನ್ಮಾನಿಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.

ಕರ್ನಾಟಕ ಕರಾವಳಿಯ ಎಲ್ಲಾ ಸಂಘಸಂಸ್ಥೆಗಳಿಂದಲೂ ಒಂದೊಂದು ಗೂಪ್‍ಡ್ಯಾನ್ಸ್ ಆಯೋಜಿಸಲಾಗಿತ್ತು. ಮಸ್ಕಿರಿ ಕುಡ್ಲ ಹಾಸ್ಯ ನಾಟಕ ತಂಡ ಹಾಗೂ ಚಂದ್ರಶೇಖರ ಸುವರ್ಣ ಇವರ ನಿರ್ಮಾಣ, ನಿರ್ದೇಶನದ "ತುಳುನಾಡತುಡರ್" ಪ್ರಹಸನವು ಅತ್ಯಂತ ಯಶಸ್ವಿಯಾಗಿ ಜರಗಿತು ಸೌದಿಅರೇಬಿಯಾದಿಂದ ಆಗಮಿಸಿದ ಖ್ಯಾತ ಹಿನ್ನಲೆ ಗಾಯಕಿ ವೆನಿಸ್ಸಾ ಸÀಲ್ದಾನ ತನ್ನ ಸುಮಧುರ ಕಂಠದಿಂದ ತುಳು, ಕನ್ನಡ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು ಹಾಗೂ ಸ್ಥಳೀಯ ಕಲಾವಿದರ ನೃತ್ಯಪ್ರದರ್ಶನವು ನೋಡುಗರ ಮನಸೂರೆ ಗೊಂಡಿತು.

ಕಾರ್ಯಕ್ರಮದ ಕೊನೆಗೆ ಬಾಹ್ರೇಯ್ನ್ ಬಿಲ್ಲವಾಸ್ ಅಧ್ಯಕ್ಷ ರಾಜಕುಮಾರ್ ಅತಿಥಿüಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿ ವಂದಿಸಿದರು

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here