Thursday 25th, April 2024
canara news

ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್‍ನ ಮುಂಬಯಿ ವಿಭಾಗೀಯ ಪ್ರಥಮ ಸ್ಥಾನದ

Published On : 11 Feb 2017   |  Reported By : Rons Bantwal


ಉತ್ಕೃಷ್ಟ ಬ್ಯಾಂಕ್ ಪುರಸ್ಕಾರಕ್ಕೆ ಪಾತ್ರವಾದ ಮೋಡೆಲ್ ಬ್ಯಾಂಕ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.10: ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಇದರ 2015-2016ರ ಹಣಕಾಸು ಸಾಲಿನ ವಾರ್ಷಿಕ ಪಾರಿತೋಷಕ ಪ್ರಶಸ್ತಿ ಪ್ರದಾನ ನೆರವೇರಿಸಿದ್ದು, ರೂಪಾಯಿ 500 ಕೋಟಿ ಮೇಲಿನ ಠೇವಣಿ ಸಂಗ್ರಹಣಾ ಸೇವೆಗಾಗಿ ಮುಂಬಯಿ ವಿಭಾಗದಲ್ಲೇ ಪ್ರಪ್ರಥಮ ಸ್ಥಾನದೊಂದಿಗೆ `ಉತ್ಕೃಷ್ಟ ಬ್ಯಾಂಕ್' ಪುರಸ್ಕಾರ ಮೋಡೆಲ್ ಬ್ಯಾಂಕ್‍ಗೆ ಪ್ರದಾನಿಸಿ ಗೌರವಿಸಿತು.

 

ಅಸೋಸಿಯೇಶನ್ 21ನೇ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ದಾದರ್ ಪಶ್ಚಿಮದ ಪ್ರಭಾದೇವಿ ಅಲ್ಲಿನ ರವೀಂದ್ರ ನಾಟ್ಯಮಂದಿರದ ಸಭಾಗೃಹದಲ್ಲಿ ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ, ಸಹಕಾರಿ ದಿಗ್ಗಜ ಪ್ರಥ್ವಿರಾಜ್ ಚವ್ಹಾಣ್ ಅಧ್ಯಕ್ಷತೆಯಲ್ಲಿ ಜರುಗಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಲೋಕ್‍ಮತ್ ದೈನಿಕದ ಸಂಪಾದಕ ಗಿರೀಶ್ ಕುಬೇರ್ ಬ್ಯಾಂಕ್‍ಸ್ ಅಸೋಸಿಯೇಶನ್‍ನ ಕಾರ್ಯಾಧ್ಯಕ್ಷ ಸುಭಾಶ್ ರಾಮ್‍ದೇವ್ ಜೋಶಿ ಅವರನ್ನೊಳಗೊಂಡು ಮೋಡೆಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ ್ಯ.ಡಿ'ಸೋಜಾ ಅವರಿಗೆ ಪುರಸ್ಕಾರ ಫಲಕ ಪ್ರದಾನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಸೋಸಿಯೇಶನ್‍ನ ಉಪ ಕಾರ್ಯಾಧ್ಯಕ್ಷ ಪ್ರಚೀತ್ ಎ.ಪೆÇರೆಡ್ಡಿವರ್, ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸ್ವಾತಿ ಪಾಂಡೆ, ಮೋಡೆಲ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ'ಸೋಜಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‍ಸ್ ಅಸೋಸಿಯೇಶನ್‍ನ ಸಂಚಾಲಕರುಗಳಾದ ಡಾ| ಶಶಿ ಬಿ.ಅಹಿರೆ, ಡಾ| ವಿನಾಯಕ್ ಯಶವಂತ್ ತರಾಳೆ, ಮಧುಕರ್‍ರಾವ್ ವಿ.ಜವಂಜಾಳ್, ವಿಕಾಸ್ ಬಾಲಚಂದ್ರ ಸಾವಂತ್, ವಿಶ್ವಾಸ್ ಠಾಕೂರ್ ವಸಂತ್ ವಿ.ಗುಯಿಖೇಡ್ಕರ್, ಭರತ್ ಮಾಲಿ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಕರಾವಳಿ ಮೂಲದ ಕ್ರೈಸ್ತ ಸಮೂದಾಯದ ಮುಂದಾಳುಗಳಿಂದ ದಿ.ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿಯಮಿತ ಎಂದಾಗಿಸಿ ಸ್ಥಾಪಿಸಲ್ಪಟ್ಟು ಪ್ರಸ್ತುತ ಮೊಡೇಲ್ ಬ್ಯಾಂಕ್ ಕೋ.ಆಪರೇಟಿವ್ ಲಿಮಿಟೆಡ್ ಹೆಸರಾಂತ ಮೊಡೇಲ್ ಬ್ಯಾಂಕ್ ಕಳೆದ ವರ್ಷವಷ್ಟೇ ಶತಮಾನೋತ್ಸವ ಸಂಭ್ರಮಿಸಿತ್ತು.ಈ ಬ್ಯಾಂಕ್ ಮುಂಬಯಿ, ಥಾಣೆ, ನವಿಮುಂಬಯಿ ಉಪನಗರವನ್ನೊಳಗೊಂಡು ಒಟ್ಟು 21 ಶಾಖೆಗಳ ಮೂಲಕ ಸೇವಾ ನಿರತವಾಗಿದೆ. 2015-2016ರ ಹಣಕಾಸು ಸಾಲಿನಲ್ಲಿ ಒಟ್ಟು ರೂಪಾಯಿ 500 ಕೋಟಿ ಅಧಿಕ ವ್ಯವಹಾರ ನಡೆಸಿ ಗ್ರಾಹಕರು ಮತ್ತು ಷೇರುದಾರರ ವಿಶ್ವಾಸಕ್ಕೆ ಪಾತ್ರವಾಗಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here