Thursday 25th, April 2024
canara news

ಮಲಾಡ್ ಪಶ್ಚಿಮದ ಎಸ್.ವಿ ರೋಡ್‍ನ ಗೋರಸ್ವಾಡಿ ಲೇನ್‍ನಲ್ಲಿ

Published On : 11 Feb 2017   |  Reported By : Rons Bantwal


`ತುಂಗಾ ಸೂಪರ್ ಸ್ಪೆಶಿಯಾಲಿಟಿ ಹಾಸ್ಪಿಟಲ್'ನಲ್ಲಿ ಪೂಜಾ ಕಾರ್ಯಕ್ರಮ
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.11: ವಿೂರಾರೋಡ್, ಬೊಯಿಸರ್‍ನಲ್ಲಿ ಆರೋಗ್ಯಭಾಗ್ಯದ ಕಾಳಜಿಗೆ ಹೆಸರುವಾಸಿಯಾದ ತುಳು-ಕನ್ನಡಿಗರ ಸಂಚಾಲಕತ್ವದ `ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್' ಇದೀಗ ಮುಂಬಯಿ ಉಪನಗರದ ಮಲಾಡ್ ಪಶ್ಚಿಮದಲ್ಲೂ ಸೇವಾರಂಂಭಿಸಿದ್ದು, ಇಲ್ಲಿನ ಎಸ್.ವಿ ರೋಡ್ ಮುಂಭಾಗದಲ್ಲಿನ ಗೋರಸ್ವಾಡಿ ಲೇನ್‍ನ ಸಿಂಡಿಕೇಟ್ ಬ್ಯಾಂಕ್‍ನ ಮುಂಭಾಗದ ಕಟ್ಟಡದಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ `ತುಂಗಾ ಸೂಪರ್ ಸ್ಪೆಶಿಯಾಲಿಟಿ ಹಾಸ್ಪಿಟಲ್'ಸಿದ್ಧಗೊಳಿಸಿ ಕಳೆದ ಗುರುವಾರ ಧಾರ್ಮಿಕ ಪೂಜಾಧಿಗಳೊಂದಿಗೆ ಸೇವೆಗೆ ಸನ್ನದ್ಧ ಗೊಳಿಸಿದೆ.

ಮೀರಾರೋಡ್‍ನ ವಿದ್ವಾನ್ ಕೃಷ್ಣರಾಜ್‍ತಂತ್ರಿ ತಮ್ಮ ಪೌರೋಹಿತ್ಯದಲ್ಲಿ ವಾಸ್ತುಹೋಮ, ವಾಸ್ತುಬಲಿ, ಪುಣ್ಯಾವಚನ, ನವಗ್ರಹಪೂಜೆ, ಪೂಜೆ, ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ದ್ವಾರಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್‍ನ ಭೋಜ ಮೋಹನ್ ಶೆಟ್ಟಿ (ತುಂಗಾ ಮೆಡಿಕಲ್ ಟ್ರಸ್ಟ್‍ನ ಸಂಸ್ಥಾಪಕ ವಿಶ್ವಸ್ಥ) ಹಾಗೂ ವಸಂತಿ ಬಿ.ಶೆಟ್ಟಿ ಬಜ್ಪೆ, ಅವರ ಸುಪುತ್ರ ಡಾ| ಸತೀಶ್ ಬಿ.ಶೆಟ್ಟಿ (ಮೆಡಿಕಲ್ ಡೈರೆಕ್ಟರ್) ಮತ್ತು ಡಾ| ದಿವ್ಯ ಎಸ್.ಶೆಟ್ಟಿ, ವಿಶ್ವಸ್ಥ ನಿರ್ದೇಶಕರುಗಳಾದ ಉಮೇಶ್ ಎ.ಶೆಟ್ಟಿ ಮುಂಡ್ಕೂರು ಮತ್ತು ಪೂಜಾ ಯು.ಶೆಟ್ಟಿ, ರಾಜೇಶ್ ಬಿ.ಶೆಟ್ಟಿ ಮತ್ತು ಅರ್ಚನಾ ಆರ್.ಶೆಟ್ಟಿ ಹಾಗೂ ಹರಿಪ್ರಸಾದ್ ಬಿ.ಶೆಟ್ಟಿ ಮತ್ತು ಕಾಂತಿ ಹೆಚ್.ಶೆಟ್ಟಿ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಮಲಾಡ್ ಪಶ್ಚಿಮದ ಎಸ್.ವಿ ರೋಡ್ ಮುಂಭಾಗದಲ್ಲಿನ ಗೋರಸ್ವಾಡಿ ಲೇನ್‍ನÀಲ್ಲಿನ ಏಳು ಮಹಡಿಗಳ ಭವ್ಯ ಕಟ್ಟಡದಲ್ಲಿ ಸುಮಾರು 62,000 ಚದರ ಅಡಿ ವಿಸ್ತೀರ್ಣದ ಸ್ಥಳಾವಕಾಶದಲ್ಲಿ ರೂಪಿಸಲ್ಪಟ್ಟ ಈ ಸೂಪರ್ ಸ್ಪೆಶಿಯಲಿಟಿ ಹೈ-ಟೆಕ್ ಹೆಲ್ತ್ ಕೇರ್ ಸೆಂಟರ್‍ನ್ನು ಇದೇ ಫೆ.27ನೇ ಸೋಮವಾರ ಪೂರ್ವಾಹ್ನ 11.00 ಗಂಟೆಗೆ ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಆಶೀರ್ವಚನಗಳೊಂದಿಗೆ ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಗೋಪಾಲ್ ಸಿ.ಶೆಟ್ಟಿ ಸೇವಾರ್ಪಣೆ ಮಾಡಲಿದ್ದಾರೆ.

ನೂರಾರು ಆಧುನಿಕ ತಂತ್ರಜ್ಞಾಗಳುಳ್ಳ ಅತ್ಯಾಧುನಿಕ ಸೌಲತ್ತುಗಳೊಂದಿಗೆ ಜನಸಾಮಾನ್ಯರ ಕೂಡಾ ಆರೋಗ್ಯ ಕಾಳಜಿಯುಳ್ಳ ಪ್ರಕೃತಿಕ ಮನಸ್ವಾಸ್ಥ ್ಯ ಸೇವಾ ಕೇಂದ್ರವಾಗಿ ಆಧುನಿಕ ವಿಶೇಷತೆಗಳೊಂದಿಗೆ ಸಿದ್ಧಗೊಂಡಿರುವ ಈ ಖಾಸಗಿ ಆಸ್ಪತ್ರೆಯು ಎಲ್ಲಾ ರೋಗಿಗಳಿಗೂ ಮಾನವೀಯ ಸೆಳೆಯ ಆಸಕ್ತಿಯೊಂದಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರೀತಿ ವಾತ್ಸಲ್ಯ ಭರಿತ ಕರುಣಾಮಯ ಆರೈಕೆಗೈದು ಗುಣಹೊಂದುವ ಸೇವೆಯನ್ನೇ ಧ್ಯೇಯೋದ್ದೇಶವಾಗಿ ಕಾರ್ಯಚರಿಸಲಿದೆ. ಸೇವೆಯಲ್ಲಿ ತುಳು-ಕನ್ನಡಿಗರಿಗೆ ವಿಶೇಷ ರಿಯಾಯಿತಿ ಇದ್ದು, ಈ ಹೈ-ಟೆಕ್ ಹೆಲ್ತ್ ಕೇರ್ ಸೆಂಟರ್ ಅನೇಕತ್ವದ ವೈವಿಧ್ಯತೆಯ ಸೇವೆಗೆ ಪಾತ್ರವಾಗಲಿದೆ ಎಂದು ತುಂಗಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ| ಸತೀಶ್ ಬಿ.ಶೆಟ್ಟಿ ತಿಳಿಸಿದ್ದಾರೆ. ಫೆ.27ರ ಉದ್ಘಾಟನಾ ಸಮಾರಂಭಕ್ಕೂ ಮಹಾನಗರದಲ್ಲಿನ ಸರ್ವ ತುಳು ಕನ್ನಡಿಗರಿಗೆಲ್ಲರಿಗೂ ಆದರಪೂರ್ವಕ ಸ್ವಾಗತವಿದ್ದು ಸರ್ವರ ಸಹಯೋಹ ಕೋರಲಾಗಿದೆ ಎಂದು ರಾಜೇಶ್ ಬಿ.ಶೆಟ್ಟಿ ತಿಳಿಸಿದ್ದಾರೆ.

(ನಿರ್ಮಣ್ ಹೈಟೆಕ್ ಡಯಾಗ್ನೆಸ್ತೀಕ್ ಪಿವಿಅರ್ ಮಿಲಪ್ ಥಿಯೇಟರ್‍ನ) .............. ಕಟ್ಟಡದಲ್ಲಿ ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಸೇವಾರ್ಪಣೆಗೈಯಲಿದ್ದಾರೆ. 

ಭಾರತ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿ ಉಪನಗರದಲ್ಲಿ ಅತೀವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತುಳು-ಕನ್ನಡಿಗರ ಪಾಲಿಗೆ ಮಿನಿಮಂಗಳೂರು ಎಂದೇ ಪ್ರಸಿದ್ಧಿಯಲ್ಲಿರುವ ವಿೂರಾರೋಡ್‍ನಲ್ಲಿ (ವಿೂರಾ-ಭಯಂದರ್) ಜನಹಿತ ಪ್ರಾಧಾನ್ಯತೆಯ ಬಹುಸಂಖ್ಯಾ ವಿಶೇಷಜ್ಞ ಆರೋಗ್ಯ ಕೇಂದ್ರವಾಗಿರಿಸಿ ಸುಮಾರು ಏಳು ವರ್ಷಗಳ ಹಿಂದೆ ವಿೂರಾರೋಡ್ ಪೂರ್ವದ ಶಿವಾರ್ ಗಾರ್ಡನ್ ಮುಂಭಾಗದಲಿನ್ಲ ಎನ್.ಹೆಚ್ ಇಂಗ್ಲೀಷ್ ಹೈಸ್ಕೂಲ್‍ನ ಸಮೀಪದಲ್ಲಿ ಚಿಕ್ಕದಾಗಿ ಆರಂಭಿಸಿದ್ದ ತುಂಗಾ ಹೆಲ್ತ್ ಕೇರ್ ಸೆಂಟರ್‍ನ್ನು ಇದೀಗ ಅಧಿಕ ಸೇವಾ ಕೇಂದ್ರವಾಗಿ ಸೇರ್ಪಡೆಗೊಂಡು ಡಾ| ಸತೀಶ್ ಬಿ.ಶೆಟ್ಟಿ ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ಮೂಲಕ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಇಲ್ಲಿನ ಭೋಜ ಮೋಹನ್ ಶೆಟ್ಟಿ (ಸಂಸ್ಥಾಪಕ ವಿಶ್ವಸ್ಥ) ಹಾಗೂ ಮಂಗಳೂರು ತಾಲೂಕಿನ ಬಜ್ಪೆ ಮೂಲದ ಶ್ರೀಮತಿ ವಸಂತಿ ಬಿ.ಶೆಟ್ಟಿ ಇವರ ಸುಪುತ್ರ ಡಾ| ಸತೀಶ್ ಬಿ.ಶೆಟ್ಟಿ (ಎಂ.ಡಿ-ಉಡುಪಿ ಹಾಗೂ ಎಫ್‍ಎಜಿಇ-ಮಣಿಪಾಲ್) ಇವರ ಆಡಳಿತ ನಿರ್ದೇಶಕತನದ ಮತ್ತು ಕಿನ್ನಿಗೋಳಿ ಮುಂಡ್ಕೂರು ಮೂಲದ ಉಮೇಶ್ ಎ.ಶೆಟ್ಟಿ (ಸಿಇಒ) ಆಡಳಿತ್ವದ ಸಂಸ್ಥೆಯಲ್ಲಿ ನಿರ್ದೇಶಕರುಗಳಾಗಿ ಡಾ| ದಿವ್ಯ ಎಸ್.ಶೆಟ್ಟಿ (ಎಂ.ಡಿ), ಹರಿಪ್ರಸಾದ್ ಬಿ.ಶೆಟ್ಟಿ, ರಾಜೇಶ್ ಬಿ.ಶೆಟ್ಟಿ, ಶ್ರೀಮತಿ ಪೂಜಾ ಯು.ಶೆಟ್ಟಿ ಮತ್ತು ವಿಠಲ್ ಜಿ.ಶೆಟ್ಟಿ ಸೇವಾ ನಿರತರಾಗಿದ್ದಾರೆ.

ಸೇವೆಯಲ್ಲಿನ ವಿಶೇಷತೆ :
ಆಲ್ಟ್ರಾ ಸೊನೋಗ್ರಾಫಿ, ಕ್ಷ-ಕಿರಣ (ಎಕ್ಸ್-ರೇ), ಎಲುಬು-ಅಸ್ಥಿ ಚಿಕಿತ್ಸೆ (ಆರ್ಥೊಪೆಡಿಕ್ ಸರ್ಜರಿ), ಪ್ಲಾಸ್ಟಿಕ್ ಸರ್ಜರಿ, ಮಧುಮೇಹ (ಡಯಾಬಿಟಿಸ್), ವೈದ್ಯಕೀಯ ಚಿಕಿತ್ಸೆ (ಫಿಜೀಶಿಯನ್), ವೃತ್ತಿ (ಆಕ್ಯುಫೆಶನ್), ಸ್ತ್ರೀ ರೋಗ ಶಸ್ತ್ರ (ಗೈನಕಾಲಜಿಕ್), ಜೀವ ಶಾಸ್ತ್ರ (ಫಿಜಿಯೋಥೆರಪಿ), ವಾಂತಿ ಭೇದಿ, ಕರಳು ಬೇನೆ (ಗ್ಯಾಸ್ಟ್ರೊ ಎಂಟರೊಲಾಜಿ), ಪಥ್ಯ ಸಲಹಾವೈದ್ಯ (ಡಯಟೀಸಿಯನ್), ವಿಶೇಷ ಗುಮಾನಿಯ ಮಕ್ಕಳ ತಜ್ಞ, ಕಣ್ಣು-ಮೂಗು-ಗಂಟಲು (ಇಎನ್‍ಟಿ),

ನರರೋಗ ಶಸ್ತ್ರ (ನ್ಯೂರಾಲೊಜಿ), ಮೂತ್ರಜನಕಾಂಗ ಶಾಸ್ತ್ರ (ನೆಫಾಲಜಿ), ರೋಗವಿಜ್ಞಾನ ಶಾಸ್ತ್ರ (ಪೆಥಾಲಜಿ), ಹೊರ ರೋಗಿ ವಿಭಾಗ (ಓಪಿಡಿ), ಚರ್ಮರೋಗ (ಡರ್ಮಟಾಲಜಿ), ದೇಹರಚನೆ, ಪ್ರಕೃತಿ ಶರೀರಸ್ಥಿತಿಗಳ ಉಪಚಾರ ಸೇರಿದಂತೆ ಇತರೇ ಅನೇಕಾನೇಕ ಮಾರಕ ರೋಗಗಳ ತಡೆ ಮತ್ತು ಗಾಯ-ಪೆಟ್ಟುಗಳ ಚಿಕಿತ್ಸೆಯ ಅಪಘಾತ ಸೇವಗಳ ಶೀಘ್ರ ಉಪಚಾರ ಹಾಗೂ 2-ಡಿ ಎಕ್ಕೊ ಸೌಲಭ್ಯವುಳ್ಳ ವಿವಿಧ ಖಾಸಗಿ ರೋಗಶಯ್ಯ ಸೇವೆಯ ಜೊತೆಗೆ ವೈಯಕ್ತಿಕ ಪಾಲನೆಗಾಗಿ ಖಾಸಗಿ ಆಯಾ (ಮಹಿಳೆಯರಿಗಾಗಿ ಸ್ತ್ರೀ ಪರಿಚಾರಕಿಯರು) ಅನುಕುಲಕರವಾಗಿ ನೀಡಲಾಗುತ್ತಿದೆ.

15-ಐಸಿಸಿಯು, ಡಯಾಲಿಸಿಸ್ ಘಟಕಗಳು ಸುಮಾರು 43 ವಿಶೇಷ ಆರೈಕೆಯ ಕೊಠಡಿಗಳು ಮತ್ತು ಆಸ್ಪತ್ರಾ ವಿಭಾಗಗಳು (ವಾರ್ಡ್), ಅತ್ಯಾಧುನಿಕ ಸೌಲಭ್ಯಗಳುಳ್ಳ ಶಸ್ತ್ರ ಚಿಕಿತ್ಸೆಗೃಹ, ಶಿಲಾಶಸ್ತ್ರ ಘಟಕ ಸೇರಿದಂತೆ ಪ್ರಸಕ್ತ ಆರೋಗ್ಯ ಪಾಲನಾ ಬೆಡ್‍ಗಳ ಸಹಿತ ಸುಮಾರು 70 ಬೆಡ್ ಸೌಲಭ್ಯಗಳೊಂದಿಗೆ ದಿನದ 24 ಗಂಟೆಗಳೂ ಮೆಡಿಕಲ್ (ಔಷದಾಲಯ) ಸೇವೆಯೊಂದಿಗೆCardiac Cathlab, Cardiac Operation Theatre(By Pass), Gastroe -ntrology, Brain & Spine Surgery, Obstetrics & Gynaecology, Ortho and Neuro Operation Theater, ENT, Medical ICU, Ophthalmology, Surgical ICU, Ultra Sound / 2D Echo / TMT / PFT, Nephrology & Urology, 24 Hrs. Pharmacy, Haemodialysis, Digital X-Ray / Pathology, Laproscopic Surgery, Plastic / Cosmetic Surgery, Laminar OT(Specially For Joint, Knee & Hip Replacement & Major Surgery), Special Health Check-up Scheme & Package to Angiography, Angioplasty, CABG, Physiotherapy ಸೇವಾ ನಿರತವಾಗಿದೆ.

ಸೌಲಭ್ಯಗಳು:
ಹವಾನಿಯಂತ್ರಿತ ಹೆರಿಗೆ ಕೋಣೆ, ಅಲ್ಟ್ರಾಸೌಂಡ್, ಕಲರ್ ಡಾಪ್ಲರ್, ಕಂಪ್ಯೂಟರೀಕೃತ-ಕ್ಷ ಕಿರಣ, ಇಸಿಜಿ, ಸ್ಟ್ರೆಸ್ ಟೆಸ್ಟ್, ಸ್ಟೈರೋಮೆಟ್ರಿ, ಸ್ಪೈರಲ್ 3ಡಿ ಸಿ.ಟಿ. ಸ್ಕ್ಯಾನ್, ಫಿಸಿಯೋಥೆರಪಿ, ಜನರಲ್, ಹೃದಯ, ಕೃತಕ ಉಸಿರಾಟ ಯಂತ್ರ (ವೆಂಟಿಲೇಟರ್), 4-ಮೇಜರ್ ಆಪರೇಶನ್ ಕೋಣೆಗಳು, ವಿಡಿಯೋ ಎಂಡೋಸ್ಕೋಪಿ, ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆಗಳು, ಜನರಲ್ ವಾರ್ಡ್, ಸ್ಪೆಷಲ್ ರೂಮ್‍ಗಳು ಮತ್ತು ಹವಾನಿಯಂತ್ರಿತ ಸ್ಯೂಟ್‍ಗಳು, ಕೇಂದ್ರಿಕೃತ ಆಮ್ಲಜನಕ ವ್ಯವಸ್ಥೆ, ಉಪಾಹಾರ ಗೃಹ, ಎಲ್ಲಾ ಆರೋಗ್ಯ ವಿಮಾ ಸೌಲಭ್ಯಗಳು, ನುರಿತ ತಜ್ಞ ವೈದ್ಯರ ಮತ್ತು ಸಿಬ್ಬಂದಿಗಳ ಸೇವೆ ಸದಾ ಲಭ್ಯ, ರೋಗಿಗಳ ಆಯ್ಕೆಯ ವೈದ್ಯರಿಂದ ಚಿಕಿತ್ಸೆ ಪಡೆಯಬಹುದಾದ ಸೌಲಭ್ಯ, ಆಪ್ತ ಸಮಾಲೋಚನೆ, ಆರೋಗ್ಯ ಮಾಹಿತಿ ಸೌಲಭ್ಯಗಳು, ಸಂದರ್ಶಕ ತಜ್ಞ ವೈದ್ಯರ ಸೇವೆ, ಪಿಸಿಎಚ್ ಹೆಲ್ತ್ ಕಾರ್ಡ್, ಸಂಡೇ ಕ್ಲಿನಿಕ್, ನೈಟ್ ಕ್ಲಿನಿಕ್, ಎಕ್ಸ್‍ಪ್ರೆಸ್ ಕ್ಲಿನಿಕ್ ಸೌಲಭ್ಯ, ಪ್ರಿವೆಂಟಿವ್ ಹೆಲ್ತ್ ಚೆಕ್ ಆಪ್ ಪ್ಲಾನ್ ಇತ್ಯಾದಿಗಳು ಸದ್ಯ ಸೇವೆಯಲ್ಲಿರುವ ಪ್ರಮುಖ ಸೌಲಭ್ಯಗಳಾಗಿವೆ. ಹಾಗೆಯೇ ಭವಿಷ್ಯತ್ತಿನಲ್ಲಿ ರಕ್ತ ನಿಧಿ, ಎಂಆರ್‍ಐಸ್ಕ್ಯಾನ್, ಶೀತಲೀಕೃತ ಶವಾಗಾರ, ರೋಗ ನಿಯಂತ್ರಕ ಲಸಿಕಾ ಕೇಂದ್ರ, ಇನ್‍ಫರ್ಟಿಲಿಟಿ ಕ್ಲಿನಿಕ್, ದಂತ ಚಿಕಿತ್ಸಾ ವಿಭಾಗಗಳನ್ನು ತೆರೆಯುವ ಯೋಜನೆ ಸಂಸ್ಥೆಯು ಹೊಂದಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಉಮೇಶ್ ಎ.ಶೆಟ್ಟಿ ತಿಳಿಸಿದ್ದಾರೆ.

ಮಹಾನಗರದ ನಾಮಾಂಕಿತ ಆಸ್ಪತ್ರೆಗಳಾದ ಲೀಲಾವತಿ, ಏಷಿಯಾನ್ ಹಾರ್ಟ್, ನಾನಾವತಿ, ಬಾಂಬೇ ಹಾಸ್ಪಿಟಲ್ ಸೇರಿದಂತೆ ಅನೇಕ ರುಗ್ಣಾಲಯಗಳ ಕಾರ್ಡಿಯೋ ಸ್ಪೆಶಿಯಲಿಸ್ಟ್ ವೈದ್ಯಾಧಿಕಾರಿಗಳು ಸದಾ ಇಲ್ಲಿ ಸೇವೆಗೆ ಉಪಲಬ್ಧರಿದ್ದು, ಅತ್ಯಾಧುನಿಕ ಸೌಲತ್ತುಗಳುಳ್ಳ ಹೈ-ಟೆಕ್ ಹೆಲ್ತ್‍ಕೇರ್ ಸೆಂಟರ್ ಖಾಸಗಿ ಆಸ್ಪತ್ರೆಯು ಮಲಾಡ್‍ನಿಂದ ಡಹಾಣು ತನಕ ಸದ್ಯ ಸೇವಾ ನಿರತ ಏಕೈಕ ಹೈ-ಟೆಕ್ ಆಸ್ಪತ್ರೆ ಆಗಿರಲಿದೆ. ಸರ್ವರಿಗೂ ಸಂಪೂರ್ಣ ಆರೋಗ್ಯದ ಕೊಡುಗೆ ನೀಡುವ ಉದ್ದೇಶ ನಮ್ಮದಾಗಿದೆ ಎಂದು ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್‍ನ ಮೆಡಿಕಲ್ ಡೈರೆಕ್ಟರ್-ಆಡಳಿತ ನಿರ್ದೇಶಕ ಡಾ| ಸತೀಶ್ ಬಿ.ಶೆಟ್ಟಿ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here