Thursday 25th, April 2024
canara news

ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ್ ಕೆ. ಉಪೇಂದ್ರ ಭಟ್ ಅವರಿಗೆ ಮಹಾರಾಷ್ಟ್ರ ಸರಕಾರ ಹಿಂದುಸ್ಥಾನಿ ಶಾಸ್ತ್ರೀಯ ಪ್ರಶಸ್ತಿ

Published On : 12 Feb 2017   |  Reported By : Rons Bantwal


ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ್ ಕೆ. ಉಪೇಂದ್ರ ಭಟ್ ಅವರಿಗೆ ಮಹಾರಾಷ್ಟ್ರ ಸರಕಾರ ಹಿಂದುಸ್ಥಾನಿ ಶಾಸ್ತ್ರೀಯ 2016ನೇ ಸಾಲಿನ ಸಾಂಸ್ಕøತಿಕ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿಯು ರೂ.ಒಂದು ಲಕ್ಷ ನಗದು ಪುರಸ್ಕಾರವನ್ನು ಹೊಂದಿದೆ. ಈ ನೆಲೆಯಲ್ಲಿದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪಂಡಿತ್ ಕೆ. ಉಪೇಂದ್ರ ಭಟ್ ಅವರನ್ನುಇಂದು ಗೌರವಿಸಿ ಅಭಿನಂದಿಸಲಾಯಿತು. ಕರ್ನಾಟಕ ವಿಧಾನ ಸಭೆಯ ಮಾಜಿ ಉಪಸಭಾಪತಿ ಎನ್. ಯೋಗೀಶ್ ಭಟ್, ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ, ವಿದ್ವಾಂಸಡಾ. ಎಂ. ಪ್ರಭಾಕರ ಜೋಶಿ, ನಿತ್ಯಾನಂದ ಕಾರಂತ ಪೊಳಲಿ, ಪ್ರೊ. ಜಿ.ಕೆ. ಭಟ್ ಸೇರಾಜೆ, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಘಟಕಾಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ, ಆಕೃತಿ ಪ್ರಿಂಟರ್ಸ್‍ನತಲ್ಲೂರು ನಾಗೇಶ್, ಪಿ. ಸುರೇಶ್ ಶೆಣೈ, ದ.ಕ. ಜಿಲ್ಲಾ ಕಸಾಪ ಗೌರವಕೋಶಾಧಿಕಾರಿ ಪೂರ್ಣಿಮಾರಾವ್ ಪೇಜಾವರ, ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್, ದ.ಕ. ಜಿಲ್ಲಾಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ, ಎಕ್ಸ್‍ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

ಪಂಡಿತ್ ಉಪೇಂದ್ರ ಭಟ್‍ರವರು ಮೂಲತಃ ಮಂಗಳೂರಿನ ಗೋಕರ್ಣ ಮಠದ ವೈದಿಕ ಮನೆತನದವರು, ಭಾರತರತ್ನ ಪಂ. ಭೀಮ ಜೋಶಿಯವರ ಶಿಷ್ಯರಾಗಿ ಪ್ರಖ್ಯಾತರಾದವರು. ಎಳವೆಯಲ್ಲೇ ಪೂನಾದಲ್ಲೇ ನೆಲೆಸಿ ಜೋಶಿಯವರ ಶಿಷ್ಯರಾಗಿ ಪಾಂಡಿತ್ಯ ಪಡೆದವರು. ಸವಾಯಿ ಗಂಧರ್ವ ಸಂಗೀತಉತ್ಸವ, ರಾಷ್ಟ್ರೀಯ/ಅಂತರಾಷ್ಟ್ರೀಯ ಉತ್ಸವಗಳಲ್ಲಿ ಪಾಲ್ಗೊಂಡಅನುಭವಿ. ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರೂ ಹೌದು. ಈ ಹಿಂದೆಕಲ್ಕೂರ ಪ್ರತಿಷ್ಠಾನದವತಿಯಿಂದ ನೀಡುವವಾದಿ ರಾಜ ಪ್ರಶಸ್ತಿಯನ್ನುವಿ.ಎಸ್. ಆಚಾರ್ಯರಿಂದ ಪಡೆದಿರುತ್ತಾರೆ. ಮಹರಾಷ್ಟ್ರ ಘನ ಸರಕಾರದ ಈ ಪ್ರಶಸ್ತಿಗೆ ಭಾಜನರಾದುದು ಕನ್ನಡಿಗರೆಲ್ಲರೂ ಹೆಮ್ಮೆಯ ವಿಚಾರ ಎಂದು ಕಲ್ಕೂರ ಸಂತಸ ವ್ಯಕ್ತಪಡಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here