Saturday 23rd, September 2023
canara news

ಎಮ್.ಸಿ.ಸಿ. ಕೋ.ಆಪ್. ಬ್ಯಾಂಕ್ ಕುಂದಾಪುರ ಶಾಖೆ ನೂತನ ಕಟ್ಟಡಕ್ಕೆ

Published On : 12 Feb 2017   |  Reported By : Bernard J Costa


ಕುಂದಾಪುರ, ಫೆ.11. ಶತಮಾನದ ಇತಿಹಾಸ ಇರುವ ಮಂಗಳೂರು ಕಾಥೊಲಿಕ್ ಕೋ- ಆಪರೇಟಿವ್ ಬ್ಯಾಂಕ್ ಕುಂದೇಶ್ವರ ರಸ್ತೆಯಲ್ಲಿರುವ ಹಶ್ ಕಾಂಪ್ಲೆಕ್ಸನ ಕಟ್ಟಡದಲ್ಲಿ ಸ್ಥಳಾಂತರ ಕೊಂಡಿತು.

ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ಶಾಖೆಯನ್ನು ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್ ಉದ್ಘಾಟಿಸಿ ‘ ಶತಮಾನದ ಇತಿಹಾಸ ಇರುವರ ಈ ಸಹಕಾರಿ ಬ್ಯಾಂಕ್ ಉತ್ತಮ ಸಾಧನೆಯನ್ನು ಮಾಡಿದೆ, ಹೊಸ ಕಟ್ಟಡದಲ್ಲಿ ಸ್ಥಳಾಂತರ ಗೊಂಡ ಈ ಶಾಖೆ ಇನ್ನೂ ಉತ್ತಮ ಸಾಧನೆ ಮಾಡಲಿ’ ಎಂದು ಹಾರೈಸಿ ಶುಭ ಕೋರಿದರು. ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾ, ಶಾಖೆಯನ್ನು ಅಶಿರ್ವಚಿಸಿ ‘ಮನೆ ಕಟ್ಟುವಾಗ ಭದ್ರ ಬುನಾದಿ ಬೇಕು, ಅದರಂತೆ ಸಂಸ್ಥೆ ಬೆಳೆಯ ಬೇಕಾದರೆ ಉತ್ತಮ ಸೇವೆ, ಉತ್ತಮ ಯೋಜನೆಗಳು ಬೇಕು, ಪ್ರಮಾಣಿಕತೆಯಿಂದಾಗಿ ಸಂಸ್ಥೆ ಇನ್ನು ಬೆಳೆಯಲೆಂದು ಹಾರೈಸಿದರು. ಉದ್ಯಮಿ ಅಭಿನಂದನ್ ಶೆಟ್ಟಿ ಭದ್ರತ ಕೊಠಡಿಯನ್ನು ಉದ್ಘಾಟಿಸಿದರು. ಅಭರಣಗಳ ಕೊಠಡಿಯನ್ನು ಕುಂದಾಪುರ ಮಸೀದಿಯ ಅಧ್ಯಕ್ಷ ಕೆ. ಅಬ್ದುಲ್ ರಜಾಕ್ ಉದ್ಘಾಟಿಸಿದರು. ಬ್ಯಾಂಕಿನ ಚೇಯೆರ್ ಮೇನ್ ಫ್ರಾನ್ಸಿಸ್ ಕುಟಿನೊ ಬ್ಯಾಂಕಿನ ಬಗ್ಗೆ ತಿಳುವಳಿಕೆ ನೀಡಿ ಎಲ್ಲರನ್ನು ಸ್ಮರಿಸಿದರು.

ಆಡಳಿತ ನಿರ್ದೇಶಕ ಮಂಡಳಿಯ ಸದಸ್ಯ ಜೆರಾಲ್ಡ್ ಡಿಸಿಲ್ವಾ ಪ್ರಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಬ್ಯಾಂಕಿನ ಸದಸ್ಯನಾದ ಖ್ಯಾತ ಪವರ್ ಲಿಪ್ಟರ್ ಜಾಕ್ಸನ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು. ಕಟ್ಟಡದ ಮಾಲೀಕರಾದ ಡಾ.ಸುರೇಶ್ ಕಾಮತ್, ವೈಸ್ ಚೆಯೆರ್ ಮೇನ್ ಆಲ್ವಿನ್ ಪತ್ರಾವೊ, ಸಹಕಾರಿ ಕ್ಷೇತ್ರದ ವಾಲೇರಿಯನ್ ಮೆಂಡೊನ್ಸಾ, ಬ್ಯಾಂಕಿನ ಮಹಾ ಪ್ರಬಂದಕ ಸುನೀಲ್ ಮಿನೇಜಸ್ ಮುಂತಾದವರು ವೇದಿಕೆಯಲ್ಲಿ ಹಾಜರಿದ್ದರು. ಬ್ಯಾಂಕಿನ ಹಿರಿಯ ಗ್ರಾಹಕರನ್ನು ಗುರುತಿಸಲಾಯಿತು. ಕುಂದಾಪುರ ಶಾಖೆಯ ವ್ಯವಸ್ಥಾಪಕ ಸಂದೀಪ್ ಕ್ವಾಡರ್ಸ್ ವಂದನೆಗಳನ್ನು ಸಲ್ಲಿಸಿದರು. ಒವಿನ್ ರೆಬೆಲ್ಲೊ ಮತ್ತು ಜ್ಯೊತಿ ಮೆಂಡೊನ್ಸಾ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ

Comment Here