Saturday 20th, April 2024
canara news

ಫೆ.19: ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‍ನ ಮಂಗಳೂರು ಪ್ರಾದೇಶಿಕ ಘಟಕ ಸೇವಾರ್ಪಣೆ

Published On : 13 Feb 2017   |  Reported By : Rons Bantwal


ಮುಂಬಯಿ, ಫೆ.13: ಸಮಗ್ರ ಬಿಲ್ಲವರ ಕೌಶಲ್ಯ ಸಂವರ್ಧನೆ ಮತ್ತು ವಿಪುಲ ಉದ್ಯೋಗವಕಾಶಗಳೊಂದಿಗೆ ಜಾಗತೀಕರಣಕ್ಕೆ ಸ್ಪಂದಿಸುವ ಯಶಸ್ವೀ ಉದ್ಯಮಿಗಳಾಗಲು ವಿಶಾಲ ಹೃದಯಿಗಳ ಸಾಂಘಿಕತೆಯ ಅವಶ್ಯಕತೆ ಬಯಸಿ ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷ ಎನ್.ಟಿ ಪೂಜಾರಿ ತನ್ನ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾದ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಕಳೆದ 2016ರ ಜೂನ್.11ರಂದು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಸಿ.ಹೆಚ್ ವಿದ್ಯಾಸಾಗರ್ ರಾವ್ ಅವರಿಂದ ಉದ್ಘಾಟಿಸಲ್ಪಟ್ಟ ಬಿಸಿಸಿಐ ಇದರ ಮಂಗಳೂರು ಪ್ರಾದೇಶಿಕ ಘಟಕ ಇದೇ ಫೆ.29ನೇ ಆದಿತ್ಯವಾರ ಮಂಗಳೂರು ಅಲ್ಲಿನ ಕೋಡಿಯಾಲ್‍ಬೈಲ್ ಅಲ್ಲಿನ ಹೊಟೇಲ್ ದೀಪಾ ಕಂಫರ್ಟ್ಸ್‍ನಲ್ಲಿ ಸೇವಾರ್ಪಣೆ ಗೊಳಿಸಲಾಗುವುದು.

ಭಾರತ ಸರಕಾರದ ಸಂಯುಕ್ತ ಕಾರ್ಯಾಲಯದ ಕಂಪೆನೀಸ್ ಆ್ಯಕ್ಟ್‍ನ ಪರವಾನಿಗೆಯೊಂದಿಗೆ ನೊಂದಾವಣಿ ಗೊಂಡ ಬಿಸಿಸಿಐ ಅಂದು ಸಂಜೆ 5.00 ಗಂಟೆಗೆ ಬಿಸಿಸಿಐ ಅಧ್ಯಕ್ಷ ಎನ್.ಟಿ ಪೂಜಾರಿ ತನ್ನ ನಿರ್ದೇಶಕ ಮಂಡಳಿಯೊಂದಿಗೆ ಮಂಗಳೂರು ಪ್ರಾದೇಶಿಕ ಘಟಕಕ್ಕೆ ಚಾಲನೆಯನ್ನೀಡಲಿದ್ದು, ನಂತರ ಫೈನಾನ್ಸಿಯಲ್ ಅಕೌಂಟ್ಸ್‍ನಲ್ಲಿ ಚಿನ್ನದ ಪದಕ ವಿಜೇತೆ ಸಿಎ| ಯಶಶ್ವಿನಿ ಕೆ.ಅವಿೂನ್ ಅವರನ್ನು ಸನ್ಮಾನಿಸಲಿದ್ದಾರೆ.

ಹೆಸರಾಂತ ಲೆಕ್ಕ ಪರಿಶೋಧಕ ಸಿಎ| ಎಸ್.ಎಸ್ ನಾಯಕ್ ಅವರು ಸರಕು ಮತ್ತು ಸೇವಾ ತೆರಿಗೆ (Goods and Service Tax -ಜಿಎಸ್‍ಟಿ) ವಿಷಯದಲ್ಲಿ, ಇಂಟೆಲ್‍ನೆಟ್ ಗ್ಲೋಬಲ್ ಸರ್ವಿಸಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಸುಧೀರ್‍ಕುಮಾರ್ ಅವರು ಭಾರತ ಸರಕಾರದ ಯಶಸ್ವಿ ಸೇವೆ ಅರ್ಪಣೆಯ ಕಾರ್ಯವಿಧಾನ ವ್ಯವಸ್ಥಾಪಣಾ ವ್ಯವಹಾರ ಪದ್ಧತಿ (Business Process Management a succesful service offering by India) ವಿಷಯದಲ್ಲಿ ಕೆಎಂಸಿ ಆಸ್ಪತ್ರೆಯ ವದ್ಯಾಧಿಕಾರಿ ಡಾ| ಎಸ್.ಎಸ್ ನಾಯಕ್ ಅವರು ವೈದ್ಯಕೀಯ ಜಾಗೃತಿ (Medical Awareness) ವಿಷಯದಲ್ಲಿ ಕಾರ್ಯಗಾರ ನಡೆಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಿಸಿಸಿಐನ ಉಪ ಕಾರ್ಯಾಧ್ಯಕ್ಷರುಗಳಾದ ಡಿ.ಎನ್ ಸುವರ್ಣ, ಎಂ.ಸುಸಿರ್ ಕುಮಾರ್, ಡಿ.ಬಿ ಅವಿೂನ್, ಮಹೇಂದ್ರ ಸೂರು ಕರ್ಕೇರ, ನಿರ್ದೇಶಕರುಗಳಾದ ಚಂದಯ ಬಿ.ಕರ್ಕೇರ, ಹರೀಶ್ ಜಿ. ಅವಿೂನ್, ಪುರುಷೋತ್ತಮ ಎಸ್.ಕೋಟ್ಯಾನ್, ಅಶ್ಮಿತ್ ಬಿ.ಕುಳಾಯಿ, ಭರತ್ ಎಸ್.ಪೂಜಾರಿ, ಗಂಗಾಧರ್ ಎನ್.ಅವಿೂನ್ ಕರ್ನಿರೆ ಮತ್ತು ಗಣ್ಯರನೇಕರು ಉಪಸ್ಥಿತರಿರುವರು ಎಂದು ಬಿಸಿಸಿಐನ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಎಂ.ಪೂಜಾರಿ ತಿಳಿಸಿದ್ದಾರೆ. (ರೋನ್ಸ್ ಬಂಟ್ವಾಳ್)

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here