Thursday 25th, April 2024
canara news

ಸಮೂಹ ಮಾಧ್ಯಮ ವರ್ತಮಾನದ ತಲ್ಲಣಗಳು ಉಪನ್ಯಾಸ ಕಾರ್ಯಕ್ರಮ

Published On : 14 Feb 2017   |  Reported By : Rons Bantwal


ಪತ್ರಕರ್ತರಲ್ಲಿ ವಚನ ಬದ್ಧತೆ ಅವಶ್ಯವಾಗಿದೆ : ಡಾ| ಸದಾನಂದ ಪೆರ್ಲ

ಮುಂಬಯಿ, ಫೆ.13: ಜನಪರ ಸಂವಿಧಾನಿಕವಾಗಿ ಜಾಗೃತಿಯಲ್ಲಿನ ಸುರಕ್ಷಾ ಜಾಗದಲ್ಲಿರುವ ಸಾರ್ವಜನಿಕ ಸಂಸ್ಥೆ ಆಕಾಶವಾಣಿ ಆಗಿದೆ. ಅಕ್ಷರ ಮಾಧ್ಯಮದಿಂದ ಧ್ವನಿ ಮಾಧ್ಯಮಕ್ಕೆ ಸೇತುವೆಯಾಗಿ ಸೇವಾ ನಿರತ ಆಕಾಶವಾಣಿಗಳಿಗೆ ತಲ್ಲಣಗಳಿಲ್ಲ ಎನ್ನುವುದು ನನ್ನ ಅಭಿಮತ. ಪ್ರಸ್ತುತ ಸಮಾಜಕ್ಕೆ ಮಾಧ್ಯಮದ ಭಯ ಮತ್ತು ಮಾಧ್ಯಮಗಳಿಗೆ ಸಮಾಜದ ಭಯವಿದೆ. ಆದುದರಿಂದ ತುಂಬಾ ಸೂಕ್ಷ್ಮವಾಗಿರುವ ಇವತ್ತಿನ ಸಮಾಜ ಭಯದ ವಾತಾವರಣದಲ್ಲಿ ಮುನ್ನಡೆಯುತ್ತಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಪತ್ರಕರ್ತರು ಕತ್ತಿಯ ನೆತ್ತಿಯ ಮೇಲಿದ್ದು, ಒತ್ತಡಕ್ಕೆ ಮಣಿದು ಧಾವಂತದ ಬದುಕು ಸಾಗಿಸುತ್ತಿರುವುದು ಶೋಚನೀಯ. ಆದರೆ ಮಾಧ್ಯಮಮಂದಿಗಲೇ ವಿಶೇಷವಾಗಿ ಚಾನೆಲ್‍ಗಳು ತೀರ್ಪು ಕೊಡುವ ಕೆಲಸ ಮಾಡುವಂತಹದ್ದು ಮಾಧ್ಯಮ ಕ್ಷೇತ್ರಕ್ಕೆ ಮುಜುಗರಕ್ಕೀಡು ಮಾಡುತ್ತಿದೆ ಎಂದು ಆಕಾಶವಾಣಿ ಮಂಗಳೂರು ಇದರ ಕಾರ್ಯಕ್ರಮ ನಿರ್ವಾಹಕ, ಪ್ರತಿಷ್ಠಿತ ಪತ್ರಕರ್ತ, ವಿಶೇಷ ಲೇಖಕ ಡಾ| ಸದಾನಂದ ಪೆರ್ಲ ಕಳವಳ ವ್ಯಕ್ತಪಡಿಸಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇಂದಿಲ್ಲಿ ಸೋಮವಾರ ಅಪರಾಹ್ನ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗುರುತು ಮಾಸಿಕದ ಸಂಪಾದಕರೂ, ಸಂಶೋಧಕರಾದ ಬಾಬು ಶಿವ ಪೂಜಾರಿ ಗೌರವ ಅತಿಥಿüಯಾಗಿ ಉಪಸ್ಥಿತರಿದ್ದು `ಸಮೂಹ ಮಾಧ್ಯಮ ವರ್ತಮಾನದ ತಲ್ಲಣಗಳು' ವಿಷದ ಬಗ್ಗೆ ಉಪನ್ಯಾಸ ನೀಡಿ ಡಾ| ಪೆರ್ಲ ಮಾತನಾಡಿದರು.

ಮುಂಬಯಿ ಮಹಾನಗರದಲ್ಲಿ ಅದೂ ಇಲ್ಲಿನ ಮುಂಬಯಿ ವಿವಿಯ ಕನ್ನಡ ವಿಭಾಗದಲ್ಲಿ ಕನ್ನಡಾಂಭೆಯ ವಿಶೇಷ ಕೆಲಸಗಳು ನಡೆಯುತ್ತದೆ. ಆದುದರಿಂದ ಇಲ್ಲಿನ ಈ ವೇದಿಕೆ ನನ್ನ ಪಾಲಿನ ಗೌರವವಾಗಿದೆ. ಭಾವನಾತ್ಮಾಕ ಸಂಬಂಧಕ್ಕೆ ಇದು ಅವಕಾಶವಾಗಿದೆ. ಇಂದು ಕನ್ನಡದ ವಿಷಯ, ಕಾರ್ಯಕ್ರಮ ಇತ್ಯಾದಿಗಳ ದಾಖಲೀಕರಣದ ಕೊರತೆ ಇದೆ. ಆ ಕೊರತೆ ಪೂರೈಸುವ ಅಗತ್ಯ ನಮ್ಮೆಲ್ಲರಿಗಿದೆ. ಇದನ್ನು ನಿಸ್ವಾರ್ಥವಾಗಿ ತುಂಬಿಸಿ ಮುಂದಿನ ಜನಾಂಗಕ್ಕೆ ತಿಳಿಪಡಿಸುವ ಅಗತ್ಯವಿದ್ದು ಇದನ್ನು ಸೇವೆಕ್ಕಿಂತ ಕರ್ತವ್ಯವಾಗಿ ಪೂರೈಸಬೇಕಾಗಿದೆ. ಜೀವನದ ಅವಿಭಾಜ್ಯ ಅಂಗಳಗಳಾಗಿರುವ ಚಾನೆಲ್‍ಗಳಾಗಲೀ ಇತರೇ ಮಾಧ್ಯಮಗಳಾಗಲೀ ನೀತಿತತ್ವ (ಎಥಿüಕ್ಸ್) ಮೀರಿ ನಡೆಯ ಬಾರದು. ಮಾಧ್ಯಮಗಳು ವ್ಯಕ್ತಿಕ್ಕಿಂತ ಅಭಿವ್ಯಕ್ತಿ ಪೂರಕವಾಗಬೇಕು. ಪತ್ರಕರ್ತರು ಭಾವನೆಗಳನ್ನು ತಿಳಿಸಬೇಕೆ ಹೊರತು ತಲ್ಲಣಗಳಾಗಬಾರದು. ಸದ್ಯ ಭಾರತದಲ್ಲಿ ಅಂದಾಜು 421 ಆಕಾಶವಾಣಿ ಕೇಂದ್ರಗಳಿದ್ದು ವಚನ ಬದ್ಧತೆಯಿಂದ ಕಾರ್ಯನಿರ್ವಾಹಿಸುತ್ತಿದೆ. ಸಿದ್ಧಾಗಳಿಗೆ ಬದ್ಧವಾಗಿ ಶ್ರಮಿಸುತ್ತಿವೆ. ಆದುದರಿಂದ ತನ್ನ ಗುಣಮಟ್ಟವನ್ನು ಕಾಪಾಡಿ ದೇಶÀದ ನಾಗರಿಕರ ಮನಮ್ನೆಗಳಲ್ಲಿ ಆಕಾಶವಾಣಿ ಎಂದರೆ ವಿಶ್ವಾಸಾರ್ಹತೆಯ ಪ್ರತೀಕವಾಗಿದೆ. ಇಂದು ವಿಶ್ವದಾದ್ಯಂತ ಪ್ರಜ್ಞಾವಂತ ವೀಕ್ಷಕರಿದ್ದ ಕಾರಣ ಸತ್ಯಾಸತ್ಯತೆ, ವಸ್ತುನಿಷ್ಠೆಗೆ ಮಾಧ್ಯಮಗಳು ಪ್ರಾಧ್ಯಾನತೆಗೆ ಒತ್ತು ನೀಡುವ ಪ್ರಯತ್ನ ನಡೆಯಬೇಕಾಗಿದೆ. ಅದರ ಬದುಲು ಇಲ್ಲಿನ ಮಾಧ್ಯಮಗಳು ಬರೇ ರಾಜಕೀಯಕ್ಕೆ ಒತ್ತುನೀಡಿ ಕಾಲ ಹರಣ ಮಾಡುವುದು ಸರಿಯಲ್ಲ. ಬದಲಾಗಿ ಪ್ರಗತಿ ಪರ ಚಿಂತನೆಗಳಿಗೆ ಮಾಧ್ಯಮಗಳು ಸ್ಪಂದಿಸಿದಾಗ ತಲ್ಲಣಗಳು ದೂರವಾಗಲಿದೆ. ಸುದ್ದಿಗಳು ಬುದ್ದಿದಾಯಕ ಆದಾಗಲೇ ಸಮಾಜದ ಬದಲಾವಣೆ ಮತ್ತು ಕಲ್ಯಾಣರಾಷ್ಟ್ರದ ನಿರ್ಮಾಣ ಸಾಧ್ಯ ಆಗಬಲ್ಲದು. ಪತ್ರಕರ್ತರÀು ವಚನ ಬದ್ಧತೆ ಮೈಗೂಡಿಸಿದಾಗ ತಲ್ಲಣ ಮುಕ್ತತೆ ಸಾಧ್ಯವಾಗಬಹುದು. ಇಂದಿನ ಪತ್ರಕರ್ತರಲ್ಲಿ ಅಧ್ಯಾಯನದ ಕೊರತೆ ಇದೆ. ಕನಿಷ್ಠ ಸಾಮಾನ್ಯ ಜ್ಞಾನದ ಅರಿವು ಪತ್ರಕರ್ತರಲ್ಲಿದ್ದಾಗ ಫಲಪ್ರದ ವರದಿಗಳ ಮುಖೇನ ಸಮಾಜವನ್ನು ಕಟ್ಟಲು ಸಾಧ್ಯ. ಸಂದರ್ಶನಗಳೂ ಕೂಡಾ ಆಹ್ವಾನವಾಗಿ ಸ್ವೀಕರಿಸಬೇಕು. ಪರಿಶ್ರಮ ತಾಳ್ಮೆ, ಅಧ್ಯಾಯನದ ಇಲ್ಲದ ಪತ್ರಕರ್ತರಿಂದ ಏನೂ ಅಪೇಕ್ಷೆ ಪಡುವಂತಿಲ್ಲ. ಪತ್ರಕರ್ತರು ಧಾವಂತದಿಂದ ಮುಕ್ತರಾದಾಗಲೇ ನಿಷ್ಠಾವಂತ ಮಾನ್ಯತೆವುಳ್ಳ ಪತ್ರಕರ್ತರಾಗಲು ಸಾಧ್ಯ. ಸಾಮಾಜಿಕ ಕಳಕಳಿವುಳ್ಳವರಿಂದ ಮಾತ್ರ ಅಭ್ಯುದಯ ಪತ್ರಿಕೋದ್ಯಮ ಅಪೇಕ್ಷಿಸಬಹುದು. ಆದುದರಿಂದ ಮಾಧ್ಯಮಗಳು ಕೆರಳಿಸುವ ಅಲ್ಲ, ಅರಳಿಸುವ ಕೆಲಸ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣದ ಅಡಿಪಾಯಗಳಾಗಬೇಕು ಎಂದೂ ಡಾ| ಸದಾನಂದ ಪೆರ್ಲ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ತಲ್ಲಣವಿಲ್ಲದ ಜೀವನ ಅಸಾಧ್ಯ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ತಲ್ಲಣಗಳ ಅಗತ್ಯ ಅನಿವಾರ್ಯವಾಗಿದೆ. ಬೃಹತ್ ಮಾಧ್ಯಮಗಳು ವ್ಯಾಪಾರೀಕರಣದ ದೃಷ್ಟಿಯ ಮಾಧ್ಯಮಗಳು ವೈಭವೀಕರಣದ ಸುತ್ತಲೇ ಇದ್ದರೂ ಸಣ್ಣ ಪತ್ರಿಕೆಗಳೇ ಇವತ್ತು ನಿಯತ್ತು ಉಳಿಸಿ ಸಮಾಜ ಬೆಳೆಸುತ್ತಿರುವುದಂತು ಸತ್ಯವಾಗಿದೆ ಎನ್ನುವ ಅಭಿಮಾನ ನನ್ನಲ್ಲಿದೆ. ಮಾಧ್ಯಮಗಳು ಇರುವುದೇ ವಿಷಯ ತಿಳಿಸಲು ಆದರೆ ರಾಷ್ಟ್ರೀಯ, ಪ್ರಾದೇಶೀಕ ಪತ್ರಿಕೆಗಳೇ ಪುರವಣಿಗಳನ್ನು ಹುಟ್ಟುಹಾಕಿ ವಿಭಜನೆಗೊಳಪಟ್ಟು ಅವಶ್ಯಕ ವರದಿಗಳೇ ಮನೆಮನಗಳನ್ನು ಮುಟ್ಟುವಲ್ಲಿ ವಿಫಲವಾಗುತ್ತಿವೆ. ಪತ್ರಕರ್ತರು ಎಡಬಲ ಪಂಥಿüೀಯ ವಿಚಾರಕ್ಕಿಂತ ಪಾಲಾಯಣವಾದಿಗಳಾಗಬಾರದು. ನಾವೇ ಎನ್ನುವುದರಿಂದ ಮುಕ್ತರಾಗಬೇಕು. ಬದ್ಧತೆ ಕೂಡ ಇಂದಿನ ತಲ್ಲಣವಾಗಿವೆ. ಅದುದರಿಂದ ಬದಲಾವಣೆಯ ಘಟ್ಟದಲ್ಲಿ ಮಾಧ್ಯಮಗಳು ಶೂನ್ಯದತ್ತ ಸಂಚರಿಸುತ್ತಿವೆ ಎಂದರು.

ಪ್ರಚಾರದಲ್ಲಿರುವ ಜನರೇ ಬಹಳ ತಲ್ಲಣದಲ್ಲಿ ಇದ್ದಾರೆ. ಇವತ್ತಿನ ಮಾನವ ಜೀವನವೇ ತಲ್ಲಣದಾಯಕವಾಗಿದ್ದು, ತಲ್ಲಣವಿಲ್ಲದ ಜನಜೀವನ ಶೂನ್ಯವಾಗಿರುತ್ತದೆ. ಸಂಶೋಧಕರು ಹುಡುಕಾಡಿ ಕಲೆ ಹಾಕುತ್ತಾ ಶೋಧನೆ ಮಾಡಬೇಕೇ ಹೊರತು ಮತ್ತೊಬ್ಬರನ್ನು ಅನುಕರಿಸಿ ಸಂಶೋಧನೆ ಮಾಡಕೂಡದು. ಕಾಡಿನ ಮರದಂತಿದ್ದು ವಸ್ತುನಿಷ್ಠೆ, ಭಿನ್ನತೆಗಳ ಬಗ್ಗೆ ಅರಿವು ಹೊಂದುವ ಅಗತ್ಯ ಸಂಶೋಧಕರಿಗಿದೆ. ಆಳವಾದ ಶೋಧನೆಯಿಂದ ಸತ್ಯವೂ, ಸತ್ಯದಿಂದ ಸಂತೋಷವೂ, ಸಂತೋಷದಿಂದ ಸಂಶೋಧನಾ ಫಲಪ್ರದವಾದಾಗ ಆತ್ಮ ಸಂತೋಷವಾ ಗುವುದು. ಇಂತಹ ಸಂಶೋಧನೆಗಳೇ ಅಮೂಲ್ಯವಾಗಿರುತ್ತದೆ ಎಂದು ಬಾಬು ಶಿವ ಪೂಜಾರಿ ಅವರು ಸಂಶೋಧನೆಯ ಬಗ್ಗೆ ಮನವರಿಸಿದರು.

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಶೈಕ್ಷಣಿಕ ಪಾಲುದಾರರು ಇದ್ದಂತೆ. ಬಹುಜನ ಹಿತಾಯ ಬಹುಜನ ಸುಖಾಯ ಎನ್ನುವ ಆಕಾಶವಾಣಿಯ ಧ್ಯೇಯವಾಕ್ಯದಂತೆ ನಿಜಾರ್ಥದ ಪತ್ರಕರ್ತರಾಗಿ ಶ್ರಮಿಸುವ ಡಾ| ಪೆರ್ಲಾರ ಸೇವೆ ಅನುಕರಣೀಯ. ಸದ್ಯ ಆತಂಕದ ಅರಿವು ಮೂಡಿಸುವ ಸಮೂಹ ಮಾಧ್ಯಮಗಳು ಎತ್ತ ಸಾಗುತ್ತಿವೆ ಎನ್ನುವುದೇ ಇಂದಿನ ಪ್ರೆಶ್ನೆಯಾಗಿ ಕಾಡುತ್ತಿದೆ. ಅಂತಹವುದರ ಮಧ್ಯೆ ಇಂತಹ ಒಂದು ಕಾರ್ಯಕ್ರಮ ಪತ್ರಿಕೋದ್ಯಮ ಮತ್ತು ಸಮಾಜದ ಸೌಹಾರ್ದ ವತಾವರಣ ಬೆಳೆಸುವಲ್ಲಿ ಫಲದಾಯಕವಾಗ ಬಲ್ಲದು ಎಂದರು ಹಾಗೂ ಡಾ| ಪೆರ್ಲ ಅವರಿಗೆ ಶಾಲುಹೊದಿಸಿ ಸ್ವರ್ಣಪದಕ ಧರಿಸಿ ಮುಂಬಯಿ ಕನ್ನಡಿಗರ ಪರವಾಗಿ ಗೌರವಿಸಿ ಅಭಿವಂದಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಘಟಕ ಹೆಚ್.ಬಿ.ಎಲ್ ರಾವ್, ಪತ್ರಕರ್ತರ ಸಂಘದ ಸಲಹಾ ಸಮಿತಿ ಸದಸ್ಯೆ ಡಾ| ಸುನೀತಾ ಎಂ.ಶೆಟ್ಟಿ, ಅನಿತಾ ಪೂಜಾರಿ ತಾಕೋಡೆ, ಜಯರಾಮ ಹೆಚ್.ಪೂಜಾರಿ, ಕನ್ನಡ ವಿಭಾಗದ ರಮಾ ಉಡುಪ, ಮಧುಸೂದನ ರಾವ್, ಶಿವರಾಜ್ ಕೆ.ಎಸ್, ಸುರೇಖಾ ಸುಂದರೇಶ್ ದೇವಾಡಿಗ, ಯಜ್ಞ ನಾರಾಯಣ, ಕುಮುದಾ ಆಳ್ವ, ಗಣಪತಿ ಕೆ.ಮೊಗವೀರ, ಶೈಲಜಾ ಹೆಗಡೆ, ಹೇಮಾ ಸದಾನಂದ್ ಅವಿೂನ್, ಅನಿತಾ ಎಸ್.ಶೆಟ್ಟಿ, ಗೀತಾ ಆರ್.ಎಸ್ ಮತ್ತಿತರರು ಉಪಸ್ಥಿತರಿ ಸಂವಾದದಲ್ಲಿ ಪಾಲ್ಗೊಂಡರು.

ಮುಂಬಯಿ ಆಕಾಶವಾಣಿಯ ಕನ್ನಡ ವಿಭಾಗದ ಕಾರ್ಯಕ್ರಮ ನಿರ್ವಾಹಕಿ ಸುಶೀಲಾ ಎಸ್.ದೇವಾಡಿಗ ಸ್ವಾಗತಗೀತೆಯನ್ನಾಡಿದರು. ಪತ್ರಕರ್ತರ ಸಂಘದ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸಂಪನ್ಮೂಲವ್ಯಕ್ತಿಯನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತರ ಭವನ ಸಮಿತಿ ಕಾರ್ಯಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here