Thursday 28th, March 2024
canara news

ಮಾ.05: ಕಲೀನಾದಲ್ಲಿ ತುಳು ಕನ್ನಡಿಗರಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ತುಂಗಾ ಕ್ರಿಕೆಟ್ ಟ್ರೋಫಿ-2017 ಪಂದ್ಯಾಟ

Published On : 14 Feb 2017   |  Reported By : Rons Bantwal


ಮುಂಬಯಿ, ಫೆ.14: ಸಮಾಜದಲ್ಲಿ ಹಿಂದುಳಿದ ಶೋಷಿತ ಧಮನಿತ ಮರ್ಧಿತರನ್ನು ಪೆÇೀಷಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿರುವ ಸಂಜೀವಿನಿ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ.) ಮತ್ತು ಯಕ್ಷಗಾನ ಕಲೆಯ ಮೂಲಕ ದೇಶಾಭಿಮಾನ ಸಾರುವ ಧ್ಯೇಯವನ್ನಿರಿಸಿ ಸ್ಥಾಪಿತ ಯಕ್ಷಸೇವೆ ಮುಂಬಯಿ ಈ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ತುಳು ಕನ್ನಡಿಗರಿಗಾಗಿ ಇದೇ ಬರುವ ಮಾರ್ಚ್.05ನೇ ಆದಿತ್ಯವಾರ ಬೆಳಿಗ್ಗೆ 8.00 ಗಂಟೆಯಿಂದ ತಡÀರಾತ್ರಿ 12.00 ಗಂಟೆ ತನಕ ಸಾಂತಕ್ರೂಜ್ ಪೂರ್ವದ ಕಲೀನಾ ಇಲ್ಲಿನ ನ್ಯೂ ಏರ್ ಇಂಡಿಯಾ ಐ.ಸಿ ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ-2017ವನ್ನು ಆಯೋಜಿಸಿದೆ.

ಪಂದ್ಯಾಟದ ಪ್ರಥಮ ಸ್ಥಾನ ವಿಜೇತ ತಂಡಕ್ಕೆ ರೂಪಾಯಿ ಒಂದು ಲಕ್ಷ ನಗದು, ಪ್ರಶಸ್ತಿ ಮತ್ತು ಪಂದ್ಯಾಟ ಫಲಕ, ದ್ವಿತೀಯ ಸ್ಥಾನ ವಿಜೇತ ತಂಡಕ್ಕೆ ರೂಪಾಯಿ ಐವತ್ತು ಸಾವಿರ ನಗದು, ಪ್ರಶಸ್ತಿ ಮತ್ತು ಪಂದ್ಯಾಟ ಫಲಕ, ಸರಣಿ ಶ್ರೇಷ್ಠ ಪ್ರಶಸ್ತಿ, ಉತ್ತಮ ದಾಂಡಿಗ ಹಾಗೂ ಉತ್ತಮ ಎಸೆತಗಾರ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.

ಪಂದ್ಯಾಟದ ವಿಶೇಷ ಆಕರ್ಷಣೆಯಾಗಿ ಕನ್ನಡ-ತುಳು, ಬಾಲಿವುಡ್ ಚಲನಚಿತ್ರ ನಟನಟಿಯರು, ಅಂತರಾಷ್ಟ್ರೀಯ ಕ್ರೀಡಾಪಟುಗಳು, ವೀಕ್ಷಕ ವಿವರಣೆಗಾರರಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಪ್ರಕಾಶ್ ಶೆಟ್ಟಿ ಬೆಳಗೋಡು ಮತ್ತು ಮೊಹಮ್ಮದ್ ಗಝಲಿ ಕೆಬಿಎಸ್, ಕರಾವಳಿಯ ಕ್ರಿಕೆಟ್ ವ್ಯಾಖ್ಯನಗಾರ (ಕಾಮೆಂಟರಿ) ವಾಟ್ಸ್‍ಆ್ಯಪ್ ಯುವ ಪ್ರತಿಭೆ ಎ.ಕೆ ಶೆಟ್ಟಿ ನಡೂರು ಇವರಿಂದ ಮನಾಕರ್ಷಕ ಕಮಿಂಟ್ರಿ ನೀಡಲಿದ್ದಾರೆ ಎಂದು ಪಂದ್ಯಾಟದ ಪ್ರಧಾನ ಸಂಘಟಕ ಯುವರಾಜ್ ಶೆಟ್ಟಿ ಹೆರಂಜೆ ತಿಳಿಸಿದ್ದಾರೆ.

ಮಹಾನಗರದಲ್ಲಿನ ಸರ್ವ ಕ್ರೀಡಾಭಿಮಾನಿಗಳು ಅತ್ಯಾಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪಂದ್ಯಾಟದ ಯಶಸ್ವಿಗೆ ಸಹಕರಿಸುವಂತೆ ಉಭಯ ಸಂಸ್ಥೆಗಳ ಮುಖ್ಯಸ್ಥರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಯುವರಾಜ್ ಶೆಟ್ಟಿ ಹೆರಂಜೆ (9768100507) ಮತ್ತು ಸಂದೀಪ್ ಹೆಗ್ಡೆ (9769551775) ಸಂಪರ್ಕಿಸುವಂತೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here