Thursday 28th, March 2024
canara news

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017

Published On : 16 Feb 2017


ತುಳು-ಕನ್ನಡಿಗರನ್ನು ಕಡೆಗಣಿಸಿದ ಭಾರತೀಯ ಜನತಾ ಪಕ್ಷ

ಮುಂಬಯಿ, ಫೆ.15: ರಾಷ್ಟ್ರದ ಆಥಿ೯ಕ ರಾಜಧಾನಿ ಮಹಾನಗರ ಮುಂಬಯಿ (ಬೃಹನ್ಮುಂಬಯಿ) ಯನ್ನು ಕರ್ಮಭೂಮಿ ಆಗಿಸಿದರೂ ಇಲ್ಲಿನ ಇತಿಹಾಸದಲ್ಲಿ ಕನ್ನಡಿಗ ಬಂಧುಗಳು ಮೂಡಿಸಿದ ಹೆಜ್ಜೆ ಗುರುತುಗಳು ನಗರದ ಸಮಗ್ರ ಬೆಳವಣಿಗೆಯಲ್ಲಿ ನಿರ್ಣಾಯಕವಾದುದು. ರಾಜಕೀಯ, ಆಥಿ೯ಕ, ಶೈಕ್ಷಣಿಕ, ಧಾರ್ಮಿಕ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಕನ್ನಡಿಗರು ತಮ್ಮ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ. ಹೊರನಾಡ ಕರ್ಮಭೂಮಿಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿ ಜನತಾ ಸೇವೆಯಲ್ಲಿ ತಮ್ಮನ್ನು ಗುರುತಿಸಿ ಕೊಂಡಿರುವ ಈ ತುಳು-ಕನ್ನಡಿಗ ನಾಯಕರಿಗೆ ಮಾತೃಭಾಷೆ-ಪ್ರಾದೇಶಿಕ ನೆಲೆಯ ವಿಚಾರ ಎಂದೂ ಅಡ್ಡಿ ಆಗದ ಮಹಾರಾಷ್ಟ್ರದ ನೆಲದಲ್ಲ್ಲಿನ ಸಂಸ್ಕೃತಿ ಪರಂಪರೆಗಳಿಗೆ ಸ್ಪಂದಿಸುತ್ತಾ ಸೌಹಾರ್ದತೆಯ ಬದುಕನ್ನು ರೂಪಿಸುತ್ತಾ ಯಾವುದೇ ರಾಜಿಪಂಚಾಯತಿಕೆ ಇಲ್ಲದೆ ತಮ್ಮೂರ ಸಂಸ್ಕೃತಿ, ದೈವದೇವರುಗಳನ್ನೂ ಇಲ್ಲಿ ಪ್ರತಿಷ್ಠಾಪಿಸಿ ಸಾಮರಸ್ಯ ಜೀವನಕ್ಕೆ ತುಳು-ಕನ್ನಡಿಗರು ಹೆಸರಾಗಿದ್ದಾರೆ. ಇಂತಹ ಶ್ರೇಷ್ಠ ಪರಂಪರೆಯಲ್ಲಿ ಅನೇಕ ನಮ್ಮಲ್ಲಿನ ರಾಜಕೀಯ ಮುತ್ಸದ್ಧಿಗಳು ಪಕ್ಷ ಭೇದವಿಲ್ಲದೆ ಕನ್ನಡ ಭಾಷೆ, ಸಂಸ್ಕೃತಿ, ನೆಲದ ಗೌರವದ ಕೀರ್ತಿಪತಾಕೆ ಇಲ್ಲಿ ಹಾರಿಸಿದ್ದಾರೆ. ಮಾತ್ರವಲ್ಲ್ ಅನೇಕರು ಇಲ್ಲಿ ಜನಪ್ರತಿನಿಧಿಗಳಾಗಿ ಕೇಂದ್ರ ಸಚಿವರು, ಸಂಸದರು, ಮಹಾರಾಷ್ಟ್ರ ರಾಜ್ಯ ವಿಧಾನ ಸಭಾ ಸದಸ್ಯರುಗಳಾಗಿ (ಶಾಸಕರು) ಮಂತ್ರಿಗಳೂ ಆಗಿದ್ದಾರೆ. ಅಂತೆಯೇ ವಿಶ್ವದ ಅತೀ ಶ್ರೀಮಂತ ಬಜೆಟ್‍ವುಳ್ಳ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಹೆಸರಾಂತ ಕಾಪೆರ್Çೀರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ -ಬಿಎಂಸಿ)ಯಲ್ಲಿ ಉಪಮೇಯರ್ ಕೂಡಾ ಆಗಿದ್ದಾರೆ.

L.V Amin

Rohit M.Suvarna

ಮತ್ತೆ ಈ ಬಾರಿ ಬಿಎಂಸಿ-2017ರ ಚುನಾವಣೆ ಎದುರಾಗಿದ್ದು ಸ್ಪರ್ಧೆಯ ಮುಖೇನ ನಗರಸೇವಕ (ಕೌನ್ಸಿಲರ್) ಆಯ್ಕೆಗಾಗಿ ಸ್ಥಾನ ಗಿಟ್ಟಿಸಿ ಕೊಳ್ಳಲು ಈ ಬಾರಿಯೂ ತುಳು ಕನ್ನಡಿಗ ಸ್ಪರ್ಧಿಗಳು ಅಖಾಡಕ್ಕಿಳಿದಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷವು ಈ ಚುನಾವಣೆಯಲ್ಲಿ ತುಳುಕನ್ನಡಿಗರಿಗೆ ಕಡೆಗಣಿಸಿರುವುದಕ್ಕೆ ಪಕ್ಷದೊಳಗೆನೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಾರಣ ಬಿಜೆಪಿ ಒಂದೇಒಂದು ವಾರ್ಡ್‍ಗೆ ತುಳುಕನ್ನಡಿಗ ಬಿಜೆಪಿ ಅಭ್ಯಥಿರ್üಗಳಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಲ್ಲ ಎನ್ನುವುದೇ ಈ ಕೊರಗು ಆಗಿದೆ. ಸಾಂತಕ್ರೂಜ್ ಪೂರ್ವದ ವಕೋಲಾ ನಿವಾಸಿ ಆಗಿದ್ದು ಕಳೆದ ಅನೇಕ ವರ್ಷಗಳಿಂದ ಓರ್ವ ಬಿಜೆಪಿ ಸಕ್ರೀಯ ಕಾರ್ಯಕರ್ತನಾಗಿದ್ದರು. ಕನಿಷ್ಠ ಅವರಿಗೆ ಪಕ್ಷವು ಸೀಟು ನೀಡುವುದೆಂಬ ಆಶಯ ಇಲ್ಲಿನ ಜನರಿಗಿತ್ತು. ಆದರೆ ಕೊನೆಗೂ ಬಿಜೆಪಿ ಸೀಟು ನೀಡುವಲ್ಲಿ ವಿಫಲವಾಯಿತು. ಆದರೆ ದಿನೇಶ್ ಬಿ.ಅವಿೂನ್ ಅವರಿಗೆ ವಾರ್ಡ್ ಸಂಖ್ಯೆ 91ನಿಂದ ಒಬಿಸಿ ನೆಲೆಯಲ್ಲಿ ದಿನೇಶ್ ಬಿ.ಅವಿೂನ್ ಅವರಿಗೆ ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‍ಸಿಪಿ) ಸ್ಪರ್ಧಿಸುವ ಅವಕಾಶ ನೀಡಿರುವುದೇ ಸಂತಸ ತಂದಿದೆ ಎಂದು ಬಿಜೆಪಿ ಧುರೀಣರೂ, ಬಿಜೆಪಿ ಮುಂಬಯಿ ಘಟಕದ ದಕ್ಷಿಣ ಭಾರತ ಘಟಕದ ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್ ತೀವ್ರ ಬೇಸರ ವ್ಯಕ್ತ ಪಡಿಸಿದರು. ಇತ್ತೀಚೆಗೆ ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಈ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಎಲ್.ವಿ ಅವಿೂನ್ ಅವರು ಬಿಜೆಪಿ ಪಕ್ಷವು ಕನ್ನಡಿಗರಿಗೆ ಬಗೆದ ದ್ರೋಹ ಎಂದೇ ಬಣ್ಣಿಸಿ ದಿನೇಶ್ ಪರ ನೆರೆದ ಸಭಿಕರಲ್ಲಿ ಮತಯಾಚಿಸಿದ್ದರು.

ರೋಹಿತ್ ಎಂ.ಸುವರ್ಣ ಕಳವಳ:
ಭಯಂದರ್ ನಗರ ಸಭೆಯ ಮಾಜಿ ನಗರ ಸೇವಕ, ಇತರೇ ಹಿಂದುಳಿದ ವರ್ಗದ (ಒಬಿಸಿ) ಪರಿಣತ ಮೇಧಾವಿ ರೋಹಿತ್ ಎಂ.ಸುವರ್ಣ ಪತ್ರಕರ್ತರಲ್ಲಿ ಈ ಬಗ್ಗೆ ತಿಳಿಸುತ್ತಾ ಮುಂದಿನ ವಾರದಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ಬಿಎಂಸಿ ಚುನಾವಣೆಯಲ್ಲಿ ಈ ಬಾರಿ ಭಾರತ ಜನತಾ ಪಾರ್ಟಿ ಪಕ್ಷ ಕರ್ನಾಟಕ ರಾಜ್ಯದ ಜನತೆಗೆ ಸೀಟು ನೀಡಲಿಲ್ಲ. 25-30ವರ್ಷಗಳಿಂದ ಪ್ರತಿ ಬಾರಿ ತುಳು ಕನ್ನಡಿಗರಿಗೆ ಸೀಟು ನೀಡುತ್ತಿದ್ದ ಬಾಜಪ ಈ ಬಾರಿಒಬ್ಬರಿಗೂ ಬಿಎಂಸಿ ಸ್ಪರ್ಧೆಗೆ ಸೀಟು ನೀಡಿಲ್ಲ. ಆ ಮೂಲಕ ಬಿಜೆಪಿ ಪಕ್ಷದವರು ತಮ್ಮ ಹಳೆಯ ಸ್ಪರ್ಧಿಗಳನ್ನು ಮರೆತು ಕೊಂಡಿದ್ದಾರೆ. ತುಳು ಕನ್ನಡಿಗ ಮುಖಂಡರೂ ಹಲವು ಬಾರಿ ತುಳು ಕನ್ನಡಿಗರಿಗೆ ಸೀಟು ನೀಡುವುದರ ಕುರಿತು ಬಿಜೆಪಿ ಮುಖಂಡರಿಗೆ ನಿವೇದನಾ ಪತ್ರ ನೀಡದರೂ, ಬಿಜೆಪಿ ಪಕ್ಷವೂ ತುಳು ಕನ್ನಡಿಗರಿಗೆ ಪಕ್ಷದಿಂದ ದೂರ ಮಾಡಿಕೊಂಡಿದೆ. ಇದರಿಂದ ಹಲವಾರು ತುಳು ಕನ್ನಡ ಬಿಜೆಪಿ ಮುಖಂಡರೂ ಬೇಸರ ಗೊಂಡಿದ್ದಾರೆ. ಆದರೆ ಶಿವಸೇನಾ ಪಕ್ಷ ತುಳು ಕನ್ನಡಗರಿಗೆ ಮರೆಯದೆ ಸೀಟು ಕೊಡುವುದರ ಮೂಲಕ ತಮ್ಮ ಸಮರ್ಥನೆಯನ್ನು ತೋರಿಸಿ ಕೊಟ್ಟಿದ್ದಾರೆ ಎಂದಿದ್ದಾರೆ.

ಮಾಹಿತಿ: ರೋನ್ಸ್ ಬಂಟ್ವಾಳ್




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here