Thursday 18th, April 2024
canara news

ಕುಂದಾಪುರ ರೋಜರಿ ಚರ್ಚಿನ ಹಿಂದುಗಡೆ ಬೆಂಕಿ ಅವಾಂತಾರ

Published On : 17 Feb 2017   |  Reported By : Bernard J Costa


ಕುಂದಾಪುರ,ಫೆ.17: ಕುಂದಾಪುರ ಹೋಲಿ ರೋಜರಿ ಚರ್ಚಿನ ಸಮಾಧಿ ತಾಣದ ಹಿಂದುಗಡೆ ಚರ್ಚಿಗೆ ಸಂಬದ್ಧ ಪಟ್ಟ ಜಾಗದಲ್ಲಿವಿದ್ಯುತ್ ತಂತಿ ತುಂಡಾಗಿ ಬೆಂಕಿ ಪಸರಿಸಿ ಹಲವು ತೆಂಗಿನ ಮರಗಳು ಬೆಂಕಿಯ ಹೊಡೆತದಿಂದ ಅರ್ಧ ಸುಟ್ಟು ಅವುಗಳು ಸಾವಿನಂಚಿಕೆಗೆ ತಳ್ಳಲಲ್ಪಟ್ಟವು. ಅಲ್ಲಿದ್ದ ಸಣ್ಣ ಪುಟ್ಟ ಫಲ ಪುಸ್ಪ ಗೀಡಗಳು, ಹುಲ್ಲು ಸುಟ್ಟು ಕರಕಲಾಗಿ ಸುಡು ಮಣ್ಣಿನಂತಾಗಿದೆ.

(ಬೆಂಕಿ ಹಮ್ಮಿಕೊಂಡಾಗಿನ ಮತ್ತು ಬೆಂಕಿ ನಂದಿಸಿದ ನಂತರದ ಪೊಟೊಗಳನ್ನು ನೀವು ನೋಡಬಹುದು)

 

 

 

 

ಚರ್ಚಿಗೆ ಸಂಬಂಧ ಪಟ್ಟ ಜಾಗದ ಹಿಂದೆ ಇತರರಿಗೆ ಸಂಬಂದ್ದ ಪಟ್ಟ ಹಲವು ಎಕ್ರೆ ಜಾಗ, ಹುಲ್ಲು, ಗೀಡ, ಮತ್ತು ತೆಂಗಿನ ಮರಗಳಿದ್ದ ಜಾಗವಿದೆ.. ಸುಮಾರು ದೂರದಲ್ಲಿರುವ ಒಂದು ತೆಂಗಿನ ಮರದ ಒಣ ಮಡಲು (ಗರಿ) ವಿದ್ಯುತ್ ತಂತಿಯ ಮೇಲೆ ಬಿದ್ದು, ತಂತಿ ತುಂಡಾಗಿ ಕೆಳಗೆ ಬಿದ್ದು. ಎರಡು ತಂತಿ ಸಂಪರ್ಕಿಸಿ, ಬೆಂಕಿ ಕಿಡಿಯಾಗಿ ಆ ಬೆಂಕಿ ಅಲ್ಲಿಯ ಒಣ ಹುಲ್ಲಿಗೆ ಹಿಡಿದು ಕ್ಷಣ ಮಾತ್ರದಲ್ಲಿ ಸುತ್ತಮುತ್ತ ಪಸರತೊಡಗಿತು. ಹತ್ತಿರದಲ್ಲಿ ಚರ್ಚ್ ಮತ್ತು ಕೆಲವು ಮನೆಗಳಿದ್ದವು.

ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಅಗ್ನಿಶಾಮಕ ದಳಕ್ಕೆ ತಿಳಿಸಿದರು. ಅಂದು ಕುಂದಾಪುರ ನಗರದಲ್ಲಿ ಒಳಚರಂಡಿಗಾಗಿ ಅಗೆದು ಹಾಕಿದ್ದರಿಂದ ಅಗ್ನಿಶಾಮಕ ದಳದ ವಾಹನಕ್ಕೆ ಬೆಂಕಿ ತಾಗಿದ ಸ್ಥಳದಲ್ಲಿ ದಾವಿಸಲು ಅಸಾಧ್ಯಾವಾಯಿತು. ಅಸ್ಟರಲ್ಲಿ ಸ್ಥಳಿಯರು, ಚರ್ಚ್ ವಠಾದಲ್ಲಿ ಕಾಮಾಗಾರಿ ಮಾಡುತಿದ್ದ ಕಾರ್ಮಿಕರು, ಕ್ರೈಸ್ತ ಭಕ್ತರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಅಗ್ನಿಶಾಮಕ ದಳದವರು ಬೇರೆ ಮಾರ್ಗದಲ್ಲಿ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿ, ದೊಡ್ಡ ಮಟ್ಟದಲ್ಲಿ ಆಗಬಹುದಾದ ದುರಂತವನ್ನು ತಪ್ಪಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here