Friday 29th, March 2024
canara news

ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಸಿದ್ಧಗೊಳಿಸಲಿದೆಕಟೀಲೇಶ್ವರಿ ಮಡಿಲಲ್ಲಿ ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್

Published On : 17 Feb 2017   |  Reported By : Rons Bantwal


ಮಂಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಮಡಿಲಲ್ಲಿ ಅತ್ಯಾಧುನಿಕ ಸೌಲತ್ತುಗಳುಳ್ಳ 100 ಹಾಸಿಗೆಗಳ ನೂತನ ಆಸ್ಪತ್ರೆ ಸ್ಥಾಪಿಸಲು ಸಂಜೀವನಿ ಟ್ರಸ್ಟ್ ಮುಂಬಯಿ ಯೋಜನೆ ಹಾಕಿದ್ದು, ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್ ಕಟೀಲು ನಾಮಾಂಕಿತ ಆಸ್ಪತೆಯ ಶಿಲಾನ್ಯಾಸ ಕಾರ್ಯಕ್ರಮ ಅಜಾರು, ಕಟೀಲು ಇಲ್ಲಿ ಇದೇ ತಾರೀಕು 19.02.2017ನೇ ಆದಿತ್ಯವಾರ ಸಂಜೆ 3.00 ಗಂಟೆಗೆ ನೆರವೇರಿಸಲಾಗುವುದು ಎಂದು ಇಂದಿಲ್ಲಿ ಶುಕ್ರವಾರ (17.02.2017) ಪೂರ್ವಾಹ್ನ ಪ್ರೆಸ್ ಕ್ಲಬ್ ಆಫ್ ಮಂಗಳೂರು ಇಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಂಜೀವನಿ ಟ್ರಸ್ಟ್ ಮುಂಬಯಿ ಇದರ ಆಡಳಿತ ಟ್ರಸ್ಟಿ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.

ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಸಂಜೀವಿನಿ ಟ್ರಸ್ಟ್ ಮುಂಬಯಿ ಇವುಗಳ ಸಂಚಾಲಕತ್ವ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ಮಂದಿರ ಕಟೀಲು ಇದರ ಸಹಯೋಗದೊಂದಿಗೆ ರಚಿಸಲ್ಪಡುವ ದುರ್ಗಾ ಸಂಜೀವನಿ ಚಾರಿಟೇಬಲ್ ಆಸ್ಪತ್ರೆಗೆ ಉಡುಪಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಶ್ರೀ ಅದಮಾರು ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಶ್ರೀ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಜರುಗುವ ಭವ್ಯ ಸಮಾರಂಭದಲ್ಲಿ ಭಾರತ ಸರಕಾರದ ಆರೋಗ್ಯ, ಕುಟುಂಬ ಕಲ್ಯಾಣ ಸಚಿವ ಮಾನ್ಯ ಶ್ರೀ ಜಗತ್ ಪ್ರಕಾಶ್ ನಡ್ಡಾ ಹಾಗೂ ಕರ್ನಾಟಕ ಸರಕಾರದ ಆರೋಗ್ಯ, ಕುಟುಂಬ ಕಲ್ಯಾಣ ಸಚಿವ ಮಾನ್ಯ ಶ್ರೀ ಕೆ.ಆರ್ ರಮೇಶ್‍ಕುಮಾರ್ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಶ್ರೀಕ್ಷೇತ್ರ ಕಟೀಲು ಇದರ ವಂಶಿಕ ವಿಶ್ವಸ್ಥ ಮತ್ತು ಪ್ರಧಾನ ಆರ್ಚಕ ಶ್ರೀ ಕೆ.ವಾಸುದೇವ ಅಸ್ರಣ್ಣ, ಆರ್ಚಕರುಗಳಾದ ಶ್ರೀ ಕೆ.ಲಕ್ಷಿ ್ಮೀನಾರಾಯಣ ಅಸ್ರಣ್ಣ ಮತ್ತು ಶ್ರೀ ಕೆ.ಅನಂತಪದ್ಮನಾಭ ಅಸ್ರಣ್ಣ ದಿವ್ಯೋಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರುಗಳಾಗಿ ಕರ್ನಾಟಕ ಸರಕಾರದ ಮಾನ್ಯ ಅರಣ್ಯ ಹಾಗೂ ದ.ಕ ಜಿಲ್ಲಾ ಉಸ್ತುವರಿ ಸಚಿವ ಶ್ರೀ ಬಿ.ರಮಾನಾಥ ರೈ, ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಶ್ರೀ ಯು.ಟಿ ಖಾದರ್, ಮಾನ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಮತ್ತು ಉಡುಪಿ ಜಿಲ್ಲಾ ಉಸ್ತುವರಿ ಮಾನ್ಯ ಸಚಿವ ಶ್ರೀ ಪ್ರಮೋದ್ ಮಧ್ವರಾಜ್, ದಕ್ಷಿಣ ಕನ್ನಡ ಜಿಲ್ಲಾ ಮಾನ್ಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲು, ಉಡುಪಿ ಜಿಲ್ಲಾ ಮಾನ್ಯ ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ಶ್ರೀ ವಿನಯಕುಮಾರ್ ಸೊರಕೆ, ಮಂಗಳೂರು ಉತ್ತರ ಶಾಸಕ ಶ್ರೀ ಬಿ.ಎ ಮೊಯ್ಧೀನ್ ಬಾವ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ, ಕಟೀಲು ತಾಲೂಕು ಪಂಚಾಯತ್ ಸದಸ್ಯ ಶ್ರೀ ಸುಕುಮಾರ್ ಸನಿಲ್, ಕಟೀಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಪೂಜಾರ್ತಿ, ಕಟೀಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ಕಿರಣ್ ಕುಮಾರ್ ಶೆಟ್ಟಿ, ಮಣಿಪಾಲ ಎಜ್ಯುಕೇಶನ್ ಮತ್ತು ವೈದ್ಯಕೀಯ ಸಮೂಹ ಬೆಂಗಳೂರು ಇದರ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ| ರಂಜನ್ ಆರ್.ಪೈ, ಮಣಿಪಾಲ ವಿವಿ ಪೂರ್ವ ಉಪಕುಲಪತಿ ಡಾ| ಹೆಚ್.ಎಸ್ ಬಲ್ಲಾಳ್, ಮಣಿಪಾಲ ವಿವಿ ಉಪಕುಲಪತಿ ಡಾ| ಹೆಚ್.ವಿನೋದ್ ಭಟ್, ಮಣಿಪಾಲ ವಿವಿ ಪೂರ್ವ ಉಪಕುಲಪತಿ ಡಾ| ವಿ.ಸುರೇಂದ್ರ ಶೆಟ್ಟಿ, ಮಣಿಪಾಲ ವಿವಿ ಕುಲಸಚಿವ ಡಾ| ನಾರಾಯಣ ಸಭಹಿತ್ ಆಗಮಿಸಲಿದ್ದಾರೆ. ಸಾಂಸ್ಕೃತಿಕವಾಗಿ ಯಕ್ಷಗಾನ ಬಯಲಾಟ ಮತ್ತು ಚಕ್ರವರ್ತಿ ಸೂಲಿಬೆಲೆ ತಂಡವು ಜಾಗೋ ಭಾರತ್ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ. ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಉಭಯ ಸಂಸ್ಥೆಗಳ ಪರವಾಗಿ ನಾಡಿನ ಸಮಸ್ತ ಜನತೆಗೆ ಆದರದ ಸ್ವಾಗತ ಬಯಸುತ್ತಿದ್ದೇವೆ ಎಂದು ಸಂಜೀವಿನಿ ಟ್ರಸ್ಟ್ ಮುಂಬಯಿ ಇದರ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಈ ಮೂಲಕ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಜೀವನಿ ಟ್ರಸ್ಟ್ ಮುಂಬಯಿ ಆಡಳಿತ ಟ್ರಸ್ಟಿ ಡಾ| ಸುರೇಶ್ ಎಸ್.ರಾವ್, ಕೆಎಂಸಿ ಮಂಗಳೂರು ವಿದ್ಯಾಧಿಕಾರಿ (ಡೀನ್) ಡಾ| ವೆಂಕಟ್ರಾಯ ಪ್ರಭು, ಶ್ರೀ ಹರಿನಾರಾಯಣ ಅಸ್ರಣ್ಣ ಕಟೀಲು ಉಪಸ್ಥಿತರಿದ್ದರು.

ದುರ್ಗಾ ಸಂಜೀವಿನಿ ಚಾರಿಟೇಬಲ್ ಹಾಸ್ಪಿಟಲ್ ಕಟೀಲು
ಕಳೆದ 2016ರ ಡಿಸೆಂಬರ್ ಮೊದಲವಾರ ಮಣಿಪಾಲ ವಿಶ್ವವಿದ್ಯಾಲಯ ಮತ್ತು ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಈ ದುರ್ಗಾ ಸಂಜೀವಿನಿ ಚಾರಿಟೇಬಲ್ ಹಾಸ್ಪಿಟಲ್ ಯೋಜನೆಯ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿದ್ದು, ಆಸ್ಪತ್ರೆಯನ್ನು ಆಥಿರ್sಕವಾಗಿ ಹಿಂದುಳಿದವರಿಗಾಗಿ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಸಂಸ್ಥೆಯು ಸುಮಾರು ರೂಪಾಯಿ 25 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಕೊಡಲಿದೆ. ಮಣಿಪಾಲ ವಿಶ್ವವಿದ್ಯಾಲಯ ಸಮೂಹವು ಆಸ್ಪತ್ರೆಗೆ ಸುಸಜ್ಜಿತ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ಸೇವಾಡಳಿತ ನಡೆಸಲಿದೆ. ಒಪ್ಪಂದಂತೆ 9 ಜನರ ಸಲಹಾ ಮಂಡಳಿ ಇದ್ದು ಟ್ರಸ್ಟ್‍ನ ಇಬ್ಬರು, ಮಣಿಪಾಲ ವಿವಿಯಿಂದ ಐವರು ಕಟೀಲು ದೇವಸ್ಥಾನದ ವತಿಯಿಂದ ಓರ್ವರು ಹಾಗೂ ಸ್ಥಳೀಯರೋರ್ವ ಗಣ್ಯರು ಇರಲಿದ್ದು ಈ ಬಗ್ಗೆ ಉಭಯ ಸಂಸ್ಥೆಗಳು ಸುದೀರ್ಘವಾದ ಮಾತುಕತೆ ಮೂಲಕ ತಿಳಿವಳಿಕೆ ಪತ್ರಕ್ಕೆ (ವಿ.ವಿ ಕುಲಸಚಿವ ಡಾ| ನಾರಾಯಣ ಸಭಹಿತ್ ಹಾಗೂ ಟ್ರಸ್ಟ್‍ನ ಅಧ್ಯಕ್ಷ ಡಾ| ಸುರೇಶ ಎಸ್.ರಾವ್) ಅಂಕಿತ ಹಾಕಿರುವೆವು.

ಕಟೀಲು ಒಂದು ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿನ ಜನತೆಯ ಸ್ವಸ್ಥ ಕಾಪಾಡಲು ಸಮೀಪದಲ್ಲಿ ಆಸ್ಪತೆಗಳೇ ಇಲ್ಲದ ಕಾರಣ (ಒಂದೇ ಮಂಗಳೂರು ಅಥವಾ ಮಣಿಪಾಲಕ್ಕೆ ತೆರಳಬೇಕಾಗುತ್ತದೆ). ಅನೇಕ ಬಾರಿ ಇಷ್ಟು ದೂರಕ್ಕೆ ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲು ಒಯ್ಯುತ್ತಿರುವಂತೆಯೇ ದುರ್ಮರಣಕ್ಕೀಡದ ಹಲವು ಘಟನೆಗಳಿವೆ. ಇವನ್ನೆಲ್ಲಾ ಮನವರಿಸಿ ಸ್ಥಾನೀಯ ಸುಮಾರು 15 ಗ್ರಾಮಗಳ ಜನತೆಯ ದೇಹಾರೋಗ್ಯ ಲಕ್ಷ ಸೌಲಭ್ಯ ಒದಗಿಸುವ (ಖಿoಣಚಿಟ ಊeಚಿಟಣh ಅಚಿಡಿe ಈಚಿಛಿiಟiಣಥಿ) ಒಟ್ಟು 100 ಬೆಡ್‍ಗಳುಳ್ಳ ಪರೋಪಕಾರದ ಆಸ್ಪತ್ರೆ (ಅhಚಿಡಿiಣಚಿbಟe ಊosಠಿiಣಚಿಟ) ಇದಾಗಿದೆ. ಬಡತನ ರೇಖೆಕ್ಕಿಂತ ಕೆಳವರ್ಗದ ಜನತೆ ಮತ್ತು ಹಿರಿಯ ನಾಗರಿಕರಿಗೆ ಆರೋಗ್ಯ ಸುರಕ್ಷಾ ಯೋಜನೆ ಮುಖೇನ ಧರ್ಮಾರ್ಥ ತಪಾಸನೆ ನೀಡುವ ಒಂದು ಯೋಜನೆಯಾದರೆ, ಪ್ರಧಾನ ಮಂತ್ರಿ ಸ್ವಚ್ಛ ಭಾರತ ಯೋಜನೆಯಂತೆ ಸ್ಥಾನೀಯ 15 ಗ್ರಾಮಗಳ ಜನತೆಗೆ ಕುಡಿಯುವ ಶುದ್ಧ ನೀರು ಪೂರೈಸುವ ಮತ್ತೊಂದು ಯೋಜನೆ ನಮ್ಮಲ್ಲಿದೆ. Wಚಿಣeಡಿ ಂಖಿಒ ಯೋಜನೆ ಮುಖಾಂತ್ರ ಪ್ರತೀ ಮನೆಗೂ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಪಾಯಖಾನೆ (ಕಕ್ಕಸು-ಖಿoiಟeಣ) ಒದಗಿಸುವ ಉದ್ದೇಶವೂ ಹೊಂದಿದ್ದೇವೆ. ಇದರ ವ್ಯವಸ್ಥೆ ಕಾಪಾಡುವರೇ ಸ್ಥಳಿಯ ಜನತೆಗೆನೇ ಅವಕಾಶ ಕಲ್ಪಿಸಲಾಗುವುದು. ಅಲ್ಲಿನ ಮಹಿಳಾ ಮಂದಿಗೆ ಪಾಯಖಾನೆ ಉಪಯೋಗಿಸುವ ಸೂಕ್ತ ತರಬೇತಿ ನೀಡಿ ಮಹಿಳಾ ಉದ್ಯೋಗವಕಾಶವೂ ಒಂದೇ ಛಾವಣಿಯಡಿಯಲ್ಲಿ ಸಂಜೀವಿನಿ ಟ್ರಸ್ಟ್ ಮೂಲಕ ಸೇವೆ ನಿರ್ವಾಹಿಸಲಿದೆ.

ಸೌಲಭ್ಯಗಳ ಧರ್ಮಾರ್ಥ ಸೇವೆ ಒದಗಿಸುವ ಉದ್ದೇಶ ನಮ್ಮದಾಗಿದೆ. ಸುಮಾರು ಒಂದುವರೆ ಎಕ್ರೆ ಜಾಗದಲ್ಲಿ ರಚಿಸಲ್ಪಡುವ ಈ ಆಸ್ಪತ್ರೆ ನಿರ್ಮಾಣ ಕಾಮಗಾರಿ ಸುಮಾರು ಒಂದುವರೆ ವರ್ಷದÀಲ್ಲಿ ಪೂರ್ಣಗೊಳ್ಳುವ ಭರವಸೆ ಇದ್ದು 2018ರ ಮೇ ತನಕ ಸುಸಜ್ಜಿತ ಆಸ್ಪತ್ರೆ ಸೇವಾರ್ಪಣೆ ಗೊಳಿಸುವ ನಿರೀಕ್ಷೆಯಿದೆ. 10 ಬೆಡ್‍ಗಳುಳ್ಳ ಐಸಿಯು ಘಟಕ, ತುರ್ತುನಿಗಾ ಘಟಕ, 6 ಶಸ್ತ್ರಚಿಕಿತ್ಸಾ ಗೃಹ (6-ಆಪರೇಶನ್ ಥಿüಯೇಟರ್‍ಗಳು), ಅಂಬುಲೆನ್ಸ್ ಸೇವೆ, 2ಆ ಎಕೊ ಮೆಷಿನ್, ರೋಗ ವಿಜ್ಞಾನ ಸಾಧನ (ಪೆಥಾಲಾಜಿ), ರಕ್ತ ಸಂಗ್ರಹಣಾ ಘಟಕ, ಸೊನೋಗ್ರಾಫಿ, ಎಕ್ಸ್‍ರೇ, ಸಿಟಿಸ್ಕಾ ್ಯನ್, ಹೆರಿಗೆ ವಿಭಾಗ, ಡಯಾಲಿಸಿಸ್ ಸೇವೆ ಸೇರಿದಂತೆ ಇನ್ನಿತರ ಅತ್ಯಾಧುನಿಕ ಸೌಲತ್ತುಗಳುಳ್ಳ ವಿನೂತನ ಶೈಲಿಯ ಆಸ್ಪತ್ರೆ ಇದಾಗಲಿದೆ ಎಂದು ಡಾ| ಸುರೇಶ್ ರಾವ್ ತಿಳಿಸಿದ್ದಾರೆ.

1992ರಲ್ಲಿ ಸ್ಥಾಪಿತ ಸಂಜೀವನಿ ಟ್ರಸ್ಟ್ ಮುಂಬಯಿ ಇದೀಗ ಫಲಪ್ರದ 25 ವರ್ಷಗಳನ್ನು ಪೂರೈಸಿದ್ದು ಟ್ರಸ್ಟ್‍ನಲ್ಲಿ ವಿಶ್ವಸ್ಥ ಸದಸ್ಯರುಗಳಾಗಿ ಶ್ರೀ ಲಕ್ಷ್ಮೀಶ ಜಿ.ಆರ್ಚಾರ್ಯ, ಶ್ರೀಮತಿ ವಿಜಯಲಕ್ಷ್ಮೀ ರಾವ್, ಡಾ| ಶುೃತಿ ಎಸ್.ರಾವ್, ಡಾ| ದೇವಿಪ್ರಸಾದ್ ರಾವ್, ಡಾ| ಪ್ರಶಾಂತ್ ರಾವ್ ಸಹಯೋಗವನ್ನೀಡುತ್ತಿದ್ದಾರೆ. ರಜತೋತ್ಸವದ ಶುಭಾವಸರ ದ ಟ್ರಸ್ಟ್‍ನ ಈ ಯೋಜನೆ ಒಂದು ಮಹತ್ತರವಾದ ಮೈಲುಗಲ್ಲಾಗಲಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here