Friday 19th, April 2024
canara news

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017; ಕೌನ್ಸಿಲರ್ ಆಯ್ಕೆಗಾಗಿ ಮತಯಾಚಿಸಿದ ತುಳು-ಕನ್ನಡಿಗ ಅಭ್ಯಥಿ೯ಗಳು

Published On : 19 Feb 2017   |  Reported By : Rons Bantwal


(ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.19: ನಾಳೆ ನಡೆಯಲಿರುವ ಮುನ್ಸಿಪಾಲ್ ಕಾರ್ಪೊರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯ ಚುನಾವಣ ಕಣದಲ್ಲಿರುವ
ತುಳುಕನ್ನಡಿಗ ಉಮೇದುವಾರರು ಕೌನ್ಸಿಲರ್ ಆಯ್ಕೆಯ ಸ್ಥಾನ ಗಿಟ್ಟಿಸಿ ಕೊಳ್ಳಲು ತಮ್ಮತಮ್ಮ ವಾರ್ಡ್‍ಗಳ ಮತದಾರರಲ್ಲಿ ಕೊನೆಯದಾಗಿ ಮತಯಾಚಿಸಿದರು.

Dinesh B.Amin

Dinesh Shridhar Rao (SS)

Jagadish K.Amin

Malati J.Shety (SS)

 

Malati J.Shety

Sangeeta Suvarna

ಸಾಂತಕ್ರೂಜ್ ಪೂರ್ವದ ವಕೋಲಾ ವಾರ್ಡ್ ಸಂಖ್ಯೆ 91ನಿಂದ ಇತರೇ ಹಿಂದುಳಿದ ವರ್ಗದ (ಒಬಿಸಿ) ಎನ್‍ಸಿಪಿ ಅಭ್ಯಥಿ೯ ದಿನೇಶ್ ಬಿ.ಅವಿೂನ್, ಅಂಧೇರಿ ಪೂರ್ವದ ಮರೋಲ್ ಪೈಪ್‍ಲೇನ್ ಇಲ್ಲಿನ ವಾರ್ಡ್ ಸಂಖ್ಯೆ 82ರ ಜಗದೀಶ್ ಕೆ.ಅವಿೂನ್ (ಅಣ್ಣಾ), ಮುಲುಂಡ್ ಪಶ್ಚಿಮದ ನಹುರ್ ಗೌಟನ್, ಮುಲುಂಡ್ ಬೆಸ್ಟ್ ಬಸ್ ಡೆಪೆÇೀ, ಸೈಂಟ್ ಪಾಯಸ್ ಕಾಲೋನಿ ಇವುಗಳ ವಾರ್ಡ್ ಕ್ರಮಾಂಕ 107ರ ಶಿವಸೇನಾ ಪಕ್ಷದ ಅಭ್ಯಥಿರ್ü ಮಾಲತಿ ಜಗದೀಶ್ ಶೆಟ್ಟಿ, ಮಲಾಡ್ ಪಶ್ಚಿಮದ ಚಿಂಚೋಲಿ, ಪವನ್‍ಬಾಗ್ ಅಲ್ಲಿನ ವಾರ್ಡ್‍ಸಂಖ್ಯೆ 50ನಿಂದ ದಿನೇಶ್ ಶ್ರೀಧರ್ ರಾವ್ (ಕುಕ್ಯಾನ್), ಪುಣೆ ಮಹಾನಗರ ಪಾಲಿಕೆಯ ಪಿಂಪ್ರಿ, ಕಾಸರವಾಡಿ ಇಲ್ಲಿನ ವಾರ್ಡ್ ಸಂಖ್ಯೆ 20ಸಿ ನಿಂದ ಸ್ಪರ್ಧಿಸುತ್ತಿರುವ ಎನ್‍ಸಿಪಿ (ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ) ಅಭ್ಯಥಿ೯ ಸಂಗೀತ ಕಿರಣ್ ಸುವರ್ಣ ಈ ಬಾರಿ ಸ್ಪರ್ಧಿಸಿ ನಗರ ಸೇವಕರನ್ನಾಗಿಸಲು ಮತಯಾಚಿಸಿದರು.

ಕಾಂದಿವಿಲಿ ಪೂರ್ವದ ಠಾಕೂರ್ ವಿಲೇಜ್ ವಾರ್ಡ್ ಸಂಖ್ಯೆ 25ರ ಬಿಜೆಪಿ ಅಭ್ಯಥಿ೯ ನೀಶಾ (ಪರುಲೇಖರ್) ಸುರೇಶ್ ಬಂಗೇರ, ಅಂಧೇರಿ ಪೂರ್ವದ ಚಕಾಲ, ಸಹಾರ್‍ರೋಡ್ ಪಾರ್ಸಿವಾಡ ವಾರ್ಡ್ ಸಂಖ್ಯೆ 83ರ ವಿನ್ನಿಫ್ರೆಡ್ ಬಿ.ಡಿ'ಸೋಜಾ, ಗೋರೆಗಾಂ ಬಂಗೂರ್ ನಗರದ ವಾರ್ಡ್ ಸಂಖ್ಯೆ 57ರ ಸೂರ್ಯಪ್ರಕಾಶ್ ಶೆಟ್ಟಿಗಾರ್, ಬೋರಿವಿಲಿ ಪಶ್ಚಿಮದ ಉತ್ಕರ್ಷ್, ಎಲ್‍ಟಿ ರೋಡ್ ವಾರ್ಡ್ ಸಂಖ್ಯೆ 16ರ ವಿಜಯಲಕ್ಷ್ಮೀ ನಾರಾಯಣ ಶೆಟ್ಟಿ, ಸಯಾನ್ ಧಾರವಿಯ ಸಂಖ್ಯೆ 188ರ ಸುಮಲತಾ ದಿನೇಶ್ ಶೆಟ್ಟಿ ಹಾಗೂ ಥಾಣೆ ಮಹಾನಗರ ಪಾಲಿಕೆಯಿಂದ ಮಾನ್ಪಾಡ ಮನೋರಮ ನಗರದ 3ಸಿ ವಾರ್ಡ್‍ನ ಶಿವಸೇನಾ ಪಕ್ಷದ ಅಭ್ಯಥಿ೯ ವಿೂನಾಕ್ಷಿ ರಾಜೇಂದ್ರ ಶಿಂಧೆ (ದಿ| ಗುರುವ ಕಾಂತಪ್ಪ ಪೂಜಾರಿ ಸುಪುತ್ರಿ) ಅವರೂ ತಮ್ಮತಮ್ಮ ವಾರ್ಡ್‍ನ ಎಲ್ಲಾ ತುಳುಕನ್ನಡಿಗರಲ್ಲಿ ಮತಯಾಚಿಸಿದ್ದಾರೆ.

ಎಲ್ಲಾ ತುಳುಕನ್ನಡಿಗರ ಪರವಾಗಿ ಆಯಾ ಪಕ್ಷದ ವರಿಷ್ಠರು, ನೇತಾರರು, ತುಳುಕನ್ನಡಿಗರ ಪರವಾಗಿ ಎಲ್.ವಿ ಅವಿೂನ್, ರೋಹಿತ್ ಎಂ.ಸುವರ್ಣ ಮತ್ತಿತರ ರಾಜಕೀಯ ಮುಖಂಡರು ತುಳುಕನ್ನಡಿಗರ ಪರವಾಗಿ ಮತಯಾಚಿಸಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here