Friday 19th, April 2024
canara news

ಸಯಾನ್‍ನಲ್ಲಿ ನಡೆಸಲ್ಪಟ್ಟ ಕೆರ್ವಾಶೆ ಗ್ರಾಮಸ್ಥರ ಸಮಿತಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

Published On : 20 Feb 2017   |  Reported By : Ronida Mumbai


ದೇವಸ್ಥಾನದ ಜೀರ್ಣೋದ್ಧಾರ ಜೀವಮಾನದಲ್ಲಿ ಒಮ್ಮೆ ಕಾಣಲು ಸಿಗುವಂತದು: ಕ್ಯಾ| ಗಣೇಶ್ ಕಾರ್ನಿಕ್

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಫೆ.20: ಬ್ರಹ್ಮಕಲಾಶಭಿಷೇಕ ಹನ್ನೇರಡು ವರ್ಷಕ್ಕೊಮ್ಮೆ ಬರುತ್ತದೆ. ಆದರೆ ದೇವಸ್ಥಾನದ ಜೀರ್ಣೋದ್ಧಾರ ನಮ್ಮ ಜೀವಮಾನದಲ್ಲಿ ಒಮ್ಮೆ ಕಾಣಲು ಸಿಗುವಂತದು. ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕೆರ್ವಾಶೆ ಮಂದಿರ ಒಂದು ಐತಿಹಾಸಿಕ ಕ್ಷೇತ್ರ. ವಿಶ್ವಾಸ ಎಂಬುಂದೆ ಪರಮಾತ್ಮ. ನಂಬಿಕೆಯ ಆದಾರದಿಂದ ಬದುಕು ಕಟ್ಟುತ್ತಾ ಬಂದವರು ನಾವೂ. ಮುಂಬಯಿ ಜನರ ಗಳಿಕೆಯ ಒಂದು ಭಾಗದಿಂದಾಗಿ ನಮ್ಮ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ದೇವಸ್ಥಾನಗಳು ಉದ್ಧಾರವಾಗುತ್ತಿದೆ. ಮಾತ್ರವಲ್ಲದೆ ಈ ಜನರಿಂದ ಎರಡು ಜಿಲ್ಲೆಗಳ ಬದಲಾವಣೆ ಸಾಧ್ಯವಾಗಿದೆ ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್ತ್‍ನ ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಇದರ ಅಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ನುಡಿದರು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆರ್ವಾಶೆ ಅಷ್ಠಬಂಧ ಪುನಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ನಿಮಿತ್ತ ಇಂದಿಲ್ಲಿ ಭಾನುವಾರ ಸಂಜೆ ಸಯನ್ ಪೂರ್ವದಲ್ಲಿನ ನಿತ್ಯಾನಂದ ಸಭಾಗೃಹದಲ್ಲಿ ಕೆರ್ವಾಶೆ ಗ್ರಾಮಸ್ಥರ ಸಮಿತಿ ಮುಂಬಯಿ ಆಯೋಜಿಸಿದ್ದ ವಿಶೇಷ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಕಾರ್ನಿಕ್ ಮಾತನಾಡಿದರು.

ಕರಿಯಣ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭೆಗೆ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ದೀಪ ಬೆಳಗಿಸಿ ಚಾಲನೆಯನ್ನೀಡಿ ಆಶೀರ್ವಚನ ನೀಡಿದರು.

ಅತಿಥಿs ಅಭ್ಯಾಗತರುಗಳಾಗಿ ಉದ್ಯಮಿ, ಸಮಾಜ ಸೇವಕರುಗಳಾದ ಮಹೇಶ ಶೆಟ್ಟಿ, ಶೇಖರ ಶೆಟ್ಟಿ, ವೇ| ಮೂ| ರಾಮ್ ಭಟ್, ಸಾಣೂರು, ಕೆ.ಸುಧಾಕರ ಬಂಗೇರ, ದೇವಸ್ಥಾನದ ಹಿರಿಯ ಅರ್ಚಕ ಕೆ.ಪದ್ಮನಾಭ ಭಟ್, ಸಂಜೀವ ರಾವ್, ಕುಲ್‍ದೀಪ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಮಾತನಾಡುತ್ತಾ ನಮ್ಮ ಊರಿನ ಧಾರ್ಮಿಕ ಕ್ಷೇತ್ರಗಳನ್ನು ಉದ್ಧಾರಗೊಳಿಸುವ ಕರ್ತವ್ಯ ನಮ್ಮ ಮೇಲಿದೆ. ನಮ್ಮ ಊರು ಅನ್ನುವುದು ಶರೀರದಂತೆ. ಶರೀರ ಕ್ರಿಯಾತ್ಮಕವಾಗಿರಬೇಕಾದರೆ ಅದು ಜೀವಂತವಾಗಿರಬೇಕು. ಆದುದರಿಂದ ನಮ್ಮ ಊರಿನ ದೇವಸ್ಥಾನಗಳ ಸಂಪೂರ್ಣ ಜೀರ್ಣೋದ್ಧಾರದ ಅಗತ್ಯವಿದೆ. ಊರಿನ ದೇವಸ್ಥಾನ ಎಂದರೆ ಅದೊಂದು ಸಂಪರ್ಕ ಕೇಂದ್ರ. ಮನುಷ್ಯನಾದವನು ನಾಲ್ಕು ವರ್ಷ ಕಲಿತರು ಸಂಸ್ಕಾರಯುಕ್ತವಾದ ಕಲಿಕೆಯಾದರೆ ಅದೇ ಸರಿಯಾದ ವಿಧ್ಯಾಭ್ಯಾಸ. ಆದುದರಿಂದ ದೇವಸ್ಥಾನದ ಜೀರ್ಣೋದ್ಧಾರ ಎಂದರೆ ನಮ್ಮನ್ನು ನಾವೇ ಜೀರ್ಣೋದ್ಧಾರ ಗೊಳಿಸುವುದು ಎಂದು ನುಡಿದರು.

ಕರಿಯಣ್ಣ ಶೆಟ್ಟಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಕ್ರೀಯಾಶೀಲತೆಯಿಂದ ಮಾತ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಲಸ ಅದಷ್ಟು ಶೀಘ್ರವಾಗಿ ನೇರವೇರಿಸಲು ಸಾಧ್ಯ. ಅಲ್ಲದೆ ಜೀರ್ಣೋದ್ಧಾರ ಕೆಲಸಕ್ಕೆÀ ಎಷ್ಟು ತಡವಾದುದಕ್ಕೆ ವಿಷಾದ ವ್ಯಕ್ತ ಪಡಿಸಿದರು

ಈ ಸಭೆಯಲ್ಲಿ ಶಿರ್ಲಾಲು, ಮೂಂಡ್ಲಿ, ಮುಡಾರು, ಮಾಳ, ಐದು ಮಾಗಣೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದು ತಮ್ಮ ಸಲಹೆಸೂಚನೆಗಳನ್ನಿತ್ತು ಸಭೆಯ ಯಶಸ್ಸಿಗೆ ಸಹಕರಿಸಿದ್ದು, ಕೆರ್ವಾಶೆ ಗ್ರಾಮಸ್ಥರ ಸಮಿತಿ ಮುಂಬಯಿ ಪರವಾಗಿ ಕೆ.ಹರಿ ಭಟ್ (ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕ) ಅಯೋಸಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆÀರ್ವಾಶೆ ಇದರ ಅಧ್ಯಕ್ಷ ಹರೀಶ್ ಕಾರ್ನಿಕ್ ಸ್ವಾಗತಿಸಿದರು. ಸಂಜೀವ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here