Saturday 20th, April 2024
canara news

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017

Published On : 23 Feb 2017   |  Reported By : Rons Bantwal


ತುಳು-ಕನ್ನಡಿಗರಲ್ಲಿ ವಿನ್ನಿಫ್ರೆಡ್ ಡಿ'ಸೋಜಾ-ಜಗದೀಶ್ ಅವಿೂನ್ ವಿಜೇತರು
(ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.23 ಕಳೆದ ಮಂಗಳವಾರ ಮುನ್ಸಿಪಾಲ್ ಕಾಪೆರ್Çೀರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಅರ್ಥಾತ್ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಗೆ ನಡೆದ ಚುನಾವಣೆಯಲ್ಲಿ ಅಂಧೇರಿ ಪೂರ್ವದ ಚಕಾಲ ಸಹಾರ್ ರೋಡ್ ಪಾರ್ಸಿವಾಡ ವಾರ್ಡ್ ಸಂಖ್ಯೆ 83ರಿಂದ ಸ್ಪರ್ಧಿಸಿದ್ದ ವಿನ್ನಿಫ್ರೆಡ್ ಬ್ಯಾಪ್ಠಿಸ್ಟ್ ಡಿ'ಸೋಜಾ (ಹಾಲಿ ನಗರ ಸೇವಕಿ) ಮತ್ತೆ ಭರ್ಜರಿ ಮತಗಳಿಂದ ಜಯಭೇರಿ ಪಡೆದಿದ್ದಾರೆ. ಅಂಧೇರಿ ಪೂರ್ವದ ಮರೋಲ್ ಪೈಪ್‍ಲೇನ್ ಇಲ್ಲಿನ ವಾರ್ಡ್ ಸಂಖ್ಯೆ 82ನಿಂದ ಜಗದೀಶ್ ಕುಟ್ಟಿ ಅವಿೂನ್ (ಅಣ್ಣಾ) ವಿಜೇತರು. ಇವರಿರ್ವರೂ ಕಾಂಗ್ರೇಸ್ (ಐ) ಪಕ್ಷದ ಉಮೇದುವಾರ ರುಗಳಾಗಿ ಸ್ಪರ್ಧಿಸಿದ್ದರು.

Jagadish K.Amin (W-82)

Winni DSouza (W-83)

ವಿನ್ನಿಫ್ರೆಡ್ ಬಿ.ಡಿ'ಸೋಜಾ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಲೋರೆಟ್ಟೊ ಮೂಲದವರಾಗಿದ್ದು, ವಿನ್ನಿಫ್ರೆಡ್ ಅವರು ಶಿವಸೇನೆ ಪಕ್ಷದ ನಿಧಿ ಸಾವಂತ್ ಅವರಕ್ಕಿಂತ ಸುಮಾರು 566 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ವಾರ್ಡ್‍ನಿಂದ ಎನ್‍ಸಿಪಿಯಿಂದ ನ್ಯಾಯವಾದಿ ಸುಜತಾ ಡಿ.ಅಠವಾಳೆ, ಬಿಜೆಪಿಯಿಂದ ಪೂರ್ಣಿಮಾ ಮಾನೆ ಮತ್ತು ಎಂ.ಎನ್ ಎಸ್, ಅಖಿಲ ಭಾರತೀಯ ಸೇನೆ ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು ಹತ್ತು ಅಭ್ಯಥಿರ್üಗಳು ಸ್ಪರ್ಧಿಸಿದ್ದರು.

ಜಗದೀಶ್ ಅವಿೂನ್ ಮೂಲತಃ ಕಾರ್ಕಳ ತಾಲೂಕು ನಿಟ್ಟೆ ಅಲ್ಲಿಯವರಾಗಿದ್ದಾರೆ. ಅವಿೂನ್ ಅವರು ಬಿಜೆಪಿ ಸ್ಪರ್ಧಿ ಸಂತೋಷ್ ಕೇಳ್ಕರ್ ಅವರಕ್ಕಿಂತ ಸುಮಾರು 35 ಮತಗಳ ಅಂತರದಿಂದ ವಿಜೇತರೆಣಿಸಿದ್ದಾರೆ. ಈ ವಾರ್ಡ್‍ನಿಂದ ಶಿವಸೇನೆ, ಎನ್‍ಸಿಪಿ, ಎಂ.ಎನ್ ಎಸ್, ಪೀಪಲ್ಸ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಬಹುಜನ ಮುಕ್ತಿ ಪಾರ್ಟಿ, ಇಂಡಿಯನ್ ಕಮ್ಯೂನಿಸ್ಟ್ ಪಾರ್ಟಿ (ಎಂ) ಹಾಗೂ ಏಳು ಪಕ್ಷೇತರರು ಸೇರಿದಂತೆ ಒಟ್ಟು ಹತ್ತು ಅಭ್ಯಥಿರ್üಗಳು ಸ್ಪರ್ಧಿಸಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here