Friday 19th, April 2024
canara news

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ದಶಮಾನೋತ್ಸವ

Published On : 25 Feb 2017   |  Reported By : Rons Bantwal


ಕಲಾವಿದರುಗಳೇ ಸಂಸ್ಕೃತಿಯ ಜೀವಾಳ : ಪ್ರಭಾಕರ ಎಲ್. ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.24: ಕಲಾವಿದರುಗಳೇ ಸಂಸ್ಕೃತಿಯ ಜೀವಾಳವಾಗಿದ್ದು ಕಲೆಯ ಉಳಿವಿನಿಂದ ಸಂಸ್ಕೃತಿಯ ಪುನಾರುತ್ಥಾನ ಸಾಧ್ಯವಾಗುವುದು. ಅಂತೆಯೇ ಭಜನೆ ಇದ್ದರೆ ವಿಭಜನೆವಿಲ್ಲ ಎನ್ನುವಂತೆ ಭಜನೆ ಮೂಲಕ ದಶಸಂಭ್ರಮಕ್ಕೆ ಅಣಿಯಾದ ಕನ್ನಡಿಗ ಕಲಾವಿದರ ಪರಿಷತ್ತು ಕಲಾರಾಧನೆಯ ಕೇಂದ್ರವಾಗಿದೆ. ನಮ್ಮ ಸಂಸ್ಕೃತಿ, ಕಲೆ, ಪರಂಪರೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಇದಕ್ಕೆ ಈ ವೇದಿಕೆ ಪೂರಕ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ತಿಳಿಸಿದರು.

ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಪೂರ್ವಾಹ್ನ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮಿಸಿದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಪ್ರಭಾಕರ ಶೆಟ್ಟಿ ಮಾತನಾಡಿದರು.

 

ಬಂಟ್ಸ್ ಸಂಘ ಮುಂಬಯಿ ಇದರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಮಿತಿ ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆ ಪರಿಷತ್ತುನ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ವಹಿಸಿದ್ದು, ಅತಿಥಿüವರ್ಯರುಗಳಾಗಿ ಉದ್ಯಮಿ ಹಾಗೂ ಸಮಾಜ ಸೇವಕರುಗಳಾದ ಜಯರಾಮ ಎನ್.ಶೆಟ್ಟಿ, ದಿವಾಕರ ಶೆಟ್ಟಿ ಇಂದ್ರಾಳಿ, ಡಾ| ಸುನೀತಾ ಎಂ.ಶೆಟ್ಟಿ, ಲತಾ ಪಿ.ಶೆಟ್ಟಿ, ನ್ಯಾ| ರೋಹಿಣಿ ಜೆ.ಸಾಲ್ಯಾನ್, ಕೆ.ಎಲ್ ಬಂಗೇರ, ಪ್ರಕಾಶ್ ಬಿ.ಭಂಡಾರಿ, ಬೊಳ್ನಾಡುಗುತ್ತು ಚಂದ್ರಹಾಸ ಶೆಟ್ಟಿ, ಧನಂಜಯ ಶೆಟ್ಟಿ ಕೊಲ್ಪೆ, ಸಿಎ| ಸುರೇಂದ್ರ ಶೆಟ್ಟಿ, ಗೋಪಾಲ ಎಸ್.ಪುತ್ರನ್, ನ್ಯಾ| ಬಿ.ಮೊಯ್ದೀನ್ ಮುಂಡ್ಕೂರು, ವಿಜಯ ಬಿ.ಹೆಗ್ಡೆ, ಅಶೋಕ ಶೆಟ್ಟಿ ಪೆರ್ಮುದೆ, ಶಿವಾನಂದ ಶೆಟ್ಟಿಗಾರ್, ಪ್ರವೀಣ್ ಶೆಟ್ಟಿ ಪುಣೆ, ಐಕಳ ಗಣೇಶ್ ಶೆಟ್ಟಿ, ಜಗನ್ನಾಥ್ ಎನ್.ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ರವಿ ಪೂಜಾರಿ ಬೋಳ, ಪರಿಷತುನ ಸ್ಥಾಪಕಾಧ್ಯಕ್ಷ ಎಸ್.ಟಿ ವಿಜಯಕುಮಾರ್ ತಿಂಗಳಾಯ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಬಂಟ್ಸ್ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಯುವ ವಿಭಾಧ್ಯಕ್ಷ ವಿವೇಕ್ ವಿ.ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ದಶಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಂಯೋಜಕ ಕರ್ನೂರು ಮೋಹನ್ ರೈ, ಪರಿಷತ್ತುನ ಗೌ| ಪ್ರ| ಕಾರ್ಯದರ್ಶಿ ರಾಜು ಶ್ರೀಯಾನ್ ನಾವುಂದ, ಗೌರವ ಕೋಶಾಧಿಕಾರಿ ಪಿ.ಬಿ ಚಂದ್ರಹಾಸ್, ಜೊತೆ ಕಾರ್ಯದರ್ಶಿ ಚಂದ್ರಾವತಿ ದೇವಾಡಿಗ, ಜೊತೆ ಕೋಶಾಧಿಕಾರಿ ನವೀನ್ ಶೆಟ್ಟಿ ಇನ್ನಬಾಳಿಕೆ, ದಶಮಾನೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ನಿತ್ಯಾನಂದ ಡಿ. ಕೋಟ್ಯಾನ್, ಸುರೇಶ್ ಆರ್.ಕಾಂಚನ್, ಚಂದ್ರಶೇಖರ ಪಾಲೆತ್ತಾಡಿ, ಕೈಪಿಡಿ ಸಮಿತಿ ಸಂಚಾಲಕ ಸಾ.ದಯಾ (ದಯಾನಂದ ಸಾಲ್ಯಾನ್), ನ್ಯಾ| ಆರ್ ಜಿ.ಶೆಟ್ಟಿ, ಪ್ರಕಾಶ್ ಶೆಟ್ಟಿ ನಲ್ಯಗುತ್ತು, ರಮೇಶ್ ಶಿವಪುರ, ಭಾಸ್ಕರ್ ಸರಪಾಡಿ, ಪ್ರೇಮನಾಥ್ ಸುವರ್ಣ, ಸುಮಂಗಲ ಎಸ್.ಶೆಟ್ಟಿ, ಅಶೋಕ್ ಕುಕ್ಯಾನ್ ಸಸಿಹಿತ್ಲು ಹಾಗೂ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದು, ಅತಿಥಿüಗಣ್ಯರು ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.

ಜಯರಾಮ ಶೆಟ್ಟಿ ಶುಭಾರೈಸಿ ಇದೊಂದು ಭಾರತೀಯರೆಲ್ಲರೂ ಮೆಚ್ಚುವಂತಹ ಕಾರ್ಯಕ್ರಮ. ಕಲಾವಿದರುಗಳ ಹಾಗೂ ಕಲಾಭಿಮಾನಿಗಳ ಭಕ್ತಿಶಕ್ತಿಗಳಿಂದ ಕೂಡಿದ ಈ ಉತ್ಸವ ಯುವ ಪೀಳಿಗೆಗೆ ಪೆÇ್ರೀತ್ಸಾಹದಾಯಕವಾಗಿದೆ ಎಂದರು.

ಪರಿಷತ್ತುವಿನ ದಶಮಾನೋತ್ಸವ ಅತೀ ಉತ್ತಮ ರೀತಿಯಲ್ಲಿ ನಡೆಂiಯೀ ಮೂಲಕ ಕನ್ನಡಿಗ ಕಲಾವಿದರ ಪರಿಷತ್ತು ಸರ್ವರಿಗೆ ಮಾರ್ಗದರ್ಶಕ ಹಾಗೂ ಮಾದರಿ ಮತ್ತು ಆಗಲಿ ಎಂದÀು ರೋಹಿಣಿ ಸಾಲ್ಯಾನ್ ಆಶಯವ್ಯಕ್ತ ಪಡಿಸಿದರು.

ದಿವಾಕರ ಇಂದ್ರಾಳಿ ಮಾತನಾಡಿ ಸಂಸ್ಕೃತಿ ಉಳಿಯಲು ಕಲಾವಿದರೇ ಪ್ರಧಾನರು. ಅವರೆಲ್ಲರ ಪೆÇ್ರೀತ್ಸಾಹ ನಮ್ಮೆಲ್ಲರ ಆದ್ಯ ಕರ್ತವ್ಯವೇ ಸರಿ. ಕಲಾವಿದರ ಒಗ್ಗೂಡುವಿಕೆಯಿಂದ ಮಾತ್ರ ಪಾವಿತ್ರ ್ಯತೆಯ ಕಲಾರಾಧನೆ ಸಾಧ್ಯ ಎಂದರು.

ಹತ್ತರ ಬಳಿಕ ಯೌವ್ವನಾವಸ್ಥೆ ಬರುತ್ತದೆ. ಆ ಕಾಲವನ್ನು ಯಾವರೀತಿ ಸದ್ಭಳಕೆ ಮಾಡುತ್ತೇವೆ ಎನ್ನುವುದು ಮುಖ್ಯವಾದದ್ದು. ಸಂಘಟನೆಯಲ್ಲಿ ಬಲವಿದೆ ಎನ್ನುವಂತೆ ಇದನ್ನು ಪರಿಷತ್ತು ಸಾರ್ಥಕವಾಗಿಸಿ ಸರ್ವ ಕಲಾವಿದರೊಡನೆ ಮುನ್ನಡೆಯಲಿ ಎಂದು ಪಾಲೆತ್ತಾಡಿ ಶುಭಕೋರಿದರು.

ನಮ್ಮ ಸಂಸ್ಥೆಯು ಕಲಾವಿದರನ್ನು ಗುರುತಿಸುತ್ತಾ ಅವರಲ್ಲಿ ಸ್ಪಂದಿಸುವ ಕಾಯಕಕ್ಕೆ ಬದ್ಧವಾಗಿದೆ. ಬರೇ ಇಲ್ಲಿನ ಅಲ್ಲದೆ ಅಖಂಡ ದೇಶದಲ್ಲಿನ ಎಲ್ಲಾ ಕಲಾ ಪ್ರಾಕಾರಗಳ ಕಲಾವಿದರನ್ನು ಗುರುತಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸೇವೆಯ ಪ್ರತೀಕಕ್ಕೆ ಇದೊಂದು ಮೈಲುಗಲ್ಲು ಅಷ್ಟೇ ಎಂದು ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಸಮಾರಂಭದ ಆದಿಯಲ್ಲಿ ಬಂಟರ ಭವನದ ಆವಾರಣದಲ್ಲಿದ್ದ ಶ್ರೀ ವಿಷ್ಣುಮೂರ್ತಿ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆನೆರವೇರಿಸಿ ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ಮಂಡಳಿ ಹಾಗೂ ಪರಿಷತ್ತುವಿನ ಸದಸ್ಯರು ರವೀಂದ್ರ ಎ.ಅವಿೂನ್ ನೇತೃತ್ವದಲ್ಲಿ ನಗರ ಭಜನೆ ಮೂಲಕ ಸಭಾಗೃಹಕ್ಕೆ ಪಾದಾರ್ಪಣೆಗೈದು ವೇದಿಕೆಯಲ್ಲಿ ನಿರ್ಮಿತ ಗುತ್ತಿನ ಮನೆಯಂಗಳದಲ್ಲಿ ಶೃಂಗಾರಿಸಿದ ತುಳಸೀಕಟ್ಟೆಗೆ ಆರತಿಗೈದು, ಭಕ್ತಿನೃತ್ಯದೊಂದಿಗೆ ತುಳಸೀ ಕಟ್ಟೆಗೆ ಸುತ್ತುಹಾಕುತ್ತಾ ಭಜನೆ, ಸನ್ಮಂಗಳದ ಪ್ರಾರ್ಥನೆ ನಡೆಸಿ ಸಮಾರಂಭಕ್ಕೆ ಸಾಂಕೇತಿಕವಾಗಿ ಚಾಲನೆಯನ್ನಿತ್ತರು. ಈ ವೇಳೆ ಉಪಸ್ಥಿತ ಗಣ್ಯರಿಗೆ ಪಾಯಸ, ಪಂಚಕಜ್ಜಾಯ, ಅವಲಕ್ಕಿ, ಪಾನಕ ಇತ್ಯಾದಿಗಳನ್ನೀಡಿ ಸುಖಾಗಮನ ಕೋರಲಾಯಿತು.

ಪರಿಷತ್ತುನ ಉಪಾಧ್ಯಕ್ಷ ಕಮಲಾಕ್ಷ ಸರಾಫ್ ಸುಖಾಗಮನ ಬಯಸಿದರು. ಕಳ್ಳಿಗೆ ದಯಾಸಾಗರ್ ಚೌಟ, ಅಶೋಕ ಪಕ್ಕಳ ಮತ್ತು ದಶಮಾನೋತ್ಸವ ಸಮಿತಿ ಸಂಯೋಜಕ ಪದ್ಮನಾಭ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದ ರು. ಸಂಘಟನಾ ಕಾರ್ಯದರ್ಶಿ ಹಾಗೂ ಸ್ಮರಣ ಸಂಚಿಕೆಯ ಸಂಪಾದಕ ದೇವದಾಸ ಪಿ.ಸಾಲಿಯಾನ್ ವಂದಿಸಿದರು.

ಪರಿಷತ್ತುವಿನ ಕಲಾವಿದರು ಸಾಂಸ್ಕೃತಿಕ ಕಲಾ ಮಹೋತ್ಸವವಾಗಿ ಸಂಗೀತ ವೈವಿಧ್ಯ, ನೃತ್ಯ ವೈಭವ ಹಾಗೂ ಲತೇಶ್ ಮೋಹನ್ ಪೂಜಾರಿ ನಿರ್ದೇಶನದಲ್ಲಿ `ಮನ್ನಿ' ತುಳು ನಾಟಕ ಪ್ರದರ್ಶಿಸಿದರು. ಮಹಾನಗರದ ವಿವಿಧ ಕಲಾ ತಂಡಗಳಾದ ಅರುಣೋದಯ ಕಲಾ ನಿಕೇತನ ಚೆಂಬೂರು, ರಾಧಾಕೃಷ್ಣ ನೃತ್ಯ ಆಕಾಡೆಮಿ ಮೀರಾರೋಡ್, ಅಮಿತಾ ಕಲಾ ಮಂದಿರ ಮೀರಾರೋಡ್, ನೃತ್ಯ ವಿದ್ಯಾನಿಲಯ ಭಾಂಡೂಪ್, ಪವಿತ್ರ ಆರ್ಟ್ಸ್ ವಿಸ್ಯೂವಲ್ ಇನ್‍ಸ್ಟಿಟ್ಯೂಟ್ ಡೊಂಬಿವಲಿ ಸಂಸ್ಥೆಗಳು ವಿವಿಧ ಕಲಾ ಪ್ರಾಕಾರಗಳ ಕಲಾ ಸಂಭ್ರಮ ಸಾದರ ಪಡಿಸಿದರು. ಹಾಗೂ ಶ್ರೀ ವಿಷ್ಣುಮೂರ್ತಿ ಬಂಟ ಯಕ್ಷಕಲಾ ವೇದಿಕೆ ಮುಂಬಯಿ `ಕೃಷ್ಣಾರ್ಜುನ' ಯಕ್ಷಗಾನ ಪ್ರದರ್ಶಿಸಿತು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here