Thursday 28th, March 2024
canara news

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ದಶವಾರ್ಷಿಕ ಸಂಭ್ರಮದಲ್ಲಿ ಸಂವಾದಗೋಷ್ಠಿ

Published On : 26 Feb 2017   |  Reported By : Rons Bantwal


ಕಲೆ ಸಂಸ್ಕಾರಯುತ ಬದುಕನ್ನು ಬೆಳೆಸುವ ಶಕ್ತಿಯಾಗಲಿ: ಡಾ| ಸುನೀತಾ ಎಂ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.24: ಆಸೆ, ಕಾಳಜಿ ಇರಿಸಿಕೊಂಡು ಬದುಕಿನ ಅಂಗವಾಗಿ ಕಲೆಯನ್ನು ಬೆಳೆಸುವ, ಜನರ ಅಭಿಸಕ್ತಿಗೆ ತಕ್ಕಂತೆ ಕಲೆ ಬದಲಾದರೂ ಅದರ ಮೂಲ ಸ್ವರೂಪ ಬದಲಾಗಬಾರದು. ಕಲೆಯನ್ನು ಪ್ರೀತಿನೊಂದಿಗೆ ಬೆಳೆಸಲು ಈ ವೇದಿಕೆ ಕಲಾವಿದರ ಆಸ್ತಿಯಾಗಿದೆ. ಕಲೆ ಕೇವಲ ರಂಜನೆಯ ಉದ್ದೇಶವಾಗದಿರಲಿ. ಬದುಕನ್ನು ಸಂಸ್ಕಾರಯುತವಾಗಿ ಬೆಳೆಸುವ ಶಕ್ತಿಯಾಗಲಿ ಎಂದು ಮಹಾನಗರದಲ್ಲಿನ ಹಿರಿಯ ಪತ್ರಕರ್ತೆ ಸಾಹಿತಿ, ಕವಯತ್ರಿ, ಡಾ| ಸುನೀತಾ ಎಂ.ಶೆಟ್ಟಿ ಅಭಿಪ್ರಾಯ ಪಟ್ಟರು.

ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ದಶವಾರ್ಷಿಕ ಸಂಭ್ರಮ ಆಚರಿಸಿದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಸಂಭ್ರಮದ ಮಧ್ಯಾಂತರದಲ್ಲಿ ನಡೆಸಿದ ಯಕ್ಷಗಾನ-ನೃತ್ಯ-ಚಿತ್ರಕಲೆ-ಸಂಗೀತ-ನಾಟಕ ಮತ್ತಿತರ ಕಲಾ ಪ್ರಾಕಾರಗಳು ವಿಚಾರಿತಸಂವಾದ ಗೋಷ್ಠಿಯನ್ನು ಉದ್ದೇಶಿಸಿ ಡಾ| ಸುನೀತಾ ಶೆಟ್ಟಿ ಮಾತನಾಡಿದರು.

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿರಿಯ ಕಲಾವಿದರ ವಿದ್ವತ್ತು, ಅನುಭವವನ್ನು ಹಂಚಿಕೊಳ್ಳುವುದೇ ಈ ಗೋಷ್ಠಿಯ ಉದ್ದೇಶ ಎಂದರು.

ಯಕ್ಷಗಾನದ ಹಿರಿಯ ಭಾಗವತ ಪೆÇಲ್ಯ ಲಕ್ಷಿ ್ಮೀನಾರಾಯಣ ಶೆಟ್ಟಿ, ತೋನ್ಸೆ ವಿಜಯಕುಮಾರ್ ಶೆಟ್ಟಿ, ದೇವದಾಸ ಶೆಟ್ಟಿ, ಜಯಶೀಲ ಸುವರ್ಣ, ವೀಣಾ ಶಾಸ್ತ್ರಿ, ವಿೂನಾಕ್ಷಿ ರಾಜು ಶ್ರೀಯಾನ್ ಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿದರು. ಅಶೋಕ ಪಕ್ಕಳ ಸ್ವಾಗತಿಸಿ ಸಂವಾದ ಸಂಯೋಜಿಸಿ ವಂದಿಸಿದರು.

ಪೆÇಲ್ಯ ಲಕ್ಷಿ ್ಮೀನಾರಾಯಣ ಶೆಟ್ಟಿ ಯಕ್ಷಗಾನದ ಬಗ್ಗೆ ಸಂವಾದಿಸಿ ಮಾತನಾಡಿದ ಅವರು ಯಕ್ಷಗಾನದಲ್ಲಿ ಹೊಸತನದ ಅವಿಷ್ಕಾರಗಳಿಂದ ಭಾಗವತಿಕೆ ಸಂಗೀತವಾಗುತ್ತಿರುವುದು ಅದರ ಮೌಲ್ಯಗಳು ಕುಸಿಯುತ್ತಿದೆ. ಪ್ರಸಕ್ತ ಯಕ್ಷಗಾನ ಚೌಕಟ್ಟಿನ ಹೊರಹೋಗಿದೆ. ತೆಂಕು ಮತ್ತು ಬಡಗುಗಳ ವ್ಯತ್ಯಾಸ ಮಾಯವಾಗಿದೆ. ಭಾಗವತಿಗೆ ಸಂಗೀತ ರಸಮಂಜರಿ ಆಗಿದೆ ಎಂದರು.

ವಿಜಯಕುಮಾರ್ ಶೆಟ್ಟಿ ಚಲನಚಿತ್ರ ಮತ್ತು ರಂಗಭೂಮಿ ಬಗ್ಗೆ ಮಾತನಾಡಿ ಸಿನೇಮಾ ವಿಶ್ವವ್ಯಾಪಿ ಮನ್ನಣೆವುಳ್ಳವು ಆದರೆ ರಂಗ ಭೂಮಿ ಚೌಕಟ್ಟಿನ ಒಳಾಂಗಣದಲ್ಲಿಯೇ ಇರಬೇಕಾಗುತ್ತದೆ. ರಂಗಭೂಮಿಯ ಇತಿಮಿತಿ ಕಲಾವಿದರನ್ನು ಕೂಡಿ ಹಾಕುವಂತ್ತಿದ್ದರೆ ಚಿತ್ರತಾರೆಯರಲ್ಲಿ ಇದರ ಕೊರತೆ ಇರಲಾರದು ಎಂದು ತಿಳಿಸಿದರು.

ವೀಣಾ ಶಾಸ್ತ್ರಿ ಶಾಸ್ತ್ರೀಯ ಸಂಗೀತದ ಬಗ್ಗೆ ಮಾತನಾಡಿ ಭಗವಂತನನ್ನು ಗಾಯನದ ಮುಖೇನ ಅಧಿಕವಾಗಿ ಸ್ತುತಿಸಬಹುದು. ಭಕ್ತಿ ಮಾರ್ಗ, ಸಂಗೀತದಿಂದ ದೇವರನ್ನು ಸುಲಭವಾಗಿ ವರಿಸಬಹುದು ಎನ್ನುತ್ತಾ ಶಾಸ್ತ್ರೀಯ ಸಂಗೀತದ ಸೊಲ್ಲನ್ನು ಹಾಡಿದರು.

ಜಯಶೀಲ ಸುವರ್ಣ ಕಂಠದಾನದ ಬಗ್ಗೆ ವಿವರ ನೀಡುತ್ತಾ ಕಂಠದಾನವು ಹಿನ್ನಲೆ ಗಾಯಕ ಗಾಯಕಿಯವರ ಕಂಠಸಿರಿ ಒದಗಿಸುತ್ತದೆ. ಪ್ರತಿಭಾನ್ವಿತ ಕಲಾವಿದರ ವರ್ಚಸ್ಸನ್ನು ಇನ್ನಷ್ಟು ವೃದ್ಧಿಸುತ್ತದೆ ಎಂದು ತಿಳಿಸಿದರು.

ದೇವದಾಸ ಶೆಟ್ಟಿ ಚಿತ್ರಕಲೆ ಬಗ್ಗೆ ಮಾತನಾಡಿ ಚಿತ್ರಕಲೆ ಬದುಕಿನ ವಾಸ್ತವಿಕತೆ ತೋರುತ್ತದೆ. ಮನುಕುಲದ ಜೀವನವನ್ನು ಬಣ್ಣಮಯವಾಗಿ ಬಿಂಬಿಸುತ್ತಾ ಮನಸ್ಸುಗಳನ್ನು ಹಗುರಗೊಳಿಸುತ್ತದೆ ಎಂದು ನುಡಿದರು.

ವಿೂನಾಕ್ಷಿ ರಾಜು ಶ್ರೀಯಾನ್ ಶಾಸ್ತ್ರೀಯ ನೃತ್ಯವನ್ನು ವಿವರಿಸಿ ಲಯ ಮತ್ತು ಅಭಿನಯವೇ ನೃತ್ಯ ಭಾಷೆಯಾಗಿದೆ. ಪಾಶ್ಚತ್ಯಕ್ಕಿಂತ ಪರಂಸರಗತಾ ನೃತ್ಯಗಳೇ ಪಾವಿತ್ರ್ಯತೆವುಳ್ಳದಾಗಿದ್ದು, ಶಾಸ್ತ್ರೀಯ, ಜಾನಪದ ನೃತ್ಯಗಳು ಮೌಲ್ಯಯುತವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಕಲಾವಿದರು ಉಪಸ್ಥಿತರಿದ್ದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here