Friday 19th, April 2024
canara news

ಕುಂದಾಪುರ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತ್ಯಾನಂದ ಸಾಲಿನ್ಸ್ ಆಯ್ಕೆ

Published On : 27 Feb 2017   |  Reported By : Bernard J Costa


ಕೋಟ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕುಂದಾಪುರ ವಲಯದ ಅಧ್ಯಕ್ಷರಾಗಿ ವಕ್ವಾಡಿ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸತ್ಯಾನಂದ ಸಾಲಿನ್ಸ್ ಅವರನ್ನು ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಉಪಾಧ್ಯಕ್ಷರಾಗಿ ಕೋಟೇಶ್ವರ ವೃತ್ತದಿಂದ ಉಳ್ತೂರು ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ದೈಶಿಶಿ ಚಂದ್ರಶೇಖರ ಶೆಟ್ಟಿ, ಕುಂದಾಪುರ ವೃತ್ತದಿಂದ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ದೈಶಿಶಿ ಚಂದ್ರಶೇಖರ ಬೀಜಾಡಿ, ಹಾಲಾಡಿ ವೃತ್ತದಿಂದ ಹೊಂಬಾಡಿ ಮಂಡಾಡಿ ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ದೈಶಿಶಿ ಕಿರಣ್ ಕುಮಾರ್, ಅಂಪಾರು ವೃತ್ತದಿಂದ ಚೋನಾಳಿ ಶ್ರೀ ಹರ್ಷ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ದೈಶಿಶಿ ಸೂರ್ಯನಾರಾಯಣ ಜೋಷಿ ಆಯ್ಕೆಯಾಗಿದ್ದಾರೆ.

 

ಕಾರ್ಯದರ್ಶಿಯಾಗಿ ಬೇಳೂರು ಸರಕಾರಿ ಪ್ರೌಢಶಾಲೆಯ ದೈಶಿಶಿ ಸುಧಾಕರ ಶೆಟ್ಟಿ, ಕೋಶಾಧಿಕಾರಿಯಾಗಿ ಹೆಸ್ಕುತ್ತೂರು ಸರಕಾರಿ ಪ್ರೌಢಶಾಲೆಯ ದೈಶಿಶಿ ಜಯಪ್ರಸಾದ್ ಶೆಟ್ಟಿ,ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾಳಾವರ ಸರಕಾರಿ ಪ್ರೌಢಶಾಲೆಯ ದೈಶಿಶಿ ಅರುಣ ಕುಮಾರ್, ಬಸ್ರೂರು ನಿವೇದಿತಾ ಪ್ರೌಢಶಾಲೆಯ ದೈಶಿಶಿ ರಾಜಾರಾಮ ಶೆಟ್ಟಿ, ಕೋಡಿ ಹಾಜಿ ಮೈದಿನ್ ಪ್ರೌಢಶಾಲೆಯ ದೈಶಿಶಿ ಇಲಿಯಾಸ್, ಕುಂದಾಪುರ ಹೋಲಿರೋಜರಿ ಆಂ.ಮಾ ಶಾಲೆಯ ದೈಶಿಶಿ ರತ್ನಾಕರ ಶೆಟ್ಟಿ, ಗಂಗೊಳ್ಳಿ ಎಸ್.ವಿ ಹಿರಿಯ ಪ್ರಾಥಮಿಕ ಶಾಲೆಯ ದೈಶಿಶಿ ನಾರಾಯಣ ಶೆಟ್ಟಿ, ಹಾಲಾಡಿ ಪ.ಪೂ ಕಾಲೇಜಿನ ದೈಶಿಶಿ ಪದ್ಮಾವತಿ,ಬಿದ್ಕಲ್‍ಕಟ್ಟೆ ಪ.ಪೂ ಕಾಲೇಜಿನ ದೈಶಿಶಿ ರೇಶ್ಮಾ, ಅಮಾಸೆಬೈಲು ಸರಕಾರಿ ಪ್ರೌಢಶಾಲೆಯ ದೈಶಿಶಿ ಹೇಮಾವತಿ, ಅಂಕದಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಶಿಶಿ ಸುಮಂಗಲ ಆಯ್ಕೆಗೊಂಡರು. ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ದೈಶಿಶಿ ಕರುಣಾಕರ ಶೆಟ್ಟಿ ಆಯ್ಕೆ ಪ್ರಕ್ರೀಯೆ ನಡೆಸಿಕೊಟ್ಟರು. ನಿಕಟ ಪೂರ್ವ ಅಧ್ಯಕ್ಷರಾದ ಸದಾಶಿವ ಶೆಟ್ಟಿ,ಕಾರ್ಯದರ್ಶಿ ಕೆ.ಕೆರಾಮ ಅಧಿಕಾರ ಹಸ್ತಾಂತರಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here