Tuesday 23rd, April 2024
canara news

ಪೇಜಾವರ ಮಠದಲ್ಲಿ ನಡೆಸಲ್ಪಟ್ಟ ಭಕ್ತಿಗಾನ ಸಂಗೀತ ಲಹರಿ ಕಾರ್ಯಕ್ರಮ

Published On : 27 Feb 2017   |  Reported By : Rons Bantwal


ದಕ್ಕಿದ ಅವಕಾಶ ಸಹೃದಯತೆಯಿಂದ ಬಳಸಿ: ಪುತ್ತೂರು ನರಸಿಂಹ ನಾಯಕ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.27: ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಸ್ಥಾನದ ಶ್ರೀ ಪೇಜಾವರ ಅಧೋಕ್ಷಜ ಮಠದ ಉಡುಪಿ ಪರ್ಯಾಯ ಸ್ವಾಮೀಜಿ ವಿಶ್ವೇಶತೀರ್ಥಶ್ರೀ ಅವರ ಐತಿಹಾಸಿಕ ಪಂಚಮ ಪರ್ಯಾಯ ನಿಮಿತ್ತ ಪೇಜಾವರಶ್ರೀಗಳ ಆಶೀರ್ವಚನಗಳೊಂದಿಗೆ ಇಂದಿಲ್ಲಿ ಭಾನುವಾರ ಸಂಜೆ ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿಯ ಪೇಜಾವರ ಮಠದ ಸಭಾಗೃಹದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಪುರಂದರದಾಸ ಪ್ರಸಿದ್ಧಿಯ ಸಂಗೀತಕಾರ ಪುತ್ತೂರು ನರಸಿಂಹ ನಾಯಕ್ ಹರಿದಾಸ ಭಕ್ತಿಸಂಗೀತ ಲಹರಿ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

 

ಪೇಜಾವರ ಮಠದ ಮುಂಬಯಿ ಶಾಖೆಯ ಸಹಯೋಗದೊಂದಿಗೆ ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ಸಂಸ್ಥಾಪಕ ಎಸ್.ಕೆ ಉರ್ವಾಳ್ ಮತ್ತು ಪ್ರಫುಲ್ಲಾ ಎಸ್. ಉರ್ವಾಳ್ ಹಾಗೂ ಬಿ.ಆರ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಚಂಚಲ ಆರ್.ಶೆಟ್ಟಿ ಪರಿವಾರದ ಪ್ರಾಯೋಜಕತ್ವದಲ್ಲಿ ಮುಕ್ತ ಪ್ರವೇಶದೊಂದಿಗೆ ಆಯೋಜಿಸಲ್ಪಟ್ಟ ಭಕ್ತ್ತಿ ಸÀಂಗೀತ ಕಾರ್ಯಕ್ರಮದಲ್ಲಿ ಸಂಗೀತ ಸಾಧÀನಗಳ ಸಹ ಕಲಾವಿದರುಗಳಾಗಿ ಎಸ್.ಪ್ರಸಾದ್ (ವಾಯೋಲಿನ್) ಮತ್ತು ಕೆ.ರಘುನಾಥ (ತಬಲಾ) ಸಹಕರಿಸಿದ್ದರು.

ನಾವು ನಿಮ್ಮ ಮನಗಳಿಗೆ ಸಂಗೀತದ ಇಂಪುನೀಡಿ ಮುದನೀಡುವುದು ನಿಮಿತ್ತ ಮಾತ್ರ. ಹಾಡುವವರು ಮತ್ತು ಕೇಳುವವರು ಎಲ್ಲವೂ ದೇವರೊಬ್ಬನೇ. ಅವರೇ ನಮ್ಮನ್ನು ಕಲಾಕಾರರಾಗಿ ಹಾಡಿಸುತ್ತಾರೆ. ನಿಮ್ಮನ್ನು ಕಲಾಸಕ್ತರಾಗಿ ಕೇಳಿಸುತ್ತಾರೆ. ಭಗವಂತನ ಪ್ರೇರಣೆಯಿಂದ ಮಾತ್ರ ಇದೆಲ್ಲಾ ಸಾಧ್ಯ. ಅವರ ಆಶಯದಂತೆ ನಾವು ಜೀವನ ಚಕ್ರದಲ್ಲಿ ದÀಕ್ಕಿದ ಅವಕಾಶವನ್ನು ಸಹೃದಯತೆಯಿಂದ ಬಳಸಬೇಕು. ದೊರೆತ ಅವಕಾಶಗಳನ್ನೆಲ್ಲಾ ಬುದ್ಧಿವಂತಿಕೆಯಿಂದ ಪರರೊಂದಿಗೆ ಹಂಚಿಕೊಳ್ಳಬೇಕು. ಅದನ್ನೇ ನಾನು ಕಂಠದಾನವಾಗಿ ಸಿ ತಮ್ಮ ಮನಗಳಿಗೆ ಗಾನಸುಧೆ ಮುಖೇನ ಶ್ರೀಹರಿಯ ಸಂಗೀತವನ್ನೀಡುತ್ತಿದ್ದೇನೆ ಎಂದು ಪುತ್ತೂರು ನರಸಿಂಹ ನಾಯಕ್ ನುಡಿದರು.

ಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಳ್ ಅವರೊನ್ನಳಗೊಂಡು ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅವರು ಶಾಲುಹ್ ಹೊದಿಸಿ, ಸ್ಮರಣಿಕೆ ಪುಪ್ಫಗುಪ್ಚವನ್ನಿತ್ತು ಗೌರವಿಸಿದರು. ಪೇಜಾವರ ಮಠದ ಪ್ರಕಾಶ್ ಆಚಾರ್ಯ ರಾಮಕುಂಜ ಕಲಾಕಾರರನ್ನು ಸತ್ಕರಿಸಿದರು.

ಪೇಜಾವರ ಮಠದ ಪ್ರಧಾನ ವ್ಯವಸ್ಥಾಪಕ ರೆಂಜಾಳ ರಾಮದಾಸ ಉಪಾಧ್ಯಾಯ ಸ್ವಾಗತಿಸಿ ಪ್ರಸ್ತಾವನೆಗೈದÀು ಕಲೆಗೆ ಸಂಭಾವನೆ ನೀಡಿದಷ್ಟೂ ಕಡಿಮೆಯೇ ಆಗುತ್ತದೆ. ಆದರೆ ಭಾವನೆ ಸೂಚಿಸಿ ಗೌರವಿಸುವುದರಿಂದ ಕಲಾಕಾರರಿಗೆ ಪೆÇ್ರೀತ್ಸಹಿಸಿದಂತಾಗುತ್ತದೆ. ಪ್ರತೀಬಾರಿ ನಮ್ಮ ಮಠದಲ್ಲಿ ತನ್ನ ಸಂಗೀತ ಪ್ರಸ್ತುತ ಪಡಿಸಿ ಸಂಗೀತಾಭಿಮಾನಿಗಳ ಮನಗಳಿಗೆ ಮುದನೀಡುವ ನರಸಿಂಹ ನಾಯಕರು ಇನ್ನೂ ನೂರಾರು ಸಂಗೀತ ಕಛೇರಿಗಳನ್ನು ನೀಡುತ್ತಾ ಮನಮನೆಗಳಲ್ಲಿ ಸದಾ ನೆಲೆಯಾಗಲಿ ಎಂದರು.

ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ವಿಜಯಲಕ್ಷ್ಮೀ ಎಸ್.ರಾವ್, ಪಿ.ವಿ ಐತಾಳ್, ಬಿ.ಎಸ್ ಕುರ್ಕಾಲ್, ಪೇಟೆಮನೆ ಪ್ರಕಾಶ್ ಶೆಟ್ಟಿ, ರವಿ ಸುವರ್ಣ ಘಾಟ್ಕೋಪರ್, ಮುರಳೀ ಭಟ್ ಡೊಂಬಿವಿಲಿ, ನಿರಂಜನ ಜೆ.ಗೋಗಟೆ ಸೇರಿದಂತೆ ಅಸಂಖ್ಯಾತ ಸಂಗೀತಾಭಿಮಾನಿಗಳು ಉಪಸ್ಥಿತರಿದ್ದು, ಪ್ರಕಾಶ್ ಆಚಾರ್ಯ ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here