Saturday 20th, April 2024
canara news

ಮಾ.05: ಪುಂಜಾಲಕಟ್ಟೆಯಲ್ಲಿ 9ನೇ ವಾರ್ಷಿಕ ಉಚಿತ ಸಾಮೂಹಿಕ ವಿವಾಹ ಸಮಾರಂಭ

Published On : 28 Feb 2017   |  Reported By : Ronida Mumbai



ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ-2017ಗೆ ಆಯ್ಕೆಯಾದ ಡಾ| ರಾಜಶೇಖರ್ ಕೋಟ್ಯಾನ್

ಮುಂಬಯಿ, ಫೆ.28: ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡು ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಸಾಂಸ್ಕೃತಿಕ ಇತ್ಯಾದಿ ಕ್ಷೇತ್ರಗಳಲ್ಲಿ ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಅಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವರ್ಷಂಪ್ರತಿ ಕೊಡಮಾಡುವ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತ ಮುಂಬಯಿ ಅಲ್ಲಿನ ತುಳು ಕನ್ನಡಿಗ ನಿರ್ಮಾಪಕ, ನಿರ್ದೇಶಕ, ನಟ ಡಾ| ರಾಜಶೇಖರ್ ಆರ್.ಕೋಟ್ಯಾನ್ ಭಾಜನರಾಗಿದ್ದಾರೆ.

          

Rajashekara R.Kotyan                    Sacchidaananada Shetty

          

Tungappa M.Bangera                         Kishore Peraje

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಬಂಟ್ವಾಳ ತಾಲೂಕು ಹಾಗೂ ಜೆಸೀಐ ಮಡಂತ್ಯಾರು ಇವರ ಜಂಟಿ ಆಶ್ರಯದಲ್ಲಿ ಇದೇ ಬರುವ ಮಾ.05ನೇ ಆದಿತ್ಯವಾರ ಬೆಳಿಗ್ಗೆ ಪುಂಜಾಲಕಟ್ಟೆಯ ಅಲ್ಲಿನ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಸಂಸ್ಥೆ ತನ್ನ 33ನೇ ವಾರ್ಷಿಕ ಸಂಭ್ರಮ ಆಚರಿಸಲಿದ್ದು, ಮುಂಬಯಿ ವಿೂರಾ ಭಯಂಧರ್ ದಕ್ಷಿಣ ಭಾರತೀಯ ಬಿಜೆಪಿ ಘಟಕದ ಅಧ್ಯಕ್ಷ ಮುನ್ನಲಾಯಿಗುತ್ತು ಸಚ್ಚೀದಾನಂದ ಶೆಟ್ಟಿ ಅವರ ಸಾರಥ್ಯ ಹಾಗೂ ಮಹಾಪೆÇೀಷಕತ್ವದಲ್ಲಿ 9ನೇ ವಾರ್ಷಿಕ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿದೆ. ಸಮಾರಂಭದಲ್ಲಿ ರಾಷ್ಟ್ರ-ರಾಜ್ಯದ ಮತ್ತು ಸ್ಥಾನೀಯ ರಾಜಕೀಯ ಮುಖಂಡರು, ಗಣ್ಯರನೇಕರು ಆಗಮಿಸಲಿದ್ದು ಸಮಾರಂಭದಲ್ಲಿ ಈ ಬಾರಿ ಐದು ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳಾ ಆಯೋಗದ ಮಾಜಿ ಸದಸ್ಯ ಬುದ್ಧ ಭಾರತರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪ್ರತಿವರ್ಷದಂತೆ ಕೊಡಮಾಡುವ ಈ ಬಾರಿಯ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ-2017ನ್ನು ಡಾ| ರಾಜಶೇಖರ್ ಆರ್.ಕೋಟ್ಯಾನ್ ಮುಂಬಯಿ (ಚಲನ ಚಿತ್ರರಂಗ), ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು (ಯಕ್ಷಗಾನ ಕ್ಷೇತ್ರ), ವಿನಾಯಕ ರಾವ್ ಕನ್ಯಾಡಿ (ಸಮಾಜಸೇವೆ), ರಮೇಶ್ ಬಾಯಾರು (ಶಿಕ್ಷಣ ಕ್ಷೇತ್ರ), ರಮೇಶ್ ಕಲ್ಲಡ್ಕ (ಕಲಾ ಕ್ಷೇತ್ರ) ಹಾಗೂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ-2017ನ್ನು ಕಿಶೋರ್ ಪೆರಾಜೆ (ಪತ್ರಿಕೋದ್ಯಮ), ಸಂಜೀವ ಶೆಟ್ಟಿ ಮುಗೆರೋಡಿ (ಕ್ರೀಡಾ ಕ್ಷೇತ್ರ), ಶೇಖರ ನಾರಾವಿ (ಸಮಾಜ ಸೇವೆ), ಕೆ.ಧರ್ಮಪಾಲ ಪೂಜಾರಿ (ಸರ್ಕಾರಿ ಸೇವೆ), ಕುಮಾರಿ ಶೃತಿ ದಾಸ್ (ಬಹುಮುಖ ಪ್ರತಿಭೆ) ಇವರಿಗೆ, ಮತ್ತು ಅತ್ಯುತ್ತಮ ಯುವ ಸಂಘಟನೆ ಪ್ರಶಸ್ತಿಯನ್ನು ಶ್ರೀ ಶಾರದಾಂಭ ಭಜನಾ ಮಂಡಳಿ ಕುಕ್ಕೇಡಿ-ಬುಳೆಕ್ಕರ ಸಂಸ್ಥೆಗೆ ಪ್ರದಾನಿಸಿ ಗೌರವಿಸಲಾಗುವುದು ಎಂದು ಸ್ವಸ್ತಿಕ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ತಿಳಿಸಿದ್ದಾರೆ.

ಉಭಯ ಕಾರ್ಯಕ್ರಮಗಳ ಯಶಸ್ಸಿಗೆ ನಾಡಿನ ಸಮಸ್ತ ಜನತೆ ಸಹಕರಿಸುವಂತೆ ಸ್ವಸ್ತಿಕ್ ಕ್ಲಬ್‍ನ ಗೌರವಾಧ್ಯಕ್ಷ ಅಬ್ದುಲ್ಲಾ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಹಾಪೆÇೀಷಕ ಸುಂದರ ರಾಜ್ ಹೆಗ್ಡೆ ಮುಂಬಯಿ, ನಾಟಕೋತ್ಸವ ಸಂಚಾಲಕ ಹೆಚ್.ಕೆ.ನಯನಾಡು, ಜೆಸೀಐ ಮಡಂತ್ಯಾರು ಅಧ್ಯಕ್ಷ ರಾಜೇಶ್ ಪಿ.ಪುಂಜಾಲಕಟ್ಟೆ ಈ ಮೂಲಕ ವಿನಂತಿಸಿದ್ದಾರೆ. (ರೋನಿಡಾ ಮುಂಬಯಿ)

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here