Saturday 20th, April 2024
canara news

ಮಲಾಡ್‍ನಲ್ಲಿ ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್‍ನ ಸೂಪರ್ ಸ್ಪೆಶಿಯಲಿಟಿ ಆಸ್ಪತ್ರೆ ಸೇವಾರ್ಪಣೆ

Published On : 28 Feb 2017   |  Reported By : Rons Bantwal


ತುಂಗಾ ಆಸ್ಪತ್ರೆ ಯೋಗಕ್ಷೇಮಾದ ಪ್ರತೀಕದಂತಿದೆ: ಪಲಿಮಾರುಶ್ರೀ
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.28: ಯೋಗಕ್ಷೇಮಾ ಎರಡೂ ಭಗವಂತನ ಸೃಷ್ಠಿಯ ರೂಪಗಳು. ಯೋಗ ಅಂದರೆ ಅಪೂರ್ವವಾಗಿ ಬರುವಂತಹದ್ದು. ಬಂದದ್ದನ್ನು ಉಳಿಸುವುದೇ ಕ್ಷೇಮ ಆಗಿರುತ್ತದೆ. ಮಾನವನಿಗೆ ಕೋಟ್ಯಾಂತರ ಮೌಲ್ಯದ ಸಂಪತ್ತು ಯೋಗವಾಗಿ ಒದಗಿದರೂ ಅದು ಕಳವು ಆದಲ್ಲಿ ಕ್ಷೇಮ ಕ್ಷಿಣಿಸುವುದು. ಯೋಗಕ್ಷೇಮಾಗಳೆಂಬುವುದು ನಾಣ್ಯದ ಎರಡು ಮುಖಗಳಂತೆ. ಶರೀರ ಎಂಬುವುದು ಜೀವಸಂಕುಲಕ್ಕೆ ದೇವರು ಕೊಟ್ಟ ದೊಡ್ಡ ಯೋಗ. ಇದಿದ್ದರೆ ಮಾತ್ರ ಎಲ್ಲಾ ಸಂಪತ್ತು ಫಲಿಸುವುದು. ಶರೀರದ ಸುಸ್ಥಿತಿ ಸರಿಯಾಗಿದ್ದರೆ ನೆಮ್ಮದಿ ಸೌಖ್ಯವಾಗಿರುತ್ತದೆ. ಇವೆಲ್ಲವನ್ನೂ ಊರ್ಜಿತ ಸ್ಥಿತಿಯಲ್ಲಿರಿಸಲು ಕ್ಷೇಮಾಭಿವೃದ್ಧಿ ಸೇವೆಯ ಆಸ್ಪತ್ರೆಗಳ ಅಗತ್ಯ ಮನುಕುಲಕ್ಕಿದೆ. ತುಂಗಾ ಆಸ್ಪತ್ರೆ ಯೋಗಕ್ಷೇಮಾದ ಪ್ರತೀಕದಂತಿದೆ ಎಂದು ಉಡುಪಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಕರೆಯಿತ್ತರು.

ಇಂದಿಲ್ಲಿ ಸೋಮವಾರ ಪೂರ್ವಾಹ್ನ ಮುಂಬಯಿ ಉಪನಗರದ ಮಲಾಡ್ ಪಶ್ಚಿಮದ ಎಸ್.ವಿ ರೋಡ್‍ನ ಗೋರಸ್ವಾಡಿ ಲೇನ್ ಇಲ್ಲಿನ ತುಂಗಾ ಕಟ್ಟಡದಲ್ಲಿ ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ಆಡಳಿತ್ವದಲ್ಲಿ ನೂತನವಾಗಿ ರಚಿಸಲ್ಪಟ್ಟ ಸೂಪರ್ ಮಲ್ಟಿಸ್ಪೆಶಿಯಲಿಟಿ ಹೈಟೆಕ್ ಆಸ್ಪತ್ರೆಯನ್ನು ಸೇವಾರ್ಪಣೆಗೈದು ಪಲಿಮಾರುಶ್ರೀ ಅನುಗ್ರಹಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಬೋರಿವಿಲಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಆಸ್ಪತ್ರೆಯ ನಾಮಫಲಕವನ್ನು ಅನಾವರಣಗೊಳಿಸಿ ನಂತರ ರಿಬ್ಬನ್ ಕತ್ತರಿಸಿ ಆಸ್ಪತ್ರೆ ಲೋಕಾರ್ಪಣೆಗೈದರು. ಗೌರವ ಅತಿಥಿüಗಳಾಗಿದ್ದ ಶಾಸಕರುಗಳಾದ ಯೋಗೇಶ್ ಸಾಗರ್, ಅಸ್ಲಂ ಶೇಖ್, ಪ್ರತಾಪ್ ಸರ್‍ನಾಯ್ಕ್, ಕ್ಷಿತಿಜ್ ಹಿತೇಂದ್ರ ಠಾಕೂರ್, ನಗರ ಸೇವಕರುಗಳಾದ ದಾಕ್ಷ ಪಾಟೇಲ್, ಸೆಜಲ್ ದೇಸಾಯಿ, ಬಿಜೆಪಿ ವೈದ್ಯಕೀಯ ವಿಭಾಗ ಮುಖ್ಯಸ್ಥ ಅಶೋಕ್ ಶ್ಹಾ ಉಪಸ್ಥಿತರಿದ್ದು ವಿವಿಧ ವಿಭಾಗಗಳನ್ನು ಉದ್ಘಾಟಿಸಿ ಶುಭಾರೈಸಿದರು.

ಅವರ್ ಲೇದಿ ಆಫ್ ಲೂರ್ಡ್'ಸ್ ಚರ್ಚ್ ಓರ್ಲೆಮ್ ಇದರ ಪ್ರಧಾನ ಧರ್ಮಗುರು ರೆ| ಫಾ| ಗಿಲ್ಬರ್ಟ್ ಡಿ'ಲಿಮಾ, ಶ್ರೀಕ್ಷೇತ್ರ ಕಟೀಲು ಇದರ ಅನುವಂಶಿಕ ಆರ್ಚಕ ಕಟೀಲು ವೆಂಕಟರಮಣ ಅಸ್ರಣ್ಣ ಉಪಸ್ಥಿತರಿದ್ದು ಆಶೀರ್ವದಿಸಿ ಶುಭಶಂಸನೆಗೈದರು.

ಸಮಾರಂಭದ ಆದಿಯಲ್ಲಿ ಬೆಳಿಗ್ಗೆ ವಿೂರಾರೋಡ್‍ನ ವಿದ್ವಾನ್ ಕೃಷ್ಣರಾಜ ತಂತ್ರಿ ತಮ್ಮ ಪೌರೋಹಿತ್ಯದಲ್ಲಿ ಮಹಾಗಣಾಪತಿ, ಶ್ರೀ ದುರ್ಗಾ ಪರಮೇಶ್ವರಿ ಮಾತೆ, ಕಟೀಲೇಶ್ವರಿ ದೇವಿ, ತಿರುಪತಿ ವೆಂಕಟೇಶ್ವರ, ಸಾಯಿಬಾಬಾ ಅವರಿಗೆ ಪೂಜೆ ಸಲ್ಲಿಸಿ, ಲಕ್ಷ್ಮೀ ಪೂಜೆ, ನವಗ್ರ ಪೂಜೆ ನೆರವೇರಿಸಿ ಮಹಾಗಣಾಪತಿ, ಶ್ರೀ ದುರ್ಗಾ ಪರಮೇಶ್ವರಿ ಮಾತೆ, ಕಟೀಲೇಶ್ವರಿ ದೇವಿ, ತಿರುಪತಿ ವೆಂಕಟೇಶ್ವರ, ಸಾಯಿಬಾಬಾ ಅವರಿಗೆ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿತರಿಸಿ ಹರಸಿದರು.
ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಅದೂ ನನ್ನ ಸ್ವಸಮುದಾಯದ ಬಂಧುಗಳು ರೂಪಿಸಿದ ರುಗ್ಣಾಲಯ ನಮ್ಮೆಲ್ಲರ ಹಿರಿಮೆಯಾಗಿದೆ. ಜನತೆಯ ಆರೋಗ್ಯದೃಷ್ಠಿಯಿಂದ ನಿಜಾರ್ಥದ ಸೇವೆಗೆ ಸ್ಪಂದಿಸಿ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿಕೊಂಡ ಹೆಗ್ಗಳಿಕೆ ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಿದೆ. ಇದೊಂದು ಖಾಸಾಗಿ ಸಂಸ್ಥೆಯಾಗಿದ್ದೂ ಸ್ಥಾನೀಯ ಜನತೆಗೂ ಯುಕ್ತದರದಲ್ಲಿ ಸೇವೆ ಒದಗಿಸಲಿದೆ ಎನ್ನುವುದು ನನ್ನ ಆಶಯ. ವಿಶೇಷವಾಗಿ ಸ್ವಚ್ಛತೆಗೆ ಮಹತ್ವವನ್ನೀಡುತ್ತಿರುವ ಈ ಸಂಸ್ಥೆ ಆರೋಗ್ಯದ ಕಾಳಜಿಗೆ ಸ್ಪಂದಿಸುವ ವೈಖರಿ ಮೆಚ್ಚುಗೆಯದ್ದು ಎಂದು ಸಂಸದ ಗೋಪಾಲ್ ಶೆಟ್ಟಿ ಆಶಯ ತಿಳಿಸಿದರು.

ಸಮಾರಂಭದಲ್ಲಿ ತುಂಗಾ ಮೆಡಿಕಲ್ ಟ್ರಸ್ಟ್‍ನ ಸಂಸ್ಥಾಪಕ ವಿಶ್ವಸ್ಥ ಭೋಜ ಮೋಹನ್ ಶೆಟ್ಟಿ ಹಾಗೂ ವಸಂತಿ ಬಿ.ಶೆಟ್ಟಿ ಬಜ್ಪೆ, ತುಂಗಾ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್‍ನ ಮೆಡಿಕಲ್ ಡೈರೆಕ್ಟರ್ ಡಾ| ಸತೀಶ್ ಬಿ.ಶೆಟ್ಟಿ ಮತ್ತು ಡಾ| ದಿವ್ಯಾ ಎಸ್.ಶೆಟ್ಟಿ, ವಿಶ್ವಸ್ಥ ನಿರ್ದೇಶಕರುಗಳಾದ ಉಮೇಶ್ ಎ.ಶೆಟ್ಟಿ ಮುಂಡ್ಕೂರು ಮತ್ತು ಪೂಜಾ ಯು.ಶೆಟ್ಟಿ, ರಾಜೇಶ್ ಬಿ.ಶೆಟ್ಟಿ ಮತ್ತು ಅರ್ಚನಾ ಆರ್.ಶೆಟ್ಟಿ ಹಾಗೂ ಹರಿಪ್ರಸಾದ್ ಬಿ.ಶೆಟ್ಟಿ ಮತ್ತು ಕಾಂತಿ ಹೆಚ್.ಶೆಟ್ಟಿ ದಂಪತಿಗಳು, ಯಮುನಾ ಎ.ಶೆಟ್ಟಿ, ಡಾ| ಜತಿನ್ ರೈ, ಡಾ| ಸಂತೋಷ್ ಶೆಟ್ಟಿ, ಡಾ| ಚಿಂತನ್ ಆರ್.ಹೆಗ್ಡೆ, ಬಿ.ಆರ್ ಪೂಂಜ, ಯಶೋಧ ಆರ್‍ಪೂಂಜ ಮತ್ತಿತರರು ಉಪಸ್ಥಿತರಿದ್ದು, ಪೂಜಾಧಿಗಳಲ್ಲಿ ಪಾಲ್ಗೊಂಡು ಗಣ್ಯರಿಗೆ ಬರಮಾಡಿದರು.

ಕಾರ್ಯಕ್ರಮದಲ್ಲಿ ಮುನ್ನಾಲಯಿಗುತ್ತು ಸಚ್ಚೀದಾನಂದ ಶೆಟ್ಟಿ, ಜಯ ಸಿ.ಸುವರ್ಣ, ಜಯರಾಮ ಎನ್.ಶೆಟ್ಟಿ, ಲತಾ ಜೆ.ಶೆಟ್ಟಿ, ಐಕಳ ಗುಣಪಾಲ ಶೆಟ್ಟಿ, ಎಲ್.ವಿ ಅವಿೂನ್, ರಾಜೇಶ್ ಭಟ್ ಅದಮಾರು ಮಠ, ಕಲ್ಲಂಜೆ ರಾಧಾಕೃಷ್ಣ ಭಟ್, ಹರೀಶ್ ಎನ್.ಶೆಟ್ಟಿ ಮಲಾಡ್, ಎನ್.ಸಿ ಶೆಟ್ಟಿ, ಸಿಎ| ಶಂಕರ್ ಬಿ.ಶೆಟ್ಟಿ, ಎನ್.ಸಿ ಶೆಟ್ಟಿ, ಉಪ್ಪೂರು ಶೇಖರ್ ಶೆಟ್ಟಿ, ಶಂಕರ ಟಿ.ಶೆಟ್ಟಿ, ಅನಿಲ್ ಸಾಲ್ಯಾನ್, ಗಣೇಶ್ ಶೆಟ್ಟಿ ಬೋರಿವಿಲಿ, ಡಾ| ರಾಯನ್ ಡಿ'ಸೋಜಾ, ಶಿವರಾಮ ಕೋಟ್ಯಾನ್ ಕಲೀನ, ರಮೇಶ್ ಎನ್.ಶೆಟ್ಟಿ, ಕಸ್ಟಮ್ಸ್ ಎಸಿಪಿ ರೋಹಿತ್ ಹೆಗ್ಡೆ, ಸಿಎ| ಸುರೇಂದ್ರ ಶೆಟ್ಟಿ, ವಿಶ್ವನಾಥ ಎಂ.ಸಾಲ್ಯಾನ್ ವಿೂರಾರೋಡ್, ಭಾರತ್ ಬ್ಯಾಂಕ್‍ನ ವಾಸುದೇವ ಎಂ.ಸಾಲ್ಯಾನ್, ಮಹೇಶ್ ಬಿ.ಕೋಟ್ಯಾನ್, ದಯಾನಂದ ಆರ್.ಅವಿೂನ್, ನ್ಯಾ| ಆರ್.ಜಿ ಶೆಟ್ಟಿ, ಪ್ರವೀಣ್ ಬಿ.ಶೆಟ್ಟಿ, ಆಸ್ಪತ್ರೆಯ ಉನ್ನತಾಧಿಕಾರಿಗಳಾದ ಸಂತೋಷ್ ದುರ್ವೆ, ಪ್ರೆಸಿಲ್ಲಾ ಕಾಸ್ತೆಲಿನೋ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರು, ಗಣ್ಯಾಧಿಗಣ್ಯರು ಆಗಮಿಸಿ ಶುಭೇಚ್ಛ ಕೋರಿದರು.
ಗಣೇಶ್ ಎರ್ಮಾಳ್ ಬಳಗವು ಭಕ್ತಿಲಹರಿ ಹಾಗೂ ಅಲ್ತಾಫ್ ಖಾನ್ ತಂಡವು ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here