Thursday 25th, April 2024
canara news

ಮೇ.28: ಮಂಗಳೂರುನಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ 2017

Published On : 01 Mar 2017   |  Reported By : Rons Bantwal


ಯಕ್ಷಗಾನ ಅಳಿದು ಹೋಗುವಂತಿಲ್ಲ: ಕೃಷ್ಣ ಪಾಲೆಮಾರ್

ಮುಂಬಯಿ, ಮಾ.01: ಮಂಗಳೂರುನ ಅಡ್ಯಾರ್‍ನಲ್ಲಿ ಮೇ ತಿಂಗಳಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ನಡೆಯಲಿರುವ ಯಕ್ಷಧ್ರುವ ಪಟ್ಲ ಸಂಭ್ರಮ-2017ರ ಕರೆಯೋಲೆ ಪತ್ರವನ್ನು ಇಂದಿಲ್ಲಿ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಬಿಡುಗಡೆ ಮಾಡಿದರು.

ನಗರದ ಖಾಸಗಿ ಹೊಟೇಲ್‍ನಲ್ಲಿ ಕಳೆದ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರೆಯೋಲೆ ಬಿಡುಗಡೆ ಗೊಳಿಸಿ ಮಾತನಾಡಿದ ಪಾಲೆಮಾರ್, ಯಕ್ಷಗಾನ ಅಳಿದು ಹೋಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿರುವ ಸಮಯದಲ್ಲೇ ಯಕ್ಷಗಾನ ಕ್ಷೇತ್ರವನ್ನು ಉತ್ತೇಜಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ಅಭಿನಂದನಾ ರ್ಹ ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಂಸ್ಥೆಯು 15 ತಿಂಗಳುಗಳಲ್ಲಿ ಸುಮಾರು 50 ಲಕ್ಷ ರೂಪಾಯಿ ಗಳಿಗೂ ಮೀರಿದ ಮೊತ್ತವನ್ನು ಸೇವಾ ಯೋಜನೆಗಳಿಗೆ ವಿನಿಯೋಗಿಸಿದ್ದು, ಕಲಾಸಕ್ತರ, ಕಲಾಪೋಷಕರ ಪ್ರಶಂಸೆ ಗೊಳಗಾಗಿ ಮುಂದಿನ ದಿನಗಳಲ್ಲಿ ಅಶಕ್ತ, ಹವ್ಯಾಸಿ ಕಲಾವಿದರಿಗೂ ಕೂಡ ಆಥಿರ್üಕ ಸಹಾಯದಂತಹ ಸೇವಾಯೋಜನೆ ಗಳನ್ನು ವಿಸ್ತರಿಸುವ ಸಂಕಲ್ಪವನ್ನು ಮಾಡಿದೆ ಎಂದರು. ಯಕ್ಷ ಧ್ರುವ ಪಟ್ಲ ಸಂಭ್ರಮ-2017 ಕಾರ್ಯಕ್ರಮವು 28ರಂದು ಮಂಗಳೂರು ಹೊರ ವಲಯದ ಅಡ್ಯಾರ್ ಅಲ್ಲಿನ ಸಹ್ಯಾದ್ರಿ ಕಾಲೇಜುನ ಆವರಣದ ಗಾರ್ಡನ್‍ನಲ್ಲಿ ನಡೆಯಲಿದೆ. ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಈ ಪಟ್ಲ ಸಂಭ್ರಮದಲ್ಲಿ ಯಕ್ಷಗಾನ ಪೂರ್ವ ರಂಗ, ಯಕ್ಷಗಾನ ಕಲಾವಿದರು ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಟ್ರಸ್ಟಿನ ಸದಸ್ಯರಿಂದ ಹಾಗೂ ಯಕ್ಷಾಭಿಮಾನಿ ಗಳಿಂದ ರಕ್ತದಾನ ಶಿಬಿರ ನಡೆಯಲಿದೆ. ಏಳು ಭಾಗವತರ ಅಮೋಘ ಭಾಗವತಿಕೆ-ಯಕ್ಷಸಪ್ತಸ್ವರ, ಮಹಿಳಾ ಕಲಾವಿದರಿಂದ ಯಕ್ಷಗಾನ ವೈಭವ, ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ತುಳು ತಾಳಮದ್ದಳೆ, ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರಿಗೆ ರೂಪಾಯಿ 1 ಲಕ್ಷ ನಗದು ಮೊತ್ತದೊಂದಿಗೆ ಯಕ್ಷ ಧ್ರುವ ಪಟ್ಲ ಪ್ರಶಸ್ತಿ 2017ನೇ ಪ್ರಧಾನ, ಯಕ್ಷಗಾನದ ಕಲಾವಿದರ ಮಕ್ಕಳಿಗೆ ವಿದ್ಯಾಥಿರ್ü ಪ್ರತಿಭಾ ಪುರಸ್ಕಾರ, ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ದ್ವೀತಿಯ ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಮೇಲ್ಪಟ್ಟು ಗರಿಷ್ಠ ಅಂಕಗಳಿಸಿದ ಕಲಾವಿದರ ಮಕ್ಕಳಿಗೆ ಬಂಗಾರದ ಪದಕ, 15 ಜನ ಅಶಕ್ತ ಕಲಾವಿದರಿಗೆ ತಲಾ 50 ಸಾವಿರ ಗೌರವ ಧನ ನೀಡಲಾಗುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸವಣೂರು ಸೀತಾರಾಮ ರೈ, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸಂತೋಷ್ ಕುಮಾರ್ ರೈ, ಪೂರ್ಣಿಮಾ ಯತೀಶ್ ರೈ, ಉಪಾಧ್ಯಕ್ಷ ಡಾ| ಕೆ.ಮನು, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ| ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ್ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಜತೆ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರೊನಿಡಾ ಮುಂಬಯಿ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here