Wednesday 24th, April 2024
canara news

ಎಂಎಲ್‍ಎ ಅಭ್ಯಥಿ೯ಗೆ ಸ್ಪರ್ಧಿಸಲು ಐಕಳ ಹರೀಶ್ ಶೆಟ್ಟಿಗೆ ಪಕ್ಷಗಳಿಂದ ಬುಲಾವ್

Published On : 03 Mar 2017   |  Reported By : Rons Bantwal


ಮುಂಬಯಿ ನಾಯಕರಿಗೆ ಕರ್ನಾಟಕ ಶಾಸಕತ್ವ ಸ್ಥಾನಮಾನ ಅತ್ಯವಶ್ಯ

ಮುಂಬಯಿ, ಮಾ.03: ಮಹಾನಗರ ಮುಂಬಯಿಯಲ್ಲಿನ ಸಮಾಜ ಸೇವಕ, 2011ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚತುರ ಸಂಘಟಕ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯದ ಮುಂಬರುವ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷಗಳ ಮುಖಸ್ಥರ ಬುಲಾವ್ ಬಂದಿರುವುದಾಗಿ ತಿಳಿದು ಬಂದಿದೆ.

2018ರ ಮಧ್ಯಾಂತರದಲ್ಲಿ ಕರ್ನಾಟಕ ರಾಜ್ಯ ಸರಕಾರಕ್ಕಾಗಿನ ಚುನಾವಣೆಯನ್ನು ಎದುರಿಸಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರು ಇದೀಗಲೇ ಸಜ್ಜಾಗಿದ್ದು, ಪಕ್ಷಗಳ ನಾಯಕರು ಪ್ರಭಾವೀ ಜನಪ್ರತಿನಿಧಿಗಳನ್ನು ತಮ್ಮತಮ್ಮ ಪಕ್ಷಗಳತ್ತ ಸೆಳೆಯಲು, ಕರೆತರಲು ಕಸರತ್ತು ನಡೆಸುತ್ತಾ ಆಪರೇಶನ್ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದಂತೆಯೇ ರಾಜಕಾರಣಿಗಳು, ಸ್ಥಾನೀಯ ಸಮಾಜ ಸೇವಕರನ್ನು ಪಕ್ಷಕ್ಕೆ ಸೇರಿಸುವ ಷಡ್ಯಾಂತ್ರಗಳು ದಿನೇದಿನೇ ಹೆಚ್ಚಾಗುತ್ತಿದೆ. ಅದರಂತೆಯೇ ಮುಂಬಯಿಯಲ್ಲಿನ ಯುವ ಸಂಘಟಕ, ಪ್ರಭಾವಿ ನೇತಾರ ಐಕಳ ಹರೀಶ್ ಶೆಟ್ಟಿ ಅವರನ್ನು ತವರೂರ ಮೂಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷಗಳ ಮುಖಂಡರು ಸಂಪರ್ಕಿಸಿರುವುದಾಗಿ ತಿಳಿದು ಬಂದಿದೆ.

ಬಂಟರ ಸಂಘದ ಮುಖ್ಯಸ್ಥರಾಗಿದ್ದು, ಎಲ್ಲರಿಗೂ ಪೆÇ್ರೀತ್ಸಾಹಕರಾಗಿ ಜನಸಾಮಾನ್ಯರಲ್ಲಿ ತೋರಿದ ಪ್ರೀತಿ ವಿಶ್ವಾಸಗ ಳೇ ಸೇವೆಯನ್ನೇ ಅಸ್ತ್ರವಾಗಿಸಿ ಸಾಧಿಸಿದ ಸಾಧನೆಗಳೊಂದಿಗೆ ಸಾಮಾಜಿಕ ವಲಯದ ಜನಮನ ಮೆಚ್ಚುಗೆಯ ಧೀಮಂತ ಸಮಾಜ ಸೇವಕ ಎಣಿಸುತ್ತಾ ಕೇವಲ ಬಂಟ ಸಮುದಾಯ ಎಲ್ಲಾ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಜನಾನುರೆಣಿಸಿದ ಐಕಳ ಹರೀಶ್ ಸಾಮಾಜಿಕ ವಲಯದ ಜನಪ್ರಿಯ ಸಂಘಟಕರಾ ಗಿ ಜನಮನ ಮೆಚ್ಚುಗೆಯ ಸಮಾಜ ಸೇವಕ ಎಣಿಸಿ ಸೇವಾ ಅಭಿಮಾನ ಪುರಸ್ಕೃತರಾದ ಐಕಳ ಮಹಾನಗರದಲ್ಲಿನ ಅಪಾರ ಹಿತೈಷಿ ಅಭಿಮಾನಿ ಬಳಗದಿಂದ ಸನ್ಮಾನಕ್ಕೆ ಪಾತ್ರರಾದವರು. ಯುವ ಶಕ್ತಿಯ ವರ್ಚಸ್ಸನ್ನು ಸಾಧನಾಶೀಲರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿ ಸಾಹಸ, ಶ್ರದ್ಧೆಯಿಂದ ಬದುಕನ್ನು ಸಾಗಿಸಿ ತಮ್ಮ ಅಸಾಧಾರಣ ಸಾಮರ್ಥ್ಯಯುಳ್ಳ ಸಾಧನೆ ಸೇವೆಯಿಂದ ತಮಗೆ ಅದೆಷ್ಟೂ ಪುರಸ್ಕಾರಗಳು ಮುಡಿಗೇರಿಸಿ ಯುವ ಪೀಳಿಗೆಗೂ ಆದರನೀಯ, ಪೋತ್ಸಾಹದಾಯಕ ಆಗಿರುವ ಐಕಳ ಹರೀಶ್ ಶಾಸಕತ್ವದ ಸ್ಪರ್ಧೆ ನಮಗೆಲ್ಲರಿಗೂ ಅಭಿಮಾನ ತಂದಿದೆ ಎಂದು ಅವರ ನಿಕಟವರ್ತಿ ಓರ್ವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡದ ಅಭ್ಯುದಯಕ್ಕೆ ಮುಂಬಯಿಯಲ್ಲಿ ನೆಲೆಯಾದ ತುಳುಕನ್ನಡಿಗರ ಕೊಡುಗೆ ಗಮನೀಯವಾದದ್ದು. ಧಾರ್ಮಿಕ, ಶೈಕ್ಷಣಿಕ, ಆಥಿ೯ಕ, ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲಾ ರಂಗದ ಬೆಳವಣಿಗೆಗೆ ಮುಂಬಯಿಗರ ಕೊಡುಗೆವಿನಃ ಏನೂ ಸಾಧಿಸಲಾಗಿರುವುದು ನೂರುಶತ ಸತ್ಯದ ವಿಚಾರ. ಹೊರನಾಡ ಕರ್ಮಭೂಮಿ ಬೃಹನ್ಮುಂಬಯಿಯಲ್ಲಿ ಶ್ರೇಷ್ಠ ಸಮಾಜ ಸೇವಕರಾಗಿದ್ದು, ದೇಶವಿದೇಶವನ್ನೇ ಪ್ರತಿನಿಧಿಸಿದ ಅಪ್ರತಿಮ ಸಾಧಕರಾಗಿ, ಸದಾ ಜನಪರ ಕಾಳಜಿಯುಳ್ಳವರಾಗಿದ್ದು ಅಪ್ರತಿಮ ಪ್ರತಿಭೆಯಿಂದ ಶ್ರೇಷ್ಠ ಸಮಾಜ ಸೇವಕ ಸಂಘಟಕರಾಗಿ ಶ್ರಮಿಸಿ ಸಾಮಾಜಿಕ ಕ್ಷೇತ್ರಕ್ಕೆ ಜೀವನವನ್ನೇ ಮುಡುಪಾಗಿರಿಸಿದ ಐಕಳ ಹರೀಶ್ ಅವರು ಇಂತಹ ಸ್ಥಾನಮಾನ ಅಲಂಕರಿಸಲು ಯೋಗ್ಯವ್ಯಕ್ತಿ ಆಗಿದ್ದಾರೆ. ಮುಂಬಯಿಯಲ್ಲಿನ ಸಮಾಜ ಸೇವಕ, ಉದ್ಯಮಿ ಡಾ| ನಾರಾಯಣ ಆರ್.ಗೌಡ ಅವರು ಕೆ.ಆರ್ ಪೇಟೆ ಶಾಸಕರಾಗಿದ್ದು ಇದೀಗ ಐಕಳ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದು ಸ್ವತಂತ್ರ್ಯ ಅಭ್ಯಥಿ೯ಯಾಗಿ ಸ್ಪರ್ಧಿಸಿದರೂ ಜಯಗಳಿಸುವುದು ಖಚಿತ ಎಂದೂ ಅವರ ನಿಕಟವರ್ತಿಯೋರ್ವರು ತಿಳಿಸಿದ್ದಾರೆ.

ಮುಂದಿನ ಸರಕಾರವನ್ನು ನಾವೇ ರಚಿಸುವುದಾಗಿ ಭರವಸೆಯಲ್ಲಿರುವ ಭಾರತೀಯ ಜನತಾ ಪಕ್ಷ 1962ರಲ್ಲಿ ಸ್ಥಾಪಿತ ಮೂಡಬಿದ್ರೆ ಕ್ಷೇತ್ರ ಸದ್ಯ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ 1994ರಿಂದ ಸತತ ಐದು ಬಾರಿಯೂ ಕಾಂಗ್ರೇಸ್ (ಐ) ಪಕ್ಷವು ಅಧಿಕಾರವನ್ನು ಧಕ್ಕಿಸಿ ಕೊಂಡಿರುವುದನ್ನು ಸೂಕ್ಷ್ಮವಾಗಿ ಪರಿಗಣಿಸಿದ್ದು 1994ರ ಚುನಾವಣೆಯಲ್ಲಿ ಬರೇ 2013ರ ಚುನಾವಣೆಯಲ್ಲಿ ಬಿಜೆಪಿ 4550 ಮತಗಳಿಂದ ಪರಾಭವ ಗೊಂಡಿದ್ದನ್ನು ಗಮನಿಸಿ ಈ ಬಾರಿ ಈ ಕ್ಷೇತ್ರವನ್ನು ಗೆದ್ದೇ ಸಿದ್ಧ ಎನ್ನುವಂತೆ ಸ್ಥಾನೀಯ ಪ್ರಭಾವೀ ನಾಯಕರ ಹುಡುಕಾಟದಲ್ಲಿದೆ ಎನ್ನಲಾಗಿದ್ದು ಬಲ್ಲ ಮೂಲಗಳ ಪ್ರಕಾರ ಐಕಳ ಹರೀಶ್ ಅವರನ್ನು ಬಿಜೆಪಿ ಪಕ್ಷದ ಮುಖಂಡರು ಆಹ್ವಾನಿಸಿದ್ದು ಈ ಬಗ್ಗೆ ಕ್ಷೇತ್ರದಾದ್ಯಂತ ಕುತೂಹಲ ಮೂಡಿದೆ ಎನ್ನಲಾಗಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here