Saturday 20th, April 2024
canara news

ಸಾಹಿತ್ಯದ ಮೂಲ ಆಶಯ ಕಾಲಕಾಲಕ್ಕೆ ಎಚ್ಚರಿಕೆಯನ್ನುಂಟು ಮಾಡುವುದು- ಡಾ| ವಿಠ್ಠಲರಾವ್ ಗಾಯಕ್ವಾಡ್

Published On : 03 Mar 2017   |  Reported By : Ronida Mumbai


ಮುಂಬಯಿ, ಮಾ.03: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಕಳೆದ ಬುಧವಾರ ಸಾಹಿತ್ಯ ಸಂವಾದ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಭಾಷಾಂತಕಾರರಾದ ಡಾ| ವಿಠ್ಠಲರಾವ್ ಗಾಯಕ್ವಾಡ್ ಅವರ `ಕನ್ನಡ ಸಾಹಿತ್ಯ ಮತ್ತು ಭಾಷಾಂತರ ಹಾಗೂ ಕನ್ನಡದ ದಲಿತ ಸಾಹಿತ್ಯ' ಕುರಿತು ಬಹಳ ಪೂರ್ಣವಾದ ಉಪನ್ಯಾಸ ನೀಡಿದರು. ``ನಮ್ಮ ಆಂತರಿಕ ಭಾವನೆಗಳ, ತುಮುಲಗಳ ಒತ್ತಡದ ಕಾರಣದಿಂದ ಸಾಹಿತ್ಯದ ರಚನೆಯಾಗುತ್ತದೆ.

ಅದರಲ್ಲಿ ಮುಖ್ಯವಾಗಿ ಆದರ್ಶಗಳ ವಾಸ್ತವಗಳ ಒಟ್ಟು ಸ್ವರೂಪವೇ ಸಾಹಿತ್ಯ ಆಗಿರುತ್ತೆ. ಒಂದು ರೀತಿಯಲ್ಲಿ ಸಾಹಿತ್ಯದ ಅಧ್ಯಯನವೆಂದರೆ ಸೂಕ್ಷ್ಮ ಸಂವೇದನೆಗಳ ಹಂಚಿಕೆ ಎಂದು ವಿಠ್ಠಲರಾವ್ ಗಾಯಕ್ವಾಡ್ ಅವರು ಕನ್ನಡ ಸಾಹಿತ್ಯ ಮತ್ತು ಭಾಷಾಂತರ ವಿಷಯದ ಸಂದರ್ಭದಲ್ಲಿ ನುಡಿದರು. ಮತ್ತೆ ಮುಂದೆ ಅವರು ದಲಿತ ಸಾಹಿತ್ಯ ಕನ್ನಡದಲ್ಲಿ ಹೇಗೆ ಹುಟ್ಟಿಕೊಂಡಿತು ಅದರ ಮೂಲ ಪ್ರೇರಣೆಯಾವು. ದಲಿತ ಚಳುವಳಿಯ ಆಗುಹೋಗುಗಳ ಬಗ್ಗೆ ಸಂಕ್ಷಿಪ್ತವಾಗಿ ಒಂದು ವಿಡಂಗಮ ನೋಟವನ್ನು ಸಾಹಿತ್ಯಸ್ತಕರ ಮುಂದೆ ಮಂಡಿಸಿದರು. ಸುಮಾರು 60-70ರ ದಶಕದಲ್ಲಿ ಕನ್ನಡದಲ್ಲಿ ದಲಿತ ಸಾಹಿತ್ಯ ಬೆಳಕಿಗೆ ಬಂದದ್ದು, ಕನ್ನಡ ದಲಿತ ಸಾಹಿತ್ಯವು ಮರಾಠಿ ದಲಿತ ಸಾಹಿತ್ಯದಿಂದ ಪ್ರಭಾವಿತಗೊಂಡಿದೆ. ಡಾ| ಬಾಬು ಸಾಹೇಬ ಅಂಬೇಡ್ಕರವರ ಚಿಂತನೆಗಳ ಮೂಲಕ ದಲಿತ ಸಾಹಿತ್ಯ ಮೂಡಿ ಬಂದಿದೆ.

ಅಂಬೇಡಕರು ಬರಹಗಳನ್ನು ಪ್ರಕಟಿಸಿದ ನಂತರವೇ ಇತರ ದಲಿತ ಬರಹಗಾರರು ಲೇಖನಿಯನ್ನು ಎತ್ತಿಕೊಂಡರು ಆ ಮೂಲಕ ಕನ್ನಡದಲ್ಲಿ ದಲಿತ ಸಂಘಟನೆಗಳ ಹೋರಾಟಗಳು ನಡೆದವು. ಆನೇಕ ದಲಿತ ಯುವ ಬರಹಗಾರರು ದಲಿತ ಸಂವೇದನೆಯನ್ನು ಸಾಹಿತ್ಯದಲ್ಲಿ ತಂದರು. ದಲಿತ ಸಾಹಿತ್ಯವು ಉದ್ದಿಮೆ, ಅಲಂಕಾರಗಳು ಮೊಹರತೆಯನ್ನು ಓದುಗರಿಗೆ ತೋರಿಸುವದಿಲ್ಲ ಅಲ್ಲಿ ವಾಸ್ತವಿಕತೆಯ ಕಟು ಸತ್ಯವು ದಲಿತ ಸಾಹಿತ್ಯದ ಮೂಲಕ ಓದುಗರಿಗೆ ಬೇರೆ ಲೋಕವನ್ನೇ ತೆರೆದಿಡುವುದು. ಬಿ.ಕೃಷ್ಣಪ್ಪ ಹಾಗೂ ಇತರ ಗಣ್ಯರು ದಲಿತ ಸಾಹಿತ್ಯ ಸಂಘಟನೆ ಹೋರಾಟದ ಸಂದರ್ಭದಲ್ಲಿ ಮೂಂಚೂಣಿಯಲ್ಲಿದ್ದÀರು''ಎಂದರು

ದೇವನೂರ ಮಹಾದೇವ ಬಂಗೇರ, ರಾಮಚಂದ್ರಪ್ಪ ಚೆನ್ನಣ್ಣ ವಾಲಿಕರ, ಸಿದ್ಧರಮಯ್ಯ, ಶಿವರುದ್ದ ಕಲ್ಲೋಳಿಕರ, ಮೊದಲಾದ ಲೇಖಕರು ಕನ್ನಡದಲ್ಲಿ ದಲಿತ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಒಟ್ಟು ದಲಿತ ಸಾಹಿತ್ಯದ ಆಶಯ ಸಮಾನತೆ, ಸ್ವಾತಂತ್ರ್ಯ ಬಾದೃತ್ವ (ಸಹೋದರತೆ) ವಚನ ಸಾಹಿತ್ಯದ ನಂತರವೇ ದಲಿತ ಸಾಹಿತ್ಯದಲ್ಲಿ ಜೀವನಪರ ಕಳಪೆ ಪ್ರಕಟಗೊಂಡಿತು. ಮಾನವೀಯತೆಯ ದಲಿತ ಸಾಹಿತ್ಯದ ಮುಖ್ಯ ಕಾಳಜಿ ಎಂದು ಬಹಳ ಮಾರ್ಮಿಕವಾಗಿ ವಿಠ್ಠಲರಾವ ಗಾಯಕ್ವಾಡ್ ಅವರು ಉಪನ್ಯಾಸದಲ್ಲಿ ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಾಸ್ತವಿಕ ನುಡಿಗಳನ್ನು ಆಡಿದರು. ವಿದ್ಯುಷಿ ಶಾಮಲಾ ಪ್ರಕಾಶ ಅವರು ದಾಸರ ಪದವನ್ನು ಕಾರ್ಯಕ್ರಮದ ಕೊನೆಗೆ ಹಾಡಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮದ ನಿರೂಪಿಸಿ ವಂದನಾರ್ಪಣೆ ಗೈದರು. ಈ ಕಾರ್ಯಕ್ರಮಕ್ಕೆ ಪಾಲ್ಗೊಂಡವರು ಅನೀತ್ ಶೆಟ್ಟಿ, ಎಸ್ ನಳಿನಾ ಪ್ರಸಾದ್, ಕುಮುದಾ ಕೆ. ಆಳ್ವ, ಗಣಪರಿ ಮೊಗವೀರ, ಸುದೀಪ ದೇವಾಡಿಗ, ಪರಸಪ್ನ ದುರ್ಗಪ ಕೋಟಿಯವರ್, ಚಂದ್ರಾ ಮುತಾಲಿಕ, ಸುರೇಖಾ ದೇವಾಡಿಗ, ಶಾಮಲಾ ಪ್ರಕಾಶ, ಶೀಲಾ, ಎಚ್. ಆರ್. ರಮೇಶ ಸುವರ್ಣ, ದಿನಕರ ಚಂದನ ಮತ್ತಿತರರು ಉಪಸ್ಥಿತರಿದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here