Thursday 25th, April 2024
canara news

ಕವಯತ್ರಿ ಅನಿತಾ ಪೂಜಾರಿ ಕೃತಿಗಳ ಲೋಕಾರ್ಪಣೆ ಮತ್ತು ಅಭಿನಂದನೆ

Published On : 04 Mar 2017   |  Reported By : Rons Bantwal


ಓದು ಮತ್ತು ಬರವಣಿಗೆಗಳತ್ತ ನಮ್ಮನ್ನು ನಾವು ಹೆಚ್ಚು ತೊಡಗಿಸಿ ಕೊಳ್ಳಬೇಕಾಗಿದೆ : ಗಣೇಶ್ ಅಮೀನ್ ಸಂಕಮಾರ್

ಕುಳಾಯಿ ಮಾ.03: ಈಗೀಗ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ ಹಾಗೆಯೇ ಓದುವವರೂ ಇಲ್ಲ. ಮೊಬೈಲ್‍ನಲ್ಲಿಯೇ ತಾಸುಗಟ್ಟಲೆ ಸಮಯ ವ್ಯರ್ಥ ಮಾಡುವ ಇಂದಿನ ಕಾಲದಲ್ಲಿ, ಮುಂಬಾಯಿಯಲ್ಲಿದ್ದುಕೊಂಡು ಅನಿತಾ ಪೂಜಾರಿ ತಾಕೊಡೆಯವರು ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ರೀತಿಯ ಸಾಹಿತ್ಯ ಕೃಷಿಗಳು ಎಲ್ಲೆಡೆ ನಡೆಯಬೇಕಾಗಿದೆ. ಬರೀ ಕಟ್ಟಡ ಕಟ್ಟಿದರೆ ಸಾಲದು ಸಾಮಾಜಿಕರು ಸಂಘಟಿತರಾಗಬೇಕು ಸಮಾಜಪರ ಕಾರ್ಯಗಳ ಜೊತೆ ಯುವ ಪ್ರತಿಭೆಗಳಿಗೆ ಪೆÇ್ರೀತ್ಸಾಹ ನೀಡುವ ಕಾರ್ಯಗಳು ಇನ್ನಷ್ಟು ನಡೆಯಬೇಕು. ಈ ವೇದಿಕೆಯಲ್ಲಿ ಎರಡು ಕೃತಿಗಳು ಲೋಕಾರ್ಪಣೆಗೊಂಡಿರುವುದು ನಿಜವಾಗಿಯೂ ಖುಷಿ ನೀಡಿದೆ. ಅನಿತಾರವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸುವಂತಾಗಲಿ ಎಂದು ಪ್ರಖರ ವಾಗ್ಮಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ಉಪನ್ಯಾಸಕ ಜಾನಪದ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ನುಡಿದರು.

ಮಂಗಳೂರು ಕುಳಾಯಿ ಅಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಇವರ 34ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಮುಂಬಯಿ ಕವಯತ್ರಿ ಅನಿತಾ ಪಿ.ಪೂಜಾರಿ ತಾಕೊಡೆ ಅವರ ಶ್ರೀಮತಿ ಸುಶೀಲಾ ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ಪುರಸ್ಕೃತÀ ಕವನ ಸಂಕಲನ `ಅಂತರಂಗದ ಮೃದಂಗ'ವನ್ನು, ಶೈಕ್ಷಣಿಕ ಹರಿಕಾರ, ಕುಲಾಯಿ ಬಿಲ್ಲವ ಸಂಘದ ಸ್ಥಾಪಕರಲ್ಲೋರ್ವ ಸಾಧು ಪೂಜಾರಿ, ಹಾಗೂ ತುಳು ಚೊಚ್ಚಲ ಕವನ ಸಂಕಲನ `ಮರಿಯಲದ ಮದಿಮಾಲ್' ಕೃತಿಯನ್ನು ಗಣೇಶ್ ಸಂಕಮಾರ್ ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ಸಭಾಧ್ಯಕ್ಷ ಎಂ.ಟಿ ಸಾಲ್ಯಾನ್, ಮುಖ್ಯ ಅತಿಥಿüಗಳಾದ ರಾಘವ ಸನಿಲ್ ಚೇಳ್ಯಾರು, ಜಗದೀಶ್ ಎ.ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಅನಿತಾ ತಾಕೊಡೆ ಅವರ ಈ ತನಕದ ಸಾಹಿತ್ಯ ಸಾಧನೆಯನ್ನು ಗಮನಿಸಿ ಅವರನ್ನು ಸೇವಾ ಸಂಘದ ವತಿಯಿಂದ ಗಣ್ಯರಿಂದ ಹಾಗೂ ಹೆತ್ತವರ ಉಪಸ್ಥಿತಿಯಲ್ಲಿ ಅಭಿನಂದಿಸಲಾಗಿದ್ದು, ಬಳಿಕ ಅನಿತಾ ಪೂಜಾರಿ ಕಾವ್ಯ ಮಾಧ್ಯಮವು ತನ್ನಲ್ಲಿ ಜೀವಚೈತನ್ಯವನ್ನು ಉಕ್ಕಿಸಿ ಆವರಿಸಿಕೊಂಡ ಬಗೆ ವಿವರಿಸಿ ತನ್ನನ್ನು ಪೆÇ್ರೀತ್ಸಾಹಿ -ಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here