Friday 29th, March 2024
canara news

ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಪುರಸ್ಕಾರ

Published On : 05 Mar 2017   |  Reported By : Rons Bantwal


ಸತತ 6ನೇ ಬಾರಿ ಭಾರತ್ ಬ್ಯಾಂಕ್ `ಸರ್ವೋತ್ಕೃಷ್ಟ ಬ್ಯಾಂಕ್' ಪುರಸ್ಕಾರಕ್ಕೆ ಆಯ್ಕೆ

ಮುಂಬಯಿ, ಮಾ.05: ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ವಾರ್ಷಿಕವಾಗಿ ಪ್ರದಾನಿಸುವ `ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ-2016' ಫಲಿತಾಂಶ ಪ್ರಕಟಿಸಿದ್ದು, ಮತ್ತೆ ಈ ಬಾರಿಯೂ ತುಳು ಕನ್ನಡಿಗರ ಸಂಚಾಲಕತ್ವದ ಪ್ರತಿಷ್ಠಿತ ಆಥಿರ್üಕ ಸಂಸ್ಥೆ ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಎರಡು ಪುರಸ್ಕಾರಕ್ಕೆ ಭಾಜನವಾಗಿದೆ ಎಂದು ಫೆಡರೇಶನ್‍ನ ಅಧ್ಯಕ್ಷ ವಿದ್ಯಾಧರ್ ಅನಾಸ್ಕರ್ ಪ್ರಕಟಿಸಿದ್ದಾರೆ.

ಗುಜರಾತ್, ಕರ್ನಾಟಕ ರಾಜ್ಯದ ವಿವಿದೆಡೆ ಹಾಗೂ ಮಹಾರಾಷ್ಟ್ರ ರಾಜ್ಯದ ಬೃಹನ್ಮುಂಬಯಿ ಮತ್ತು ಉಪನಗರಗಳದಾದ್ಯಂತ ಸದ್ಯ ಶತ ಶಾಖೆಗಳೊಂದಿಗೆ ಭಾರತ್ ಬ್ಯಾಂಕ್ ಸೇವೆ ನಿರ್ವಾಹಿಸುತ್ತಿದ್ದು, 2015-16 ಕ್ಯಾಲೆಂಡರ್ ವರ್ಷದ ವಾರ್ಷಿಕ ವ್ಯವಹಾರದಂತೆ ರೂಪಾಯಿ3,000 ಕೋಟಿ ಮೊತ್ತಕ್ಕಿಂತ ಅಧಿಕ ವ್ಯವಹಾರಕ್ಕಾಗಿ `ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ-2016' ಮತ್ತು ಇದೇ ಮೊದಲ ಬಾರಿ ಐಟಿ (ವೃತ್ತಾಂತ ತಂತ್ರಜ್ಞಾನ) ವಿಭಾಗದ ಪುರಸ್ಕಾರಕ್ಕೂ ಭಾರತ್ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸುತ್ತೋಲೆಯಲ್ಲಿ ಫೆಡರೇಶನ್‍ನ ಸಿಎಒ ಸಯಾಲಿ ಎಸ್.ಭೋಯಿರ್ ತಿಳಿಸಿದ್ದಾರೆ.

ಗತ ಸಾಲಿನಲ್ಲಿ ಒಟ್ಟು 9,117.71 ಕೋಟಿ ವ್ಯವಹಾರ ನಡೆಸಿದ್ದು ಸಾಲ ಮತ್ತು ಮುಂಗಡ 6,033.68 ಕೋಟಿ, ನಿಬಿಡ ಆದಾಯ1,092.86 ಕೋಟಿ, ನಿವ್ವಳ ಲಾಭ ರೂಪಾಯಿ 117.48 ಕೋಟಿ, ಕಾರ್ಯಮಾನ ಬಂಡವಾಳ ರೂಪಾಯಿ 10,479.20 ಕೋಟಿ ವ್ಯವಹಾರಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು ಗ್ರಾಹಕರಿಗೆ ವಿಸಾ ಇಂಟರ್‍ನ್ಯಾಶನಲ್ ಡೆಬಿಟ್ ಕಾರ್ಡ್ ಸೇವೆಯನ್ನೊದಗಿಸಿ ಗ್ರಾಹಕರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಿಸಲು ಅವಕಾಶ ಒದಗಿಸಿದ ಭಾರತ್ ಬ್ಯಾಂಕ್‍ನ ಉತ್ಕೃಷ್ಟ ಸೇವೆಗಳ ಮೌಲ್ಯ ಮಾಪನಗಳನ್ನು ನಡೆಸಿದ ಫೆಡರೇಶನ್ ಭಾರತ್ ಬ್ಯಾಂಕ್‍ನ ಒಟ್ಟು ಕಾರ್ಯ ನಿರ್ವಹಣಾ ವ್ಯವಸ್ಥೆಯನ್ನು ಪರಿಗಣಿಸಿ ಈ ಪುರಸ್ಕಾರವನ್ನು ಪ್ರಕಟಿಸಿದೆ ಎಂದು ಫೆಡರೇಶನ್‍ನ ವಕ್ತಾರರು ತಿಳಿಸಿದ್ದಾರೆ.

ಬ್ಯಾಂಕ್'ಸ್ ಫೆಡರೇಶನ್‍ನಿಂದ ಸತತ ಆರನೇ ಬಾರಿ `ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ' ದೊಂದಿಗೆ ಗೌರವಿಸಲ್ಪಡುತ್ತಿರುವುದು ಅತೀವ ಅಭಿಮಾನವಾಗಿದೆ ಎಂದು ಬ್ಯಾಂಕ್‍ನ ಸರ್ವೋದಯದ ಸರದಾರ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದ್ದಾರೆ.

ಭಾರತ್ ಬ್ಯಾಂಕ್ ಸಮರ್ಥವಾಗಿ ಕಾರ್ಯ ನಿರ್ವಾಹಿಸಿ ಗ್ರಾಹಕರ ಮತ್ತು ಶೇರುದಾರರ ವಿಶ್ವಾಸಕ್ಕೆ ಪಾತ್ರವಾಗಿರುವುದನ್ನು ಹಾಗೂ ಭಾರತ್ ಬ್ಯಾಂಕ್ ನಡೆಸಿದ ವ್ಯವಹಾರಬದ್ಧ ಅಧ್ಯಾಯನದ ಮನವರಿಸಿದ ಫೆಡರೇಶನ್ ಈ ಪುರಸ್ಕಾರಕ್ಕೆ ಆಯ್ಕೆಗೊಂಡಿರುವುದು ಅತೀವ ಸಂತಸ ತಂದಿದೆ ಇದು ಭಾರತ್ ಬ್ಯಾಂಕ್ ಪರಿವಾರಕ್ಕೆ ಧಕ್ಕಿದ ಗೌರವ ಎಂದು ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ತಿಳಿಸಿದ್ದಾರೆ.

ಪುರಸ್ಕಾರ ಸಮಾರಂಭ ಮಾ.06ನೇ (ನಾಳೆ) ಸೋಮವಾರ ಅಪರಾಹ್ನ ವಡಲಾ ಇಲ್ಲಿನ ಭಾರತೀಯ ಕ್ರೀಡಾ ಮಂದಿರ ಸಂಕುಲದ ಸಭಾಗೃಹದಲ್ಲಿ ನಡೆಸಲ್ಪಡುವ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್‍ನ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನಿಸಲ್ಪಡುವುದು ಎಂದು ಭಾರತ್ ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧÀಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ತಿಳಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here