Thursday 25th, April 2024
canara news

ಮೋಡೆಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್‍ಗೆ ಮಹಾರಾಷ್ಟ್ರ ವಿತ್ತ ಸಚಿವರಿಂದ

Published On : 06 Mar 2017   |  Reported By : Rons Bantwal


ಮಹಾರಾಷ್ಟ್ರ ಬ್ಯಾಂಕ್ಸ್ ಫೆಡರೇಶನ್‍ನ `ಉತ್ಕೃಷ್ಟ ಸಾಧಕ ಬ್ಯಾಂಕ್' ಪ್ರದಾನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ.ಮಾ.06: ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಸಂಥೆಯ 2015-16ರ ವಾರ್ಷಿಕ ಬ್ಯಾಂಕ್ ಪುರಸ್ಕಾರ ಪ್ರದಾನ ಸಮಾರಂಭ ಇಂದಿಲ್ಲಿ ಸೋಮವಾರ ವಡಲಾ ಇಲ್ಲಿನ ಭಾರತೀಯ ಕ್ರೀಡಾ ಮಂದಿರ ಸಂಕುಲದ ಸಭಾಗೃಹದಲ್ಲಿ ನಡೆಸಲ್ಪಟ್ಟಿತು.

ಫೆಡರೇಶನ್ ಅಧ್ಯಕ್ಷ ವಿದ್ಯಾಧರ್ ಅನಾಸ್ಕರ್ ಅಧ್ಯಕ್ಷತೆಯಲ್ಲಿ ಜರುಗಿದ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್‍ನ 38ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಮಹಾರಾಷ್ಟ್ರ ಸರ್ಕಾರದ ಸಹಕಾರಿ ರಾಜ್ಯ ಸಚಿವ ಸುಭಾಶ್ ರಾವ್ ದೇಶ್‍ಮುಖ್ ಉಪಸ್ಥಿತರಿದ್ದು ಮೋಡೆಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಸಂಸ್ಥೆ 2015-16ರ ಕ್ಯಾಲೆಂಡರ್ ವರ್ಷದ ವಾರ್ಷಿಕ ವ್ಯವಹಾರದ ರೂಪಾಯಿ 600 ಕೋಟಿ ಮೊತ್ತಕ್ಕಿಂತ ಅಧಿಕ ವ್ಯವಹಾರಕ್ಕಾಗಿ `ಉತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ-2016' ಪುರಸ್ಕಾರ ಹಾಗೂ ನೂರು ವರ್ಷಗಳನ್ನು (ಶತಮಾನ) ಪೂರೈಸಿದಕ್ಕಾಗಿ ವಿಶೇಷ ಪ್ರಶಸ್ತಿ ಗೌರವ ಪಾರಿತೋಷಕ ಹಸ್ತಾಂತರಿಸಿ ಶುಭಾರೈಸಿದ್ದು, ಮೋಡೆಲ್ ಬ್ಯಾಂಕ್ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ ್ಯ.ಡಿ'ಸೋಜಾ ಹಾಗೂ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಲೂಯಿಸ್ ಡಿ'ಸೋಜಾ ಪುರಸ್ಕಾರ ಫಲಕಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ಹೆಚ್ಚುವರಿ ಪ್ರಧಾನ ಪ್ರಬಂಧÀಕ ಹರೋಲ್ಡ್ ಎಂ.ಸೆರಾವೋ ಉಪಸ್ಥಿತರಿದ್ದು ಸಂತಸ ವ್ಯಕ್ತಪಡಿಸಿದರು.

ಮೋಡೆಲ್ ಬ್ಯಾಂಕ್‍ನ ಗತ ಸಾಲಿನಲ್ಲಿ ಭದ್ರತಾ ಠೇವಣಿ 764.46 ಕೋಟಿ ರೂಪಾಯಿ ಹೊಂದಿದ್ದು, ಮುಂಗಡ ಠೇವಣಿ 415.41 ಕೋಟಿ ರೂಪಾಯಿ ಹೊಂದಿ ಸುಮಾರು 88.11 ಕೋಟಿ ರೂಪಾಯಿ ನಿವ್ವಳ ಲಾಭ ಪಡೆದು 834.72 ಕೋಟಿ ರೂಪಾಯಿ ಕಾರ್ಯನಿರ್ವಹಣಾ ಬಂಡವಾಳದೊಂದಿಗೆ ವ್ಯವಹರಿಸಿ 76.10 ಕೋಟಿ ರೂಪಾಯಿ ಒಟ್ಟು ಲಾಭ ಪಡೆದು ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವುದನ್ನು ಪರಿಗಣಿಸಿ ಬ್ಯಾಂಕ್ಸ್ ಫೆಡರೇಶನ್ ನಮ್ಮ ಸಂಸ್ಥೆಯನ್ನು ಗೌರವಿಸಿರುವುದು ಅಭಿಮಾನವೆಣಿಸುತ್ತಿದೆ ಎಂದು ಮೋಡೆಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿ'ಸೋಜಾ ತಿಳಿಸಿದರು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here