Tuesday 6th, June 2023
canara news

ಡಾ| ಮಾಲವಿಕ ಹೆಬ್ಬಾರ್ ಭರತನಾಟ್ಯ ರಂಗಪ್ರವೇಶ

Published On : 09 Mar 2017   |  Reported By : Rons Bantwal


ಕುಂದಾಪುರ,ಮಾ.9: ಭಾರತೀಯ ಶಾಸ್ತ್ರೀಯ ಕಲೆಗಳನ್ನು ಅರಿತು ಗೌರವಿಸಬೇಕು. ಜೀವನದೊಂದಿಗೆ ಆಧ್ಯಾತ್ಮ ಮತ್ತು ಕಲೆ ಮೇಳೈಸಿ ಸಂಪತ್ತಾಗಿ ನಮಗೆ ದೊರೆತಿದೆ. ಈ ಅಮೂಲ್ಯ ಸಂಪತನ್ನು ನಾವು ಉಳಿಸಿ ಬೆಳೆಸಬೇಕು ಇದು ಯುಗಾಂತರಗಳಿಂದ ಬಂದ ಅಮೂಲ್ಯ ಕೊಡುಗೆ ಇಂತಹ ವಿಭಿನ್ನ ಕಲಾ ಸಂಪತ್ತನ್ನು ನಾವು ನಿರ್ಲಕ್ಷಿಸಿದರೆ ನಮ್ಮ ಜೀವನವೇ ಬರಡಾದೀತು. ವೈದ್ಯಕೀಯ ರಂಗದಲ್ಲಿದ್ದರು ನಾಟ್ಯಕಲೆಯಲ್ಲೂ ಪ್ರಾವೀಣ್ಯತೆಹೊಂದಿರುವ ಡಾ| ಮಾಲವಿಕ ಹೆಬ್ಬಾರ್ ಅವರ ಸಾಧನೆ ಇತರರಿಗೆ ಮಾದರಿ ಎಂದು ಸಾಹಿತಿ, ರಂಗ ನಿರ್ದೇಶಕ ಪೆÇ್ರ| ಉದ್ಯಾವರ ಮಾಧವ ಆಚಾರ್ಯ ಶ್ಲಾಘೀಸಿದರು.

ಇಲ್ಲಿನ ಭಂಡಾರ್‍ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಡಾ| ಪುಷ್ಪಗಂ„ನಿ ಮತ್ತು ಡಾ| ಎಚ್.ಆರ್. ಹೆಬ್ಬಾರ್ ಸುಪುತ್ರಿ , ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜೆನೆಟಿಕ್ಸ್ ವಿಭಾಗದ ಹಿರಿಯ ಸಂಶೋಧನಾ ವಿದ್ಯಾರ್ಥಿನಿ ಡಾ| ಮಾಲವಿಕ ಹೆಬ್ಬಾರ್‍ರ ಭರತನಾಟ್ಯ ರಂಗಪ್ರವೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಣ್ಣ ಅರ್ಥವಾಗಿ ಚಿತ್ರ ಗೊಚರಿಸುವಂತೆ, ಅಕ್ಷರ ಅರ್ಥವಾಗಿ ಕಾವ್ಯ ತಿಳಿಯುವಂತೆ ಕಲೆಗಳ ಶಾಸ್ತ್ರಿಯ ಅರಿವಿಲ್ಲದಿದ್ದರೂ ಸಾಧ್ಯತೆಗಳ ಸಂಶೋಧನೆ ಇದ್ದರೆ ಯಶಸ್ಸು ಸಾಧ್ಯ ಕಲಾಸಾಧನೆ ಒಂದು ತಪಸ್ಸು ವಿಶ್ವಮಾನ್ಯ ಗಾಯಕಿ ಎಮ್.ಎಸ್. ಸುಬ್ಬುಲಕ್ಷ್ಮಿ ಹೀಗೆ ಕಲಾಕ್ಷೇತ್ರದಲ್ಲಿ ತಪಸ್ಸಿನಂತಹ ಸಾಧನೆಗಳಿಂದಲೇ ಸಿದ್ಧಿ ಪಡೆದವರು. ಕರಾವಳಿಯಲ್ಲಿ ಶಾಸ್ತ್ರಿಯ ಕಲೆಗೆ ಪ್ರತಿಸ್ಪಂದನೆ ಕಡಿಮೆ ಎಂಬ ಆರೋಪವಿದೆ. ಇದನ್ನು ಹೋಗಲಾಡಿಸಲು ಕಲಾವಿದರ ಸಾಧನೆಯಿಂದ ಸಾಧ್ಯ ಎಂದು ಅವರು ವಿವರಿಸಿದರು.

ಆಶಯ ಭಾಷಣ ಮಾಡಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ„ೀಶ ರಾಜಶೇಖರ ವಿ. ಪಾಟೀಲ್, ಕಲೆಗಾರನ ಮಕ್ಕಳು ಕಲಾಗಾರರೇ ಆಗಬೇಕೆಂದಿಲ್ಲ . ಕಲೆ, ಆಸಕ್ತಿಯಿಂದ ಬರಬೇಕು. ಡಾ| ಮಾಲವಿಕ ವೈದ್ಯಕೀಯ ವೃತ್ತಿಯಲ್ಲಿದ್ದರು ಕಲಾಸಕ್ತಿ ಇರುವುದರಿಂದ ಭರತನಾಟ್ಯದಲ್ಲೂ ಪ್ರೌಢಿಮೆ ಸಾ„ಸಿದ್ದಾರೆ. ಮಾಲವಿಕ ಎಂದರೆ ಸುರಸುಂದರ, ರಾಜಕುಮಾರಿ ಎಂದರ್ಥವಿದೆ. ಆಕೆ ನಾಟ್ಯಕಲೆಯಲ್ಲಿ ಹಾಗೆಯೇ ಮಿನುಗಲಿ ಎಂದು ಶುಭ ಹಾರೈಸಿದರು.

ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜೆನೆಟಿಕ್ಸ ವಿಭಾಗದ ಮುಖ್ಯಸ್ಥ ಡಾ| ಗಿರೀಶ್ ಕಟ್ಟ ಶುಭಾಶಂಸನೆಗೈದು ಮಾಲವಿಕ ಲಲಿತಕಲೆಗಳಲ್ಲಿ ಆಸಕ್ತಿ ಹೊಂದಿರುವುದರಿಂದ ಅವರ ಮೆಡಿಕಲ್ ವೈದ್ಯಕೀಯ ಉದ್ಯೋಗ, ಸಂಶೋಧನೆ ಅವರಿಗೆ ಸಹ್ಯವಾಗಿದೆ. ಇದರಿಂದ ಅವರ ಬುದ್ದಿಮತ್ತೆ ಹೆಚ್ಚಿದೆ ಎಂದು ಶ್ಲಾಘೀಸಿದರು. ಡಾ| ಎಚ್.ಆರ್. ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ| ಮಾಲವಿಕರ ನೃತ್ಯಗುರು ಉಡುಪಿ ನೃತ್ಯನಿಕೇತನದ ವಿದುಷಿ ಲಕ್ಷ್ಮೀ ಗುರುರಾಜ, ವಿದುಷಿ ಶೃದ್ಧಾ ಎನ್.ಭಟ್ ಮತ್ತು ವಸಂತಿ ಶ್ರೀನಿವಾಸ ಆಚಾರ್ಯ ಇವರುಗಳನ್ನು ಸಮ್ಮಾನಿಸಿ ಗೌರವಿಸಲಾಯಿತು. ಮಣಿಪಾಲ ಅಕಾಡೆಮಿ ಆಪ್ ಜನರಲ್ ಎಜ್ಯುಕೇಶನ್‍ನ ಆಡಳಿತಾ„ಕಾರಿ ಡಾ| ಶಾಂತರಾಮ, ಕಾಲೇಜು ಪ್ರಾಂಶುಪಾಲ ಡಾ| ನಾರಾಯಣ ಶೆಟ್ಟಿ, ಡಾ| ಪುಷ್ಪಗಂ„ನಿ, ಡಾ| ಅಲಕ ಹೆಬ್ಬಾರ್ ಉಪಸ್ಥಿತರಿದ್ದರು. ಡಾ| ಪುಷ್ಪಗಂ„ನಿ ಕೃತಜ್ಞತೆ ಸಲ್ಲಿಸಿದರು.

ಆಹ್ವಾನಿತ ವೀಕ್ಷಕ ಗಡಣದ ಸಮಕ್ಷಮದಲ್ಲಿ ಭರತನಾಟ್ಯ ರಂಗಪ್ರವೇಶಗೈದ ಡಾ| ಮಾಲವಿಕ ಹೆಬ್ಬಾರ್‍ರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ವಿದ್ವಾನ್ ರಘುರಾಮ ಬೆಂಗಳೂರು ಗಾಯನದಲ್ಲಿ , ವಿದ್ವಾನ್ ವಿ. ಗೋಪಾಲ-ವೀಣೆ, ವಿದ್ವಾನ್ ಹರ್ಷ ಸಾಮಗ-ಮೃದಂಗ ಮತ್ತು ವಿದ್ವಾನ್ ನಿತೀಶ್ ಅಮ್ಮಣ್ಣಾಯ ವೇಣುವಿನಲ್ಲಿ ಸಹಕರಿಸಿದರು.

 
More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here