Tuesday 23rd, April 2024
canara news

ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ

Published On : 18 Mar 2017   |  Reported By : Ronida Mumbai


ಮಾತೃ ಭಾಷೆ, ತುಳುನಾಡಿನ ಸಂಸ್ಕೃತಿ ಉಳಿಸಿ : ಡಾ| ವಾಣಿ ಉಚ್ಚಿಲ್ಕರ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮಾ.18: ಶ್ರೀ ರಜಕ ಸಂಘ ಮುಂಬಯಿ ಮಹಿಳಾ ವಿಭಾಗvu ಜಾಗತಿಕ ಮಹಿಳಾ ದಿನಾಚರಣೆಯು ವೈವಿಧ್ಯಮಯ ಮನೋರಂಜನ ಕಾರ್ಯಕ್ರಮದೊಂದಿಗೆ ಕಳೆದ ರವಿವಾರ (ಮಾ.5) ಮಧ್ಯಾಹ್ನ ಕಾಂಜೂರ್ ಮಾರ್ಗ ಪಶ್ಚಿಮದಲ್ಲಿನ ಮೆಜಿಸ್ಟಿಕ್ ಕ್ಲಬ್ ಹೌಸ್‍ನಲ್ಲಿ ಜರಗಿಸಿತು. 

ಅತಿಥಿಗಳಾಗಿ ಪೆÇವಾಯಿಯ ಸನಾತನ ಧರ್ಮ ಹೈಸ್ಕೂಲ್ ಚೆಂಬೂರಿನ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಪಕಿ ಸರೋಜ ಶೆಟ್ಟಿ ಮತ್ತು ಡಾ| ವಾಣಿ ಉಚ್ಚಿಲ್ಕರ್ ಅವರು ಆಗಮಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ರಜಕ ಸಂಘದ ಮಹಿಳಾ ವಿಭಾಗಧ್ಯಕ್ಷೆ ಸರೋಜಿನಿ ಕುಂದರ್, ಉಪಾಧ್ಯಕ್ಷೆ ಪ್ರಮೀಳ ಸಾಲಿಯಾನ್, ಕಾರ್ಯದರ್ಶಿ ಪ್ರೀತಿ ಸಾಲಿಯಾನ್, ರಜಕ ಸಂಘ ಮುಂಬಯಿ ಸಮಿತಿಯ ಕಾರ್ಯದರ್ಶಿ ಸುಮಿತ್ರ ಪಲಿಮಾರ್, ಲೈಬ್ರೇರಿಯನ್ ಸುಮಿತ ಸಾಲಿಯಾನ್, ವಿವಿಧ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆಯರಾದ ವನಿತ ಸಾಲಿಯಾನ್ ಡೊಂಬಿವಲಿ, ಹೇಮಾ ಕುಂದರ್ ನವಿ ಮುಂಬಯಿ, ಹೇಮಾ ಸಾಲಿಯಾನ್ ವಸಾಯಿ, ನಳಿನಿ ಕುಂದರ್ ವೆಸ್ಟರ್ನ್, ಶಾಂತಿ ಕುಂದರ್ ಸೆಂಟ್ರಲ್ ಹಾಗೂ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಸುಮಿತ್ರ ಬಿ. ಗುಜರನ್, ಶುಭ ಡಿ. ಗುಜರನ್ ಉಪಸ್ಥಿತರಿದ್ದರು.

ರಜಕ ಸಂಘದ ಸೆಂಟ್ರಲ್ ಪ್ರಾದೇಶಿಕ ಸಮಿತಿಯ ಬೇಬಿ ಲೇಷ ಅವರು ಹೆಣ್ಣು ಭ್ರೂಣಹತ್ಯೆ ನಿಲ್ಲಿಸಿ ಹೆಣ್ಣು ಮಗುವನ್ನು ಉಳಿಸಿ (ಲಡ್ಕಿ ಬಚಾವೊ) ಅನ್ನುವ ಸಂದೇಶವನ್ನು ಸಾರುವ ನñತ್ಯ ರೂಪಕವನ್ನು ಎಲ್ಲರ ಮನಮುಟ್ಟುವಂತೆ ಸುಂದರವಾಗಿ ಮಾಡಿತೋರಿಸಿದರೆ, ಹೆಣ್ಣುಮಗಳಿರುವ ಮನೆಯು ಯಾವ ರೀತಿ ಶ್ರೀ ಕೃಷ್ಣ ನೆಲೆಸಿರುವ ನಂದನವನದಂತೆ ಕಂಗೊಳಿಸುತ್ತಿರುತ್ತದೆ ಅನ್ನುವುದನ್ನು ವಸಾಯಿ ಮಹಿಳಾ ವಿಭಾಗದ ಸದಸ್ಯೆಯರು ಜಾನಪದ ಸಮೂಹಗೀತೆ ಹಾಡಿದರು. ಸೆಂಟ್ರಲ್ ನ ಬೇಬಿ ರಶ್ಮಿತ ಮಹಾರಾಷ್ಟ್ರದ ಪ್ರಸಿಧ್ಧ ಲಾವಣಿ ನೃತ್ಯ ಡೊಂಬಿವಿಲಿ, ವಸಾಯಿ, ಸೆಂಟ್ರಲ್, ನವಿಮುಂಬಯಿ, ವೆಸ್ಟರ್ನ್ ನ ಮಹಿಳೆಯರು ಜಾನಪದ, ದೇಶಭಕ್ತಿ, ಮತ್ತು ಸಿನಿಮೀಯ ನೃತ್ಯಗಳನ್ನು ಮಾಡಿ ಪ್ರೇಕ್ಷಕರ ಮನರಂಜಿಸಿದರು.

ಸರೋಜ ಶೆಟ್ಟಿ ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಮಾತನಾಡಿದರಲ್ಲದೆ ಮಕ್ಕಳ ಪರೀಕ್ಷೆಯ ಸಮಯದಲ್ಲಿ ಪೆÇೀಷಕರು ಅವರಿಗೆ ಯಾವ ರೀತಿ ಮಾರ್ಗದರ್ಶನ ನೀಡಬೇಕು, ಮೊಬೈಲ್ ಫೆÇೀನಿನಿಂದ ಹೇಗೆ ದೂರ ಇಡಬೇಕು ಅನ್ನುವುದನ್ನು ತಿಳಿಸಿದರು.

ಡಾ| ವಾಣಿ ಉಚ್ಚಿಲ್ಕರ್ ಮಾತನಾಡಿ ಮಹಿಳೆಯರು ತುಳು ಭಾಷೆ, ತುಳುನಾಡಿನ ಸಂಸ್ಕೃತಿ ಮರೆಯಾಗದಂತೆ ಅದನ್ನು ಹೇಗೆ ಪಾಲಿಸಬೇಕು ಎಂದು ತಿಳಿಸಿದರು. ಮುಂಬಯಿ ಮಹಿಳಾವಿಭಾಗದ ಅಧ್ಯಕ್ಷೆ, ಮಾಜಿ ಅಧ್ಯಕ್ಷೆಯರು ತಮಗೆ ತಿಳಿದಂತೆ ಜಾಗತಿಕ ಮಹಿಳಾದಿನದ ಬಗ್ಗೆ ಮಾಹಿತಿ ನೀಡಿದರು.

ಕುಂದರ್ ಅವರು ಅರಿಶಿನ ಕುಂಕುಮದ ಮಹತ್ವವನ್ನು ತಿಳಿಸಿದ ನಂತರ ಮಹಿಳಾ ವಿಭಾಗದ ಸದಸ್ಯೆಯರಿಂದ ಅರಿಶಿನ ಕುಂಕುಮ ಕಾರ್ಯಕ್ರಮ ನಡೆಯಿತು. ಮಹಿಳಾ ಪದಾಧಿಕಾರಿಗಳು ಅತಿಥಿüಗಳನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸನ್ಮಾನಿಸಿದರು ಹಾಗೂ ದೇಣಿಗೆ ನೀಡಿದವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ಜಯಶ್ರೀ ಕುಂದರ್ ಸ್ವಾಗತಿಸಿದರು. ಸುಮಿತ್ರ ಪಲಿಮಾರ್ ಕಾರ್ಯಕ್ರಮ ನಿರೂಪಿಸಿದರು. ಲಲಿತ ಸಾಲಿಯಾನ್ ಧನ್ಯವಾದವನ್ನಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here