Thursday 25th, April 2024
canara news

ಅಕ್ಷಯ ಮಾಸಿಕದ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ-2016 ಪ್ರದಾನ

Published On : 22 Mar 2017   |  Reported By : Rons Bantwal


ಓದುಗರ ಮೆಚ್ಚುಗೆಯೇ ಕೃತಿಕರ್ತನ ಮೊದಲ ಪುರಸ್ಕಾರ:ಮಿತ್ರಾ ವೆಂಕಟ್ರಾಜ್

(ವರದಿ / ಚಿತ್ರ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.21: ಪ್ರಶಸ್ತಿಗಳು ಅಂದರೆ ಅನಾಸಕ್ತಿಯ ಭಾವನೆ ನನ್ನಲಿದ್ದು, ಸಾಹಿತ್ಯದ ಮೌಲ್ಯತ್ಮಕ್ಕೆ ಪೂರಕವಾದ ಗೌರವಗಳೇ ನಿಜವಾದ ಪ್ರಶಸ್ತಿಗಳು ಅಂದು ಕೊಂಡಿದ್ದೇನೆ. ಸೃಜನಶೀಲತೆಯ ಮೂಲವೇ ಸಂವಾನತೆ ಆಗಿದ್ದು ಅದಕ್ಕಾಗಿ ನಮ್ಮ ಭಾವನೆಗಳು ನಮ್ಮೊಳಗೆ ಮಂಥನವಾಗುವ ಅವಶ್ಯವಿದೆ. ಓದುಗರು ಮೆಚ್ಚಿದಾಗ ಮಾತ್ರ ಕೃತಿ ಸಾರ್ಥಕವಾಗುತ್ತದೆ. ಓದುಗರ ಸಾಮೂಹಿಕ ಮೆಚ್ಚುಗೆಯೇ ಕೃತಿಗಳ ಮೊದಲ ಪುರಸ್ಕಾರವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ನಾಮದ ಈ ಪುರಸ್ಕಾರ ನನ್ನ ಪಾಲಿನ ಹಿರಿಮೆಯಾಗಿದೆ ಎಂದು ಮುಂಬಯಿ ಮಹಾನಗರದ ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಸಾಹಿತಿ ಶ್ರೀಮತಿ ಮಿತ್ರಾ ವೆಂಕಟ್ರಾಜ್ ತಿಳಿಸಿದರು.

ಇಂದಿಲ್ಲಿ ಮಂಗಳವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕವು ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಿತ `ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ 2016' ಪ್ರಶಸ್ತಿ ಸ್ವೀಕರಿಸಿ ಮಿತ್ರಾ ವೆಂಕಟ್ರಾಜ್ ಮಾತನಾಡಿದರು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಪ್ರಶಸ್ತಿ ಸಮಾರಂಭಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಅಸೋಸಿಯೇಶನ್‍ನ ಅಧ್ಯಕ್ಷ ಹಾಗೂ ಅಕ್ಷಯದ ನಿರ್ವಾಹಕ ಸಂಪಾದಕ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಹಿರಿಯ ಸಾಹಿತಿ, ವಿಮರ್ಶಕ ಡಾ| ವಿಶ್ವನಾಥ್ ಕಾರ್ನಾಡ್ ಮತ್ತು ಗೌರವ ಅತಿಥಿsಯಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಉಪಸ್ಥಿತರಿದ್ದು ಮಿತ್ರಾ ವೆಂಕಟ್ರಾಜ್ ಅವರಿಗೆ (ಪತಿ ವೆಂಕಟ್ರಾಜ್ ಕುಂದಾಪುರ ಅವರನ್ನೊಳಗೊಂಡು) ರೂಪಾಯಿ25,000/- ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರ ಇತ್ಯಾದಿಗಳೊಂದಿಗೆ `ಶ್ರೀ ಗುರುನಾರಾಯಣ ಸಾಹಿತ್ಯ' ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ಸಮಗ್ರ ಮುಂಬಯಿಗರ ಗೌರವ, ಅತ್ಮೀಯತೆಯಿಂದ ಈ ಗೌರವ ಸ್ವೀಕರಿಸುತ್ತೇನೆ. ಪುರಸ್ಕಾರಕರ್ತರು ಹಾಗೂ ಪ್ರಯೋಜಕರಿಗೆ ಅಭಿವಂದಿಸುತ್ತೇನೆ. ಓದುಗರ ಮೆಚ್ಚುಗೆಯ ಅತ್ಮೀಯತೆಯ ಗೌರವವಾಗಿ ಈ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದೂ ಮಿತ್ರಾ ವೆಂಕಟ್ರಾಜ್ ತಿಳಿಸಿದರು.


ಡಾ| ಕಾರ್ನಾಡ್ ಮಾತನಾಡಿ ಮುಂಬಯಿಗರನ್ನು ಹೊರನಾಡ ಕನ್ನಡಿಗರು ಎನ್ನುವ ಬೇರ್ಪಡೆ ಸಲ್ಲದು. ಮಾಯಾನಗರಿಯಲ್ಲಿ ಬಿಲ್ಲವ ಅಸೋಸಿಯೇಶನ್‍ನ ಸಾಧನೆಗಳು ಅಪಾರ ಮತ್ತು ಅನುಪಮವಾದದ್ದು, ಎಲ್ಲ ಸ್ತರದಲ್ಲೂ ಮುಂಚೂಣಿಯಲ್ಲಿರು ವ ಈ ಸಂಸ್ಥೆಯ ಸಾಧನೆ ಗಮನೀಯ. ಅಂತೆಯೇ ಇದರ ಮುಖವಾಣಿ ಅಕ್ಷಯವು ಸಾಹಿತ್ಯ, ಸಂಸ್ಕೃತಿ ಬೆಳೆಸಿದ ಪತ್ರಿಕೆ ಆಗಿದ್ದು ಇದರ ಮುಖೇನ ಪ್ರದಾನಿಸುವ ಈ ಪ್ರಶಸ್ತಿ ಪ್ರತಿಷ್ಠೆ ಮತ್ತು ಮಹತ್ವಪೂರ್ಣವುಳ್ಳದ್ದು. ಇಂತಹ ಶ್ರೇಷ್ಟವಾದ ಪ್ರಶಸ್ತಿ ಪುರಸ್ಕೃತರು ಪುಣ್ಯವಂತರು ಎಂದರು.

ಅಕ್ಷಯ ಪತ್ರಿಕೆಯ ಮಾಜಿ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ ಅವರು ಕೇವಲ ಆರು ತಿಂಗಳಿಗೆಂದು ಸಂಪಾದಕರಾಗಿ ಬಂದವರು 25 ವರ್ಷ ಸತತ ದುಡಿದವರು. ಅವರಿಂದ ಅಕ್ಷಯ ಹಾಗೂ ಬಿಲ್ಲವ ಅಸೋಸಿಯೇಶನ್‍ಗೆ ಗೌರವ ಬಂದಿದೆ. ಅವರು ಕೊಡಮಾಡುವ ಈ ಪ್ರಶಸ್ತಿ ಸಾಹಿತ್ಯ ಲೋಕದ ಅನನ್ಯ ಕೊಡುಗೆಯಾಗಿದೆ ಎಂದು ಜಯ ಸುವರ್ಣ ತಿಳಿಸಿದರು.

ಪ್ರಶಸ್ತಿ ಸಮಿತಿ ನಿರ್ಣಾಯಕಿ, ಪ್ರಸಿದ್ಧ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅವರು ಪ್ರಶಸ್ತಿ ಕುರಿತು ಮಾತನಾಡಿ ಮಾನವನಿಗೆ ಬದುಕು ಎಲ್ಲಕಿಂತ ಮೌಲ್ಯವಾದುದ್ದು. ಅದರೊಳಗೆ ಸಾಹಿತ್ಯವನ್ನು ರಚಿಸುವುದು ಜೀವನಕ್ಕೆ ಕಳೆ ನೀಡುವಂತಹದ್ದು. ಸಾಹಿತ್ಯ ಅಂದರೆ ಮನುಷ್ಯ ಮನುಷ್ಯನನ್ನು ಸ್ಪರ್ಶಿಸುವ ಬರವಣಿಗೆ. ಮಿತ್ರಾ ಅವರ ಬರವಣಿಗೆ ನದಿಯಂತಿದ್ದು, ವಿಶಾಲವಾದ ದೃಷ್ಟಿತ್ವದ ಕತೆಗಾರ್ತಿ ಆಗಿದ್ದಾರೆ. ಇಂತಹ ಸಾಹಿತಿಗೆ ಈ ಪ್ರಶಸ್ತಿ ಸ್ತುತ್ಯರ್ಹ ಎನ್ನುತ್ತಾ ವೆಂಕಟ್ರಾಜ್ ಅವರ ವ್ಯಕ್ತಿತ್ವವನ್ನು ಸ್ಥೂಲವಾಗಿ ಬಣ್ಣಿಸಿ ಅಭಿನಂದನಾ ನುಡಿಗಳನ್ನಾಡಿದÀರು.

ಪಾಲೆತ್ತಾಡಿ ಮಾತನಾಡಿ ಸಾಮಾಜಿಕ ಜೀವಂತಿಕೆಯೊಂದಿಗೆ ಸಾಹಿತ್ಯಿಕವಾಗಿ ಬೆಳೆದ ಬಿಲ್ಲವ ಅಸೋಸಿಯೇಶನ್ ಕಲೆ ಮತ್ತು ಸಾಹಿತ್ಯದ ಪೆÇೀಷಣೆ ಮಾಡುತ್ತಾ ಬಂದಿದೆ. ಇವರ ಮುಖವಾಣಿ ಅಕ್ಷಯ ಪ್ರದಾನಿಸುವ ಈ ಪ್ರಶಸ್ತಿ ಮುಂಬಯಿಯಲ್ಲಿನ ನಿಷ್ಠಾವಂತ ಸಾಹಿತಿಗಳಿಗೆ ಮಾತ್ರ ಸೀಮಿತವಾಗಲಿ ಎಂದ ಸಲಹಿಸಿದರು.

ಬಿಲ್ಲವರ ಅಸೋಸಿಯೇಶನ್ ಒಂದು ಜಾತೀಯ ಸಂಸ್ಥೆಯಾದರೂ, ಜಾತಿ ಮೀರಿ ಕಾರ್ಯ ನಿರ್ವಾಹಿಸುತ್ತದೆ. ಪತ್ರಿಕೆ, ರಾತ್ರಿ ಶಾಲೆ, ಬ್ಯಾಂಕ್ ಇವೆಲ್ಲವುದರ ಮುಖೇನ ಜನಹಿತ, ಮನುಕುಲದ ಉದ್ಧಾರವನ್ನು ಬಯಸಿ ಕೆಲಸ ನಿರ್ವಾಹಿಸುತ್ತಿದೆ. ಜಾತಿ ಮೀರಿ ಕೆಲಸ ಆಗಬೇಕಾದರೆ ಇಂತಹ ಸಾಹಿತ್ಯ ಕಾರ್ಯಕ್ರಮದಿಂದ ಮಾತ್ರ ಸಾಧ್ಯ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನಿತ್ಯಾನಂದ ಕೋಟ್ಯಾನ್ ಅಭಿಪ್ರಾಯ ಪಟ್ಟರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾ ರಿ, ಡಾ| ಯು. ಧನಂಜಯ ಕುಮಾರ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿ ಅಸೀನರಾಗಿದ್ದು ಪುರಸ್ಕೃತರನ್ನು ಅಭಿನಂದಿಸಿದರು.

ಅಕ್ಷಯ ಮಾಸಿಕದ ಧರ್ಮೇಶ್ ಸಾಲ್ಯಾನ್, ಕುಸುಮಾ ಸಿ.ಪೂಜಾರಿ, ಸತೀಶ್ ಎನ್.ಬಂಗೇರ, ಕುಸುಮಾ ಸಿ.ಪೂಜಾರಿ ಸಂತೋಷ್ ಕೆ.ಪೂಜಾರಿ, ಮಮತಾ ಆರ್.ನಾೈಕ್ ಉಪಸ್ಥಿತರಿದ್ದು ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಪ್ರಸ್ತವನೆಗೈದರು. ಸ್ವಾತಿ ಮೂಲ್ಯ, ಯಶೋದಾ ನಾಯಕ್ ಹಾಗೂ ಜ್ಯೋತಿ ಸುವರ್ಣ ಬಳಗವು ಪ್ರಾರ್ಥನೆಯನ್ನಾಡಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅತಿಥಿüಗಳನ್ನು ಪರಿಚಯಿಸಿ ಪ್ರಶಸ್ತಿ ಪ್ರಾಯೋಜಕ ಎಂ.ಬಿ ಕುಕ್ಯಾನ್ ಅವರ ಸಂದೇಶ ವಾಚಿಸಿದರು. ಧರ್ಮೇಶ್ ಸಾಲ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿ, ಪುರಸ್ಕೃತರ ಮಾನಪತ್ರ ವಾಚಿಸಿದರು. ಜಯರಾಮ ಜಿ.ನಾೈಕ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಸೋಸಿಯೇಶನ್‍ನ ಮಕ್ಕಳು ಸಾಂಸ್ಕೃತಿಕ ಹಾಗೂ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಅಸೋಸಿಯೇಶನ್‍ನ ಭಿವಂಡಿ ಸ್ಥಳಿಯ ಸಮಿತಿಯ ಸದಸ್ಯರಿಂದ ಮಾಯಕದ ಮಾಣಿ ಪೌರಾಣಿಕ ನಾಟಕವನ್ನು ಪ್ರದರ್ಶಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here