Monday 5th, December 2022
canara news

‘ಮಿಸ್ಟರ್ ಮ್ಯಾಂಗ್ಳೂರ್’ ಹಿರಿಮೆಗೆ ಪಾತ್ರನಾದ ಸಿದ್ಧಾಂತ್ ಶೆಟ್ಟಿ ಕಲ್ಯಾಣ್

Published On : 26 Mar 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮಂಗಳೂರು, ಮಾ.26: ವೆಸ್ಟ್‍ಲೈನ್ ಸಮೂಹದ ಪ್ರಾಯೋಜಕತ್ವದಲ್ಲಿ ಇನ್5ನಿಟಿ (ಇನ್‍ಫೈವ್‍ನಿಟಿ) ಸಂಸ್ಥೆಯು ಸೌಂದರ್ಯ ಪ್ರದರ್ಶನಕ್ಕಾಗಿ ಯುವಜನತೆಗೆ ಮಂಗಳೂರುನಲ್ಲಿ ಆಯೋಜಿಸಿದ್ದ ಇನ್5ನಿಟಿ ಮಿಸ್ ಎಂಡ್ ಮಿಸ್ಟರ್ ಮ್ಯಾಂಗ್ಳೂರ್-2017 ಸ್ಪರ್ಧೆಯಲ್ಲಿ ಮುಂಬಯಿ ಉಪನಗರ ಕಲ್ಯಾಣ್ ಇಲ್ಲಿನ ಸಿದ್ಧಾಂತ್ ಶೆಟ್ಟಿ `ಮಿಸ್ಟರ್ ಮ್ಯಾಂಗ್ಳೂರ್' ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಥಮ ರನ್ನರ್ ರಿತೇಶ್ ಶೆಟ್ಟಿ ಮುಂಬಯಿ ಹಾಗೂ ತೃತೀಯ ಸ್ಥಾನವನ್ನು ಉಡುಪಿಯ ಶಾಂತನು ಶೆಟ್ಟಿ ವಿಜೇತರರಾಗಿದ್ದಾರೆ.

ವೆಲ್ಲಿಂಗ್‍ಕರ್ಸ್ ಕಾಲೇಜಿನ ಪದವೀದರ ವಿದ್ಯಾಥಿರ್ü ಆಗಿರುವ ಸಿದ್ಧಾಂತ್ ಶೆಟ್ಟಿ ಉಡುಪಿ ಪಾಂಗಳ ಮೂಲದ, ಮುಂಬಯಿ ಕಲ್ಯಾಣ್ ಪಶ್ಚಿಮದ ಹೊಟೇಲ್ ರಾಮ್‍ದೇವ್ ಮಾಲಿಕ ರಮೇಶ್ ಶೆಟ್ಟಿ ಮತ್ತು ಕಲ್ಯಾಣ್ ಕರ್ನಾಟಕ ಸಂಘದ ಮಹಿಳಾಧ್ಯಕ್ಷೆ, ಮೂಡಬಿದ್ರೆ ಕಡಂದಲೆ ಅಲ್ಲಿನ ಪ್ರತಿಷ್ಠಿತ ಕುಟುಂಬದ ಅಹಲ್ಯಾ ಶೆಟ್ಟಿ ದಂಪತಿ ಸುಪುತ್ರನಾಗಿದ್ದಾರೆ. ರಿತೇಶ್ ಶೆಟ್ಟಿ ಅವರೂ ಮುಂಬಯಿ ಬೊರಿವಿಲಿ ಇಲ್ಲಿಯವರಾಗಿದ್ದಾರೆ.

18ರಿಂದ 24ರ ಹರೆಯದ ಸುಮಾರು 300 ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯ ಆಡಿಶನ್ ಮಂಗಳೂರುನ ಫೆÇರಮ್ ಪಿಜ್ಹಾ ಮಾಲ್ ಮತ್ತು ಮಣಿಪಾಲದ ಹಕುನ ಮಟಟ ಕ್ಲಬ್‍ನಲ್ಲಿ ನಡೆದಿತ್ತು. ಅಂತಿಮ ಸುತ್ತಿನ ಸ್ಪರ್ಧೆಯು ಕಳೆದ ಶನಿವಾರ ಸಂಜೆ ಮಂಗಳೂರು ಬೊಂದೆಲ್ ಇಲ್ಲಿನ ಮ್ಯಾಂಗ್ಳೂರ್‍ಹಿಲ್ಸ್‍ನಲ್ಲಿ ನಡೆಸಲ್ಪಟ್ಟಿತ್ತು.

ಸ್ಪರ್ಧಾ ಸಂಘಟಕ ಪ್ರತೀಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಮಾಲ್ಗುಡಿ ಟಾಕೀಸ್‍ನ ಅಶೋಕ್ ಶೆಟ್ಟಿ ನಿರ್ಮಾಪಕತ್ವದ ಚಲನಚಿತ್ರದಲ್ಲಿ ನಟಿಸುವ ಅವಕಾ± ಒದಗಲಿದೆ ಎನ್ನಲಾಗಿದೆ.
More News

ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಹಳೆ ವಿದ್ಯಾಥಿರ್sಗಳ ಮಹಾರಾಷ್ಟ್ರ ಮಟ್ಟದ ಸ್ನೇಹಮಿಲನ
ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಹಳೆ ವಿದ್ಯಾಥಿರ್sಗಳ ಮಹಾರಾಷ್ಟ್ರ ಮಟ್ಟದ ಸ್ನೇಹಮಿಲನ
ಧರ್ಮಸ್ಥಳದಲ್ಲಿ 365 ಶಾಲೆಗಳಿಗೆ ಪೀಠೋಪಕರಣ ವಿತರಣೆ
ಧರ್ಮಸ್ಥಳದಲ್ಲಿ 365 ಶಾಲೆಗಳಿಗೆ ಪೀಠೋಪಕರಣ ವಿತರಣೆ
ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ
ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ

Comment Here