Wednesday 29th, May 2024
canara news

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಏಳು ಕೃತಿಗಳ ಬಿಡುಗಡೆ

Published On : 02 Apr 2017   |  Reported By : Rons Bantwal


ಕೃತಿಗಳು ಯಾವೊತ್ತೂ ಸ್ವತಂತ್ರ್ಯವಾಗಿರುತ್ತದೆ : ನಟೇಶ್ ಅಹೋರಾತ್ರ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.01: ಕೃತಿಗಳು ಯಾವೊತ್ತೂ ಸ್ವತಂತ್ರ್ಯವಾಗಿರುತ್ತದೆ. ಕೃತಿ ಬಿಡುಗಡೆ ಅಂದರೆ ಸಂಕಲನದ ಅನಾವರಣವಲ್ಲ ಬದಲಾಗಿ ಕೃತಿಯನ್ನು ಓದುಗರಿಗೆ ಒದಗಿಸುವ ಪದ್ಧತಿ. ಎಂದು ಮುಂಬಯಿ ಮಹಾನಗರದಲ್ಲಿನ ಹೆಸರಾಂತ ಕಲಾವಿದ, ಕವಿ ನಟೇಶ್ ಪೆÇಲೆಪಲ್ಲಿ ಅಹೋರಾತ್ರ ತಿಳಿಸಿದರು.

ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ಜೆ.ಪಿ ನಾಯಕ್ ಭವನದಲ್ಲಿ ಇಂದಿಲ್ಲಿ ಶನಿವಾರ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಕೃತಿಗಳ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮುಂಬಯಿನ ಹೆಸರಾಂತ ಕಲಾವಿದ, ಕವಿ ನಟೇಶ್ ಪೆÇಲೆಪಲ್ಲಿ ಅಹೋರಾತ್ರ ಮಾತನಾಡಿದರು.

ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ 58ನೇ ವಿಚಾರ ಸಾಹಿತ್ಯದ ಅಗತ್ಯ, ಅರ್ಥ ಮತ್ತು ಮೌಲ್ಯ, ಪ್ರಸಿದ್ಧ ಅನುವಾದಕ, ಸಾಹಿತಿ ಅರವಿಂದ ಹೆಬ್ಬಾರ್ ಅವರ ಕರುಳಿನ ಕರೆ, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ದೇವುದಾಸ್ ಶೆಟ್ಟಿ ಅವರ ಜೀವನದ ರೇಖೆಗಳು, ರತ್ನಾ ಎಂ.ಎನ್ ಅವರ ಚಾರುವಸಂತದ ಆಯಾಮ ಮತ್ತು ಅನನ್ಯತೆ, ಶೈಲಜಾ ಹೆಗಡೆ ಅವರ ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು, ಶಿವರಾಜ್ ಎಂ.ಜಿ ಅವರ ಕನ್ನಡ ಗಾದೆಗಳ ಅಂತರಂಗ-ಬಹಿರಂಗ ಹಾಗೂ ಪ್ರಕಾಶ್.ಜಿ.ಬುರ್ಡೆ ಅವರ ಸಂಗೀತಯಾನ, ಸಂಗೀತ ಸರಸಿ ಕೃತಿಗಳನ್ನು ಏಕಕಾಲಕ್ಕೆ ನಟೇಶ್ ಪೆÇಲೆಪಲ್ಲಿ ಅಹೋರಾತ್ರ, ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ವಿಶ್ವನಾಥ ಕಾರ್ನಾಡ್, ಹಿರಿಯ ಕವಿ ಬಿ.ಎಸ್ ಕುರ್ಕಾಲ್, ಹಿರಿಯ ಕವಿ, ಸಾಹಿತಿ ಡಾ| ಜೀವಿ ಕುಲಕರ್ಣಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಹೆಸರಾಂತ ಕಲಾವಿದ ಸುಬ್ರಾಯ ಭಟ್, ಡಾ| ಜಿ.ಎನ್ ಉಪಾಧ್ಯ ಅವರು ಏಕಕಾಲಕ್ಕೆ ಕೃತಿಗಳನ್ನು ಬಿಡುಗಡೆ ಗೊಳಿಸಿದರು.

ನೇಸರು ಮಾಸಿಕದ ಸಂಪಾದಕಿ ಡಾ| ಜ್ಯೋತಿ ಸತೀಶ್, ಬಿ.ಎಸ್ ಕುರ್ಕಾಲ್, ದೇವುದಾಸ್ ಶೆಟ್ಟಿ, ವಿದೂಷಿ ಶ್ಯಾಮಲಾ ಪ್ರಕಾಶ್, ಡಾ| ಜೀವಿ ಕುಲಕರ್ಣಿ, ಡಾ| ವಿಶ್ವನಾಥ ಕಾರ್ನಾಡ್, ಹಿರಿಯ ಸಂಶೋಧಕಿ ಡಾ| ಲೀಲಾ ಬಿ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು.

ತನ್ನ ಸ್ವಂತ ಕೃತಿಯ ಕುರಿತು ಮಾತನಾಡಿದ ದೇವುದಾಸ್ ಶೆಟ್ಟಿ ಬದುಕನ್ನೇ ಅವಚಿಕೊಂಡುಕ್ಯಾನ್ವಸ್ ಮೂಲಕ ಕಲಾತ್ಮಕ್ಕೆ ಜೀವನ ರೂಪಿಸಿಕೊಂಡಾವ ನಾನು. ನನ್ನ ಚಿತ್ರಗಳೇ ನನ್ನ ಸಾಹಿತ್ಯ. ಕಲೆಯೇ ನನ್ನ ಶ್ರೀಮಂತಿಕೆ. ಕಲೆ ನನ್ನ ಜೀವನದ ಪರಿವರ್ತನೆಗೆ ಪೂರಕವಾಗಿದೆ ಎಂದರು.

ಬಿ.ಎಸ್ ಕುರ್ಕಾಲ್ ಮಾತನಾಡಿ ಅರವಿಂದ ಹೆಬ್ಬಾರ್ ಓರ್ವ ಸರಳ ಸಚ್ಚನಿಕೆಯ ಮಿತಭಾಷಿ ವ್ಯಕ್ತಿತ್ವವುಳ್ಳವರು. ಕನ್ನಡದ ಮೇಲಿನ ಅವರ ಅಪಾರವಾದ ಒಲವು ಅವರ ಕೃತಿ ಮೂಲಕ ತಿಳಿಯ ಬಹುದು. ಇಂತಹ ಮೇಧಾವಿಗಳು ಆಧುನಿಕ ಬರವಣಿಗೆಯ ಜನತೆಗೆ ಆದರ್ಶನೀರ್ಯರು ಎಂದರು.

ಆತ್ಮಶ್ರದ್ಧೆಯಿಂದ ಮಾತ್ರ ಎಲ್ಲವೂ ಸಾಧ್ಯವಾಗುವುದು. ನನ್ನ ಬರವಣಿಗೆಗೂ ಇದೇ ಕಾರಣವಾಗಿದೆ. ಸಾಹಿತ್ಯ ಕ್ಷೇತ್ರಕ್ಕೆ ನನ್ನದು ಪವಾಡವೇ ಸರಿ ಎಂದು ಅರವಿಂದ ಹೆಬ್ಬಾರ್ ನುಡಿದರು.

ಚಂದ್ರಶೇಖರ ಪಾಲೆತ್ತಾಡಿ ಮಾತನಾಡಿ ಗಾದೆಗಳು ಜಾನಪದವುಳ್ಳವು. ಮಾನವ ಜೀವನಕ್ಕೆ ಅರ್ಥ ಕಲ್ಪಿಸುವ ಚಿಂತನೆಗಳು ಇದರಲ್ಲಿದೆ. ಗಾದೆಗಳು ವೇದಕ್ಕೆ ಸಮಾನವಾಗಿದ್ದು ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತಿದೆ. ಇಂತಹ ಅರ್ಥಗರ್ಭಿತ ಗಾದೆಗಳ ಬಗ್ಗೆ ಅಧ್ಯಾಯನ ಸಂಕಲನ ರಚಿಸಿದ ಶಿವರಾಜ್ ಎಂ.ಜಿ ಅವರ ಸಂಕಲನ ಜನಪರವಾಗಲಿ ಎಂದರು.

ಕೃತಿಗಳು ಸಾಹಿತ್ಯ ಲೋಕವನ್ನು ಬಲಾಢ್ಯ ಪಡಿಸ ಬಲ್ಲವು. ಸಾಹಿತ್ಯದಿಂದ ಸಮಾಜದ ತಿಳುವಳಿಕೆ ಸಾಧ್ಯ ಎಂದÀು ಸುಬ್ರಾಯ ಭಟ್ ತಿಳಿಸಿದರು.


ಮಧ್ಯಾಹ್ನ ಎಂ.ಫಿಲ್ ವಿದ್ಯಾರ್ಥಿಗಳಾದ ಖಾಜಪ್ಪ ಮದಾಳೆ ಮತ್ತು ಆರ್. ಎಂ ಗಣಾಚಾರಿ ಅವರ ಮೌಖಿಕ ಪರೀಕ್ಷೆ ಮತ್ತು ಕನ್ನಡ ವಿಭಾಗದ ಎಂ.ಎ ದ್ವಿತೀಯ ವರ್ಷದ ವಿದ್ಯಾಥಿರ್üಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲ್ಪಟ್ಟಿತು. ನಿರ್ಗಮನ ವಿದ್ಯಾಥಿರ್üಗಳಿಗೆ ಪ್ರಥಮ ವಿಭಾಗದ ವಿದ್ಯಾಥಿರ್üಗಳು ಪುಷ್ಪಗುಪ್ಚ, ಕೃತಿಗಳನ್ನೀಡಿ ಶುಭಾರೈಸಿದರು. ಮಧ್ಯಾಂತರದಲ್ಲಿ ಸೂರಪ್ಪ ಕುಂದರ್ ತನ್ನ ಕೈಚಳಕದ ಮ್ಯಾಜಿಕ್ ಶೋ ಪ್ರಸ್ತುತ ಪಡಿಸಿದರು.

ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಲಾವಿದ ಗಣೇಶ್ ಎರ್ಮಾಳ್ (ಸಂಗೀತ), ಜಾದೂಗಾರ ಸೂರಪ್ಪ ಕುಂದರ್ (ಕಲೆ), ಚಿತ್ರ ಕಲಾವಿದ ಜಯ್ ಸಿ.ಸಾಲ್ಯಾನ್ (ಚಿತ್ರಕಲೆ) ಹಾಗೂ ಡಾ| ಉಮಾ ರಾಮರಾವ್ ಮತ್ತು ಶ್ರೀ ಖಾಜಪ್ಪ ಮದಾಳೆ(ಎಂ.ಫಿಲ್), ಅರವಿಂದ ಹೆಬ್ಬಾರ್ (ಅನುವಾದ) ಇವರಿಗೆ ಅವರಿಗೆ ಶಾಲು ಹೊದಿಸಿ ಸ್ವರ್ಣ ಪದಕ ಧರಿಸಿ, ಕೃತಿಗಳನ್ನೀಡಿ ಗೌರವಾರ್ಪಣೆ ಗೈಯಲಾಯಿತು.

ಕಾರ್ಯಕ್ರಮದಲ್ಲಿ ಕೊಲ್ಯಾರು ರಾಜು ಶೆಟ್ಟಿ, ರವಿ.ರಾ ಅಂಚನ್, ಡಾ| ವಾಣಿ ಎನ್.ಉಚ್ಚಿಳ್ಕ್ಕರ್, ದಯಾಮಣಿ ಎಸ್.ಶೆಟ್ಟಿ ಎಕ್ಕಾರು, ಅಶೋಕ್ ಎಸ್.ಸುವರ್ಣ, ಎಸ್.ಕೆ ಸುಂದರ್, ಲತಾ ಸಂತೋಷ್ ಶೆಟ್ಟಿ, ರತ್ನಾಕರ್ ಆರ್.ಶೆಟ್ಟಿ, ಮೋಹನ್ ಮಾರ್ನಾಡ್, ಉಮೇಶ್ ಕುಮಾರ್ ಅಂಚನ್, ವಿಶಾಲ ಎಸ್.ಕುಂದರ್, ಸುರೇಖಾ ಎಸ್.ದೇವಾಡಿಗ, ದಾಕ್ಷಾಯಿಣಿ ಎಡವಳ್ಳಿ, ಸಾ.ದಯಾ, ಎಂ.ಶ್ರೀಕಾಂತ ಪ್ರಭು, ಡಾ| ಸುಮಾ ದ್ವಾರಕಾನಾಥ್, ನೀಲ ಸಿದ್ಧಲಿಂಗಪ್ಪ, ದಿನಕರ ಎನ್.ಚಂದನ್, ದುರ್ಗಪ್ಪ ಯು.ಕೋಟಿಯವರ್, ಚಂದ್ರಹಾಸ ಮೆಂಡನ್, ಹೆಚ್.ಪರಸಪ್ಪ, ಪದ್ಮನಾಭ ಸಸಿಹಿತ್ಲು ಮತ್ತಿತರ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಜ್ಯೋತಿ ಎನ್.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕನ್ನಡ ವಿಭಾಗದ ಸಂಶೋಧನಾ ವಿದ್ಯಾಥಿರ್üನಿ ಡಾ| ಜಿ.ಎನ್ ಉಪಾಧ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ರಮಾ ಉಡುಪ ಮತ್ತು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವರಾಜ್ ಎಂ.ಜಿ ವಂದಿಸಿದರು.

 
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here