Saturday 27th, July 2024
canara news

ಕಾಪು ಪ್ರೆಸ್ ಕ್ಲಬ್ ಸ್ನೇಹ ಸಮ್ಮಿಲನ-ಅಭಿನಂದನಾ ಕಾರ್ಯಕ್ರಮ

Published On : 04 Apr 2017   |  Reported By : Rons Bantwal


ಕಾಪು: ಗ್ರಾಮೀಣ ಭಾಗದಲ್ಲಿ ಮಾಧ್ಯಮ ಸಂಘಟನೆ ಪ್ರಬಲವಾಗುತ್ತಿದೆ: ಶಾಸಕ ಸೊರಕೆ

ಕಾಪು, ಎ.04: ಸುದ್ದಿ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳು ಆಗುತ್ತಿದ್ದು, ಮಾಧ್ಯಮಗಳ ಮೇಲಿನ ಆಸಕ್ತಿ ಕೂಡಾ ಜನರಲ್ಲಿ ಹೆಚ್ಚಾಗುತ್ತಿದ್ದು, ಗ್ರಾಮೀಣ ಭಾಗದಲ್ಲೂ ಮಾಧ್ಯಮ ಸಂಘÀಟನೆಗಳು ಪ್ರಬಲವಾಗಿ ಬೆಳೆಯುತ್ತಿರುವುದು ಸಾಮಾಜಿಕ ಪ್ರಗತಿಯ ಸಂಕೇತವಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದರು.

ಕಾಪು ಪಡು ಕಿನಾರೆಯ ರಾಧಾ ಹೆರಿಟೇಜ್‍ನಲ್ಲಿ ಭಾನುವಾರ ಕಾಪು ಪ್ರೆಸ್ ಕ್ಲಬ್ ವತಿಯಿಂದ ನಡೆದ ಸ್ನೇಹ ಸಮ್ಮಿಲನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಭಾಗವಹಿಸಿ ಸೊರಕೆ ನುಡಿದರು.

ಕಾಪು ತಾಲೂಕು ಘೋಷಣೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಕಾಪು ಪ್ರೆಸ್ ಕ್ಲಬ್ ಸಂಸ್ಥೆಯು ಕಾಪು ತಾಲೂಕು ಪ್ರೆಸ್ ಕ್ಲಬ್ ಆಗಿ ಪರಿವರ್ತನೆಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಪು ಪ್ರೆಸ್ ಕ್ಲಬ್‍ಗೆ ಸ್ವಂತ ಕಛೇರಿ ಹಾಗೂ ನಿವೇಶನಗಳನ್ನು ಅವಶ್ಯವಾಗಿ ಒದಗಿಸಲು ಸಂಪೂರ್ಣ ಪ್ರಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದರು. ಕಾಪು ಪ್ರೆಸ್ ಕ್ಲಬ್ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿದ ಅದಾನಿ-ಯುಪಿಸಿಎಲ್ ಸಮೂಹದ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿ, ಅದಾನಿ ಯುಪಿಸಿಎಲ್ ಮೂಲಕ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕಾಪು ಪ್ರೆಸ್ ಕ್ಲಬ್ ಮಿತ್ರರು ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಈ ದಿಸೆಯಲ್ಲಿ ಕನಿಷ್ಠ ವೇತನವನ್ನು ಹೊಂದಿರುವ ಗ್ರಾಮೀಣ ಭಾಗದ ಪತ್ರಕರ್ತರಿಗೆ ಅದಾನಿ ಸಂಸ್ಥೆಯ ಮುಖಾಂತರ ಆರೋಗ್ಯ ಕಾರ್ಡ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.

ಕಾಪು ಪ್ರೆಸ್ ಕ್ಲಬ್ ಬಳಗವು ನಾನು ಮಾಡಿರುವ ಕಿಂಚಿತ್ ಸೇವೆಗೆ ಗುರುತಿಸಿ ಸನ್ಮಾನಿಸಿರುವುದಕ್ಕೆ ನಾನು ಆಭಾರಿಯಾಗಿದ್ದು, ಅದಾನಿ ಯುಪಿಸಿಎಲ್ ಸಂಸ್ಥೆ ಭವಿಷ್ಯದಲ್ಲೂ ಗ್ರಾಮೀಣ ಪರ್ತಕರ್ತರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕಾಪುವಿನಂತಹ ಗ್ರಾಮೀಣ ಭಾಗದಲ್ಲಿ ನಾವು ಶುದ್ಧ ಹಸ್ತ ಪತ್ರಕರ್ತರನ್ನು ಕಾಣಬಹುದಾಗಿದೆ. ಇಲ್ಲಿನವರ ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಒಗ್ಗಟ್ಟು ಇತರರಿಗೆ ಮಾದರಿಯಾಗಿದೆ ಎಂದರು. ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯ ಸಂಜೀವ,ಕಾಪು ಬಿಕ್ಕೋ ಸಂಸ್ಥೆಯ ಮುಖ್ಯಸ್ಥ ಶ್ರೀಧರ ಶೇಣವ, ಸಾಯಿರಾಧಾ ಸಮೂಹ ಸಂಸ್ಥೆಯ ಮುಖ್ಯಸ್ಥ ಮನೋಹರ ಶೆಟ್ಟಿ ಶುಭಾಶಂಸನೆಗೈದರು, ಈ ಸಂದರ್ಭ ಕಾಪು ಪ್ರೆಸ್ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಆಚಾರ್ಯ ಪಡುಬಿದ್ರಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಜೂರು, ನಿಕಟಪೂರ್ವ ಕೋಶಾಧಿಕಾರಿ ಹಮೀದ್ ಪಡುಬಿದ್ರಿ, ಪ್ರೆಸ್ ಕ್ಲಬ್ ನಿರ್ವಾಹಕ ಸಂತೋಷ್ ಕಾಪು ಅವರನ್ನು ಸನ್ಮಾನಿಸಲಾಯಿತು.

ಕಾಪು ಪ್ರೆಸ್ ಕ್ಲಬ್ ನೂತನ ಸಂಚಾಲಕ ಬಾಲಕೃಷ್ಣ ಪೂಜಾರಿ ಉಚ್ಚಿಲ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು.ಕ್ರೀಡಾ ಸ್ಪರ್ಧಾ ವಿಜೇತರ ಪಟ್ಟಿಯನ್ನು ಕ್ರೀಡಾ ಮತ್ತು ಸಾಂಸ್ಕøತಿಕ ಕಾರ್ಯದರ್ಶಿ ಹರೀಶ್ ಕಟಪಾಡಿ ವಾಚಿಸಿದರು. ಪುಂಡಲೀಕ ಮರಾಠೆ ಶಿರ್ವ, ಕರುಣಾಕರ ನಾಯಕ್ ಪಡುಬಿದ್ರಿ, ಪ್ರಮೋದ್ ಸುವರ್ಣ ಕಟಪಾಡಿ, ವಾದಿರಾಜ್ ರಾವ್ ನಡಿಮನೆ, ಅಸಾದುಲ್ಲಾ ಕಟಪಾಡಿ ಅವರು ಸನ್ಮಾನಿತರನ್ನು ಪರಿಚಯಿಸಿದರು. ಸಮಿತಿ ಸದಸ್ಯ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಸುರೇಶ್ ಎರ್ಮಾಳ್ ವಂದಿಸಿದರು. ಬಳಿಕ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಿತು.

 




More News

ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಪ್ರೊ| ಪಿ.ಎಲ್ ಧರ್ಮ ಅವರಿಗೆ ೨೦೨೪ ವರ್ಷದ ಅತ್ಯುತ್ತಮ ಪಬ್ಲಿಕ್ ರಿಲೇಶನ್ ವ್ಯಕ್ತಿ ಗೌರವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ
ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿ0ದ ನಂದಾದೀಪ ಸಂದೀಪ ಕಾರ್ಯಕ್ರಮ

Comment Here