Tuesday 26th, September 2023
canara news

ಎ.15: ಕಿಂಗ್ಸ್ ಸರ್ಕಲ್‍ನ ಜಿಎಸ್‍ಬಿ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಗಾಣಿಗ ಸಮಾಜ ಮುಂಬಯಿ ಇದರ ವಾರ್ಷಿಕ-2017ರ ಕ್ರೀಡಾಕೂಟ

Published On : 07 Apr 2017   |  Reported By : Rons Bantwal


ಮುಂಬಯಿ, ಎ.07: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಗಾಣಿಗ ಸಮಾಜ ಮುಂಬಯಿ ಇದರ ವಾರ್ಷಿಕ-2017ರ ಕ್ರೀಡಾಕೂಟವು ಇದೇ ಎ.15ರ ಶನಿವಾರ ಮಾಟುಂಗಾ ಪೂರ್ವದ ಕಿಂಗ್ಸ್ ಸರ್ಕಲ್ ಅಲ್ಲಿನ ಜಿಎಸ್‍ಬಿ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ ತನಕ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ತಿಳಿಸಿದ್ದಾರೆ.

Kutpady Ramachandra Ganiga

Jagannath M.Ganiga

Chandrashekhar R.Ganiga

Jayanth P.Ganiga

-Ganesh R.Kutpady (Youth)

Tara N.Bhatkal

ಸಮುದಾಯದ ಏಕತೆ ಮತ್ತು ಸಾಂಘಿಕತೆಯನ್ನಾಗಿಸಿ ಈ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, ಕೇರಂ, ಲೆಮನ್ ಎಂಡ್ ಸ್ಪೂನ್, ಮ್ಯೂಸಿಕಲ್ ಚೇಯರ್, ಬಾಲ್ ಇನ್ ಬಕೇಟ್, ಓಟ ಸ್ಪರ್ಧೆ, ಶಾಟ್‍ಫುಟ್, ತ್ರೋಬಾಲ್, ಕ್ರಿಕೇಟ್ ಪಂದ್ಯಾಟ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಗುವುದು. ಆದುದರಿಂದ ಸಮಸ್ತ ಗಾಣಿಗ ಸಮಾಜದ ಮಕ್ಕಳು, ಮಹಿಳೆಯರು, ಯುವಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗಿದೆ ಎಂದು ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ ಮತ್ತು ಜೊತೆ ಕಾರ್ಯದರ್ಶಿ ಬಿ.ಜಗದೀಶ್ ಗಾಣಿಗ ತಿಳಿಸಿದ್ದಾರೆ.

ಆ ಪ್ರಯುಕ್ತ ಸಮಾಜದ ಪುರುಷರು, ಮಹಿಳೆಯರು, ಯುವ ಜನತೆ ಮತ್ತು ಮಕ್ಕಳಿಗಾಗಿ ಏರ್ಪಾಡಿಸಲಾಗಿ ರುವ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಸಕ್ತರು ಸಂಘದ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಸಕ್ತರು ಸಂಘದ ಗಣೇಶ್ ಆರ್.ಕುತ್ಪಾಡಿ (9892142223), ಆಶಾ ಹರೀಶ್ ತೋನ್ಸೆ (9833591054), ಆರತಿ ಸತೀಶ್ ಗಾಣಿಗ (7303261230), ವೀಣಾ ಗಾಣಿಗ (9320177757), ಜಗದೀಶ್ ಗಾಣಿಗ (98920266 50), ವೀಣಾ ರಾವ್ ಚೆಂಬೂರು (9820202609), ಗೋಪಾಲ ಗಾಣಿಗ (9321173131), ಪೂರ್ಣಿಮಾ ಕಲ್ಯಾಣ್ಪುರ್ (9324790250), ವಿನಾಯಕ್ ಭಟ್ಕಳ್ (9833188437) ಇವರನ್ನು ಸಂಪರ್ಕಿ ಮುಂಬಯಿ ಮಹಾನಗರ, ಉಪನಗರದಲ್ಲಿನ ಸಮಸ್ತ ಗಾಣಿಗ ಬಾಂಧವರು ಸಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಕ್ರೀಡೋತ್ಸವದಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಗಳೊಂದಿಗೆ ಸಮಾಜದ ಏಕತೆಯನ್ನೂ ಪ್ರದರ್ಶಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.
More News

ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಸೆ.30: ಮುಂಬಯಿ ವಿವಿ ಕನ್ನಡ ವಿಭಾಗದಿಂದ ಜಯ ಸಿ.ಸುವರ್ಣ ಸಂಸ್ಮರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ,ಶ್ರೀ ಗಣೇಶ ಚತುಥಿರ್s ಆಚರಣೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ

Comment Here