Friday 19th, April 2024
canara news

ವಾಸ್ತವ ಜನಾಭಿಪ್ರಾಯ ರೂಪಣೆ ಮಾಧ್ಯಮಗಳ ಜವಾಬ್ದಾರಿ ಕುಂದಾಪುರ ಧರ್ಮಕೇಂದ್ರಲ್ಲಿ ಮಾಧ್ಯಮದವರ ಸೇವೆಗೆ ಅಭಿನಂದನೆ- ಸಹಮಿಲನ ಸಂವಾದ

Published On : 11 Apr 2017   |  Reported By : Bernard J Costa


ಕುಂದಾಪುರ: ವಾಸ್ತವದ ನೆಲೆಗಟ್ಟಿನಲ್ಲಿ ಸಮರ್ಥವಾದ ಜನಾಭಿಪ್ರಾಯ ರೂಪಿಸುವುದು ಮಾಧ್ಯಮಗಳ ಬಲುದೊಡ್ಡ ಜವಾಬ್ದಾರಿ. ಮಾಧ್ಯಮಗಳ ಮಾಹಿತಿ ಆಧಾರರಲ್ಲೇ ನಮಗೆ ಸಾವಿರಾರು ಮೈಲಿಗಳ ದೂರದಲ್ಲಿನ ಘಟನೆ ಮತ್ತು ವ್ಯಕ್ತಿಗಳ ಸಾಚಾ ಅಥವ ನೀಚತನಗಳ ಅರಿವಾಗುವುದು. ಆದರೆ ಇಂದು ಬಹುತೇಕ ಮಾಧ್ಯಮಗಳು ಕೆಲವು ಪ್ರಭಾವಗಳು, ಪೂರ್ವಾಗ್ರಹಗಳಿಗೆÉೈಳಗಾಗುತ್ತಿರುವುದು ಪ್ರಜಾಪ್ರಭುತ್ವದ ದುರಂತ. ಮಾಧ್ಯಮ ಎಂದರೆ ಹಣ ಎಂಬರ್ಥ ಮೂಡಿರುವುದು ವಿಷಾದಕರ ಎಂದು ಸಂಪಾದಕ ವಂ.ಫಾ. ಚೇತನ್ ಲೋಬೋ ಹೇಳಿದರು.

ಕುಂದಾಪುರ ಇಗರ್ಜಿಯ ಸಾಮಾಜಿಕ ಸಂಪರ್ಕ ಮಾಧ್ಯಮವು ಆಯೋಜಿಸಿದ ಕುಂದಾಪುರ ಧರ್ಮಕೇಂದ್ರಲ್ಲಿ ಮಾಧ್ಯಮದವರ ಸೇವೆಗೆ ಅಭಿನಂದನೆ - ಸಹಮಿಲನ- ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು. ಸಾಮಾಜಿಕ ಸಂಪರ್ಕ ಮಾಧ್ಯಮದ ಸಂಚಾಲಕ ಪತ್ರಕರ್ತ ಬರ್ನಾಡ್ ಡಿಕೋಸ್ತಾ, ವರ್ಷವಿಡಿ ಮಾಧ್ಯಮದವರು ಸುದ್ದಿ ಪ್ರಸಾರಿಸುತ್ತ ಸಮಾಜದ ಸೇವೆ ಮಾಡುತ್ತಾರೆ, ನಿಮ್ಮ ಸೇವೆಗೆ ಕ್ರತ್ಞತೆ ಸಲ್ಲಿಸಲು ಮತ್ತು ಸಂವಾದ ಮಾಡಲು ಈ ಕಾರ್ಯಕ್ರಹಮ್ಮಿಕೊಂಡಿದ್ದೆವೆಂದು ಪ್ರಸ್ತಾವಿಸಿ ಸ್ವಾಗತಿಸಿದರು.

ಮುಖ್ಯ ಅತಿಥಿ ಸಂಪಾದಕ ಯು.ಎಸ್.ಶೆಣೈ ಮಾತನಾಡಿ ಪತ್ರಿಕೆಗಳು ದೇಶ ವಿದೇಶಗಳ ಸುದ್ದಿಗಳೊಂದಿಗೆ ಸ್ಥಳೀಯ ಮಾಹಿತಿಗಳನ್ನೂ ಒದಗಿಸಬೇಕು. ಕುಂದಾಪುರದ ಸಣ್ಣ ಪತ್ರಿಕೆಗಳು ಈ ನಿಟ್ಟಿನಲ್ಲಿ ತ್ರಪ್ತಿಕರವಾಗಿ ಕಾರ್ಯಾಚರಿಸುತಿವೆ. ಸ್ಥಳೀಯ ಸಮಸ್ಯೆಗಳನ್ನು ಸಂಬಂದಿತರ ಗಮನಕ್ಕೆ ತರುವುದು ಮಾತ್ರವಲ್ಲದೆ, ಒಳಿತುಗಳ ಶ್ಲಾಘನೆ ಮನರಂಜನೆ ಎಲ್ಲವನ್ನೂ ಒದಗಿಸುತ್ತಿವೆ. ನಿಸ್ವಾರ್ಥ ಕಾರ್ಯಗಳಿಂದ ಪ್ರಭಲ ಜನಾಭಿಪ್ರಾಯ ರೂಪಿಸುವಲ್ಲಿ ಇವು ಯಶಸ್ವಿಯಾಗಿವೆ, ಹಮ್ಮಿಕೊಂಡಿದ್ದ ಇಂತಹ ಒಂದು ಕಾರ್ಯಕ್ರಮ ನಿಜವಾಗಿಯು ಉತ್ತಮ ಶ್ಲಾಘನಿಯ ಎಂದರು.

ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ವಂ.ಫಾ. ಅನಿಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಎಲ್ಲ ಧರ್ಮಗಳ ಸಂದೇಶ ಮತ್ತು ಗುರಿಗಳೂ ಶಾಂತಿ ಸ್ಥಾಪನೆಯೇ ಆಗಿದೆ. ಇಗರ್ಜಿಗಳ ಈ ಮಹತ್ಕಾರ್ಯವನ್ನು ಪ್ರಚುರ ಪಡಿಸಲು ಸಾಮಾಜಿಕ ಸಂಪರ್ಕಮಾಧ್ಯಮ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜಾ ಉಪಸ್ಥಿತರಿದ್ದರು.
ಮಾಧ್ಯಮ ಪತ್ರಿನಿಧಿಗಳಾದ ಕೆ.ಜಿ ವೈದ್ಯ ಮತ್ತು ಅಂದೂಕ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು ಸಹಾಯಕ ಧರ್ಮಗುರು ವ.¥sóÁ. ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಪ್ರಾರ್ಥಿಸಿದರು. ವಿನಯ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿ ಸಂಚಾಲಕ ಸದಸ್ಯ ವಿವಿಯನ್ ಕ್ರಾಸ್ಟೊ ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here