Friday 19th, April 2024
canara news

ಎ.14: ಬಾಂದ್ರಾ ಪಶ್ಚಿಮದಲ್ಲಿ ನವೀನ್ ಭಂಡಾರಿ ನಿರ್ದೇಶಕತ್ವದ `ಫಿನಿಶಿಂಗ್ ಟಚ್' ಮುಂಬಯಿಯ 3ನೇ ಶಾಖೆ ಶುಭಾರಂಭ

Published On : 11 Apr 2017   |  Reported By : Rons Bantwal


ಮುಂಬಯಿ, ಎ.11: ಕೇಶ ವಿನ್ಯಾಸದಲ್ಲಿ ಪ್ರಸಿದ್ಧಿ ಪಡೆದ ಅವರ `ಫಿನಿಶಿಂಗ್ ಟಚ್'ನ 3ನೇ ಶಾಖೆ ಬಾಂದ್ರಾ ಪಶ್ಚಿಮದ ಎಸ್.ವಿ ರೋಡ್‍ನ ಜೈನ್ ಚೇಂಬರ್ಸ್‍ನ ಮೊದಲ ಮಹಡಿಯಲ್ಲಿ ಇದೇ ಎಪ್ರಿಲ್.14ನೇ ಶುಕ್ರವಾರ ಬಿಸು ಹಬ್ಬದ ಶುಭಾವಸರದಲ್ಲಿ ತೆರೆಯಲಾಗುವುದು ಎಂದು ಫಿನಿಶಿಂಗ್ ಟಚ್ ಸಂಸ್ಥೆಯ ಸಂಸ್ಥಾಪಕ ಆಡಳಿತ ನಿರ್ದೇಶಕ ನವೀನ್ ಜೆ.ಭಂಡಾರಿ ಬಸ್ರೂರು ತಿಳಿಸಿದ್ದಾರೆ.

ಅತಿಗಾಮಿ ವಾಡಿಕೆಯ (ಸಾಂಪ್ರದಾಯಿಕ) ಕೇಶ ಪದ್ಧತಿ (Ultra Customized Hair Systems) ಹಾಗೂ ಶಸ್ತ್ರ ಚಿಕಿತ್ಸೆವಿಲ್ಲದೆ ಕೂದಲುಗಳ ಸ್ಥಾನಪಲ್ಲಟ (Non Surgical Hair Replacement) ವೃತ್ತಿಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಕೊಂಡಿರುವ ತೆರೆಮರೆಯ ಸೇವಕ ಕೇಶಕರ್ತ ನವೀನ್ ಭಂಡಾರಿ ಅವರ ಫಿನಿಶಿಂಗ್ ಟಚ್‍ನ ನೂತನ ಶಾಖೆಯು ಪೂರ್ವಾಹ್ನ 10.00 ಗಂಟೆಗೆ ಗಣೇಶ ಹವನ, ಗಣಹೋಮ ಇತ್ಯಾದಿ ಧಾರ್ಮಿಕ ಪೂಜಾಧಿಗ ಳೊಂದಿಗೆ ನೆರವೇರಲಿದೆ. ನಂತರ ಭಂಡಾರಿ ಮಹಾ ಮಂಡಲದ ಸಂಸ್ಥಾಪಕಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ಹಾಗೂ ಸಮಾಜ ಸೇವಕಿ ಶ್ರೀಮತಿ ಅಮಿತಾ ಗಿರೀಶ್ ಅತಿಥಿü ಅಭ್ಯಾಗತರುಗಳಾಗಿ ಆಗಮಿಸಲಿರುವರು ಎಂದು ನವೀನ್ ಭಂಡಾರಿ ತಿಳಿಸಿದ್ದಾರೆ.

ನವೀನ್ ಜೆ.ಭಂಡಾರಿ ಬಸ್ರೂರು:

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಕೋಣಿ ನಿವಾಸಿಗಳಾದ ಜಗನ್ನಾಥ್ ಭಂಡಾರಿ ಮತ್ತು ಶಾಂತಾ ಭಂಡಾರಿ ಸುಪುತ್ರನಾಗಿರುವ ನವೀನ್ ಜೆ.ಭಂಡಾರಿ ಇದೀಗ `ಫಿನಿಶಿಂಗ್ ಟಚ್' ಪ್ರಸಿದ್ಧರು. ಜಗನ್ನಾಥ್ ಭಂಡಾರಿ ದಂಪತಿ ಶಿವಮೊಗ್ಗದ ಸೊರಬದಲ್ಲಿ ಉದ್ಯೋಗ ಹರಸಿ ನೆಲೆಯಾಗಿದ್ದು ಅಲ್ಲೇ ನವೀನ್ ಭಂಡಾರಿ ಜನ್ಮವಾಗಿತ್ತು ಇಲ್ಲೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ತನಕ ಶಿಕ್ಷಣ ಪೂರೈಸಿ 1994ರಲ್ಲಿ ಮುಂಬಯಿಗೆ ಕಳುಹಿಸಿದ್ದರು. ಇಲ್ಲಿ ತನ್ನ ಮಾವ ಸುರೇಶ್ ಭಂಡಾರಿ ಅಶ್ವಥಪುರ (ಮೂಡಬಿದ್ರೆ) ಹಾಗೂ ಗೋವಿಂದ ಭಂಡಾರಿ ಸುರತ್ಕಲ್ ಅವರಲ್ಲಿ ಕುಲಕಸುಬು ಕೌರಿಕ ಕೆಲಸ ಅಭ್ಯಾಸಿಸಿ 1997ರಲ್ಲಿ ಮಲಾಡ್‍ನಲ್ಲಿ ಬಾಡಿಗೆ ಅಂಗಡಿ ಪಡೆದು ತನ್ನದೇ ಸ್ವಂತದ ಉದ್ಯಮ ಆರಂಭಿಸಿದರು. ಕ್ರಮೇಣ ಕ್ಷೌರಿಕಾನುಭ ಪಡೆಯುತ್ತಿದ್ದಂತೆಯೇ 2008ರಲ್ಲಿ ಮಹಾರಾಷ್ಟ್ರ ಸಲೂನ್ ಬ್ಯೂಟಿ ಪಾರ್ಲರ್ ಅಸೋಸಿಯೇಶನ್‍ನಲ್ಲಿ ಸದಸ್ಯರಾಗಿ ನಂತರ ಕೋಶಾಧಿಕಾರಿ ಆಗಿ ಸೇವೆ ಸಲ್ಲಿಸಿದರು. ಅದೇ ವರ್ಷ ಮಲಾಡ್‍ನಲ್ಲಿ ಸಂಭ್ರಮಿಸಲ್ಪಟ್ಟ ಸ್ವಾತಂತ್ರೋತ್ಸವ ಸಂಭ್ರಮದ ಶುಭಾವಸರದಲ್ಲಿ ವಿದ್ಯಾಥಿರ್üಗಳ ಸಹಿತ ಸುಮಾರು1500 ಮಕ್ಕಳ ತಲೆಕೂದಲನ್ನು ಉಚಿತವಾಗಿ ಕತ್ತರಿಸಿ ಪ್ರಶಂಸೆಗೆ ಪಾತ್ರರಾದರು. ಅಪಘಾತಗಳಿಗೆ ಸಿಲುಕಿ ತಲೆಕೂದಲು ಕಳಕೊಂಡವರಿಗೆ, ಕ್ಯಾನ್ಸರ್ ರೋಗಿಗಳಿಗೆ, ಕೆಮೋ ಥೆರಾಪಿಯಿಂದ ಕೂದಲು ಕಳಕೊಂಡವರಿಗೆ ಕನಿಷ್ಠ ದರದಲ್ಲಿ ಸೇವೆಯನ್ನೊದಗಿಸುವ ನವೀನ್ ಜನಮಾನಸದಲ್ಲಿ ಸೇವಾಥಿರ್ü ಆಗಿ ಜನಾನುರೆಣಿಸಿದ್ದಾರೆ.

ಅದೃಷ್ಟವಶತ್ ಎಂಬಂತೆ ಅಮೇರಿಕಾ ಪ್ರಜೆಯೋರ್ವರ ದೂರವಾಣಿ ಕರೆಗೆ ಸ್ಪಂದಿಸಿ ನವಿಮುಂಬಯಿಯಲ್ಲಿ ಬೋಳು ತಲೆಗೆ ಕೃತಕ ಕೂದಲು ಜೋಡಿಸುವಲ್ಲಿ ನಿಸ್ಸೀಮರೆಣಿಸಿದರು. ಈ ಬಗ್ಗೆ ನಿಪುಣರಾದ ನವೀನ್ ಕೇಶ ವಿನ್ಯಾಸದ ನವೀನತೆಯನ್ನು ಮೈಗೂಡಿಸಿ ಯಶಸ್ವಿಯಾದಂತೆ ಕ್ರಮೇಣ ಅವಿರತ ಪರಿಶ್ರಮದಿಂದ ಭಾರತದಾದ್ಯಂತ ಶಾಖೆಗಳನ್ನು ತೆರೆಯುವಲ್ಲಿ ಯಶಕಂಡು ಸದ್ಯ ದೆಹಲಿ, ಡೆಹರಾಢೂನ್ ನವಿಮುಂಬಯಿ ವಾಶಿ, ಮಲಾಡ್, ಮಣಿಪಾಲ, ಶ್ರೀಲಂಕಾ ನಗರಗಳಲ್ಲೂ ಕೃತಕ ಕೂದಲು ರೂಪಿಸುವ ನಾನ್ ಸರ್ಜಿಕಲ್ ಹೇರ್ ರಿಪ್ಲೇಸ್‍ಮೆಂಟ್ ಹೇರ್ ಟ್ರಾನ್ಸ್ ಪ್ಲಾಂಟ್ ಶಾಖೆಗಳನ್ನು ತೆರೆದು ಪ್ರಗತಿಪಥದಲ್ಲಿ ಹೆಜ್ಜೆಯನ್ನಿರಿಸಿದರು.

2010ರಲ್ಲಿ ಶ್ರೀಲಂಕಾದ ಹುಸೇನ್ ಪಾಟ್ನೀ ಪರಿಚಯ ಹಾಗೂ ಪೆÇ್ರೀತ್ಸಾಹದಂತೆ ಶ್ರೀಲಂಕಾಕ್ಕೆ ತೆರಳಿ ಅಲ್ಲಿ ಹೇರ್ ರಿಪ್ಲೇಸ್‍ಮೆಂಟ್ ಮಳಿಗೆ ತೆರೆದರು. ಮಾತ್ರವಲ್ಲದೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಶ್ರೀಸೇನ ಅವರ ತಲೆಗೆ ಕೃತಕ ಕೂದಲು ಜೋಡಿಸಿ ವೃತ್ತಿಪರತೆಯಲ್ಲಿ ಇನ್ನಷ್ಟು ಪ್ರಸಿದ್ಧಿ ಗಳಿಸಿಕೊಂಡಿರುವರು. ಮುಂಬಯಿಯಲ್ಲಿನ ಉದ್ಯಮಿ ಅವಿನಾಶ್ ಭೋಸ್ಲೆ, ಅನೇಕ ಬಾಲಿವುಡ್ ತಾರೆಯರ, ಕಿರುತೆರೆ ಕಲಾವಿದರ, ರಾಜ್ಯರಾಷ್ಟ್ರೀಯ ರಾಜಕಾರಣಿಗಳ, ಕ್ರೀಡಾಪಟುಗಳು ಸೇರಿದಂತೆ ಅನೇಕ ಗಣ್ಯರಿಗೆ ಶಾಸ್ವತ ಕೃತಕ ಕೂದಲಿನ ಅಳವಡಿಕೆ ನಡೆಸಿದ್ದಾರೆ. ಅಂತೆಯೇ ಎರಡು ವರ್ಷಕ್ಕೊಮ್ಮೆ ಅವರ ಕೃತಕ ಕೂದಲಿನ ಸಮಸ್ಯೆಗಳನ್ನು ತಪಾಸಿ ಆರೈಕೆಗೈಯುತ್ತಿರುವುದು ತುಳು ಕನ್ನಡಿಗರ ಅಭಿಮಾನವಾಗಿದೆ.

ಈ ವರೇಗೆ ಸುಮಾರು 5,000 ಜನರ ಕೇಶ ರಿಪ್ಲೇಸ್‍ಮೆಂಟ್ ಮಾಡಿದ್ದು ಪ್ರಸಿದ್ಧಿಯಲ್ಲಿದ್ದಾರೆ. ಶೀಘ್ರವೇ ಹೇರ್ ರಿಪ್ಲೇಸ್‍ಮೆಂಟ್ ಅಕಾಡೆಮೆ ತೆರೆಯುವ ಆಶಯವನ್ನು ಹೊಂದಿದ್ದು ಅದರಲ್ಲೂ ಭಂಡಾರಿ ಸಮುದಾಯದ ಯುವಜನತೆಗೆ ವಿಶೇಷವಾದ ಅವಕಾಶ, ತರಬೇತಿ ನೀಡಿ ಸ್ವಯಂ ಉದ್ಯಮಿಗಳಾಗಿಸುವ ಕನಸು ಹೊಂದಿದ್ದಾರೆ. ಅಂತೆಯೇ ದುಬಾಯಿ, ಲಂಡನ್ ರಾಷ್ಟ್ರಗಳಲ್ಲೂ ತಮ್ಮ ಉದ್ಯಮವನ್ನು ವ್ಯಾಪಿಸುವ ಆಶಯ ನವೀನ್ ಹೊಂದಿದ್ದಾರೆ.

ಸದ್ಯ ವಿೂರಾರೋಡ್ ಪೂರ್ವದ ನಿತ್ಯಾನಂದ ನಗರದ ಗೌರವ್ ಗ್ಯಾಲಾಕ್ಷಿ ಅಪಾರ್ಟ್‍ಮೆಂಟ್‍ನಲ್ಲಿ ಪತ್ನಿ ವೀಣಾ ಭಂಡಾರಿ ಮತ್ತು ಸುಪುತ್ರಿ ವೃದ್ಧಿ ಭಂಡಾರಿ ಹಾಗೂ ಸುಪುತ್ರ ವಂಶ್ ಭಂಡಾರಿ ಜೊತೆ ಸಾಂಸರಿಕ ಬದುಕು ಸಾಗಿಸುತ್ತಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here