Thursday 25th, April 2024
canara news

ಮಲಾೈಕಾ ಗೃಹಪಯೋಗಿ ಸಂಸ್ಥೆಯಿಂದ ವರ್ಣ ಏರ್‍ಕೂಲರ್ಸ್ ಮಾರುಕಟ್ಟೆಗೆ ಬಿಡುಗಡೆ

Published On : 13 Apr 2017   |  Reported By : Rons Bantwal


ಮುಂಬಯಿ, ಎ.13: ನಗರದ ಹೆಸರಾಂತ ಗೃಹಪಯೋಗಿ ವಸ್ತುಗಳ ಮಳಿಗೆ ಮಲಾೈಕಾ ಸಂಸ್ಥೆಯು ವರ್ಣ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಸಂಸ್ಥೆಯಿಂದ ಉತ್ಪಾಧಿತ ವರ್ಣ ಏರ್‍ಕೂಲರ್ಸ್‍ಗಳನ್ನು ಕಳೆದ ಭಾನುವಾರ ಸಂಜೆ ಮಂಗಳೂರುನ ಗೋಲ್ಡ್‍ಫಿಂಚ್ ಹೊಟೇಲ್‍ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿತು.

ವರ್ಣ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಭಟ್ ಮಾತನಾಡಿ ಗೃಹಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದಲ್ಲಿ ಪ್ರಮುಖ ಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ಮಲಾೈಕಾ ಸಂಸ್ಥೆಯು ವರ್ಣ ಏರ್‍ಕೂಲರ್ಸ್ ಉಭಯ ರಾಜ್ಯಗಳ ಪ್ರಮುಖ ವಿತರಕರುಗಳಾಗಿದ್ದಾ -ರೆ. ತುಳುಕನ್ನಡಿಗರದ್ದೇ ಆಗಿರುವ ಮಲಾೈಕಾ ಸಂಸ್ಥೆಯ ಮೂಲಕ ನಮ್ಮ ಉತ್ಪನ್ನಗಳನ್ನು ಇಲ್ಲಿನ ಜನಜನರ ಮನೆಮನೆಗಳನ್ನು ಸುಲಭವಾಗಿ ತಲುಪಿಸಿ ಮನಗಳನ್ನು ತಂಪಾಗಿಸುವ ಭರವಸೆ ನಮಗಿದೆ ಎಂದರು.

ವರ್ಣ ಸಂಸ್ಥೆಯ ಉಪಾಧ್ಯಕ್ಷ ಪೂರ್ಣಾನಂದ ಶೇರೆಗಾರ್ ಮಾತನಾಡಿ ಆಧುನಿಕ ತಂತ್ರಜ್ಞಾನದ ಬಳಕೆ ವರ್ಣ ಏರ್‍ಕೂಲರ್ಸ್‍ಗಳಲ್ಲಿ ಬಳಸಲಾಗಿದ್ದು, ಬಾಲ್ ಬೇರಿಂಗ್‍ನೊಂದಿಗೆ ತಾಮ್ರದ ಕಾಯಿಲ್ ಅಳವಡಿಸಿ ಸಿದ್ಧಪಡಿಸಿದ ಭಾರತದ ಏಕೈಕ ಏರ್‍ಕೂಲರ್ಸ್ ಆಗಿದೆ ಎಂದರು.

ನಮ್ಮ ಸಂಸ್ಥೆ ಕಳೆದ ಅನೇಕ ವರ್ಷಗಳಿಂದ ವಿಶ್ವದ ಹತ್ತಾರು ಪ್ರತಿಷ್ಠಿತ ಬ್ರಾಂಡ್‍ಗಳ ಗೃಹಪಯೋಗಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಪಾತ್ರವಾಗಿದೆ. ಹೆಸರಾಂತ ಕಂಪೆನಿಗಳ ವೈವಿಧ್ಯಮಯ ಉತ್ಪನ್ನಗಳ ವಿಸ್ತಾರ ಸಂಗ್ರಹ, ವಿತರಣೆ, ಸ್ವಂತಿಕೆಯ ಉತ್ಪನ್ನಗಳ ಮಾರಾಟದೊಂದಿಗೆ ಬದ್ದತೆಯನ್ನು ಹಾಗೂ ವಿಶ್ವಾಸವನ್ನು ಕಾಯ್ದಿರಿಸಿದೆ. ಕಳೆದ ಅನೇಕ ವರ್ಷಗಳಿಂದ ಕರ್ನಾಟಕದ ಕರಾವಳಿಯ ನಗರಗಳಲ್ಲೂ ನಮ್ಮ ಶಾಖೆಗಳನ್ನು ತೆರೆದು ಸೇವಾ ನಿರತವಾಗಿ ಜನಮನ್ನಣೆ ಪಡಿದಿದೆ. ಆ ಮೂಲಕ ಮಲಾೈಕಾ ಸಂಸ್ಥೆ ಸದ್ಯ ಮುಂಬಯಿ ಹಾಗೂ ಉಪನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗೃಹಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮನೆಮಾತಾಗಿದೆ ಎಂದು ಮಲಾೈಕಾ ಎಪ್ಲೈಯನ್ಸಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ನುಡಿದರು.

ವರ್ಣ ಸಂಸ್ಥೆಯ ಆಡಳಿತ ನಿರ್ದೇಶಕ ಉತ್ತಮ್ ಪಿ.ಭಟ್ ಸ್ವಾಗತಿಸಿದರು. ಮಲಾೈಕಾ ಸಂಸ್ಥೆ ಮಂಗಳೂರು ಪ್ರಾದೇಶಿಕ ನಿರ್ವಾಹಣಾ ಪ್ರಬಂಧಕಿ ರೀನಾ ಸಂದೀಪ್ ವಂದಿಸಿರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here