Monday 26th, June 2017
canara news

ಸೀಮೆ ಎಣ್ಣೆ ಕುಡಿದು ಮಗು ಸಾವು

Published On : 19 Apr 2017   |  Reported By : Canaranews Network


ಮಂಗಳೂರು: ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸೀಮೆ ಎಣ್ಣೆ ಕುಡಿದು ಒಂದು ವರ್ಷ ಎರಡು ತಿಂಗಳ ಮಗು ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ಸಜೀಪಮೂಡ ಗ್ರಾಮದ ಸುಭಾಷ್ ನಗರದ ಜಲೀಲ್ ಎಂಬುವವರ ಪುತ್ರಿ ಆಯಿಷಾ ಜಯಿಷಾ ಮೃತಪಟ್ಟ ಮಗು. ಜಲೀಲ್ ತಮ್ಮ ಕಾರ್ ನಲ್ಲಿದ್ದ ಡಾಮರನ್ನ ತೆಗೆಯಲು ಸೀಮೆ ಎಣ್ಣೆಯನ್ನು ಖರೀದಿಸಿ ಮನೆಗೆ ತಂದಿದ್ದರು.

ಬಳಕೆ ಮಾಡಿ ಉಳಿದ ಸೀಮೆ ಎಣ್ಣೆಯನ್ನು ಸಣ್ಣ ಬಾಟಲಿಯಲ್ಲಿ ಮನೆಯೊಳಗಿಟ್ಟಿದ್ದರು.ಆದರೆ ಇದನ್ನು ಅರಿಯದ ಮಗು ಆಟವಾಡುತ್ತಾ ಸೀಮೆ ಎಣ್ಣೆ ಕುಡಿದಿದೆ.

ವಿಚಾರ ಗೊತ್ತಾದ ಕೂಡಲೇ ಮನೆಯವರು ಮಂಗಳೂರಲ್ಲಿರುವ ಖಾಸಗಿ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
More News

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾಗಿ ಜಯ ಸಿ.ಸುವರ್ಣ ಪುನರಾಯ್ಕೆ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷರಾಗಿ ಜಯ ಸಿ.ಸುವರ್ಣ ಪುನರಾಯ್ಕೆ
ಟೆನ್ನಿಸ್ ವಾಲಿಬಾಲ್ ಭಾರತಕ್ಕೆ ಚಿನ್ನದ ಪದಕ ತಂದ ಅಧಿತಿ ಸಾಲ್ಯಾನ್
ಟೆನ್ನಿಸ್ ವಾಲಿಬಾಲ್ ಭಾರತಕ್ಕೆ ಚಿನ್ನದ ಪದಕ ತಂದ ಅಧಿತಿ ಸಾಲ್ಯಾನ್
ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ
ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ

Comment Here