Thursday 26th, April 2018
canara news

ವಿದ್ಯಾ ಪ್ರಸಾರಕ ಮಂಡಳದ ವಜ್ರಮಹೋತ್ಸವ ಉದ್ಘಟನಾ ಸಮಾರಂಭ ಮತ್ತು ಸಂಸ್ಥೆಯ ಸ್ಥಾಪನಾಚರಣೆ

Published On : 20 Apr 2017   |  Reported By : Ronida Mumbai


ಶಿಕ್ಷಣದಿಂದ ಮಾತ್ರ ಪ್ರಬಲ ಪರಿಪಕ್ವತೆಯ ಸಮಾಜ ನಿರ್ಮಾಣ-ಸಮೀರ್ ಸೊಮೈಯಾ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುoಬಯಿ, ಎ.20: ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯ ಮಾಡುವುದೇ ಸಭ್ಯತನ. ವಿದ್ಯೆ ವಿನಯದ ಸಂಕೇತ. ದೇವರ ದಯೆ ಇದ್ದರೆ ದೈವವು ಅರಳುತ್ತದೆ. ಮನುಷ್ಯನಲ್ಲಿ ನಿಸ್ವಾರ್ಥ ಮನಸ್ಸಿನ ಸದ್ಗುಣಗಳ ಸಂಗಮವಿದ್ದರೆ, sಸರ್ವಾಂಗೀಣ ವಿಕಾಸವಾಗುವುದರಲ್ಲಿ ಸಂದೇಹವಿಲ್ಲ. ಶಿಕ್ಷಣದ ಮೇಲಿನ ಅಭಿಮಾನದಿಂದ, ಶಿಕ್ಷಣ ಅಭಿಮಾನಿಗಳು, ಶಿಕ್ಷಣ ತಜ್ಞರು ಹೊರನಾಡಿನಲ್ಲಿ ಸಸಿಯನ್ನು ಹುಟ್ಟು ಹಾಕಿದ ಈ ಸಂಸ್ಥೆ ಇಂದು ಶಶಿಯಾಗಿ ಬಾನಂಗಳದ ಬೆಳದಿಂಗಳಾಗಿ ಪರಿಪಕ್ವತೆಯ ಜ್ಯೀತಿಯ ಕೀರಣೋತ್ಸವವನ್ನು ಪ್ರತಿಬಿಂಬಿಸುದರಲ್ಲಿ ಮಹನೀಯರ, ಅಹರ್ನಿಸಿಗಳ ಹಗಲಿರುಳಿನ ಶ್ರಮ ಅಡಗಿದೆ. ನಾಡುನುಡಿ ಸಂಸ್ಕøತಿಯ ಜೊತೆಗೆ ಸಮಾಜ ಸೇವೆಯಲ್ಲಿ ಈಶ ಸೇವೆ ಮಾಡುವ ಮನೋಪ್ರವೃತ್ತಿ, ಮನೋವೈಶಾಲ್ಯತೆ ಇದೆಯಲ್ಲಾ ಅದನ್ನು ಎಷ್ಟು ಕೊಂಡಾಡಿದರೂ ಸಾಲದು. ಮನುಷ್ಯನಲ್ಲಿರುವ ಅಜ್ಞಾನ, ಅಂಧಕಾರ, ಅಂಧಶ್ರದ್ಧೆಯನ್ನು ಹೊಡೆದೊಡಿಸಿ ಪರಿಶುದ್ದವಾದ ಆತ್ಮ ವಿಮರ್ಶೆಯನ್ನು, ಚಿಂತನ-ಮಂಥನವನ್ನು ಪ್ರತಿಬಿಮಬಿಸಿ, ವ್ಯಕ್ತಿತ್ವ ವಿಕಾಸವನ್ನು ಬಿತ್ತರಿಸುವ, ಮೌಲ್ಯಭರಿತವಾದ ಸದ್ಗುಣಗಳ ಮೂಲಕ ಮನುಷ್ಯತ್ವದ ವಿಚಾರಧಾರೆಗಳಿಂದ ಆದರ್ಶ ಸಮಾಜವನ್ನು ರೂಪಿಸುವ ವಿದ್ಯಾ ಪ್ರಸಾರಕ ಮಂಡಳಿಯ ಕಾರ್ಯವೈಖರಿಯನ್ನು ಗೋದಾವರಿ ಬಾಯರೆಪಾಯನರಿಸ್ ಲಿಟೆಡ್‍ನ ಕಾರ್ಯಾಧ್ಯಕ್ಷ ಮತ್ತು ವಿದ್ಯಾ ಪ್ರಸಾರಕ ಆಡಳಿತ ಮಂಡಳಿ ನಿರ್ದೇಶಕ ಸಮೀರ್ ಸೊಮೈಯಾ ಶ್ಲಾಘಿಸಿದರು.

ವಿದ್ಯಾ ಪ್ರಸಾರಕ ಮಂಡಳದ ವಜ್ರಮಹೋತ್ಸವ ಉದ್ಘಟನಾ ಸಮಾರಂಭ ಮತ್ತು ಸಂಸ್ಥೆಯ ಸ್ಥಾಪನಾಚರಣಾ ದಿನಾಚರಣೆಗೆ ಚಾಲನೆಯನ್ನಿತ್ತು ಸೊಮೈಯಾ ಮಾತನಾಡಿದರು. ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಡಾ| ಪಿ. ಎಂ ಕಾಮತ್ ದೀಪ ಪ್ರಜ್ವಲಿಸಿ, ಅತಿಥಿüಗಣ್ಯರಿಗೆ ಗೌರವಾರ್ಪಣೆಗೈದರು.

ಡಾ| ಕಾಮತ್ ಮಾಡುತ್ತಾ 60ರ ಸಂವತ್ಸರ ಹರ್ಷದಾಯಕವಾಗಿ ಎಲ್ಲಿಲ್ಲದ ಸಂತೋಷವಾಗುತ್ತದೆ. 1957 ರಿಂದ ಇಂದಿನವರೆಗೆ ಸ್ಥಾಪನೆ, ಬೆಳವಣಿಗೆ, ವಿಕಾಸ, ಪಟ್ಟಂತ ಶ್ರಮ, ಮಾನವನನ್ನು ಮನುಷ್ಯನನ್ನಾಗಿ, ಮಾನವೀಯತೆ, ಹೃದಯವಂತಿಕೆ, ಮಾನಸಿಕ ವಿಶಾಲತೆ, ಕೌಶಲ್ಯತೆ, ಶಿಸ್ತು ಸಂಯಮ, ಅಭಿಮಾನ-ಸ್ವಾಭಿಮಾನ, ಸಹಾಯ-ಸಹಕಾರ-ಸಹೋದರತ್ವ, ಗುಣಾತ್ಮಕ ಮೌಲ್ಯಗಳು, ವಿವೇಕ-ವಿನಮ್ರತೆ, ನಯ-ವಿನಯ-ವಿಮ್ರತೆ, ಪ್ರಯತ್ನ-ಪ್ರಾಮಾಣಿಕತೆ-ಶಿಸ್ತು ಮುಂತಾದ ಮಹಾಮಯ ಗುಣಗಳ ದಿವ್ಯ ಭವ್ಯ ಜ್ಯೋತಿ ಎಂದರೇನೆ ಶಿಕ್ಷಣ. ಶಿಕ್ಷಣವು ನಿರಂತರವಾದ ಪ್ರಕ್ರಿಯೆಯಾಗಿದೆ. ಬೆಳಕು ಜ್ಞಾನದ ಸಂಕೇತ. ಸರ್ವಾಂಗೀಣ ವಿಕಾಸದ ಮೂಲ ಬೇರು ಶಿಕ್ಷಣ. ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟರೆ ಬೆಲೆಯನ್ನು ತಿಳಿಯಲು ಹೇಗೆ ಸಾದ್ಯವಿಲ್ಲವೋ ಹಾಗೆಯೇ ವಿದ್ಯಾಹೀನನಿಂದ ಸಂಪಾದಿಸಿದ ಅಧಿಕಾರ, ಅಂತಸ್ತು, ಸಂಪತ್ತು, ಐಶ್ವರ್ಯ ಅಲ್ಪಕಾಲಿಕ ಮಾತ್ರ. ವಿದ್ಯೆಯ ವಿವೇಕದ ಸಂಪತ್ತಿನಿಂದ ಆದರ್ಶ ರಾಷ್ಟ್ರದ ನಿರ್ಮಾಣ ಕಾರ್ಯದಲ್ಲಿ ನಿರತವಾಗಿರುವ ಈ ವಿದ್ಯಾ ದೇಗುಲ ರಾಷ್ಟ್ರಕ್ಕೆ ಅಲ್ಲ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ವಿದ್ಯಾ ಪ್ರಸಾರಕ ಮಂಡಳವು ಶಿಕ್ಷಣ ಪ್ರೇಮಿಗಳ ಭದ್ರವಾದ ಗೂಡು ಮತ್ತು ಆರ್ಥಿಕ ಸ್ಥರವಿಲ್ಲದೆ, ನಂಬಿಕೆ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಪ್ರೋತ್ಸಾಹ, ಉತ್ಸಾಹದ ಬೆಂಬಲದೊಂದಿಗೆ ಸಂಸ್ಥೆಯ ಸ್ಥಾಪನೆ, ಬೆಳೆದು ಬಂದ ಪರಿ, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕಾಗಿ ಹಾಕಿಕೊಂಡ ಯೋಜನೆಗಳು, ಸೌಲಭ್ಯಗಳು, ಶಿಕ್ಷಣ ರಂಗದಲ್ಲಿಯ ಕ್ರಾಂತಿಯನ್ನು ವಿ.ಪಿ.ಎಂ ಇಂಟೀಗ್ರೇಶನ್ ನ್ಯಾಶನಲ್ ಸ್ಕೂಲ್ ಐರೋಳಿಯ ಉದಾಹರಣೆ ಮೂಲಕ ಹೇಳಿದರು. ಬಾಲವಾಡಿಯಿಂದ ಮಹಾ ವಿದ್ಯಾಲಯದವರೆಗಿನ ಕನ್ನಡ ಆಂಗ್ಲ ಮಾಧ್ಯಮ ಮತ್ತು ಅದರಲ್ಲಿಯ ವಿವಿಧ ವಿಷಯಗಳ ವಿಭಾಗಗಳು, ಕನ್ನಡ ಶಾಲೆಯ ಮಕ್ಕಳ ಕುರಿತು ತೆಗೆದುಕೊಳ್ಳುವ ವಿಶೇಷ ಜಾಗೃತಿಗಳು ಸ್ತುತ್ಯಾರ್ಹ ಎಂದು ಸಂಸ್ಥೆಯ ಅಧ್ಯಕ್ಷ, ನಿವೃತ್ತ ನ್ಯಾಯಾಧಿಶ ಹೊಸಬೆಟ್ಟು ಸುರೇಶ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಡಾ| ಕೆ. ಮೋಹನ್, ಮಂಡಳದ ಗೌರವ ಕಾರ್ಯದರ್ಶಿ ಬಿ.ಹೆಚ್ ಕಟ್ಟಿ, ಜೊತೆ ಕಾರ್ಯದರ್ಶಿ ಚಿತ್ರಾಕ್ಷಿ ಶೆಟ್ಟಿ, ಸಹ ಕಾರ್ಯದರ್ಶಿ ತಿ ಚಿತ್ರಾಕ್ಷಿ ಶೆಟ್ಟಿ, ಖಜಾಂಚಿ ಎನ್.ಎಂ ಗುಡಿ, ಸಹ ಮುಲುಂಡ್‍ನ ಶಾಸಕ ಸರ್ದಾರ್ ತಾರಾಸಿಂಗ್, ಎನ್.ಜಿ.ಎ ಮೇನನ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮಂಡಳದ ಪದಾದಿಕಾರಿಗಳು, ನಿವೃತ್ತ ಪ್ರಾಂಶುಪಾಲರು, ಪ್ರಾಂಶುಪಾಲರು, ಶಿಕ್ಷಕರು, ಪಾಲಕರು, ವಿದ್ಯಾಥಿರ್üಗಳು ಸಮಾವೇಶವಾಗಿದ್ದು, ವಿ.ಪಿ.ಎಂ ನ್ಯಾಶನಲ್ ಇಂಟಿಗ್ರೇಶನ್ ಸ್ಕೂಲ್ ಐರೋಳಿ ಇದರ ವಿದ್ಯಾಥಿರ್üಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಶಿಕ್ಷಕಿಯರಾದ ರಶ್ಮೀ ತಮಾನೆ ಮತ್ತು ಎಸ್.ವಿಜಯಲಕ್ಷ್ಮೀ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮದ ನಿರ್ವಹಣೆಗೈದರು.

ಖಜಾಂಚಿ ಪೆÇ್ರ| ಸಿ.ಜೆ ಪೈ ಧನ್ಯವದಿಸಿದರು. ವಿವಿಧ ವಿಭಾಗಗಳ ವಿದ್ಯಾಥಿರ್üಗಳು ಸಾಂಸ್ಕøತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪನ ಕಂಡಿತು.

 

 
More News

ನಳಿನ್ ಗೆ ಬಿಜೆಪಿ ಕಾರ್ಯಕರ್ತರೇ ವಿಶ್ರಾಂತಿ ನೀಡಲಿದ್ದಾರೆ: ರಮಾನಾಥ್ ರೈ
ನಳಿನ್ ಗೆ ಬಿಜೆಪಿ ಕಾರ್ಯಕರ್ತರೇ ವಿಶ್ರಾಂತಿ ನೀಡಲಿದ್ದಾರೆ: ರಮಾನಾಥ್ ರೈ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆ
ಬಾಲಕಿಗೆ ಲೈಂಗಿಕ ಕಿರುಕುಳ ವ್ಯಕ್ತಿಯ ಬಂಧನ
ಬಾಲಕಿಗೆ ಲೈಂಗಿಕ ಕಿರುಕುಳ ವ್ಯಕ್ತಿಯ ಬಂಧನ

Comment Here