Thursday 25th, April 2024
canara news

ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಪ್ರವರ್ಧನಾ ಶಿಬಿರ

Published On : 01 Nov 2014   |  Reported By : Rayee Rajkumar


ಬೆಂಗಳೂರಿನಲ್ಲಿರುವ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯು ಬಳಕೆದಾರರ ಅಧ್ಯಯನ ಕೇಂದ್ರದ ಮೂಲಕ ಕನಾ೯ಟಕ ಸರಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಭಾಗಿತ್ವದಲ್ಲಿ ಗ್ರಾಹಕ ಹಿತರಕ್ಷಣಾ ಕಾಯಿದೆಯನ್ನು ಬಲಗೊಳಿಸುವ ಇರಾದೆಯಲ್ಲಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಪ್ರವರ್ಧನಾ ಶಿಬಿರವನ್ನು ಸಪ್ಟಂಬರ್ 1 ಹಾಗೂ 2 ರಂದು ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯಲ್ಲಿರುವ ಐ,ಎ,ಎಸ್. ಅಧಿಕಾರಿಗಳ ಸಂಸ್ಥಯಲ್ಲಿ ವಿಚಾರಗೋಷ್ಠಿಯನ್ನು ಏರ್ಪಡಿಸಿತ್ತು. ದ.ಕ.ಜಿಲ್ಲಾ ಗ್ರಾಹಕ ಸಂಘಟನೆಯ ಒಕ್ಕೂಟದ ಪರವಾಗಿ ಕಾರ್ಯದಶಿ೯ ವಿಷ್ಣು ಪಿ. ನಾಯಕ್, ಜತೆ ಕಾರ್ಯದಶಿ೯ ರಾಯೀ ರಾಜಕುಮಾರ್ ರವರು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಬಳಕೆದಾರರ ಅಧ್ಯಯನ ಕೇಂದ್ರದ ಸಂಪಕಾ೯ಧಿಕಾರಿ ಸಂಪನ್ಮೂಲ ವ್ಯಕ್ತಿ ಶ್ರೀ ವೈ.ಜಿ.ಮುರಳೀಧರನ್ ರವರು ಎಲ್ಲರನ್ನೂ ಸ್ವಾಗತಿಸಿ ಸಂಸ್ಥೆ ಕೇಂದ್ರ ದ ಕಾರ್ಯಕ್ರಮ ಹಾಗೂ ರೂಪುರೇಷೆಗಳ ಮಾಹಿತಿ ಇತ್ತರು. ಕೇಂದ್ರದ ಚೇರ್ಮನ್ ಎಸ್. ರಾಮನಾಥನ್ ರು ತಮ್ಮ ಮಾತಿನಲ್ಲಿ ರಾಹ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳ ಹಾಗೂ ಕಾರ್ಯನಿರ್ವಹಿಸಲು ಸಮರ್ಥರಾದವರನ್ನು ಪ್ರವರ್ಧನೆಗೊಳಿಸುವ ಪ್ರಯತ್ನ

ನಡೆಸುತ್ತಿದ್ದೇವೆ. ಅದಕ್ಕಾಗಿ ಪ್ರತೀ ಜಿಲ್ಲೆಯಿಂದ ಕನಿಷ್ಠ 4-5 ಮಂದಿಯ ಒಂದೊಂದು ಗುಂಪನ್ನು ತರಬೇತಿಗೊಳಿಸಿ ಅವರಿಂದ ಎಲ್ಲ ಕಡೆಯಲ್ಲೂ ಬಳಕೆದಾರರ ಶಿಕ್ಷಣ, ಗ್ರಾಹಕ ಎಚ್ಚರ, ಗ್ರಾಹಕ ಸಂರಕ್ಷಣೆ, ಕಾನೂನಿನ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಲು ಪ್ರಯತ್ನಿಸಬೇಕಾಗಿದೆ. ಎಂದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಬಂದ ಅಭಿಪ್ರಾಯಗಳು:

1. ಎನ್.ಎಸ್.ಎಸ್. ಅಧಿಕಾರಿಗಳು ಹಾಗೂ ವಿದ್ಯಾಥಿ೯ ಗಳನ್ನು ತರಬೇತಿಗೊಳಿಸುವದರಿಂದ ಅವರ ಸಾಮಾಜಿಕ ಕಾರ್ಯಗಳಲ್ಲಿ ಗ್ರಾಹಕ ಶಿಕ್ಷಣ, ಸಂರಕ್ಷಣೆ ಮಾಹಿತಿಯ ಕಾರ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಬಹುದಾಗಿದೆ.

2. ಎಲ್ಲಾ ಕಾಲೇಜುಗಳಲ್ಲೂ ವಿದ್ಯಾಥಿ೯ ಗ್ರಾಹಕ ಕೇಂದ್ರಗಳನ್ನು/ಗ್ರಾಹಕ ಕ್ಲಬ್ ಗಳನ್ನು ತೆರೆಯುವದರಿಂದ ಉನ್ನತ ಶಿಕ್ಷಣ ಹೊಂದಿದ ವಿದ್ಯಾಥಿ೯ ಗಳೂ ಗ್ರಾಹಕ ಶಿಕ್ಷಣ ಪಡೆಯಲು ಸಾಧ್ಯವಿದೆ.

3. ಶಾಲಾ-ಕಾಲೇಜು ಪಠ್ಯಗಳಲ್ಲಿ ಕನಿಷ್ಠ ಒಂದಾದರೂ ಪಾಠ ಸಾರಣಿಯನ್ನು ಅಳವಡಿಸಿ ಅದಕ್ಕೆ ಪೂರಕವಾದ ವಿವರಗಳಿಗಾಗಿ ಗ್ರಾಹಕ ಮಾಹಿತಿ ಕೇಂದ್ರಗಳನ್ನು ಸಂಪಕಿ೯ಸುವಂತೆ ಮಾಡಬೇಕು.

4. ಬಿ.ಎಸ್.ಡಬ್ಲ್ಯೂ., ಎಂ.ಎಸ್.ಡಬ್ಲ್ಯೂ. ಕಲಿಕೆಯವರು ಗ್ರಾಹಕ ಸಂಬಂಧಿ ಅಧ್ಯಯನ ನಡೆಸುವಂತೆ ಪ್ರೇರೇಪಿಸಿ ಸಾರ್ವಜನಿಕರನ್ನು ತರಬೇತಿಗೊಳಿಸಲು ಕಾರ್ಯತ: ಪ್ರಯತ್ನಿಸುವಂತೆ ಮಾಡಬೇಕು.

ಕಾಯರ್ಾಗಾರಕ್ಕೆ ಸಂದರ್ಶಕ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರಾಜ್ಯ ಸರಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಯ ಮಹಾ ನಿದರ್ೇಶಕ ಶ್ರೀ ಹರ್ಷ ಗುಪ್ತ ರವರು ಮಾತನಾಡಿ ಸಧ್ಯ ಗ್ರಾಹಕ ಮಾಹಿತಿಯನ್ನು ಸದೃಢವಾಗಿ ಸಾರ್ವಜನಿಕರ ತನಕ ತಲುಪಿಸಲು, ಸಕಾಲವನ್ನು ಬಲಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದಕ್ಕಾಗಿ ತಮ್ಮೆಲ್ಲರ ಸಹಾಯ-ಸಹಕಾರ ಹಾಗೂ ಅಮೂಲ್ಯ ಸಲಹೆಗಳ ಅವಶ್ಯಕತೆ ಇದೆ. ಅದನ್ನು ಆಗಾಗ ನೀಡುತ್ತಿರಬೇಕು ಎಂದು ಕೇಳಿಕೊಂಡರು.

ಆ ಪ್ರಕಾರ ಬಂದ ಸಲಹೆಗಳು: 1. ಜಿಲ್ಲಾ ಮಟ್ಟದ ಗ್ರಾಹಕ ಮಾಹಿತಿ ಕೇಂದ್ರ ಗಳು ಎಲ್ಲಾ ಜಿಲ್ಲೆಗಳಲ್ಲೂ ತೆರೆಯಲ್ಪಡಬೇಕು.

2. ಗ್ರಾಹಕ ಮಾಹಿತಿ ಕೇಂದ್ರಕ್ಕೆ ಸಾಕಷ್ಟು ಅನುದಾನವನ್ನು ನೀಡಿ ಅದರಲ್ಲಿ ಪ್ರತೀ ತಿಂಗಳಿಗೆ ಎರಡು ಬಾರಿಯಾದರೂ ಸಾರ್ವಜನಿಕರಿಗೆ ಮಾಹಿತಿ, ತರಬೇತಿ ನೀಡುವಂತಾಗಬೇಕು.

3. ಈಗಾಗಲೇ ಇರುವ ಮಾಹಿತಿ ಕೇಂದ್ರಗಳಿಗೆ ಕೊರತೆಯಾಗಿರುವ ಅನುದಾನ ತಕ್ಷಣ ಬಿಡುಗಡೆಯಾಗುವಂತೆ ಆಗಬೇಕು.

4. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ದ.ಕ.ಜಿಲ್ಲಾ, ಶಿವಮೊಗ್ಗ ಜಿಲ್ಲಾ, ಉಡುಪಿ ಜಿಲ್ಲಾ ಮಾಹಿತಿ ಕೇಂದ್ರಗಳನ್ನು ಬಲಪಡಿಸಲು ಹಿಂದಿನ ಅನುದಾನ ತಕ್ಷಣ ಬಿಡುಗಡೆ ಮಾಡಿ ನೇರವಾಗಿ ಇಲಾಖೆಯಿಂದ ಅವರಿಗೇ ನೀಡುವಂತೆ ಮಾಡಬೇಕು. ಹಾಗೂ ಆ ಕೇಂದ್ರಗಳನ್ನು ಮೇಲ್ದಜೆ೯ಗೇರಿಸಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು.

5. ಸುಮಾರು 20 ಸಾವಿರಕ್ಕೂ ಮಿಕ್ಕಿ ದೂರುಗಳನ್ನು ಯಶಸ್ವಿಯಾಗಿ ಪರಿಹರಿಸಿದ ಮಂಗಳೂರಿನ ಹಾಗೂ ಉಡುಪಿಯ ಬಳಕೆದಾರರ ಸಂಸ್ಥೆಗಳನ್ನು ಮಾದರಿಯಾಗಿಟ್ಟುಕೊಂಡು ದೂರು ಪರಿಹಾರ ಕೇಂದ್ರಗಳನ್ನು ರಾಜ್ಯ ಮಟ್ಟದಲ್ಲಿ ಸ್ಥಾಪಿಸಬೇಕು.

6. ಎಲ್ಲಾ ಮಾಹಿತಿ ಕೇಂದ್ರ, ಗ್ರಾಹಕ ದೂರು ಪರಿಹಾರ ಕೇಂದ್ರಗಳಿಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಕಂಪ್ಯೂಟರ್, ಪ್ರೊಜೆಕ್ಟರ್, ಸಾಹಿತ್ಯ ಸಲಕರಣೆಗಳನ್ನು ಒದಗಿಸಿ ಸದೃಢಗೊಳಿಸಬೇಕೆಂದು ಹಲವಾರು ಸಲಹೆಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಬೆಳಗಾಂನ ಅಶೋಕ ಹಲಗಲಿ, ತುಮಕೂರಿನ ಶೇಷಾದ್ರಿ, ಶಿವಮೊಗ್ಗದ ಜಯಸ್ವಾಮಿ, ಗೋಪಾಲಕೃಷ್ಣ, ಹಾವೇರಿಯ ರಾಜಶೇಖರ್, ಶಿರಸಿಯ ಹೆಗ್ಡೆ ಕಡೆಕೋಡಿ, ಮಂಗಳೂರಿನ ತುಕಾರಾಮ್ ಎಕ್ಕಾರ್, ವಿಷ್ಣು ನಾಯಕ್, ಮೂಡುಬಿದಿರೆಯ ರಾಯೀ ರಾಜಕುಮಾರ್, ಹೊಸಪೇಟೆಯ ಹವಲ್ದಾರ್ ಪಾಂಡುರಂಗ ರಾವ್, ಮೈಸೂರಿನ ನಾಗೇಂದ್ರ ಮೂತಿ೯, ಬೆಂಗಳೂರಿನ ಕೆ.ಎಂ.ಚಂದ್ರಶೇಖರ್, ವೈ.ಟಿ.ರಾಜೇಶ್ ರವರು ಸಲಹೆಗಳನ್ನು ನೀಡಿದರು.

ಗ್ರಾಹಕ ಸಂಬಂಧಿ ದೂರುಗಳ ವಿಲೇವಾರಿಗೆ ಸಂಬಂಧಪಟ್ಟು ವಹಿಸಬೇಕಾದ ಕ್ರಮಗಳ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರಿನ ಅಡ್ಡೂರು ಕೃಷ್ಣ ರಾವ್ ರವರು ಮಾಹಿತಿ ನೀಡುತ್ತಾ- ವರ್ಷಕ್ಕೆ ಐನೂರರಷ್ಟು ದೂರುಗಳನ್ನು ಪಡೆಯುತ್ತಿದ್ದು ವಿವಿಧ ಕ್ರಮದಲ್ಲಿ ವಿಲೇವಾರಿ ಮಾಡುತ್ತಿದ್ದೇವೆ. ಅದಕ್ಕಾಗಿ ಹಲವಾರು ಚೌಕಟ್ಟನ್ನು ಹಾಕಿಕೊಂಡಿದ್ದೇವೆ. ಉದಾಹರಣೆಗೆ ದೂರುಗಳು ವಸ್ತು, ಸೇವೆಗೆ ಸಂಬಂಧಿಸಿದ್ದಾಗಿರಬೇಕು. ಬಳಕೆದಾರ ಹೌದೇ ಎನ್ನುವುದನ್ನು ಮುಖ್ಯವಾಗಿ ಗಮನಿಸಿ ಪೂರೈಕೆದಾರನನ್ನು ಗುರುತಿಸುತ್ತೇವೆ. ಸ್ವತ: ದೂರುದಾರರಿಂದಲೇ ಪತ್ರ ಬರೆಯಿಸಿ ಅವರಿಂದ;ಲೇ ಪತ್ರಿಸುತ್ತೇವೆ. ತರುವಾಯ 15 ದಿನದಲ್ಲಿ ನೆನಪೋಲೆಯನ್ನೂ ದೂರುದಾರರಿಂದ ಕಳುಹಿಸಲಾಗುತ್ತದೆ. ಹಾಗೂ ಅದರಲ್ಲಿ ಯಥಾ ನಕಲನ್ನು ಬಳಕೆದಾರರ ವೇದಿಕೆಗೆ ನೀಡಲಾಗಿದೆ ಎಂದು ನಮೂದಿಸಲಾಗುತ್ತದೆ. 15 ದಿನದ ತರುವಾಯವೂ ಉತ್ತರ ಬರದಿದ್ದರೆ ಸಂಬಂಧಿತ ವಿಷಯದ ಬಗೆಗೆ ತಮ್ಮ ಅಭಿಪ್ರಾಯ ತಿಳಿಸಬೇಕೆಂದು ನಮ್ರವಾಗಿ ವಿನಂತಿಸಿ 15 ದಿನದ ಕಾಲಾವಕಾಶವನ್ನು ನೀಡಿ ವೇದಿಕೆಯಿಂದ ಪತ್ರ ಬರೆಯಲಾಗುತ್ತದೆ. ಅದಕ್ಕೂ ಉತ್ತರವಿಲ್ಲದಿದ್ದಲ್ಲಿ ವೃತ್ತ ಪತ್ರಿಕೆಯ ಮೂಲಕ ಜನಾಭಿಪ್ರಾಯ ಮೂಡಿಸಿ ಸಾರ್ವಜನಿಕರು ನೇರವಾಗಿ ಪತ್ರ ಬರೆಯುವಂತೆ ವಿನಂತಿಸಲಾಗುತ್ತದೆ. ಇದುವರೆವಿಗೆ ನಡೆದ ಇಂತಹ ಹಲವಾರು ಸಂದರ್ಭಗಳಲ್ಲಿ ಕನಿಷ್ಠ 300-400 ಸಾರ್ವಜನಿಕರು ಎಚ್ಚರಿಸಿ, ತುಚ್ಛೀಕರಿಸಿ, ಧಮಕಿ ಹಾಕಿ ಪತ್ರ ಬರೆದು ಅಧಿಕಾರಿ ವರ್ಗವನ್ನು, ಪೂರೈಕೆದಾರರನ್ನು ಬಯಲು ಮಾಡಿದ ತಕ್ಷಣ ಪರಿಹಾರ ದೊರಕಿದ ಹಲವಾರು ಉದಾಹರಣೆಗಳನ್ನು ಎದುರಿಗಿಟ್ಟರು. ಹೀಗಾಗಿ ಪ್ರತೀ ಸಂದರ್ಭದಲ್ಲಿ ಸಂಸ್ಥೆಗೆ ಪ್ರಾತಿನಿಧ್ಯವೇ ಹೊರತು ವ್ಯಕ್ತಿಗಳಿಗಲ್ಲ. ದೂರುಗಳು ದಾಖಲೀಕರಣವಾಗಬೇಕು. ಪೂರೈಕೆದಾರ ಅಥವಾ ಅಧಿಕಾರಿಗಳನ್ನು ಗೌರವಯುತವಾಗಿ ನೋಡಿಕೊಳ್ಳಬೇಕು. ಗ್ರಾಹಕ ಸಂಘಗಳು ಕೆಟ್ಟ ಶಬ್ದಗಳನ್ನು ಬಳಸಲೇಬಾರದು. ಕೃಷಿ, ವಿಮೆ, ಬ್ಯಾಂಕಿಂಗ್, ಇತ್ಯಾದಿಗಳನ್ನು ವಿಷಯವಾರು ಪರಿಣತ ಸದಸ್ಯರಿಂದ ನಿರ್ವಹಿಸಲ್ಪಟ್ಟಲ್ಲಿ ಹೆಚ್ಚಿನ, ಸೂಕ್ತ ಪರಿಹಾರ ದೊರಕಬಹುದೇನೋ ಎಂದೂ ತಮ್ಮ ಅಭಿಪ್ರಾಯ ಮಂಡಿಸಿದರು.

ತುಮಕೂರು ಗುಬ್ಬಿಯ ಪ್ರೋಫೆಸರ್ ಪ್ರಸನ್ನ ಕುಮಾರ್ ರವರು ಹಾದಿ ತಪ್ಪಿಸುವ ಜಾಹೀರಾತುಗಳ ಬಗೆಗೆ ಮಾತನಾಡಿ ವಿಷಯಕ್ಕೆ ಸ್ವಲ್ಪವೂ ಸಂಬಂಧಿಸದ ಹಾಗೂ ಏನೇನೋ ಗಾಳಿಗೋಪುರಗಳನ್ನು ಕಟ್ಟುವಂತಹ ಜಾಹೀರಾತುಗಳನ್ನು ಕಂಡುಹಿಡಿದು ನಿರ್ಬಂಧಿಸಬೇಕಾಗಿದೆ. ಒಂದೊಂದು ವಿಷಯಕ್ಕೂ ಪ್ರತ್ಯೇಕ ವಿಧಾನಗಳನ್ನು ಅಳವಡಿಸಬೇಕಾಗುತ್ತದೆ ಎಂದರು.

ಜಲಪಾತದ ಎದುರು ಒಂದು ವಿಚಾರಗೋಷ್ಠಿಯ ಟೀಮ್

ದ್ವಿತೀಯ ದಿನದ ಕಾರ್ಯಕ್ರಮದಂತೆ ಪ್ರಗತಿಪರ- ಸಾವಯವ ಕೃಷಿಕಸಾಮಾಜಿಕ ಕಾರ್ಯಕರ್ತ, ಗಾಂಧಿ ಚಿಂತಕ, ಖಾದಿ ಉತ್ಪಾದಕ-ಮಾರಾಟ ಪ್ರೋತ್ಸಾಹಕ ಮಂಡ್ಯದ ಮೇಲುಕೋಟೆಯ ಜನಪದ ಟ್ರಸ್ಟ್ ನ ಶ್ರೀ ಸುರೇಂದ್ರ ಕೌಲಗಿಯವರಿಗೆ ಜಮ್ನಾಲಾಲ್ ಬಜಾಜ್ ಪ್ರಶಸ್ತಿಯನ್ನು ನೀಡಲಾಗಿದೆ. ಅವರನ್ನು ಸಂದಶಶಿ೯ಸಿ ಅವರ ವಿಚಾರ , ಕಾರ್ಯಗಳನ್ನು ಸ್ವತ: ಗಮನಿಸಿ ಹೊಸ ಜೀವನ ದಲ್ಲಿಯ ಸಾಮಾಜಿಕ ಶಿಬಿರಗಳ ಬಗೆಗೆ, ಗ್ರಾಹರಿಗೆ ನೀಡುತ್ತಿರುವ ಮಾಹಿತಿಯನ್ನು ಪಡೆಯಲಾಯಿತು. ತರುವಾಯ ಬಹಳ ಸುಂದರ ಪ್ರೇಕ್ಷಣೀಯ ಸ್ಥಳಗಳಾದ ಮೇಲುಕೋಟೆಯ ದೇವಾಲಯಗಳು, ಅಕ್ಕ-ತಂಗಿ ಕೊಳ, ರಾಯರ ಸ್ಥಳ, ಕೆರೆ ತೊಣ್ಣೂರು, ರುದ್ರ ರಮಣೀಯ ಗಗನ ಚುಕ್ಕಿ-ಭರಚುಕ್ಕಿ ಜಲಪಾತ, ಪ್ರಪಂಚದ ಮೊತ್ತ ಮೊದಲ ಶಿವನ ಸಮುದ್ರ ಜಲ ವಿದ್ಯದಾಗಾರ, ಚಿನ್ನದ ಬೀಡು ಕೋಲಾರಕ್ಕೆ ನೀಡಿದ ವಿದ್ಯತ್ ಸಂಪರ್ಕದ ಕೊಂಡಿ ಇತ್ಯಾದಿಗಳನ್ನು ವೀಕ್ಷಿಸಲಾಯಿತು.

ಕುಳಿತವರು ಶ್ರೀ ಸುರೇಂದ್ರ ಕೌಲಗಿ ಯವರು

ಇನ್ನು ಮುಂದೆ ವಿಚಾರಗೋಷ್ಠಿಗಳನ್ನು ಇಂತಹ ಸಾಮಾಜಿಕ ಕಾರ್ಯದ ಪರಿಸರಗಳಲ್ಲೇ ನಡೆಸುವಂತೆ ಹೆಚ್ಚಿನ ಸದಸ್ಯರಿಂದಬೇಡಿಕೆಯೂ ಬಂದಿತು. ಮಾತ್ರವಲ್ಲ ಇಂತಹದರಿಂದ ಕಾರ್ಯತ: ಪರಿಚಯವೂ ದೊರೆಯಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಸಚಿತ್ರ ವರದಿ: ರಾಯೀ ರಾಜಕುಮಾರ್, ಮೂಡುಬಿದಿರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here