Thursday 25th, April 2024
canara news

ಮಂಗಳೂರು ಅಂ.ರಾ. ವಿಮಾನ ನಿಲ್ದಾಣ: 2 ನೂತನ ಪಾರ್ಕಿಂಗ್ ಬೇ ಕಾರ್ಯಾರಂಭ

Published On : 27 Apr 2017   |  Reported By : Canaranews Network


ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ 2 ಪಾರ್ಕಿಂಗ್ ಬೇಗಳು ಎ. 21ರಂದು ಕಾರ್ಯಾರಂಭ ಮಾಡಿವೆ. ಇದರೊಂದಿಗೆ ಏಕಕಾಲಕ್ಕೆ 8 ವಿಮಾನಗಳನ್ನು ನಿಲ್ಲಿಸಲು ಅವಕಾಶ ಲಭ್ಯವಾಗಿದೆ. ಮೊದಲು 6 ವಿಮಾನ ನಿಲ್ಲಿಸಲು ಮಾತ್ರ ಅವಕಾಶವಿತ್ತು.

ನೂತನ ಪಾರ್ಕಿಂಗ್ ಬೇಗಳನ್ನು 4 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಈ ಹಿಂದೆ ಸಂಚಾರ ದಟ್ಟಣೆ ವೇಳೆ ಪಾರ್ಕಿಂಗ್ ಬೇ ಲಭ್ಯತೆ ಕೊರತೆಯಿಂದ ಕೆಲವು ಬಾರಿ ವಿಮಾನ 5ರಿಂದ 10 ನಿಮಿಷ ವಿಳಂಬವಾಗುತ್ತಿತ್ತು, ಇಲ್ಲವೆ ಪಾರ್ಕಿಂಗ್ಗೆ ಕಾಯಬೇಕಾಗುತ್ತಿತ್ತು. ಇದೀಗ ನೂತನ ಪಾರ್ಕಿಂಗ್ ಬೇಗಳ ಆರಂಭದೊಂದಿಗೆ ಈ ಸಮಸ್ಯೆ ನಿವಾರಣೆಯಾಗಿದೆ.

ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಿನ ವರ್ಷದಲ್ಲಿ 8 ಕೋ. ರೂ. ವೆಚ್ಚದಲ್ಲಿ ಇನ್ನೂ 4 ಪಾರ್ಕಿಂಗ್ ಬೇಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ.ಹೊಸ ಪಾರ್ಕಿಂಗ್ ಬೇಗಳ ಆರಂಭದೊಂದಿಗೆ ಹೆಚ್ಚಿನ ಪ್ರಗತಿಯಾಗಲಿದೆ ಎಂದು ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here