Friday 29th, March 2024
canara news

ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಮೀಸಲು ಕಡ್ಡಾಯ: ಮುಖ್ಯಮಂತ್ರಿ ಸಿದ್ಧರಾಮಯ್ಯ

Published On : 05 May 2017   |  Reported By : Ronida Mumbai


ಇಂಟಕ್ ರಾಜ್ಯಾಧ್ಯಕ್ಷರಾಗಿ ರಾಕೇಶ್ ಮಲ್ಲಿ ಅಧಿಕಾರ ಸ್ವೀಕಾರ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ (ಬೆಂಗಳೂರು), ಮೇ.05 : ರಾಜ್ಯದ ಖಾಸಗಿ ಕಾರ್ಖನೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಯನ್ನು ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲಿಡಬೇಕು. ಹಾಗೆಯೇ ಪರಿಷ್ಕøತ ಕನಿಷ್ಠ ವೇತನವನ್ನೇ ಎಲ್ಲಾ ನೌಕರರಿಗೂ ನೀಡಬೇಕು. ಸರ್ಕಾರದ ಈ ಅದೇಶ ಉಲ್ಲಂಘಿಸಿದ ಖಾಸಗಿ ಸಂಸ್ಥೆಗಳ ವಿರಿದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಸಿದ್ದಾರೆ.

ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ರಾಜ್ಯ ಘಟಕದ (ಐಎನ್‍ಟಿಸಿ-ಇಂಟಕ್) ರಾಜ್ಯಾಧ್ಯಕ್ಷÀರಾಗಿ ಆಯ್ಕೆಗೊಂಡಿರುವ ರಾಕೇಶ್ ಮಲ್ಲಿ ಅವರು ಕಳೆದ ಬುಧವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಚರಣೆ ಹಾಗೂ 70ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಮುಖ್ಯಮಂತಿ ಸಿದ್ಧರಾಮಯ್ಯ ಮಾತನಾಡಿ ಇದೀಗಲೇ ನಮ್ಮ ಸರಕಾರವು ಕಾರ್ಮಿಕರಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದು, ಅಂತೆಯೇ ಇಂದಿರಾ ಕ್ಯಾಂಟೀನ್ ಸೇವೆಯನ್ನು ಬರುವ ಆಗಸ್ಟ್ 15ರಂದು ಲೋಕಾರ್ಪಣೆ ಮಾಡಲಿದ್ದೇವೆ. ಹೊಸ ಐಟಿಐ ಕಾಲೇಜು ಆರಂಭಿಸುವುದರ ಜತೆಗೆ ಈಗ ಇರುವ ಕಾಲೇಜನ್ನು ಉನ್ನತೀಕರಿಸುತ್ತಿದ್ದೇವೆ. ಕೌಶಲಾಭಿವೃದ್ಧಿ ಇಲಾಖೆ ಮೂಲಕ 5 ಲಕ್ಷ ಜನರಿಗೆ 2017-18ರಲ್ಲಿ ಕೌಶಲಾಭಿವೃದ್ಧಿ ನೀಡಲಿದ್ದೇವೆ ಎಂದರು.

ಸಂಕಷ್ಟದಲ್ಲಿರುವ 7500 ಕೆಪಿಟಿಸಿಎಲ್ ನೌಕರರ ಸಮಸ್ಯೆಯನ್ನು ಪರಿಶೀಲಿಸಲಾಗುತ್ತದೆ. ಈ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಸಮಸೈಎಯ ಅಧಿಕಾರಿಗಳ ಸಭೆ ಕರೆದು, ಕಾನೂನು ಉಲ್ಲಂಘನೆ ಆಗದ ಮಾದರಿಯಲ್ಲಿ ಸಮಸ್ಯೆಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದರು. ಹಾಗೂ ಕೇಕ್ ಕತ್ತರಿಸಿಕಾರ್ಮಿಕ ದಿನಾಚರಣೆ ಸಂಭ್ರಮಿಸಿ ಸ್ಮರಣಸಂಚಿಕೆ ಬಿಡುಗಡೆ ಗೊಳಿಸಿ ಸಾಧಕ ಕಾರ್ಮಿಕ ಧುರೀಣರನ್ನು ಸನ್ಮಾನಿಸಿದರು.

ಗೃಹ ಸಚಿವ ಡಾ| ಜಿ.ಪರಮೇಶ್ವರ ಮಾತನಾಡಿ, ಇಎಸ್‍ಐ ಆಸ್ಪತ್ರೆಗಳನ್ನು ಜಿಲ್ಲಾಮಟ್ಟಕ್ಕೂ ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದರು.

ಭಾರತ ರಾಷ್ಟ್ರೀಯ ಮಜ್ದೂರ್‍ನ ಕರ್ನಾಟಕ ರಾಜಾಧ್ಯಕ್ಷರಾಗಿ ರಾಕೇಶ್ ಮಲ್ಲಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಿ ಇಂಟಕ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಸಂಜೀವ್ ರೆಡ್ಡಿ, ಕೆಪಿಸಿಸಿ ಕಾಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಯು.ಟಿ ಖಾದರ್, ರೋಷನ್ ಬೇಗ್, ಕೆ.ಜೆ ಜಾರ್ಜ್, ವಿಧಾನ ಪರಿಷತ್ ಸದಸ್ಯರಾದ ಎಂ. ನಾರಾಯಣಸ್ವಾಮಿ, ಮೋಟಮ್ಮ, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸ್ಟೀವನ್ ಡಿಸೋಜಾ (ದೇರಡ್ಕ)Éೈನ್ನಿತರ ಪಧಾಧಿಕಾರಿಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here