Thursday 28th, March 2024
canara news

ಭಂಡಾರಿ ಸಮಾಜದ ಕುಲದೇವರು ಶ್ರೀಕಚ್ಚೂರು ನಾಗೇಶ್ವರ ದೇವರ ವರ್ಧಂತ್ಯುತ್ಸ

Published On : 09 May 2017   |  Reported By : Rons Bantwal


ವೈಜ್ಞಾನಿಕತೆಯಿಂದ ನಂಬಿಕೆಗಳು ಮಾಯವಾಗುತ್ತವೆ: ಡಿ.ಹೆಚ್ ಶಂಕರಮೂರ್ತಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.08: ಭಾರತವು ಇತಿಹಾಸವುಳ್ಳ ಸಮಾಜಗಳ ನಾಡಾಗಿದ್ದು, ಪರಕೀಯರ ಆಳ್ವಿಕೆಯಿಂದ ವಿನಾಶದ ಅಂಚಿನಲ್ಲಿದ್ದ ಸಂಸ್ಕೃತಿ ಸಂಸ್ಕಾರವನ್ನು ಬೆಳೆಸಿ ಪೆÇೀಷಿಸಿದವರು. ಇಲ್ಲಿ ಸಾವಿರಾರು ವರ್ಷಗಳ ಸಾಂಸ್ಕೃತಿಕ ಇನ್ನಲೆಯಿದ್ದು ಇದಕ್ಕೆ ದೇವರ ಮೇಲಿನ ನಂಬಿಕೆಗಳೇ ಕಾರಣವಾಗಿವೆ. ಜನನಿದಾತೆಯನ್ನು ಮಕ್ಕಳು, ಮೊಮ್ಮಕ್ಕಳು ಮಮ್ಮೀ... ಕರೆಸಿಕೊಳ್ಳುವ ವಿಚಾರಕ್ಕೆ ತೆರೆಯೆಳೆದು ಅಮ್ಮಾ ಎನ್ನುವ ಸ್ವಾಧಿಷ್ಟಕರ ಶಬ್ದಕ್ಕೆ ಪೆÇ್ರೀತ್ಸಾಹಿಸುವ ಅವಶ್ಯಕತೆ ತಾಯಂದಿರದ್ದಾದಾಗ ಸಂಸ್ಕೃತಿಗಳು ಸುಸಂಸ್ಕಾರಯುತ ಆಗಬಲ್ಲವು. ವೈಜ್ಞಾನಿಕ ಅದ್ಭುತ, ಸಾಧನೆಗಳಿಂದ ಪದ್ಧತಿಗಳು ವಿನಾಶದತ್ತ ವಾಲುತ್ತಿರುವುದು ಸಲ್ಲದು. ಇದರಿಂದಲೇ ನಮ್ಮ ನಂಬಿಕೆಗಳು ಮಾಯವಾಗುತ್ತಿವೆ. ಇದನ್ನೆಲ್ಲಾ ತಡೆಯುವಲ್ಲಿ ಇಂತಹ ಉತ್ಸವಗಳು ಪೂರಕವಾಗಿವೆ. ಈ ದೇಶದ ಸಂಸ್ಕೃತಿಯನ್ನು ನಮ್ಮ ಸ್ತ್ರೀಕುಲವೇ ಉಳಿಸಿದೆ. ದೈವದೇವರುಗಳಲ್ಲಿನ ನಂಬಿಕೆ, ಕುಲಕಸುಬು ನಂಬಿದ ಭಾರತೀಯರಲ್ಲಿ ಭಂಡಾರಿ ಸಮುದಾಯವೂ ಒಂದಾಗಿದೆ ಎಂದು ಕರ್ನಾಟಕ ಸರ್ಕಾರದ ವಿಧಾನ ಪರಿಷತ್‍ನ ಸಭಾಪತಿ ಡಿ.ಹೆಚ್ ಶಂಕರಮೂರ್ತಿ ತಿಳಿಸಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಉತ್ಸವ ಮುಂಬಯಿ ಸಮಿತಿ ಸಾರಥ್ಯದಲ್ಲಿ ಭಂಡಾರಿ ಸಮುದಾಯದ ಕುಲದೇವರು ಕಚ್ಚೂರು ಶ್ರೀ ನಾಗೇಶ್ವರ ದೇವರ ಉಡುಪಿ ಜಿಲ್ಲೆಯ ಬಾರ್ಕೂರು ಹನೆಹಳ್ಳಿ ಗ್ರಾಮದಲ್ಲಿನ ದೇವಸ್ಥಾನದಲ್ಲಿ ಇಂದಿಲ್ಲಿ ಸೋಮವಾರ ಪೂರ್ವಾಹ್ನ ಶ್ರೀಕಚ್ಚೂರು ನಾಗೇಶ್ವರ ದೇವರ ವರ್ಧಂತ್ಯುತ್ಸ ಆಚರಣಾ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಶಂಕರಮೂರ್ತಿ ಮಾತನಾಡಿದರು.

ಜಗದ್ವಾ ್ಯಪಿಯಲ್ಲಿನ ಭಂಡಾರಿ ಬಂಧುಗಳ ಸಮಾಕ್ಷಮದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರ ಘನಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಯುವಜನ, ಕ್ರೀಡೆ, ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಗೌರವ್ವ್ವಾನಿತ ಅತಿಥಿüಗಳಾಗಿ ಸೊರಬ ವಿಧಾನಸಭಾ ಕ್ಷೇತ್ರದ ಶಾಸಕ, ಜೆಡಿಎಸ್ ಪಕ್ಷದ ಧುರೀಣ ಮಧು ಬಂಗಾರಪ್ಪ, ಕರ್ನಾಟಕ ರಾಜ್ಯ ವಿಧಾನ ಪರಿಷತ್ತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅದಾನಿ ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ (ಕೆ.ಡಿಶೆಟ್ಟಿ), ಕಾರ್ಕಳದ ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿ, ಭಂಡಾರಿ ಮಹಾ ಮಂಡಲದ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್ ಎಸ್.ಭಂಡಾರಿ, ವಾರ್ಷಿಕೋತ್ಸವ ಸಮಿತಿ ಮುಂಬಯಿ ಅಧ್ಯಕ್ಷ ಡಾ| ಅತ್ತೂರು ಶಿವರಾಮ ಕೆ.ಭಂಡಾರಿ ಸೇರಿದಂತೆ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಸೇರಿದಂತೆ ಮತ್ತಿತರ ಗಣ್ಯರು ವೇದಿಕೆಯಲ್ಲಿ ಆಸೀನರಾಗಿದ್ದರು.

ಇಲ್ಲಿನ 365 ದೇವಸ್ಥಾನಕ್ಕಿಂತ ಭಂಡಾರಿ ಸಮುದಾಯ ಆರಾಧಿಕೊಂಡು ಬಂದಿರುವ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನವೂ ಒಂದಾಗಿದೆ. ಇಂತಹ ಧೀಶಕ್ತಿವುಳ್ಳ ಈ ದೇವಸ್ಥಾನಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳನ್ನೂ ಒಲಿದ ಶಕ್ತಿ ಈ ದೇವಸ್ಥಾನಕ್ಕಿದೆ. ದೂರಗಾಮಿ ಚಿಂತನೆಯ ಭಂಡಾರಿ ಸಮಾಜಕ್ಕೆ ಎಲ್ಲಾ ವರ್ಗದ ಜನತೆ ತಲೆತಗ್ಗಿಸುವುದು ಸಾಮಾನ್ಯವಾಗಿದೆ ಎಂದು ಸಚಿವ ಪ್ರಮೋದ್ ನುಡಿದರು.

ನಮ್ಮದೆಲ್ಲವೂ ಸಾಂಘಿಕತೆಯ ಸಮಾಜ. ಇಲ್ಲಿ ದೊಡ್ಡವರು ಚಿಕ್ಕವರು ಅನ್ನುವ ಭಾವನೆಕ್ಕಿಂತ ಹೃದಯವಂತಿಕೆಯ ಸ್ÀªiÁಜ ಎನ್ನುವ ವಿಚಾರ ಮುಖ್ಯವಾಗಬೇಕು. ಇಂದು ಪರಂಪರಿಕ ಕುಲಕಸುಬು ಎನ್ನುವುದು ಉಳಿದಿಲ್ಲ ಅದು ಬದಲಾಗಿ ವ್ಯಾಪಾರೀಕರಣವಾಗಿ ಮುನ್ನಡೆಯುತ್ತಿದೆ. ಚಿಕ್ಕ ಸಮುದಾಯಗಳಿಂದಲೇ ದೊಡ್ಡದೊಡ್ಡ ಸಾಧನೆಗಳು ನಡೆಯುತ್ತಿರುವುದು ಶ್ಲಾಘನೀಯ. ಪ್ರತೀಯೋಬ್ಬರು ಸಮುದಾಯದ ಶಕ್ತಿಯಾಗಿ ಬೆಳೆದಾಗ ಸಮುದಾಯಗಳ ಬೆಳವಣಿಗೆ ತನ್ನೀಂತಾನೇ ಆಗುತ್ತದೆ ಎಂದು ಮಧು ಬಂಗರಪ್ಪ ತಿಳಿಸಿದರು.

ಕ್ಯಾಪ್ಟನ್ ಕಾರ್ಣಿಕ್ ಮಾತನಾಡಿ ಪರಕೀಯರ ಆಳ್ವಿಕೆಗೆ ಮಣಿದವರು ಭಾರತೀಯರಲ್ಲ. ಪೂಜಾರಾಧನೆ, ಪ್ರೀತಿವಿಶ್ವಾಸವೇ ನಮ್ಮ ಸಂಸ್ಕೃತಿ ಇದನ್ನು ಅಳಿಯಲು ನಾವು ಎಂದೂ ಬಿಡಬಾರದು. ದ್ವೇಷಭಾವನೆಯಿಂದ ದೂರ ಉಳಿದು ಸಮಬಾಳ್ವೆಯೊಂದಿಗೆ ನಾವು ಮುನ್ನಡೆದಾಗ ಒಟ್ಟು ಸಮಾಜದ ಮುನ್ನಡೆ ಸಾಧ್ಯ ಎಂದರು.

ಮತ್ತೊಬ್ಬರನ್ನು ತಲೆ ತಗ್ಗಿಸುವ ಕೆಲಸ ನಮ್ಮ ಸಮಾಜ ಎಂದೂ ಮಾಡಿಲ್ಲ. ತಲೆಯೆತ್ತಿ ಮುನ್ನಡೆಯುವಂತೆ ಪೆÇ್ರೀತ್ಸಹಿಸಿದ ಸಮುದಾಯವೇ ಭಂಡಾರಿ ಸಮಾಜ. ಇಂದು ಭಂಡಾರಿ ಬಂಧುಗಳ ಸಾಧನೆ ವಿಶ್ವದ ಗಮನ ಸೆಳೆಯುವಂತಾಗಿದೆ. ನಮ್ಮ ಇತಿಹಾಸವನ್ನು ವೈಭವೀಕರಿಸುವುದರಿಂದ ಸಮುದಾಯಗಳ ಮುನ್ನಡೆ ಸಾಧ್ಯ ಎಂದು ಗೋಪಾಲ್ ಭಂಡಾರಿ ಅಭಿಪ್ರಾಯ ಪಟ್ಟರು.

ಭಂಡಾರಿ ಜನತೆಯ ಸಾಧನೆಕಂಡಾಗ ನಾಲ್ಕುವರೆ ಲಕ್ಷದಷ್ಟು ಜನಸಂಖ್ಯೆಯ ದೊಡ್ಡದಾದಸಮಾಜದಂತಿದೆ. ಶ್ರಮದಾಯಕರಾಗಿ ದೊಡ್ಡಸ್ಥಿಕೆ ಹೊಂದಿದ ಸಹೃದಯತೆಯ ಸಮಾಜವಾಗಿದೆ. ದೊಡ್ಡಸ್ಥಿಕೆ ಎಂದೂ ಸ್ಥಿರವಲ್ಲ. ಚಿಕ್ಕತನವೇ ಸರ್ವೋನ್ನತ. ಇದನ್ನೇ ಮೈಗೂಡಿಸಿ ಬಾಳಿದ ಭಂಡಾರಿ ಸಮಾಜಎಲ್ಲರಿಗೂ ಮಾದರಿಎಂದು ಕೆ. ಖ ಶೆಟ್ಟಿ ನುಡಿದರು.

ಕಿಶೋರ್ ಆಳ್ವ ಮಾತನಾಡಿ ಜನಸಂಖ್ಯೆಯಲ್ಲಿ ಕಿರಿಯರಾದರೂ ಸಾಧನೆಯಲ್ಲಿ ಹಿರಿಮೆಯ ಸಮಾಜ ಭಂಡಾರಿ ಸಮಾಜವಾಗಿದೆ. ಪಾಶ್ಚತ್ಯ ಸಂಸ್ಕೃತಿಯಿಂದ ದೂರವಿಸಿ ತಮ್ಮೊಳಗಿನ ಒಗ್ಗಟ್ಟನ್ನು ಭದ್ರಪಡಿಸಿ ಭಗವದ್ಗೀತೆಯನ್ನು ಅರ್ಥೈಸಿ ಸಮುದಾಯವನ್ನು ಬಲಪಡಿಸಿ ಕೊಳ್ಳಿರಿ ಎಂದರು.

ಕಡಂದಲೆ ಸುರೇಶ್ ಎಸ್.ಭಂಡಾರಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಸಾವಿರಾರು ವರ್ಷಗಳ ಇತಿಹಾಸವುಳ್ಳ ಕಚ್ಚೂರು ಶ್ರೀ ನಾಗೇಶ್ವರ ದೇವವಸ್ಥಾನ ಭಂಡಾರಿ ಸಮುದಾಯದ ಪಾವನ ಕ್ಷೇತ್ರವಾಗಿದೆ. ಬಾರ್ಕೂರು ತುಳುನಾಡಿನ ರಾಜಧಾನಿವಿದ್ದಾಗ ಪ್ರತೀಯೊಂದು ಸಮುದಾಯದ ಸಂಸ್ಕಾರಯುತ ಬದುಕಿಗಾಗಿ ಅಂದಿನ ರಾಜರುಗಳು ದಿನಂಪ್ರತೀ ಉತ್ಸವಗಳು ನಡೆಯುವಂತೆ ಸ್ಥಾಪಿಸಲ್ಪಟ್ಟ ಧಾರ್ಮಿಕ ಕೇಂದ್ರಗಳಲ್ಲಿ ಇದೊಂದು ಆಗಿದ್ದು ಈಶ್ವರಾಧಾನೆಯ ದೇವಸ್ಥಾನವಾಗಿದೆ. ಆದುದರಿಂದ ಭಂಡಾರಿ ಬಂಧುಗಳು ಸಮುದಾಯದ ಬಲವರ್ಧನೆಗೆ ಶ್ರಮಿಸಿ ಸಮುದಾಯವನ್ನು ಮುನ್ನಡೆಸಲು ಮುಂದಾಗಬೇಕು ಎಂದರು.

ರೀಯಾ ಆರ್.ಭಂಡಾರಿ ಪ್ರಾರ್ಥನೆಯನ್ನಾಡಿದರು. ವಾರ್ಷಿಕೋತ್ಸವ ಸಮಿತಿ ಮುಂಬಯಿ ಉಪಾಧ್ಯಕ್ಷ ಕೇಶವ ಟಿ.ಭಂಡಾರಿ, ಪ್ರಧಾನ ಕಾರ್ಯದರ್ಶಿ ನ್ಯಾ| ಆರ್.ಎಂ.ಭಂಡಾರಿ, ಕೋಶಾಧಿಕಾರಿ ರಮೇಶ ವಿ.ಭಂಡಾರಿ, ಜೊತೆ ಕಾರ್ಯದರ್ಶಿ ರಂಜಿತ್ ಸೀತಾರಾಮ ಭಂಡಾರಿ, ಜೊತೆ ಕೋಶಾಧಿಕಾರಿ ಶಶಿಧರ್ ಭಂಡಾರಿ, ಪ್ರಭಾಕರ್ ಪಿ.ಭಂಡಾರಿ ಥಾಣೆ, ನಾರಾಯಣ ಭಂದಾರಿ, ವಿಜಯ ಬಿ.ಭಂಡಾರಿ, ಸುಭಾಶ್ ಭಂಡಾರಿ, ನವೀನ್ ಜೆ.ಭಂಡಾರಿ, ಪುರುಷೋತ್ತಮ ಭಂಡಾರಿ ಮತ್ತಿತರರು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ ಮತ್ತು ಕೋಶಾಧಿಕಾರಿ ಬನ್ನಂಜೆ ಸಂಜೀವ ಭಂಡಾರಿ ಅತಿಥಿüಗಳನ್ನು ಪರಿಚಯಿಸಿ ಸಭಾ ಕಾರ್ಯಕ್ರಮ ನಿರೂಪಿಸಿದರು. ಪಲ್ಲವಿ ರಂಜಿತ್ ಭಂಡಾರಿ ಧನ್ಯವದಿಸಿದರು.

ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ಆಚರಿಸಲ್ಪಟ್ಟ ವಾರ್ಷಿಕೋತ್ಸವದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶ್ರೀಕಾಂತ ಸಾಮಗ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಬಿ.ಆರ್ ವಿಶ್ವನಾಥ ಶಾಸ್ತ್ರಿ ಅವರು ವಿವಿಧ ಪೂಜಾಧಿಗಳನ್ನು ನೆರವೇರಿಸಿ ಮಹಾಮಂತ್ರಾಕ್ಷತೆ, ತೀರ್ಥಪ್ರಸಾದ ವಿತರಿಸಿ ನೆರೆದ ಸದ್ಭಕ್ತರನ್ನು ಹರಸಿದರು. ಅಪರಾಹ್ನ ನಡೆದ ಸಮಾರಂಭದಲ್ಲಿ ಗುರು ಭಂಡಾರಿ ಡೊಂಬಿವಿಲಿ, ಶ್ರೀಮತಿ ಗುಲಾಬಿ ಕೃಷ್ಣ ಭಂಡಾರಿ, ಸೀತಾರಾಮ ಭಂಡಾರಿ, ನ್ಯಾಯವಾದಿ ಸುಂದರ್ ಜಿ. ಭಂಡಾರಿ, ನ್ಯಾಯವಾದಿ ಆರ್.ಎಂ ಭಂಡಾರಿ, ವೆಂಕಟೇಶ್ ಭಂಡಾರಿ ಚೆಂಬೂರು ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಂಸ್ಕøತಿಕ ಕಾರ್ಯಕ್ರಮವಾಗಿ ಮುಂಬಯಿ ಅಲ್ಲಿನ ಭಂಡಾರಿ ಬಂಧುಗಳು ವೈವಿಧ್ಯಮಯ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮ ಮತ್ತು `ಮಲ್ತಿನಕ್ಲು ತಿನ್ಪೆರ್' ತುಳು ನಾಟಕ ಪ್ರಸ್ತುತ ಪಡಿಸಿದರು. ಸರಿತಾ ಬಂಗೇರಾ ಮತ್ತು ಪುರುಷೋತ್ತಮ ಭಂಡಾರಿ ಸಾಂಸ್ಕøತಿಕ ಕಾರ್ಯಕ್ರಮ ನಿರ್ವಾಹಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here