Tuesday 23rd, April 2024
canara news

ಗುಜರಾತ್ ಅಂಕ್ಲೇಶ್ವರದಲ್ಲಿ ಶತೋತ್ತರ ಪ್ರಥಮ ಶಾಖೆ ಸೇವಾರಂಭಿಸಿದ ಭಾರತ್ ಬ್ಯಾಂಕ್ ಗುಣಮಟ್ಟದ ಸೇವೆಗೆ ಭಾರತ್ ಬ್ಯಾಂಕ್ ವಿಶ್ವಾಸನೀಯ : ಕೆ.ಬಿ ಪಾಟೇಲ್

Published On : 17 May 2017


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಅಂಕ್ಲೇಶ್ವರ್ (ಗುಜರಾತ್), ಮೇ.17: ಭಾರತ್ ಬ್ಯಾಂಕ್ ನನ್ನ ಮನೆಮಂದಿ, ಪರಿವಾರ ಇದ್ದಂತೆ. ನಾನು ಮುಂಬಯಿಯ ವಿಲೇಪಾರ್ಲೆ ಪೂರ್ವದ ಶಾಖೆಯಲ್ಲಿ ಕಳೆದ ಎರಡುವರೆ ದಶಕಗಳಿಂದ ವ್ಯವಹರಿಸುತ್ತಿದ್ದು ಆಥಿರ್üಕವಾಗಿ ಸಮೃದ್ಧಿಯುತನಾಗಿದ್ದೇನೆ. ನನ್ನ ಬದುಕಿಗೆ ಆಧಾರಸ್ತಂಭದಂತಿರುವ ಈ ಬ್ಯಾಂಕ್‍ನ ಸೇವೆಯಿಂದ ತೃಪ್ತಿದಾಯಕನಾಗಿದ್ದು ಇದರ ವಾಣಿಜ್ಯಸೇವೆಯ ಪರಿಯೇ ವಿಶಿಷ್ಟಮಯವಾಗಿದೆ. ಗುಣಮಟ್ಟದ ಸೇವೆಯಿಂದಾಗಿ ಈ ಬ್ಯಾಂಕು ಇಷ್ಟೊಂದು ಎತ್ತರಕ್ಕೆ ಬೆಳೆದಿದೆ. ಇದೀಗ ನನ್ನ ತವರೂರಲ್ಲೇ ಶಾಖೆ ತೆರೆದ ಈ ಬ್ಯಾಂಕ್ ಜನಪರವಾಗಿ ಶ್ರಮಿಸಿ ಭಾರತದಾದ್ಯಂತ ಪಸರಿಸಲಿ ಎಂದು ಸ್ಥಾನೀಯ ಪ್ರತಿಷ್ಠಿತ ಉದ್ಯಮಿ, ಕೆಸಿ ಲ್ಯಾಬೋರಟೀಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಬಿ ಪಾಟೇಲ್ ತಿಳಿಸಿದರು.

ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ಗುಜರಾತ್ ರಾಜ್ಯದಲ್ಲಿನÀ 5ನೇ ಶಾಖೆಯನ್ನಾಗಿಸಿ ಬ್ಯಾಂಕ್‍ನ 101ನೇ ಶಾಖೆಯನ್ನು ಇಂದಿಲ್ಲಿ ಬುಧವಾರ ಬೆಳಿಗ್ಗೆ ಪಿರಮನ್ ಇಲ್ಲಿನ ಅಂಕ್ಲೇಶ್ವರ್ ನಗರದ ಓಂಕಾರ್ ದ್ವಿತೀಯ ಕಟ್ಟಡದಲ್ಲಿ ಸೇವಾರಂಭಿಸಿದ್ದು, ಸಮಾರಂಭದಲ್ಲಿ ಉಪಸ್ಥಿತ ಕೆ.ಬಿ ಪಾಟೇಲ್ ದೀಪ ಪ್ರಜ್ವಲಿಸಿ ವಿಧ್ಯುಕ್ತÀವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿ ಮಾತನಾಡಿದರು.

ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ರಿಬ್ಬನ್ ಬಿಡಿಸಿ ನೂತನ ಶಾಖೆಗೆ ಚಾಲನೆಯನ್ನೀಡಿದರು. ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಲಾಕರ್ ಸೇವೆಗೆ ಹಾಗೂ ಬ್ಯಾಂಕ್‍ನ ಉಪ ಪ್ರಧಾನವ್ಯವಸ್ಥಾಪಕ ಸುರೇಶ್ ಎಸ್.ಸಾಲ್ಯಾನ್ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ಶಾಖೆಯ ಶ್ರೇಯೋಭಿವೃದ್ಧಿಗೆ ಶುಭೇಚ್ಛಕೋರಿದರು.

ಮುಖ್ಯ ಅತಿಥಿüಯಾಗಿ ವಿಶಾಲ್ ಪ್ಲಾಸ್ಟ್ ಸಂಸ್ಥೆಯ ಆಡಳಿತ ನಿರ್ದೇಶಕ ವಿ.ಕೆ ಶೆಟ್ಟಿ, ಗೌರವ್ವಾನಿತ ಅತಿಥಿüಗಳಾಗಿ ಸೂರತ್ ಬಿಲ್ಲವ ಸಂಘದ ಧುರೀಣರಾದ ಕೃಷ್ಣ ಎಸ್.ಅಂಚನ್, ಪ್ರಭಾಕರ್ ಪೂಜಾರಿ, ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಸ್ಥಳಿಯ ಉದ್ಯಮಿಗಳಾದ ದಿನೇಶ್ ಪೂಜಾರಿ ಮತ್ತು ವಿಠಲ ಟಿ.ಪೂಜಾರಿ (ಸರ ಸಾಗರ್), ಸಾಜೀದ್ ರಾವತ್, ಎಸ್. ನಜ್ರೇತ್, ಜಗನ್ನಾಥ್ ಅಮೀನ್ ಉಪ್ಪಳ, ಮೋಹನ್ ರಾವ್ ಇಂದ್ರಾಳಿ, ಮನೀಷ್ ಪಾಟೇಲ್, ರವೀಂದ್ರ ಸುವರ್ಣ, ಜೈನ್ ಸಮಾಜ ಅಂಕ್ಲೇಶ್ವರ್ ಇದರ ಅಧ್ಯಕ್ಷ ರಾಜೇಂದ್ರ ಶ್ಹಾ, ಬರೋಡಾ ಶಾಖೆಯ ಮುಖ್ಯಸ್ಥ ಮೋಹನ್‍ದಾಸ್ ಹೆಚ್.ಪೂಜಾರಿ, ಸೂರತ್ ಶಾಖೆಯ ಮುಖ್ಯಸ್ಥ ಪ್ರಶಾಂತ್ ಪಿ.ಪೂಜಾರಿ, ಬ್ಯಾಂಕ್‍ನ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರುಗಳಾದ ವಿಜಯ್ ವಿ.ಪಾಲನ್, ಸುನೀಲ್ ಎ.ಗುಜರನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಕೋರಿದರು.

ಕಟ್ಟಡದ ಮಾಲೀಕ ಯಾಕೂಬ್ ರಾವತ್ ಮಾತನಾಡಿ ನಾನು ಅನೇಕ ವರ್ಷಗಳಿಂದ ಟಾಟಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಶ್ರಮಿಸಿದವನು. ಅಲ್ಲಿಯೂ ಶಿಸ್ತು ಬದ್ಧತೆಯನ್ನು ಕಂಡವ. ಅದರಂತೆಯೇ ಭಾರತ್ ಬ್ಯಾಂಕ್‍ನಲ್ಲೂ ಶಿಸ್ತಿನ ಅರಿವು ಕಂಡಿದ್ದೇನೆ. ಶ್ರಮ ಮತ್ತು ಶಿಸ್ತು ಸಂಸ್ಥೆ ಯಾ ವ್ಯಕ್ತಿತ್ವಕ್ಕೆ ಮೌಲ್ಯವನ್ನು ಪ್ರಾಪ್ತಿಸುತ್ತೆದೆ. ಅದೇ ಒಂದು ಮೈಲಿಗಲ್ಲಾಗಿ ರೂಪುಗೊಂಡು ಎಲ್ಲವನ್ನೂ ಬೆಳೆಸುತ್ತದೆ. ಇದಕ್ಕೆ ಜಯ ಸುವರ್ಣರು ಮತ್ತು ಭಾರತ್ ಬ್ಯಾಂಕ್ ಉದಾಹರಣೆಯಾಗಿದೆ ಎಂದರು.

ಸಾಮಾಜಿಕ ನ್ಯಾಯ ಸದಾ ನಮ್ಮನ್ನು ಅಭಿವೃದ್ಧಿಯ ಪಥದತ್ತ ಒಯ್ಯುವುದು. ಅಂತಹದರಲ್ಲಿ ಭಾರತ್ ಬ್ಯಾಂಕ್ ಅಲ್ಪಾವಧಿಯಲ್ಲಿ ಮಹತ್ತರವಾದ ಸಾಧನೆ ಸಾಧಿಸಿರುವುದು ಭಾರತಿಯರಿಗೆಲ್ಲರಿಗೂ ಹೆಮ್ಮೆಯ ವಿಚಾರ. ವೈಜ್ಞಾನಿಕ ಮತ್ತು ಜಾಗತೀಕರಣದ ಕಾಲಘಟ್ಟದಲ್ಲೂ ಅದರಲ್ಲೂ ಹಣಕಾಸು ವ್ಯವಸ್ಥೆಯಲ್ಲಿ ಸಾರ್ವಜನಿಕವಾಗಿ ಸವಾಲಾಗಿಸಿ ವ್ಯವಹಾರಿಸಿ ಮುನ್ನಡೆ ಸಾಧಿಸುವುದೆಂದರೆ ಇದೊಂದು ಅಸಮಾನ್ಯ ಸಾಧನೆಯೇ ಸರಿ. ಭವಿಷ್ಯತ್ತಿನುದ್ದಕ್ಕೂ ಈ ಬ್ಯಾಂಕ್ ಶ್ರಮದಾಯಕ ಸೇವೆ ಮೂಲಕ ಶ್ರೀಮಂತರಿಂದ ಜನಸಾಮಾನ್ಯರ ವರೆಗೂ ಮನಮನೆಮಾತಾಗಿ ಉಜ್ವಲ ಭವಿಷ್ಯ ಕಾಣಲಿ ಎಂದು ಜೆ.ಕೆ ಶೆಟ್ಟಿ ಶುಭಾರೈಸಿದರು.

ಕಾರ್ಯಾಧ್ಯಕ್ಷ ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಸಿ.ಆರ್ ಮೂಲ್ಕಿ ಹಾಗೂ ಮಾಜಿ ನಿರ್ದೇಶಕ ಎನ್.ಎಂ ಸನೀಲ್ ಅವರು ಉಪಸ್ಥಿತ ಗಣ್ಯರಿಗೆ ಹಾಗೂ ಶಾಖೆಯ ಮುಖ್ಯಸ್ಥ ಜಯಪ್ರಸಾದ್ ಎನ್.ಬಂಗೇರ, ಸಹಾಯಕ ಪ್ರಬಂಧಕ ರಾಕೇಶ್ ಸಸಿಹಿತ್ಲು, ಸಹ ಅಧಿಕಾರಿಗÀಳಾದ ಪ್ರಸಾದ್ ಬಂಗೇರ, ಪ್ರಹ್ಲಾದ್ ಪೂಜಾರಿ, ಜಯೇಶ್ ಫರ್ಮಾರ್, ಜಿಗ್ನೇಶ್ ಸರಳಿಯ, ಧನಂಜಯ ಜಿ.ಪಾಲನ್ ಅವರಿಗೆ ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು.

ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ವಾಸ್ತು ಬಲಿ, ವಾಸ್ತುಹೋಮ, ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ, ದ್ವಾರಪ್ರವೇಶ ಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಗಂಗಾಧರ್ ಕಲ್ಲಾಡಿ ಪ್ರಸಾದ ಪೂಜಾ ಕೈಂಕರ್ಯಗಳಿಗೆ ಸಹಕರಿಸಿದರು. ರವೀಂದ್ರ ಸಾಲ್ಯಾನ್, ರೇಖಾ ರವೀಂದ್ರ, ಸೌರಭ್ ಆರ್.ಸಾಲ್ಯಾನ್ ಪರಿವಾರ ಮತ್ತು ರಾಕೇಶ್ ಸಸಿಹಿತ್ಲು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಜಯಪ್ರಸಾದ್ ಎನ್.ಬಂಗೇರ ಸ್ವಾಗತಿಸಿದರು. ಬ್ಯಾಂಕ್‍ನ ಉಪ ಪ್ರಧಾನ ಪ್ರಬಂಧÀಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‍ದಾಸ್ ಹೆಜ್ಮಾಡಿ ಬ್ಯಾಂಕ್‍ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿದರು. ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುನೀಲ್ ಎ.ಗುಜರನ್ ಕೃತಜ್ಞತೆ ಸಲ್ಲಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here